Breaking News

Yearly Archives: 2025

ಹಿರಿಯ ಪತ್ರಕರ್ತ ಶಹೀದ್ ಧಾರವಾಡಕ‌ರ್ ವಿಧಿವಶ

ಗೋಕಾಕ; ಗೋಕಾಕ ನಿವಾಸಿಯಾಗಿರುವ ಹಿರಿಯ ಪತ್ರಕರ್ತರಾದ ಶಹೀದ್ ಧಾರವಾಡಕರ್ (80) ಶುಕ್ರವಾರ ವಿಧಿವಶರಾಗಿದ್ದಾರೆ.   ದಿ.ಶಹೀದ್ ಧಾರವಾಡಕರ್ ಅವರು, 1970 ರ ದಶಕದಲ್ಲಿ ಕಮ್ಯೂನಿಷ್ಟೆ ಚಳುವಳಿ ಹಾಗೂ ಸಮದರ್ಶಿ ಪತ್ರಿಕೆ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾದರು. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿ.ಶಹೀದ್ ಧಾರವಾಡಕರ್ ಅವರು, ಇಂದು ಬೆಳಗಿನ ಜಾವ ಇಹಲೋಕ ತಳ್ಳಿಸಿದ್ದಾರೆ.   ಮೃತರು, ಪತ್ನಿ, ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

Read More »

ಹಾರೂಗೇರಿ : ಕಬ್ಬು ತುಂಬಿದ ಟ್ರ್ಯಾಕ್ಟ‌ರ್ ಪಲ್ಟಿ ; ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ರಾಯಬಾಗ : ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಗೂಡಂಗಡಿಗಳ ಮೇಲೆ ಪಲ್ಟಿ ಆಗಿರುವ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.   ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟ‌ರ್ ಪಲ್ಟಿ ಆಗಿದೆ. ಹಾರೂಗೇರಿ – ರಾಯಬಾಗ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.   ಘಟನೆಯಲ್ಲಿ ಟ್ರ್ಯಾಕ್ಟ‌ರ್ ಚಾಲಕನ ಅಜಾಗರೂಕತೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, …

Read More »

ರೊಕ್ಕ ಕೊಟ್ಟರ ಹೆಂಡ್ತಿ ಆಗ್ತಾರ, ಕೈ ಕೊಟ್ಟ ಓಡಿ ಹೋಗ್ತಾರ ;ಸಿಂಗಲ್ಸ್ ಹುಡುಗರೇ ಹುಷಾ‌ರ್….!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ ವಯಸ್ಸಿನ ಔಟ್ ಡೇಟೆಡ್ ಹುಡುಗರಿಗೆ ಕಾಟವಾಗಿದೆ ಈ ಕಹಾನಿ ಕೇಳಿದ್ರೆ ನಿಜವಾಗಲೂ ಜಗತ್ತಿನ ಮತ್ತೊಂದು ವಿಸ್ಮಯದ ದರ್ಶನವಾದಂತಾಗುತ್ತದೆ.   ನೀವು ಯಾದಿ ಮೇ ಶಾದಿ ಬಗ್ಗೆ ಕೇಳಿದ್ದೀರಾ ನೋಡಿದ್ದೀರಾ,ಅರೇಂಜ್ ಮ್ಯಾರೇಜ್, ಲವ್ ಮ್ಯಾರೇಜ್ ಗಳನ್ನೂ ಸಹ ನೋಡಿದ್ದೀರಾ ಆದ್ರೆ ಈಗ ವೀಕ್ಲಿ ಮ್ಯಾರೇಜ್ ಜಮಾನಾ ಶುರುವಾಗಿದೆ, ಇದರ ಹೆಸರು …

Read More »

ಡಿ.ಕೆ ಶಿವಕುಮಾರ್‌ (DK Shivakumar) ಬೇಜಾರಾಗಲು ಅವರ ಆಸ್ತಿ ಏನಾದರೂ ಬರೆಸಿಕೊಂಡಿದ್ದೇವಾ?:ಕೆಎನ್ ರಾಜಣ್ಣ

ತುಮಕೂರು: ಡಿ.ಕೆ ಶಿವಕುಮಾರ್‌ (DK Shivakumar) ಬೇಜಾರಾಗಲು ಅವರ ಆಸ್ತಿ ಏನಾದರೂ ಬರೆಸಿಕೊಂಡಿದ್ದೇವಾ? ಇದೆಲ್ಲ ಸುಮ್ಮನೆ ಅಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಸಹಕಾರಿ ಸಚಿವ ಕೆಎನ್ ರಾಜಣ್ಣ (KN Rajanna) ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಡಿನ್ನರ್ ಪಾರ್ಟಿ ವಿಚಾರದ ಕುರಿತು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿನ್ನರ್ ಪಾರ್ಟಿ (Dinner Party) ಕ್ಯಾನ್ಸಲ್ ಎಲ್ಲಿ ಆಗಿದೆ? ಮುಂದೂಡಿದ್ದೇವೆ ಅಷ್ಟೇ, ಕ್ಯಾನ್ಸಲ್ ಇಲ್ಲ. ಈಗಾಗಲೇ ಈ ಬಗ್ಗೆ ಪರಮೇಶ್ವರ್ …

Read More »

ಹೆಚ್.ಡಿ.ಕುಮಾರಸ್ವಾಮಿರವರನ್ನು ಭೇಟಿ ಮಾಡಿದರಮೇಶ ಜಾರಕಿಹೊಳಿರವರು

ಇಂದು ದೆಹಲಿಯಲ್ಲಿ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರೂ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರನ್ನು ಭೇಟಿ ಮಾಡಿ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಹಾಗೂ ಅರಸೀಕೆರೆ ಪಕ್ಷ ಸಂಘಟನೆ ಬಲವರ್ಧನೆಯ ಬಗ್ಗೆ ಮಾಹಿತಿ ನೀಡಿದೆನು. ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಶ್ರೀ ರಮೇಶಣ್ಣ ಜಾರಕಿಹೊಳಿರವರು ಹಾಗು ಶ್ರೀ ಬಂಡೆಪ್ಪ ಕಾಶೆಪ್ಪನವರು ಉಪಸ್ಥಿತರಿದ್ದರು.

Read More »

ವೈಕುಂಠ ಏಕಾದಶಿಯ ಸಂಭ್ರಮಕ್ಕೆ ವಿಷ್ಣು ದೇವಾಲಯಗಳಲ್ಲಿ ಸಕಲ ಸಿದ್ಧತೆ

ವೈಕುಂಠ ಏಕಾದಶಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಗರದ ಹಲವು ವಿಷ್ಣು ದೇವಾಲಯಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶುಕ್ರವಾರ ಬೆಳಗ್ಗೆನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ. ಇನ್ನು ಬೆಳಗ್ಗಿನಿಂದ ರಾತ್ರಿವರೆಗೆ ವೈಕುಂಠದ್ವಾರದ ಪ್ರವೇಶಕ್ಕೆ ಅವಕಾಶವನ್ನೂ ಕಲ್ಪಿಸಲಾಗಿದೆ. ನಗರದ ವೈಯ್ಯಾಲಿಕಾವಲ್‌ನ ಟಿಟಿಡಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಜೆ.ಪಿ.ನಗರದ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಸಂಜಯನಗರದ ರಾಧಾಕೃಷ್ಣ ಮಂದಿರ, ಇಸ್ಕಾನ್ ದೇವಸ್ಥಾನ, ಕೋಟೆ ವೆಂಕಟೇಶ್ವರ ದೇವಾಲಯ, ಶ್ರೀನಗರದ ವೆಂಕಟರಮಣ ದೇವಸ್ಥಾನ, ವಿ.ವಿ.ಪುರದ ಲಕ್ಷ್ಮೀ …

Read More »

ಗ್ರಾಮೀಣ ಪತ್ರಕರ್ತರಿಗೆ ರಕ್ಷಣೆ ಭದ್ರತೆ ನೀಡುವಂತೆ ಒತ್ತಾಯ

ಗ್ರಾಮೀಣ ಪತ್ರಕರ್ತರಿಗೆ ರಕ್ಷಣೆ ಭದ್ರತೆ ನೀಡುವಂತೆ ಒತ್ತಾಯ ತುಮಕೂರು ಬ್ರೇಕಿಂಗ್ ನ್ಯೂಸ್: ಅಕ್ರಮ ಸಂಬಂಧದ ಸುದ್ದಿ ಪ್ರಸಾರವಾದ ಹಿನ್ನಲೆಯಲ್ಲಿ ಹಿರಿಯ ಪತ್ರಕರ್ತನ ಮೇಲೆ ಮಾರಕ ದಾಳಿ. ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಘಟನೆ.. ಹಲ್ಲೆಗೊಳಗಾದ ಹಿರಿಯ ಪತ್ರಕರ್ತ ರಾಮಾಂಜಿನಪ್ಪ, ಗಡಿನಾಡು ದಿನಪತ್ರಿಕೆ ಹಾಗೂ ಗಡಿನಾಡು ನ್ಯೂಸ್ ಸಂಪಾದಕ. ಡಿಸೆಂಬರ್ 16ರಂದು ನಾರಾಯಣ ರೆಡ್ಡಿ ಎಂಬಾತನ ಅಕ್ರಮ ಸಂಬಂಧದ ಕುರಿತು ವರದಿ ಮಾಡಿದ್ದು ರಾಮಾಂಜಿನಪ್ಪ . ಮೂಲತಃ ನಾರಾಯಣ ರೆಡ್ಡಿ ಆಂದ್ರದವರು …

Read More »

ನಿಲ್ಲಿಸಿದ್ದ ಎತ್ತಿನಗಾಡಿಗೆ ಬೈಕ್ ಡಿಕ್ಕಿ

ಹಾವೇರಿ: ನಿಲ್ಲಿಸಿದ್ದ ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದು ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಮೃತರನ್ನು ಕುಸುಮಾ (56) ಮತ್ತು ಕುಮಾರ (34) ಎಂದು ಗುರುತಿಸಲಾಗಿದೆ‌. ಮೃತರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ನಿವಾಸಿಗಳು. ಹಂಸಭಾವಿಯ ತಮ್ಮ ಸಂಬಂಧಿಕರ ಮನೆಗೆ ಹೊರಟಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ಹಂಸಭಾವಿ ಠಾಣೆ ಪೊಲೀಸರು …

Read More »

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ

ನಿಮ್ಹಾನ್ಸನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಸಿ.ಎಂ ಸೂಚನೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ನಿಮ್ಹಾನ್ಸನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಸಿಎಂ ಸಿದ್ಧರಾಮಯ್ಯ ಸೂಚನೆ ರಾಜೀವ್‌ ಗಾಂಧಿ ವೈದ್ಯಕೀಯ ವಿವಿಯಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಮೊತ್ತವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯಗಳಿಗಾಗಿ …

Read More »

ಗಾಂಜಾ ನಶೆಯಲ್ಲಿ ಗೋಕಾಕ ಯುವಜನ,

ಗಾಂಜಾ ನಶೆಯಲ್ಲಿ ಗೋಕಾಕ ಯುವಜನ, ಪೆಡ್ಲರಗಳಿಗೆ ಕಡಿವಾಣ ಯಾವಾಗ, ಪತ್ರಿಕೆಗಳಲ್ಲಿ ಗಾಂಜಾ ಶಿರ್ಷಿಕೆ ಬಂದಾಗಲೆ ಎಚ್ಚರಾದ್ರಾ ಗೋಕಾಕ ಪೋಲೀಸ್ರು ಯಾಕೆ,,? ಗೋಕಾಕ : ನಗರದಲ್ಲಿ ಗಾಂಜಾ ಸೇವನೆಗಳಂತಹ ಚಟಕ್ಕೆ ಯುವ ಜನರು ದಾಸರಾಗುತ್ತಿದ್ದಾರೆ. ದುಶ್ಚಟಗಳ ಸುಳಿಯಲ್ಲಿ ಸಿಲುಕಿ ನಶೆಯಲ್ಲಿ ಕಳ್ಳತನದ ಮಾರ್ಗ ಹಿಡಿದು ಕಳ್ಳತನ ಪ್ರಕರಣಗಳು ಹೆಚ್ಚಾಗುತಿದ್ದರೂ ಪೋಲಿಸ್ ಠಾಣೆಯಲ್ಲಿ ದಾಖಲಾಗುತ್ತಿಲ್ಲ. ಪೋಲಿಸರು ಗಾಂಜಾ ನಶೆಯ ಕಾರಣಗಳನ್ನು ನೀಡಿ ಕಳ್ಳರ ಮೇಲೆ ಪ್ರಕರಣ ದಾಖಲಿಸುತ್ತಿಲ್ಲ.ಇದರಿಂದ ಗಾಂಜಾ ನಶೆಯಲ್ಲಿ ಯುವಕರು ಮತ್ತಷ್ಟು …

Read More »