Breaking News

ವಿರೋಧ ಪಕ್ಷಗಳು ಒಂದಾದರೆ ಬಿಜೆಪಿ ಸೋಲು ಖಚಿತ: ರಾಹುಲ್‌ ಗಾಂಧಿ

Spread the love

ವದೆಹಲಿ/ಸಾಂತಕ್ಲಾರ (ಅಮೆರಿಕ): ‘ಭಾರತದಲ್ಲಿನ ಒಂದು ಗುಂಪಿನ ಜನರು ಜಗತ್ತಿನಲ್ಲಿ ಎಲ್ಲವೂ ತಮಗೇ ತಿಳಿದಿದೆ. ದೇವರಿಗಿಂತಲೂ ಹೆಚ್ಚು ತಿಳಿವಳಿಕೆ ಇದೆ ಎಂದುಕೊಂಡಿದ್ದಾರೆ. ಇದೊಂದು ಕಾಯಿಲೆ. ನಮ್ಮ ಪ್ರಧಾನಿಯೂ ಇಂಥ ಪ್ರಭೇದದ ಜನರಲ್ಲಿ ಒಬ್ಬರು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವ್ಯಂಗ್ಯವಾಡಿದರು.

 

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಾಗರೋತ್ತರ ಭಾರತೀಯ ಕಾಂಗ್ರೆಸ್‌ ಮಂಗಳವಾರ ಆಯೋಜಿಸಿದ್ದ ‘ಪ್ರೀತಿಯ ಅಂಗಡಿ’ (ಮೊಹಬ್ಬತ್‌ ಕಿ ದುಕಾನ್‌) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವಿಧ ಕ್ಷೇತ್ರಗಳು, ಸಂಘಟನೆಯವರು ಇದರಲ್ಲಿ ಭಾಗವಹಿಸಿದ್ದರು.

‘ಬಹಳ ದೊಡ್ಡದಾಗಿರುವ ಈ ಜಗತ್ತಿನ ಬಗ್ಗೆ ಒಬ್ಬ ವ್ಯಕ್ತಿ ತಿಳಿದುಕೊಳ್ಳುವುದು ಎಂದರೆ ಅದು ಬಹಳ ಕಷ್ಟದ ಕೆಲಸ. ಆದರೆ, ಆ ಗುಂಪಿನ ಜನರು ಮಾತ್ರ ದೇವರಿಗಿಂತ ಹೆಚ್ಚಿನ ತಿಳಿವಳಿಕೆ ನಮಗೆ ಇದೆ ಅಂದುಕೊಂಡಿದ್ದಾರೆ. ದೇವರೊಂದಿಗೆ ಕುಳಿತು, ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಬೇಕಾದರೂ ವಿವರಿಸುತ್ತಾರೆ’ ಎಂದರು.

‘ಈಗ ನೀವು ಮೋದಿ ಅವರನ್ನು ದೇವರೊಂದಿಗೆ ಕುಳ್ಳಿರಿಸಿ. ಈ ಜಗತ್ತು ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ಬಹುಶಃ ಮೋದಿ ಅವರು ದೇವರಿಗೆ ವಿವರಿಸಬಹುದು. ನಂತರ ದೇವರಿಗೇ ಆತನ ಸೃಷ್ಟಿಯ ಬಗ್ಗೆ ಗೊಂದಲ ಉಂಟಾಗಬಹುದು’ ಎಂದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ