Breaking News

Yearly Archives: 2025

ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ಶುಕ್ರವಾರ ಹಾಜರಾಗುತ್ತೇನೆ – ಶಾಸಕ ಕುಲಕರ್ಣಿ.

ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ಶುಕ್ರವಾರ ಹಾಜರಾಗುತ್ತೇನೆ – ಶಾಸಕ ಕುಲಕರ್ಣಿ. : ನ್ಯಾಯಾಲಯದ ಆದೇಶಕ್ಕೆ ನಾನು ತಲೆಬಾಗುತ್ತೇನೆ. ಆದೇಶದಂತೆ ನಾನು ಶುಕ್ರವಾರ ಬೆಂಗಳೂರು ನ್ಯಾಯಾಲಯದ ಎದುರು ಹಾಜರಾಗುತ್ತೇನೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.  ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಪ್ರಕರಣ ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತರೂಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಒಂದು ವೇಳೆ ಕ್ಷೇತ್ರದಲ್ಲಿ ಇಲ್ಲದೇ ಹೋದರೂ …

Read More »

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚರ್ಚೆ

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚರ್ಚೆ *ನವದೆಹಲಿ:* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ನವ‌ ದೆಹಲಿಯ ಶಾಸ್ತ್ರಿ ಭವನದಲ್ಲಿ‌ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅನೇಕ ವಿಷಯಗಳು ಸೇರಿದಂತೆ ಕೇಂದ್ರ …

Read More »

ಎಲ್ಲೆಡೆ ಸಮರ್ಪಕವಾಗಿ ಮಳೆ ಆಗುತ್ತಿದ್ದರಿಂದ ಮೊಸಳೆ ಗಳು ಹಳ್ಳಗಳಲ್ಲಿ

ಎಲ್ಲೆಡೆ ಸಮರ್ಪಕವಾಗಿ ಮಳೆ ಆಗುತ್ತಿದ್ದರಿಂದ ಮೊಸಳೆ ಗಳು ಹಳ್ಳಗಳಲ್ಲಿ ಸಚರಿಸುತ್ತಿವೆ ಅದರಲ್ಲಿ ಪ್ರತ್ಯಕ್ಷ; ಗ್ರಾಮಸ್ಥರಿಂದ ಮೊಸಳೆ ಮರಿಗಳ ಸುರಕ್ಷಿತ ಸೆರೆ ಆಗಿದೆ. ಹಳ್ಳದಲ್ಲಿ ತಾಯಿ ಮೊಸಳೆ ಸೇರಿ ಸುಮಾರು 50 ಕ್ಕೂ ಹೆಚ್ಚು ಮೊಸಳೆ ಮರಿಗಳು ಪ್ರತ್ಯಕ್ಷವಾದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದೇವರಡ್ಡೆರಟ್ಟಿ ಗ್ರಾಮದಲ್ಲಿ ನಡೆದಿದೆ. ಹಲವು ದಿನಗಳಿಂದ ಗ್ರಾಮದ ಸಮೀಪದ ಅಪ್ಪಾಸಾಬ ಸತ್ಯಪ್ಪ ನಾಯಕ ಅವರ ತೋಟದ ಕೃಷಿ ಹೊಂಡದಲ್ಲಿ ಠಿಕಾನಿ ಹೂಡಿದ್ದ ಮೊಸಳೆ ಗ್ರಾಮಸ್ಥರಲ್ಲಿ …

Read More »

ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೋರ್ಸ್: ಎಂ.ಬಿ.ಪಾಟೀಲ್

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ತಯಾರಿಕಾ ವಲಯದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸರಕಾರವು 6 ಪ್ರಮುಖ ವಲಯಗಳ ಪ್ರಗತಿಗೆ ಪ್ರತ್ಯೇಕ ಟಾಸ್ಕ್-ಫೋರ್ಸ್ ಗಳನ್ನು ರಚಿಸಲಿದೆ. ಇದಕ್ಕೆ ಬೇಕಾದ ಸಮಗ್ರ ಟೌನ್-ಶಿಪ್ ಗಳ ಅಭಿವೃದ್ಧಿಯಿಂದ ಹಿಡಿದು ಕೈಗಾರಿಕಾ ಪ್ರದೇಶಗಳಿಂದ ಮಂಗಳೂರು ಮತ್ತು ಚೆನ್ನೈ ಬಂದರುಗಳಿಗೆ ಬೇಕಾದ ಸಮರ್ಪಕ ಸಂಪರ್ಕದವರೆಗೆ ಪ್ರತಿಯೊಂದು ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ರಾಜ್ಯದಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ಆಗಬೇಕಾದ …

Read More »

ಕ್ರಾಂತಿ ಮಹಿಳಾ ಮಂಡಳದಿಂದ ವಿಶ್ವ ಪರಿಸರ ದಿನಾಚರಣೆ

ಬೆಳಗಾವಿ: ನಗರದ ಹಿಂದವಾಡಿ ಕ್ರಾಂತಿ ಮಹಿಳಾ ಮಂಡಳ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಮಹಾರಾಷ್ಟ್ರದ ಅಂಬೋಳಿಯಲ್ಲಿರುವ ಏಮ್ ಫಾರ ಸೇವಾ ಸಂಸ್ಥೆಯ ಆಶ್ರಮದಲ್ಲಿ ೨೦ ಮಾವಿನ ಸಸಿಗಳನ್ನು ನೇಡುವ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ನಿವೃತ್ತ ಜಿಸ್‌ಎಸ್‌ಟಿ ಅಸಿಸ್ಟೆಂಟ್ ಕಮಿಷನರ್ ಲಕ್ಷ್ಮಣ ಕಾಂಬಳೆ ಅವರು ಮಾತನಾಡಿ, ಕ್ರಾಂತಿ ಮಹಿಳಾ ಮಂಡಳ ಸಮಾಜಪರ ಕ್ರಾಂತಿಕಾರಿಯಾದ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸದಸ್ಯರೆಲ್ಲಾ ಗೃಹಣಿಯರಾಗಿದ್ದು ತಮ್ಮ ಕುಟುಂಬದ ಜವಾಬ್ದಾರಿಗಳ …

Read More »

ಜನಪದವನ್ನು ಜೀವಂತಗೊಳಿಸಿದವರು ಡಾ.ಜಗಜಂಪಿ: ಪೂಜ್ಯ ಮಲ್ಲಯ್ಯ ಸ್ವಾಮೀಜಿ ಕಾರಂಜಿಮಠದಲ್ಲಿ ಡಾ.ಬಸವರಾಜ ಜಗಜಂಪಿ ಅಭಿನಂದನ ಸಮಾರಂಭ

ಜನಪದವನ್ನು ಜೀವಂತಗೊಳಿಸಿದವರು ಡಾ.ಜಗಜಂಪಿ: ಪೂಜ್ಯ ಮಲ್ಲಯ್ಯ ಸ್ವಾಮೀಜಿ ಕಾರಂಜಿಮಠದಲ್ಲಿ ಡಾ.ಬಸವರಾಜ ಜಗಜಂಪಿ ಅಭಿನಂದನ ಸಮಾರಂಭ ಬೆಳಗಾವಿ ೯: ಕನ್ನಡ ಜನಪದ ಸಾಹಿತ್ಯವನ್ನು, ರಂಗ ಸಾಹಿತ್ಯವನ್ನು ಪೋಷಿಸಿ ಬೆಳೆಸಿದ ಡಾ.ಬಸವರಾಜ ಜಗಜಂಪಿಯವರು. ತಮ್ಮ ಸುಂದರವಾದ ಮಾತುಗಳಿಂದ ಜನಪದ ಸಿರಿಯನ್ನು ಜನತೆಗೆ ಮುಟ್ಟಿಸುವ ಗುರುತರವಾದ ಕೆಲಸವನ್ನು ನಾಡಿನುದ್ದಗಲಕ್ಕೂ ಅವಿರತವಾಗಿ ಮಾಡಿದ್ದು ಅವರ ದಾಖಲಾರ್ಹವಾದ ಸೇವೆಯಾಗಿದೆ ಎಂದು ಘೋಡಗೇರಿ ಶಿವಾನಂದಮಠದ ಪೂಜ್ಯ ಮಲ್ಲಯ್ಯ ಸ್ವಾಮಿಗಳು ನುಡಿದರು. ಇಲ್ಲಿನ ಶಿವಬಸವ ನಗರದ ಶ್ರೀ ಕಾರಂಜಿಮಠದಲ್ಲಿ, ಜೂ. …

Read More »

ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಂದ ಸಮೀಕ್ಷ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಉದ್ಘಾಟನೆ.

ರಾಯಚೂರು : ನೂತನವಾಗಿ ಆರಂಭಗೊಂಡ ಸಮೀಕ್ಷ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನು ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ರಾಯಚೂರು ತಾಲೂಕಿನ ಯಾಪಲದಿನ್ನಿಯಲ್ಲಿ ಶ್ರೀ ದಳಪತಿ ಚಂದ್ರಶೇಖರರೆಡ್ಡಿ ಸಾರಥ್ಯದಲ್ಲಿ ನೂತನವಾಗಿ ಆರಂಭಗೊಂಡ ಸಮೀಕ್ಷ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಭಾಗವಹಿಸಿ ಉದ್ಘಾಟಿಸಿ ಮಾತನಾಡಿದ ಅವರು ಈ ಸಹಕಾರಿ ಸಂಘ ರೈತ ವರ್ಗಕ್ಕೆ , ಕಾರ್ಮಿಕ ವರ್ಗಕ್ಕೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು …

Read More »

ಮಳೆ ಆರ್ಭಟದಿಂದ ಚಿಂಚಲಿ – ಕುಡಚಿ ಸೇತುವೆ ಜಲಾವೃತ

ಚಿಕ್ಕೋಡಿ (ಬೆಳಗಾವಿ): ಕಳೆದ ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಅಬ್ಬರಿಸುತ್ತಿದೆ. ರಾಜ್ಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕುಡಚಿ ಸುತ್ತಮುತ್ತಲಿನ ಜನ-ಜಾನುವಾರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುಡಚಿ ಪಟ್ಟಣದಲ್ಲಿ ಹಾಗೂ ಕೆಲವು ಗ್ರಾಮದಲ್ಲಿ ರಾತ್ರಿ ರಭಸದ ಮಳೆ ಸುರಿದಿದ್ದು, ಸುಕ್ಷೇತ್ರ ಮಾಯಕ್ಕ ದೇವಸ್ಥಾನನಕ್ಕೆ ತೆರಳುವ ಚಿಂಚಲಿ ಗ್ರಾಮ ಹಾಗೂ ಕುಡಚಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಕೆಳ ಹಂತದ ಸೇತುವೆ ಮುಳುಗಡೆಯಾಗಿದೆ. …

Read More »

ವೃದ್ಧ ದಂಪತಿಗೆ ಮೂರು ತಿಂಗಳು ಡಿಜಿಟಲ್ ಅರೆಸ್ಟ್

ಬೆಂಗಳೂರು : ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಬಂಧಿತ ಆರೋಪಿಗಳು. ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇಂಜಿನಿಯರ್ ಆಗಿದ್ದ ಮಂಜುನಾಥ್ 31 ವರ್ಷಗಳ ಕಾಲ ನೈಜೀರಿಯಾದಲ್ಲಿ ಕೆಲಸ ನಿರ್ವಹಿಸಿ, ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬ್ಯಾಂಕ್‌ನ ಪ್ರತಿನಿಧಿಗಳ …

Read More »

15 ಜನರ ಮೇಲೆ ಬೀದಿ ನಾಯಿಗಳ ದಾಳಿ

ರಾಯಚೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಸುಮಾರು 15 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಗಂಗಾನಿವಾಸ ಹಾಗೂ ಟ್ಯಾಂಕ್ ಬಂಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದ್ದರಿಂದ ಹುಚ್ಚುನಾಯಿ ಕಡಿತ ಶಂಕೆ ಎದುರಾಗಿದ್ದು, ಗಾಯಾಳುಗಳು ಆತಂಕಗೊಂಡಿದ್ದಾರೆ. ಓರ್ವ ಬಾಲಕ ಸೇರಿದಂತೆ ಗಾಯಗೊಂಡ ಎಂಟು ಜನರನ್ನು ನಗರದ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಸಿಕ್ಕಸಿಕ್ಕವರ ಕೈ, ಕಾಲಿಗೆ …

Read More »