Breaking News

21 ಸಾವಿರ ಸರಕಾರಿ ನೌಕರರಿಂದ ಸರಕಾರಿ ಸೌಲಭ್ಯಗಳ ದುರ್ಬಳಕೆಯ ಕಳ್ಳಾಟ

Spread the love

ಬೆಂಗಳೂರು: ಸರಕಾರಿ ನೌಕರರ ನೆರವಿನಿಂದ ಸರಕಾರಿ ಸೌಲಭ್ಯಗಳ ದುರ್ಬಳಕೆಯ ಕಳ್ಳಾಟಗಳು ಸಾಮಾನ್ಯ. ಆದರೆ ಸರಕಾರದ ಸೌಲಭ್ಯವೊಂದನ್ನು ಸಾವಿರಾರು ಸಂಖ್ಯೆಯ ಸರಕಾರಿ ನೌಕರರೇ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸಿದೆ.

ರಾಜ್ಯದಲ್ಲಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿದ 4.6 ಲಕ್ಷ ಜನರಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 13.5 ಕೋಟಿ ರೂ. ದಂಡ ಸಂಗ್ರಹಿಸಿದೆ. ಈ ಪೈಕಿ  21,232 ಸಾವಿರ ಜನ ಸರಕಾರಿ ನೌಕರರು ಎಂಬ ವಿಷಯವನ್ನು ಇಲಾಖೆ ದೃಢಪಡಿಸಿದೆ. ಇವರಿಂದ 11.2 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು 2021ರ ಫೆಬ್ರವರಿ ತಿಂಗಳಿಂದಲೇ ಆರಂಭಿಸಲಾಗಿತ್ತು.

ಈ ಕಾರ್ಯಾಚರಣೆ ಮುಂದುವರಿದಿದ್ದು, ಆಧಾರ್ ಸಂಖ್ಯೆಗಳ ಸಹಾಯದಿಂದ ಇನ್ನಿತರ ಇಲಾಖೆಗಳಿಂದ ಅಕ್ರಮದ ಮಾಹಿತಿ ಸಂಗ್ರಹಿಸಲಾಗುತ್ತಿದೆ.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ ಪಾಲ್ಗೊಂಡ ಕ್ಷಣಗಳು.

Spread the love ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ