Breaking News
Home / ಹುಬ್ಬಳ್ಳಿ / ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಾಂತ್ರಿಕ ಸ್ಪರ್ಶ: ಕ್ಷಣಾರ್ಧದಲ್ಲಿಯೇ ಆರೋಗ್ಯ ತಪಾಸಣೆ ವರದಿ ಆನ್​ಲೈನ್​ನಲ್ಲಿ ಲಭ್ಯ..

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಾಂತ್ರಿಕ ಸ್ಪರ್ಶ: ಕ್ಷಣಾರ್ಧದಲ್ಲಿಯೇ ಆರೋಗ್ಯ ತಪಾಸಣೆ ವರದಿ ಆನ್​ಲೈನ್​ನಲ್ಲಿ ಲಭ್ಯ..

Spread the love

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.‌ ನಿತ್ಯ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಸಾವಿರಾರು ರೋಗಿಗಳು ಇಲ್ಲಿಗೆ ಬರುತ್ತಾರೆ.

ಹೀಗೆ ಬರುವ ರೋಗಿಗಳು ಗಂಟೆಗಟ್ಟಲೆ ಕಾಯಲೇ ಬೇಕಾಗುತ್ತಿತ್ತು. ಆದರೆ ಇದೀಗ ಎಕ್ಸರೇ, ಸ್ಕ್ಯಾನಿಂಗ್ ಹಾಗೂ ರಕ್ತ ತಪಾಸಣೆ ರಿಪೋರ್ಟ್ ಅನ್ನು ಆನ್‌ಲೈನ್‌ನಲ್ಲೇ ನೀಡುವ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವ ವಿಚಾರವು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡ ಕಿಮ್ಸ್: ಕರ್ನಾಟಕ ವಿಜ್ಞಾನ ಮತ್ತು ವೈದ್ಯಕೀಯ ಸಂಸ್ಥೆ (ಕಿಮ್ಸ್) ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದ್ದು, ರೋಗಿಗಳು ಮತ್ತು ವೈದ್ಯರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಕ್ಸರೇ , ಸ್ಕ್ಯಾನಿಂಗ್ ಹಾಗೂ ರಕ್ತ ತಪಾಸಣೆ ರಿಪೋರ್ಟ್ ಅನ್ನು ಆನ್‌ಲೈನ್‌ನಲ್ಲೇ ನೀಡಲು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಾದರಿಯಾಗಿದೆ.‌

ಕಿಮ್ಸ್‌ನಲ್ಲಿ ಎಲುಬು, ಕೀಲು, ಗರ್ಭಿಣಿಯರು, ಕ್ಯಾನ್ಸರ್ ಸೇರಿದಂತೆ ನಾನಾ ಕಾಯಿಲೆಗಳ ಕೂಲಂಕಷವಾಗಿ ಪರೀಕ್ಷೆಗಾಗಿ ಎಕ್ಸರೇ, ಡಾಪ್ಲರ್, ಯುಎಸ್‌ಜಿ, ಸಿಟಿ, ಎಂಆರ್‌ಐ ಸ್ಕ್ಯಾನಿಂಗ್‌ಗಳ ವರದಿ ಹಾಗೂ ರಕ್ತ ತಪಾಸಣೆ ವರದಿಗಳನ್ನು ಪಡೆಯಲು ರೋಗಿಗಳು ಎಕ್ಸರೇ ಮತ್ತು ಲ್ಯಾಬ್ ವಿಭಾಗಕ್ಕೆ ಅನೇಕರು ಎಡತಾಕಬೇಕಿತ್ತು.

ಬಹುತೇಕ ವರದಿಗಳು ಆನ್‌ಲೈನ್​ನಲ್ಲಿ ಲಭ್ಯ: ಆದರೆ, ಇದೀಗ ಎಲ್ಲವೂ ಸಂಬಂಧಿಸಿದ ವಿಭಾಗದ ವೈದ್ಯರಿಗೆ ಆನ್‌ಲೈನ್ ಮೂಲಕವೇ ದೊರೆಯುವ ವ್ಯವಸ್ಥೆ ಮಾಡಿದೆ. ಈ ವ್ಯವಸ್ಥೆ ಕಳೆದ ಕೆಲ ತಿಂಗಳಿನಿಂದ ಆರಂಭವಾಗಿದ್ದು, ಇದು ರೋಗಿಗಳಿಗೆ ಅನುಕೂಲವಾಗಿದೆ. ನಿತ್ಯ ಸರಾಸರಿ 700ರಿಂದ 900 ಜನರು ಸ್ಕ್ಯಾನಿಂಗ್, ಎಕ್ಸರೇ ಪರೀಕ್ಷೆಗೆ ಒಳಪಡುತ್ತಾರೆ. ಆದಾದ ಬಳಿಕ ರೋಗಿಗಳು ಅವುಗಳ ವರದಿಗಳಿಗಾಗಿ ಮಧ್ಯಾಹ್ನ, ಸಂಜೆ ವೇಳೆಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಬೇಕಾಗುತ್ತಿತ್ತು. ಆನ್​ಲೈನ್ ವ್ಯವಸ್ಥೆ ಜಾರಿಯಿಂದ ಈ ಅಲೆದಾಟ ತಪ್ಪಿದೆ. ಇದೇ ಮೊದಲ ಬಾರಿಗೆ ಕಿಮ್ಸ್‌ನಲ್ಲಿ ರಕ್ತ ತಪಾಸಣೆ ವರದಿಯನ್ನೂ ಸಹ ಆನ್‌ಲೈನ್​ನಲ್ಲಿ ಲಭಿಸುವಂತೆ ಮಾಡಿದೆ ಎಂದು ಹೇಳುತ್ತಾರೆ ಸಾರ್ವಜನಿಕರು.

ಏನು ಹೇಳ್ತಾರೆ ಕಿಮ್ಸ್ ನಿರ್ದೇಶಕರು?: ಲ್ಯಾಬ್‌ನಲ್ಲಿ ತಪಾಸಣೆಗೊಳಪಡುತ್ತಿದ್ದಂತೆ ಯಂತ್ರಗಳಿಂದ ಫಲಿತಾಂಶ ಪ್ರಕಟಗೊಂಡು, ನಿಗದಿತ ನಮೂನೆಯ ನಮೂದಿಸಿ ಈ ಮೊದಲು ದಾಖಲೆಯಲ್ಲಿ ರೋಗಿಗಳಿಗೆ ಒದಗಿಸಲಾಗುತಿತ್ತು. ಸದ್ಯ ಲ್ಯಾಬ್ ಪ್ರಕಟಪಡಿಸುವ ಫಲಿತಾಂಶವು ನೇರವಾಗಿ ಆನ್‌ಲೈನ್ ಮೂಲಕ ಆಯಾ ವಿಭಾಗಕ್ಕೆ ರವಾನೆಯಾಗುತ್ತದೆ.

ಎಕ್ಸರೇ, ಸ್ಕ್ಯಾನಿಂಗ್, ಎಂಆರ್‌ಐ ಪರೀಕ್ಷೆ ಮುಗಿದ ತಕ್ಷಣ ರಿಪೋರ್ಟ್ ಸಂಬಂಧಿಸಿದ ವೈದ್ಯರ ಕಂಪ್ಯೂಟರ್​ನಲ್ಲಿ ಲಭಿಸುತ್ತದೆ. ವಾರ್ಡ್‌ನಲ್ಲಿರುವ ಕಂಪ್ಯೂಟರ್‌ನಲ್ಲಿ ಆಧರಿಸಿ ವೈದ್ಯರು ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸಲಾಗಿದೆ. ಇದರಿಂದ ರೋಗಿಗಳಿಗೆ ಹಾಗೂ ಅವರು ಸಂಬಂಧಿಕರಿಗೆ ಹೆಚ್ಚು ಬಹಳ ಅನುಕೂಲವಾಗಿದೆ ಎನ್ನುತ್ತಾರೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ.

ಈ ಆನ್​ಲೈನ್​ ವ್ಯವಸ್ಥೆಯಿಂದ 1 ಕೋಟಿ ರೂ. ಉಳಿತಾಯ: ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಮುಂದೂಡಿಕೆಯಾಗಿತ್ತು. ಇದೀಗ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಪ್ಯಾಕ್ಸ್ ವ್ಯವಸ್ಥೆಯಿಂದ ಕಿಮ್ಸ್‌ಗೆ ಕಾಗದ ಮತ್ತು ಎಕ್ಸರೇ, ಸ್ಕ್ಯಾನಿಂಗ್ ಫಿಲ್ಸ್‌ಗೆ ತಗಲುತ್ತಿದ್ದ ವೆಚ್ಚ ಸೇರಿ 1 ಕೋಟಿ ರೂ. ಉಳಿತಾಯವಾಗಲಿದೆ.

ಅಲ್ಲದೆ, ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣವಾಗುವ ಮೂಲಕ ಇತರೆ ಆಸ್ಪತ್ರೆಗಳಿಗೆ ಮಾದರಿಯಾಗಿದ್ದು, ಇದು ಬಡವರಿಗೆ ವರದಾನವಾಗಿದೆ ಎಂದು ಅವರು ತಿಳಿಸಿದರು. ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವವ ಮಧ್ಯೆ ಕಿಮ್ಸ್ ಆಸ್ಪತ್ರೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಫಾಸ್ಟ ಆಗಿ ಚಿಕಿತ್ಸೆ ನೀಡಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ