ಮಾದಹಳ್ಳಿ (ಹುಣಸೂರು) :ನಾಡಿನ ಮಠ ಮಾನ್ಯಗಳಿಂದ ಗುರು ಪರಂಪರೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಠಗಳು ಸರ್ಕಾರಕ್ಕೆ ಸಮಾನವಾಗಿ, ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಾದಹಳ್ಳಿಯಲ್ಲಿ ನಡೆದ ಶ್ರೀ ಗುರು ಬೂದಿಸ್ವಾಮಿಗಳ 397ನೇ ಆರಾಧನೆ, 63 ಪ್ರಮಥರ ಪೂಜೆ ಶ್ರೀಮಠದ ನೂತನ ಕಟ್ಟಡ, ನವೀಕೃತ ಹದಿನಾರು ಗದ್ದುಗೆಗಳು, ಶತಾಯುಷಿ ಶ್ರೀ …
Read More »Daily Archives: ಮಾರ್ಚ್ 7, 2026
ಧಾರವಾಡದಲ್ಲಿ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್‌ಗೆ ಲೋಕಾ ಶಾಕ್…ಲಂಚ ಪಡೆಯುತ್ತಿದ್ದಾಗಲೇ ಲೋಕಾ ಬಲೆಗೆ ಬಿದ್ದ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್.
ರೊಟ್ಟಿ ಮಷಿನ್ ಪರವಾನಿಗೆ ಕೇಳಲು ಬಂದ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವಲಯ ಕಚೇರಿ 1ರ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತರ ಬಲೆಗೆ ಬಿದ್ದ ಹೆಲ್ತ ಇನ್ಸ್ಪೆಕ್ಟರ್ ಹೀನಾ ಕೌಸರ್ ಅಧಿಕಾರಿಯಾಗಿದ್ದಾರೆ. ಧಾರವಾಡದ ಮಳೆಪ್ಪ ಎಂಬುವವರು ರೊಟ್ಟಿ ಮಷಿನ್‌ಗೆ ಪರವಾನಿಗಿ ನೀಡಲು ಅರ್ಜಿ ಸಲ್ಲಿಸಿದ್ದರು. ಪರವಾನಿಗಿ ನೀಡಲು ಕೌಸರ್ 4ವರೇ ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೌಸರ್ ಹೇಳಿದ …
Read More »ಬೆಳಗಾವಿಯಲ್ಲಿ ಬೃಹತ್ ಉದ್ಯೋಗ ಮೇಳದ ಸಂಭ್ರಮ: 104 ಕಂಪನಿಗಳಿಂದ 19 ಸಾವಿರ ಉದ್ಯೋಗಾವಕಾಶ, ಸಾವಿರಾರು ಅಭ್ಯರ್ಥಿಗಳ ಭಾಗಿ
ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಉದ್ಯೋಗಾಕಾಂಕ್ಷಿಗಳ ದಂಡೇ ನೆರೆದಿತ್ತು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 100ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಿ ಪರಿಣಮಿಸಿದೆ. ಬೆಳಗಾವಿಯ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳವು ಯಶಸ್ವಿಯಾಗಿ ಜರುಗಿತು. ವೇದಿಕೆಯ ಮೇಲೆ ಬಿ.ಆರ್. ಪಟಗುಂದಿ, ರವಿ ಬಂಗಾರಪ್ಪ, …
Read More »ಆಕಾಶದಲ್ಲಿ ಜೀವ ಉಳಿಸಿದ ‘ಡಾಕ್ಟರ್’ ಶಾಸಕಿ: ಅಂಜಲಿ ನಿಂಬಾಳ್ಕರ್ ಕಾರ್ಯಕ್ಕೆ ಮನಸೋತ ಗಗನಸಖಿಯರು – ವಿಮಾನದಲ್ಲೇ ಅದ್ಧೂರಿ ಸನ್ಮಾನ
ಆಕಾಶ ಮಾರ್ಗದಲ್ಲಿ ಕಠಿಣ ಸಂದರ್ಭದಲ್ಲಿ ಒಬ್ಬರ ಜೀವ ಉಳಿಸಿದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರ ಮಾನವೀಯ ಕಾರ್ಯಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆಯ ಗಗನಸಖಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಪುದುಚೇರಿಯಿಂದ ಪ್ರಯಾಣಿಸುತ್ತಿದ್ದ ವೇಳೆ ವಿಮಾನದಲ್ಲಿದ್ದ ಗಗನಸಖಿಯೊಬ್ಬರು ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ, ಪ್ರೀತಿಯಿಂದ ಗುಲಾಬಿ ಹೂವು ಹಾಗೂ ಗ್ರೀಟಿಂಗ್ ಕಾರ್ಡ್ ನೀಡಿ ಹೃದಯಸ್ಪರ್ಶಿ ಸ್ವಾಗತ ಕೋರಿದರು. ಈ ವೇಳೆ ಅತೀವ ಭಾವುಕರಾದ ಅಂಜಲಿ …
Read More »ಖಾಲಿ ಲೇಔಟ್‌ಗಳಲ್ಲಿ ದುಶ್ಚಟ – ಮಹಿಳೆಯರಿಗೆ ಕಿರಿಕಿರಿ: ಯುವಕರಿಗೆ ಪೊಲೀಸರ ಕಠಿಣ ಎಚ್ಚರಿಕೆ
ವಿಜಯಪುರ ನಗರದ ಖಾಲಿ ಲೇಔಟ್‌ಗಳಲ್ಲಿ ಸಂಜೆಯಾದೊಡನೆ ದುಶ್ಚಟಗಳಲ್ಲಿ ತೊಡಗಿಕೊಂಡು ಮಹಿಳೆಯರಿಗೆ ಕಿರಿಕಿರಿ ನೀಡುತ್ತಿದ್ದ ಯುವಕರ ವಿರುದ್ಧ ಗಾಂಧಿಚೌಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ನಗರದ ವಿವಿಧ ಲೇಔಟ್‌ಗಳಲ್ಲಿ ಪ್ರತಿದಿನ ಸಂಜೆ ವೇಳೆಯಲ್ಲಿ ಕೆಲ ಯುವಕರು ಗುಂಪುಗೂಡಿ ಸಿಗರೇಟ್ ಹಾಗೂ ಮದ್ಯ ಸೇವನೆ ಮಾಡುವುದು, ವಾಕಿಂಗ್‌ಗೆ ಬರುವ ಮಹಿಳೆಯರಿಗೆ ಕಿರಿಕಿರಿ ನೀಡುವುದು ಸೇರಿದಂತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಗಾಂಧಿಚೌಕ್ ಪೊಲೀಸ್ ಠಾಣೆ …
Read More »ಹೆಸ್ಕಾಂ ‘ಪವರ್ ಮ್ಯಾನ್’ಗಳಿಗೆ ಸುರಕ್ಷತಾ ಮಂತ್ರ: ಬೆಳಗಾವಿಯಲ್ಲಿ ವಿದ್ಯುತ್ ಸುರಕ್ಷತಾ ಸಪ್ತಾಹಕ್ಕೆ ಅದ್ಧೂರಿ ಚಾಲನೆ
ನಮ್ಮ ಮನೆಗಳನ್ನು ಬೆಳಗಲು ಜೀವದ ಹಂಗು ತೊರೆದು ಕೆಲಸ ಮಾಡುವ ಪವರ್ ಮ್ಯಾನ್‌ಗಳ ಹಿತರಕ್ಷಣೆಗಾಗಿ ಬೆಳಗಾವಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಸ್ಕಾಂ ಅಧ್ಯಕ್ಷರಾದ ಖಾದ್ರಿ ಅವರ ನೇತೃತ್ವದಲ್ಲಿ ‘ಪವರ್ ಮ್ಯಾನ್ ದಿನ’ ಹಾಗೂ ‘ವಿದ್ಯುತ್ ಸುರಕ್ಷತಾ ಸಪ್ತಾಹ’ಕ್ಕೆ ಚಾಲನೆ ನೀಡಲಾಗಿದ್ದು, ಸುರಕ್ಷತೆಯೇ ಜೀವನದ ಮಂತ್ರ ಎಂಬ ಸಂದೇಶ ಸಾರಲಾಯಿತು. ಬೆಳಗಾವಿಯ ನಗರ ಉಪ ವಿಭಾಗ-3ರ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರದಂದು ಹೆಸ್ಕಾಂ ಅಧ್ಯಕ್ಷರಾದ ಶ್ರೀ ಖಾದ್ರಿ ಅವರ ಅಧ್ಯಕ್ಷತೆಯಲ್ಲಿ ಪವರ್ ಮ್ಯಾನ್ …
Read More »ಬೆಳಗಾವಿಯಲ್ಲಿ ‘ಪವರ್‌ಮ್ಯಾನ್ ದಿನ’ ಆಚರಣೆ: ವಿದ್ಯುತ್ ಸಿಬ್ಬಂದಿಗಳ ಸೇವೆಗೆ ವಿಶೇಷ ಗೌರವ
ಬೆಳಗಾವಿಯ ಹೆಸ್ಕಾಂ (HESCOM) ಕಚೇರಿಯಲ್ಲಿ ವಿದ್ಯುತ್ ರಂಗದ ನಿಜವಾದ ಹೀರೋಗಳಾದ ಪವರ್‌ಮ್ಯಾನ್‌ಗಳ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ‘ಪವರ್‌ಮ್ಯಾನ್ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಠಿಣ ಪರಿಸ್ಥಿತಿಯಲ್ಲೂ ಕರ್ತವ್ಯ ನಿರತರಾಗಿರುವ ಸಿಬ್ಬಂದಿಗಳ ಕಾರ್ಯವನ್ನು ಅಧಿಕಾರಿಗಳು ಶ್ಲಾಘಿಸಿದರು. ಬೆಳಗಾವಿಯ ಹೆಸ್ಕಾಂ ನಗರ ಉಪವಿಭಾಗ-1 ಮತ್ತು 2ರ ಕಚೇರಿಗಳಲ್ಲಿ ಮಾರ್ಚ್ 7, 2026 ರಂದು ‘ಪವರ್‌ಮ್ಯಾನ್ ದಿನ’ವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಇಇ ಮೋಹಿತೆ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಇಇ ಭಜಂತ್ರಿ, ನೌಕರರ …
Read More »ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಕಟ್ಟಿ ಕೆಎಲ್ಇ ಸಂಸ್ಥೆ ಮೌಲಿಕ ಸೇವೆ ಮಾಡಿದೆ: ಕಾಶಿ ಪೀಠದ ಪೂಜ್ಯ
ಬೆಳಗಾವಿ: ಜಾಗತಿಕವಾಗಿ ವಿಸ್ತರಿಸಿರುವ ಗಡಿಭಾಗದಲ್ಲಿ ಹತ್ತು ಹಲವಾರು ಕನ್ನಡ ಮಾಧ್ಯಮ ಶಾಲೆಗಳನ್ನು ಹುಟ್ಟುಹಾಕಿ ಕನ್ನಡ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದೆ. ಆಂಗ್ಲ ಮಾಧ್ಯಮದ ಭರಾಟೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಕೆಎಲ್ಇ ಸಂಸ್ಥೆಯ ಕೊಡುಗೆ ಅನನ್ಯ ಎಂದು ಕಾಶಿ ಪೀಠದ ಪೂಜ್ಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜೀ ನುಡಿದರು. ಅವರು ಯಡೂರಿನಲ್ಲಿ ಕೆಎಲ್ಇ ಕನ್ನಡ ಮಾಧ್ಯಮ ಶಾಲೆ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು. ಕೆಎಲ್ಇ ಸಂಸ್ಥೆಯು ಶಿಕ್ಷಣ ಆರೋಗ್ಯ …
Read More »ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಭಿವೃದ್ಧಿಯ ಬಜೆಟ್: ಸಂಸದೆ ಪ್ರಿಯಂಕಾ ಜಾರಕಿಹೊಳಿ
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪರವಾದ ಮತ್ತು ರಾಜ್ಯದ ಅಭಿವೃದ್ಧಿ ಯ ಬಜೆಟ್ ಆಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಯ ದೃಷ್ಟಿಯಿಂದ ನಾಡಿನ ಜನಪರವಾದ ಈ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೂ ಉತ್ತಮ ಆದ್ಯತೆ ನೀಡಿರುವುದು ಶ್ಲಾಘನೀಯವಾಗಿದೆ. ಸರ್ವರಿಗೂ ಸಮಪಾಲು ಎಂಬಂತೆ ಎಲ್ಲಾ ಕ್ಷೇತ್ರಕ್ಕೂ ಸಿಎಂ ಸಿದ್ದರಾಮಯ್ಯ ಅವರು ಆದ್ಯತೆ …
Read More »ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ
ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಗು -ಹೊಸಕೋಟಿ ಗ್ರಾಮದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ …
Read More »
Laxmi News 24×7