Breaking News

2 ತಿಂಗಳಲ್ಲಿ 40 ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದು

Spread the love

ವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಮಾನದಂಡಗಳನ್ನು ಪಾಲಿಸದ ಆರೋಪದಿಂದ ಕಳೆದ ಎರಡು ತಿಂಗಳಲ್ಲಿ ದೇಶದಾದ್ಯಂತ ಸುಮಾರು 40 ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು, ಗುಜರಾತ್‌, ಅಸ್ಸಾಂ, ಪಂಜಾಬ್‌, ಆಂಧ್ರಪ್ರದೇಶ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದ ನೂರಕ್ಕೂ ಹೆಚ್ಚು ಕಾಲೇಜುಗಳೂ ಇದೇ ಕ್ರಮ ಎದುರಿಸಲಿವೆ ಎಂದು ಆ ಮೂಲಗಳು ಮಾಹಿತಿ ನೀಡಿವೆ.

 

ನಿಯಮಗಳ ಉಲ್ಲಂಘನೆ ಮತ್ತು ಸಿ.ಸಿ. ಟಿ.ವಿ ಕ್ಯಾಮೆರಾ ಅವಳವಡಿಕೆ, ಬಯೊಮೆಟ್ರಿಕ್‌ ಹಾಜರಾತಿ ಜೊತೆಗೆ ಆಧಾರ್‌ ಜೋಡಣೆ ಪ್ರಕ್ರಿಯೆಯಲ್ಲಿ ಲೋಪಗಳಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ 2014ರ ನಂತರ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387ರಿಂದ 654ಕ್ಕೆ ಏರಿಕೆಯಾಗಿದೆ. ಎಂಬಿಬಿಎಸ್‌ ಸೀಟುಗಳ ಸಂಖ್ಯೆಯು ಶೇ 94ರಷ್ಟು ಅಂದರೆ 51,348ರಿಂದ 99,763ಕ್ಕೆ ಏರಿಕೆಯಾಗಿದೆ. ಹಾಗೆಯೇ ಪಿ.ಜಿ ಸೀಟುಗಳು 31,185ರಿಂದ 64,559ಕ್ಕೆ ಏರಿಕೆಯಾಗಿವೆ. ಅಂದರೆ ಶೇ 107ರಷ್ಟು ಹೆಚ್ಚಳವಾಗಿದೆ.


Spread the love

About Laxminews 24x7

Check Also

ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Spread the love ಬೀದರ್ : ಡ್ಯೂಟಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ