Breaking News

Yearly Archives: 2026

ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳ ಬಂಧನ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧ ಕಡೆ ಅಕ್ರಮ ಡ್ರಗ್ಸ್ ಮಾರಾಟಕ್ಕೆಂದು ಆಗಮಿಸಿ ನಗರದಲ್ಲೇ ನೆಲೆಯೂರಿದ್ದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಜಹಿದುಲ್ ಇಸ್ಲಾಂ(35) ಮತ್ತು ಫೈರೋಡ್ಸ್(32) ಬಂಧಿತರು. ಇವರು ಎರಡು ವರ್ಷಗಳ ಹಿಂದೆ ಹೆಬ್ಬಗೋಡಿ ಭಾಗದಲ್ಲಿ ವಾಸವಾಗಿದ್ದರು. ಪಶ್ಚಿಮ ಬಂಗಾಳದ ಮೂಲಕ ಭಾರತ ಪ್ರವೇಶಿಸಿದ ಈ ಆರೋಪಿಗಳು ಬೆಂಗಳೂರಿಗೆ ಬಂದು ವಾಸವಾಗಿದ್ದರು ಎಂಬ ಸಂಗತಿ ಪೊಲೀಸ್ ವಿಚಾರಣೆಯಲ್ಲಿ ತಿಳಿದು …

Read More »

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

ಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡು ತಮ್ಮ ಜಮೀನಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಮಾರಪ್ಪ ಗಾರ್ಡನ್ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ ನ್ಯಾ.ಡಿ.ಕೆ.ಸಿಂಗ್ ಮತ್ತು ನ್ಯಾ.ಟಿ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ …

Read More »

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಜನರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ರೈತರು ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ಸೋಮವಾರ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ಸೋಮನಾಥ ದೇವಾಲಯದ ಮೇಲೆ ಪ್ರಧಾನಿ ಮೋದಿ ಇತ್ತೀಚೆಗೆ ಗಮನಹರಿಸುತ್ತಿದ್ದಾರೆ. ಇದು ಮುಂಬರುವ ಅಸ್ಸಾಂ, …

Read More »

ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ರಾಹುಲ್ ಜಾರಕಿಹೊಳಿ ಆಯ್ಕೆ: ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ

ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ರಾಹುಲ್ ಜಾರಕಿಹೊಳಿ ಆಯ್ಕೆ: ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾಗಿ ರಾಹುಲ್ ಸತೀಶ್ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ. ಸೋಮವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅಪೆಕ್ಸ್ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ರಾಹುಲ್ ಜಾರಕಿಹೊಳಿ ಅವರು ಚುನಾವಣಾಧಿಕಾರಿಗಳಿಗೆ ಅಧಿಕೃತವಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು . ಈ ಸಂದರ್ಭದಲ್ಲಿ ರಾಜ್ಯದ ಹಿರಿಯ ನಾಯಕರು ಹಾಗೂ ಪ್ರಮುಖ …

Read More »

ಪತ್ರಕರ್ತರು ಸಮಾಜದ ನಾಲ್ಕನೇ ಸ್ತಂಭವಾಗಿದ್ದು, ನೈಜ ಮತ್ತು ವಾಸ್ತವಿಕ ಸುದ್ಧಿಗಳನ್ನು ಭಿತ್ತರಿಸಿ:ಆಸೀಫ್ ಸೇಠ್

ಪತ್ರಕರ್ತರು ಸಮಾಜದ ನಾಲ್ಕನೇ ಸ್ತಂಭವಾಗಿದ್ದು, ನೈಜ ಮತ್ತು ವಾಸ್ತವಿಕ ಸುದ್ಧಿಗಳನ್ನು ಭಿತ್ತರಿಸಿ ಸಮಾಜದ ಏಳ್ಗೆಗೆ ಪಾತ್ರರಾಗಬೇಕೆಂದು ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇಠ್ ಅವರು ಕರೆ ನೀಡಿದರು. ಬೆಳಗಾವಿಯ ವಾರ್ತಾಭವನದಲ್ಲಿ ಮುದ್ರಣ ಪತ್ರಕರ್ತರ ಸಂಘದ ವತಿಯಿಂದ ಪ್ರಶಸ್ತಿ ವಿಜೇತ ಗುರುರಾಜ್ ಜಮಖಂಡಿ, ಅಮೀತ ಉಪಾಧ್ಯೆ, ಸಂತೋಷ್ ಚಿನಗುಡಿ, ಸಂಜೀವ ಕಾಂಬಳೆ ಅವರನ್ನು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗೌರವ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್, ಡಿಸಿಪಿ ಎನ್.ವಿ. ಬರಮನಿ ಇನ್ನುಳಿದವರು …

Read More »

ಹಿಂದೂ ಧರ್ಮವನ್ನು ಒಗ್ಗೂಡಿಸಿ ಧರ್ಮ ಜಾಗೃತಿಯನ್ನು ನಿರಂತರವಾಗಿ ಮಾಡಬೇಕೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಕರೆ ನೀಡಿದರು.

ಹಿಂದೂ ಧರ್ಮವನ್ನು ಒಗ್ಗೂಡಿಸಿ ಧರ್ಮ ಜಾಗೃತಿಯನ್ನು ನಿರಂತರವಾಗಿ ಮಾಡಬೇಕೆಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಕರೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಿಂದೂತ್ವನಿಷ್ಠ ಕಾರ್ಯಕರ್ತರ ಸಮಾವೇಶ ಮತ್ತು ಸ್ನೇಹಭೋಜನ ಕಾರ್ಯಕ್ರಮವನ್ನು ಧನಂಜಯ ಜಾಧವ ಮಿತ್ರ ಪರಿವಾರದ ನೇತೃತ್ವದಲ್ಲಿ ಬೆಳಗಾವಿ ತಾಲೂಕಿನ ಉಚಗಾಂವದ ಮಳೇಕರಣಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಬೆಳಗಾವಿ ಮಹಾನಗರ …

Read More »

ರಾಹುಲ್‌ ಜಾರಕಿಹೊಳಿ DCC ಬ್ಯಾಂಕ್ ನಿರ್ದೇಶಕರು ಹಾಗೂ ಯುವ್ತ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿಗಳು

ರಾಹುಲ್‌ ಜಾರಕಿಹೊಳಿ DCC ಬ್ಯಾಂಕ್ ನಿರ್ದೇಶಕರು ಹಾಗೂ ಯುವ್ತ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ನಿಯಮಿತ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾಗಿ ಆಯ್ಕೆಯನ್ನು ಬಯಸಿ, ಇಂದು ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಹಿರಿಯರು ಹಾಗೂ ಮಾಜಿ ಸಚಿವರಾದ ಶ್ರೀ ಕೆ.ಎನ್. ರಾಜಣ್ಣ, ಶ್ರೀ ವೀರಕುಮಾರ್ ಪಾಟೀಲ ಹಾಗೂ ಬುಡಾ …

Read More »

ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವ

ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಸಚಿನ ಯಾಮನಣ್ಣಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಮೃತ ಕಾರ್ಮಿಕ. ಈತ ಕಳೆದ ಹತ್ತು ದಿನಗಳಖ ಹಿಂದಷ್ಟೇ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಕ್ರಷರ್‌ಗೆ ಸುಣ್ಣ ಹಾಕುವಾಗ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.”

Read More »

ಅಜ್ಜನ ರೋಟಿ ಬುತ್ತಿ ಜಾತ್ರೆ”

ಅಜ್ಜನ ರೋಟಿ ಬುತ್ತಿ ಜಾತ್ರೆ” ಪರಂಪರೆಯಂತೆ ಸಾಗಿ ಬಂದಿರುವ ರೊಟ್ಟಿ ಬುತ್ತಿ ಸಮರ್ಪಿಸುವ ವಿಶೇಷ ಸಂದರ್ಭ. ಇಂದು ಸಾಯಂಕಾಲ 04 ಗಂಟೆಗೆ ಸುಕ್ಷೇತ್ರ ಮುಗಳಖೋಡದ ವಿಠಲ್ ಮಂದಿರದಿಂದ ಶ್ರೀಮಠದವರೆಗೆ ರೊಟ್ಟಿ ಬುತ್ತಿಗಳ ಭವ್ಯ ಮೆರವಣಿಗೆ. ಸಮಸ್ತ ರೊಟ್ಟಿ ಬುತ್ತಿ ಹೊತ್ತುಕೊಂಡು ಬರುವ ಎಲ್ಲ ತಾಯಂದಿಗೆ ಆದರದ ಸ್ವಾಗತ

Read More »

ಧಾರ್ಮಿಕ ಪ್ರವಚಣ(ದಸ್ತಾರ-ಇ-ಹಿಫ್ಜ್) ಕಾರ್ಯಕ್ರಮವು ಸಸಿಗೆ ನೀರು ನೀಡುವುದರ ಮೂಲಕ ಉದ್ಘಾಟನೆ.

ಧಾರ್ಮಿಕ ಪ್ರವಚಣ(ದಸ್ತಾರ-ಇ-ಹಿಫ್ಜ್) ಕಾರ್ಯಕ್ರಮವು ಸಸಿಗೆ ನೀರು ನೀಡುವುದರ ಮೂಲಕ ಉದ್ಘಾಟನೆ. ಘಟಪ್ರಭಾ: ಘಟಪ್ರಭಾದ ಜುಮ್ಮಾ ಮಸ್ಜಿದ್ (ಸುನ್ನಿ) ಮೊಹ್ಮದಿಯಾ ಮಸ್ಜಿದ್ ಘಟಪ್ರಭಾ,ನೂರಾನಿ ಮಸ್ಜಿದ್ ಬಸವ ನಗರ (ದುಪಧಾಳ),ದಾರುಲ್ ಉಲೂಮ್ ಮೊಹ್ಮದಿಯಾ ರಿಝವಿಯಾ ದುಪಧಾಳ ಹಾಗೂ ಘಟಪ್ರಭಾ ಪಟ್ಟಣದ ಅಹಲೇ ಸುನ್ನತ-ವಲ್ ಜಮಾತದ ಯಂಗ್ ಕಮೀಟಿಗಳ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ ಪೈಗಂಬರರ ಜಯಂತಿ,ಈದ್ ಮೀಲಾದ ಹಬ್ಬದ 1500ನೇ ವರ್ಷಾಚರಣೆ ಹಾಗೂ ಉರುಸೇ ಕ್ವಾಜಾ ಗರೀಬ್ ನವಾಜ, ದಸ್ತಾರ-ಇ-ಹಿಫ್ಜ್ ಇವುಗಳ ಪ್ರಯುಕ್ತ ಧಾರ್ಮಿಕ …

Read More »