Breaking News

Daily Archives: ಫೆಬ್ರವರಿ 28, 2026

ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಖಾನಾಪುರ ಪೊಲೀಸರು

ಬೆಳಗಾವಿ: ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಕಾರಿನಲ್ಲಿ ಖಾನಾಪುರದಿಂದ ಬೆಳಗಾವಿಯತ್ತ ಸಾಗಿಸುತ್ತಿದ್ದಾಗ ದಾಳಿ ಮಾಡಿರುವ ಖಾನಾಪುರ ಪೊಲೀಸರು ಓರ್ವನನ್ನು ಬಂಧಿಸಿ 8,120 ರೂ. ಮೌಲ್ಯದ 232 ಕೆಜಿ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಖಾನಾಪುರ ಪಟ್ಟಣದ ಗಾಂಧಿ ನಗರ 1ನೇ ಕ್ರಾಸ್ ನಿವಾಸಿ ಅಜಾಜ್ ಶಿರಸಂಗಿ (25) ಬಂಧಿತ. ಈತ ಅಕ್ಕಿ ಸಂಗ್ರಹಿಸಿ ಬೇರೆಡೆ ಸಾಗಿಸುವ ದಂಧೆ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಈತನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ …

Read More »

ಮಾರಕಾಸ್ತ್ರ ಹಿಡಿದು ಓಡಾಡಿದರೆ ರೌಡಿಶೀಟರ್ ಕೇಸ್

ಬೆಳಗಾವಿ: ನಗರದಲ್ಲಿ ಯಾರೇ ಆಗಲಿ ಶೋಕಿ ಮಾಡಲು ಹಾಗೂ ಬೇರೆಯವರನ್ನು ಹೆದರಿಸುವುದಕ್ಕೆ ಮಾರಕಾಸ್ತ್ರ ಹಿಡಿದು ಓಡಾಡಿದ್ದಲ್ಲಿ ಅಂಥವರ ವಿರುದ್ಧ ರೌಡಿಶೀಟರ್ ಕೇಸ್ ಹಾಕಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಸ್ತ್ರಾಸ್ತ್ರ ಕಾಯ್ದೆಯಡಿ 2025ರಲ್ಲಿ 38 ಪ್ರಕರಣಗಳಲ್ಲಿ 60 ಜನ, ಈ ವರ್ಷ 3 ಪ್ರಕರಣಗಳಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಮೇಲೆ ರೌಡಿ ಶೀಟ್ ತೆರೆಯಲಾಗುತ್ತಿದ್ದು, ಕೆಲವರಿಂದ …

Read More »

ಬಾಗಲಕೋಟೆ ಕಲ್ಲು ತೂರಾಟ ಕೇಸ್‌ | ಹಿಂದೂ ಯುವಕರ ಬಂಧನ ವೇಳೆ ಪೊಲೀಸರ ಅಡ್ಡಗಟ್ಟಿ ಪ್ರತಿಭಟಿಸಿದ ಮಹಿಳೆಯರು

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ  ವೇಳೆ ಮಸೀದಿಯಿಂದ ಕಲ್ಲು ಎಸೆತ  ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಬಂಧಿಸಲು ಮುಂದಾದ ಪೊಲೀಸರನ್ನು ಮಹಿಳೆಯರು ಅಡ್ಡಗಟ್ಟಿ ಪ್ರತಿಭಟಿಸಿದ್ದಾರೆ. ಇಂದು ಪೊಲೀಸರು ಕಿಲ್ಲಾ ಓಣಿಯ ಯುವಕ ಮತ್ತು ಮಾಗಿಯನ್ನು ಬಂಧಿಸಿ ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಓಣಿಯ ಜನರು ಬಂಧಿಸದಂತೆ ತಡೆದಿದ್ದಾರೆ. ಕಲ್ಲೆಸೆತ ಮಾಡಿದ ಕಿಡಿಗೇಡಿಗಳನ್ನು ಬಿಟ್ಟು ಅಮಾಯಕರನ್ನು ಬಂಧಿಸಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಜನರು ಆಕ್ರೋಶ …

Read More »

ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ – ಪುಟ್ಟ ಮಕ್ಕಳಿಬ್ಬರು ಅನಾಥ!

ಚಿಕ್ಕಬಳ್ಳಾಪುರ: ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆಯನ್ನ (Lover) ಪ್ರಿಯಕರ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆದ್ರೆ ಆಕೆಯ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದು ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ. ಚಿಕ್ಕಬಳ್ಳಾಪುರ ನಗರದ ತೇಜಸ್ವೀನಿ ಎಂಬಾಕೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನ ಬಿಟ್ಟು ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದಳು. ಹೋಟೆಲ್‌ ವೊಂದರಲ್ಲಿ ಕೆಲಸ ಮಾಡಿಕೊಂಡು ಹೋಟೆಲ್  ನವರೇ ಕೊಟ್ಟಿದ್ದ 1 ರೂಮಿನಲ್ಲಿ ಮಕ್ಕಳನ್ನ ಸಾಕಿ ಸಲುಹಿಕೊಂಡು ಜೀವನ ದೂಡುತ್ತಿದ್ದಳು. …

Read More »

ಇಂದಿನಿಂದ ದ್ವಿತೀಯ PUC ಪರೀಕ್ಷೆ; ಅಕ್ರಮ ತಡೆಗೆ ಕಟ್ಟೆಚ್ಚರ

ಬೆಂಗಳೂರು: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆ-1  ಇಂದಿನಿಂದ ಶುರುವಾಗುತ್ತಿದ್ದು, ಈ ಬಾರಿ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಮಾ.17 ರ ವರೆಗೆ ನಡೆಯುವ ಪರೀಕ್ಷೆಗೆ ರಾಜ್ಯಾದ್ಯಂತ 1,217 ಕೇಂದ್ರಗಳನ್ನು ಗುರುತಿಸಲಾಗಿದೆ. ಅಕ್ರಮ, ಗೊಂದಲಗಳಿಗೆ ಅವಕಾಶವಾಗದೇ ಸುಸೂತ್ರವಾಗಿ ಪರೀಕ್ಷೆ ನಡೆಸಲು ಇಲಾಖೆ ಪೂರ್ವ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಂಡಿದೆ. ಮೊದಲ ದಿನವಾದ ಇಂದು ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಬೆಳಗ್ಗೆ …

Read More »

ಡಿನ್ನರ್ ಗುತ್ತಿಗೆ ನಾವು ಪಡೆದಿಲ್ಲ…ಪದೋನ್ನತಿ ಬಗ್ಗೆ ಕಾಲ ಬಂದಾಗ ನಿರ್ಣಯ; ಸಚಿವ ಸತೀಶ್ ಜಾರಕಿಹೊಳಿ

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಶಾಸಕರು ಮತ್ತು ಪರಿಷತ್ ಸದಸ್ಯರು ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನಕ್ಕಾಗಿ ಪತ್ರ ಬರೆದಿರುವ ಬಗ್ಗೆ ಕೇಳಿದ …

Read More »

ಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಮತ

ಬೆಂಗಳೂರು: ಆರೋಗ್ಯಕರ ಕುಟುಂಬಗಳು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುತ್ತವೆ. ಆರೋಗ್ಯಕರ ರಾಷ್ಟ್ರವು ಶಕ್ತಿಶಾಲಿ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಮಹಿಳಾ ಮಾನಸಿಕ ಆರೋಗ್ಯ ಶೃಂಗಸಭೆಯನ್ನು  ಉದ್ಘಾಟಿಸಿ ಮಾತನಾಡಿದ ಸಚಿವರು, ಆರೋಗ್ಯಕರ ಮಹಿಳೆಯರು ಆರೋಗ್ಯಕರ ಕುಟುಂಬಗಳನ್ನು ನಿರ್ಮಿಸುತ್ತಾರೆ ಎಂದರು. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ Mpower ಸಂಸ್ಥೆಗೆ …

Read More »

ಸಾರ್ವಜನಿಕ ಆರೋಗ್ಯ ಸೇವೆಗೆ ಸಂಚಕಾರ?: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದ ರಾಜ್ಯ ವೈದ್ಯಾಧಿಕಾರಿಗಳ ಸಂಘ!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಾಧಿಕಾರಿಗಳು, ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದು, ಅನಿವಾರ್ಯವಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ಪ್ರತಿಭಟನೆ ನಡೆಸಿ ‌ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು‌. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೀಮಿತವಾದ ತಾಂತ್ರಿಕ ಹುದ್ದೆಗಳಾದ ರಾಜ್ಯದ ಮಹಾನಗರ ಪಾಲಿಕೆಯ ಕೆಲವು ಹುದ್ದೆಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಕರ್ನಾಟಕ ರಾಜ್ಯ …

Read More »

ಮಾದಕವಸ್ತು ಮುಕ್ತ ಭಾರತ ಹಾಗೂ ಅಂಗದಾನ ಜಾಗೃತಿ ವಾಕ್‌ಥಾನ್

ಭಾರತವನ್ನು ಮಾದಕವಸ್ತು ಮುಕ್ತ ರಾಷ್ಟ್ರವನ್ನಾಗಿಸಲು ಮತ್ತು ಅಂಗದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯಪುರದಲ್ಲಿ ವಾಕ್‌ಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ವಿಜಯಪುರ ಜಿಲ್ಲೆಯ ನರ್ಸಿಂಗ್ ಕಾಲೇಜುಗಳ ಸಹಯೋಗದಲ್ಲಿ ಈ ಜಾಗೃತಿ ವಾಕ್‌ಥಾನ್ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಅವರು ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ವಾಕ್‌ಥಾನ್, ಅಂಬೇಡ್ಕರ್ ಕ್ರೀಡಾಂಗಣದಲ್ಲಿ …

Read More »

ಬಂಡೀಪುರ ಸಫಾರಿ ಪುನಾರಂಭಕ್ಕೆ ರೈತ ಸಂಘದ ವಿರೋಧ: ಗುಂಡ್ಲುಪೇಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

​ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಪುನಾರಂಭಿಸಲು ಉದ್ದೇಶಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದ್ದು, ಭದ್ರತೆಯನ್ನು ಹೆಚ್ಚಿಸಿದೆ. ​ಪ್ರಮುಖಾಂಶಗಳು: ​ಪ್ರತಿಭಟನೆಯ ಕಿಚ್ಚು: ಸಫಾರಿ ಪುನಾರಂಭದ ಮುನ್ಸೂಚನೆ ಸಿಗುತ್ತಿದ್ದಂತೆ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ​ಅಧಿಕಾರಿಗಳ ಫೀಲ್ಡ್ ವಿಸಿಟ್: ಇಂದು ಬಂದೋಬಸ್ತ್ …

Read More »