Breaking News

Yearly Archives: 2025

ಇನ್ಫೋಸಿಸ್‌ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ ಕಾರ್ಯಾಚರಣೆ ಐದನೇ ದಿನವೂ ಮುಂದುವರೆದಿದೆ.

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್‌ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ ಕಾರ್ಯಾಚರಣೆ ಐದನೇ ದಿನವೂ ಮುಂದುವರೆದಿದೆ. ಚಿರತೆಯ ಚಲನವಲನದ ಬಗ್ಗೆ ಈವರೆಗೆ ಸುಳಿವು ಕಂಡುಬಂದಿಲ್ಲ. ಡಿಸೆಂಬರ್ 31ರಂದು ಮುಂಜಾನೆ ಇನ್ಫೋಸಿಸ್ ಭದ್ರತಾ ಸಿಬ್ಬಂದಿಗಳ ಜೀಪ್‌ಗೆ ಅಡ್ಡಲಾಗಿ ಹಾದು ಹೋಗಿದ್ದ ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಬಿಟ್ಟರೆ, ಕಳೆದ ಐದು ದಿನದಿಂದ ಚಿರತೆ ಯಾರ ಕಣ್ಣಿಗೂ ಕಂಡಿಲ್ಲ. ಚಿರತೆ ಸೆರೆಗಾಗಿ ಇನ್ಫೋಸಿಸ್ ಆವರಣದಲ್ಲಿ 12ಕ್ಕೂ ಹೆಚ್ಚು ಕ್ಯಾಮರಾ ಟ್ರ್ಯಾಪ್​ಗಳನ್ನು ಅಳವಡಿಸಲಾಗಿದ್ದು, …

Read More »

ಬೆಳಗಾವಿ ಜಿಲ್ಲಾಡಳಿತದ ವಿರೋಧ ನಡುವೆಯೂ ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣ

ಬೆಳಗಾವಿ: ಜಿಲ್ಲಾಡಳಿತದ ವಿರೋಧದ ನಡುವೆಯೂ ಭಾನುವಾರ ರಾತ್ರಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಂಡಿತು. ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಶಿವೇಂದ್ರರಾಜೇ ಭೋಸ್ಲೆ, ಶಾಸಕ ಅಭಯ್ ಪಾಟೀಲ ಸೇರಿ ಸಾವಿರಾರು ಜನರು ಇದಕ್ಕೆ ಸಾಕ್ಷಿಯಾದರು. ಕಳೆದ ಐದಾರು ದಿನಗಳಿಂದ ಬೆಳಗಾವಿಯ ಅನಗೋಳದ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಶಾಸಕ ಅಭಯ ಪಾಟೀಲ ಹಾಗೂ ಪಾಲಿಕೆ ಸದಸ್ಯರು ವಿಶೇಷ ತಯಾರಿ ನಡೆಸಿದ್ದರು. ಆದರೆ, ಇದಕ್ಕೆ …

Read More »

ಪತಿಯ ಅನುಮಾನ ರೋಗಕ್ಕೆ ಹಾರಿ ಹೋಯ್ತು ಪತ್ನಿ ಪ್ರಾಣ..!

ಕೊಪ್ಪಳ, (ಜನವರಿ 05): ಆಕೆ ಮುದ್ದು ಮುಖದ ತಾವರೆಯಂತಿದ್ದಳು. ಮನೆಯಲ್ಲಿ ಚೆನ್ನಾಗಿ ಸಾಕಿದ್ದ ಹೆತ್ತವರು,ಗಿಣಿಯಂತೆ ಇದ್ದ ಮಗಳನ್ನು ಮದುವೆ ಮಾಡಿ, ಆಕೆಯ ಸಂಸಾರದ ಬಾಳು ಆನಂದಸಾಗರವಾಗಲಿ ಅಂತ ಹರಿಸಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಮುದ್ದಾದ ಹೆಣ್ಣು ಮಗು ಕೂಡಾ ಹುಟ್ಟಿತ್ತು. ಮದುವೆಯಾದ ಮಗಳು ಚೆನ್ನಾಗಿರಲಿ ಅಂತ ಹೆತ್ತವರು ಸಾಕಷ್ಟು ವರದಕ್ಷಿಣೆ ನೀಡಿದ್ದರು. ಅಳಿಯ ಕೇಳಿದಾಗ ಮತ್ತೆ ಹಣ ಕೂಡಾ ನೀಡಿದ್ದರು. ಆದ್ರೆ ಇಂತಹ ಮುದ್ದಾದ ಮಗಳು, ಬಾರದ ಲೋಕಕ್ಕೆ ಹೋಗಿದ್ದ ಸುದ್ದಿ …

Read More »

ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ

ನೆಲಮಂಗಲ, ಜನವರಿ 05: ಮಾಜಿ ಲವರ್​​ನಿಂದ ಯುವತಿಗೆ (girl) ಕಿರುಕುಳ ನೀಡಿದ್ದಲ್ಲದೇ ಅವಳ ಬೈಕ್​ ಕದ್ದು, ಒಂದು ದಿನದ ಬಳಿಕ ಜಖಂಗೊಳಿಸಿ ಅದೇ ಜಾಗದಲ್ಲಿ ತಂದು ನಿಲ್ಲಿಸಿ ಪರಾರಿ ಆಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಚಿಕ್ಕಬಿದರಕಲ್ಲು ಗ್ರಾಮದ ಸುನೀಲ್ ಗೌಡನಿಂದ ಕಿರುಕುಳ ಆರೋಪ ಮಾಡಲಾಗಿದೆ. ನಿಲ್ಲಿಸಿದ್ದ ಬೈಕ್ ಕದಿಯುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬೇರೊಬ್ಬ ಯುವಕನ ಜೊತೆ ಸಂಬಂಧ ಆರೋಪ ಮೇರೆಗೆ ಇಬ್ಬರ ಮಧ್ಯೆ ಬ್ರೇಕ್ ಆಪ್​ ಆಗಿತ್ತು. ಕಿರುಕುಳ ಸಂಬಂಧ ಪೀಣ್ಯಾ …

Read More »

ದುಡಿಯುವ ಗಂಡುಮಕ್ಕಳಿಗೆ ಶೇ.15% ಬಸ್​ ಪ್ರಯಾಣ ದರ ಏರಿಕೆ ಭಾರ: ಸಚಿವ ಶಿವಾನಂದ ಪಾಟೀಲ್

ಹಾವೇರಿ: “ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬಸ್​ ಪ್ರಯಾಣ ದರ ನಮಗಿಂತ ದರ ಹೆಚ್ಚಿದೆ. ನಮ್ಮಲ್ಲಿ ಕಡಿಮೆ ಇದೆ” ಎಂದು ಬಸ್ ಟಿಕೆಟ್ ದರ ಏರಿಕೆಯನ್ನು ಸಚಿವ ಶಿವಾನಂದ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರಿಗೆ ಹೋರಾಟ ಮಾಡೋದು ಬಿಟ್ಟು ಬೇರೆ ಏನು ಕೆಲಸ ಹೇಳಿ?. ಅವರು ಒಂದು ಸಲವಾದರೂ ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾರಾ?. ಶಕ್ತಿ ಯೋಜನೆಯಲ್ಲಿ ಬಡ ಜನರನ್ನು ಓಡಾಡಿಸ್ತಿದ್ದೇವೆ ಅಂದರೆ ಅಟ್ ಲೀಸ್ಟ್ ನೋ …

Read More »

ಚಿತ್ರ ಸಂತೆ: ಗಮನ ಸೆಳೆದ ಕ್ಲೇ ಆರ್ಟ್, ಡಾಟ್ ಅಂಡ್ ರಿವರ್ಸ್ ಪೇಂಟಿಂಗ್ಸ್

ಬೆಂಗಳೂರು: ನಗರದ ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಇಂದು ಆಯೋಜಿಸಿರುವ 22ನೇ ಚಿತ್ರ ಸಂತೆಯಲ್ಲಿ ಹಲವು ವಿಧದ ಮನಮೋಹಕ ಚಿತ್ರಕಲೆಗಳು ಕಲಾಭಿಮಾನಿಗಳಿಗೆ ಬೆರಗು ಮೂಡಿಸಿದವು. ಡಾಟ್ ಪೇಂಟಿಂಗ್, ರಿವರ್ಸ್ ಪೇಂಟಿಂಗ್ ಮತ್ತು ಕ್ಲೇ ಆರ್ಟ್ ಮೂಲಕ ಮೂಡಿ ಬಂದ ಕಲಾಕೃತಿಗಳು ಚಿತ್ರಸಂತೆಯ ಮೆರುಗು ಹೆಚ್ಚಿಸಿದವು. ಡಾಟ್ ಪೇಂಟಿಂಗ್ ವಿಶೇಷತೆಯೇನು? ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ವೃತ್ತಿಪರ ಚಿತ್ರಕಲಾವಿದ ಉಷಾರಂಜನ್ ಮಂಡಲ್ ಅವರ ಡಾಟ್ ಪೇಂಟಿಂಗ್ ವಿಶೇಷವಾಗಿ ಜನರ ಗಮನ ಸೆಳೆಯಿತು. ತರಹೇವಾರಿ ಪೆನ್ …

Read More »

ಕೆಲವರು ದೇಶದ ನೆಮ್ಮದಿಗೆ ಭಂಗ ತರಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ : ಸಿಎಂ

ದಾವಣಗೆರೆ : ಕೆಲವರು ದೇಶದ ನೆಮ್ಮದಿ ಭಂಗವನ್ನುಂಟು ಮಾಡಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತವರಿಂದ ಯುವ ಜನತೆ ದೂರ ಉಳಿಯಿರಿ. ತಮ್ಮ ಬದುಕು, ಭವಿಷ್ಯ ಕಾಪಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು. ಇಂದು ದಾವಣಗೆರೆ ಜಿಲ್ಲಾಡಳಿತ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನತೆ ಸಮಾಜಮುಖಿಯಾಗಿ ಬೆಳೆದಾಗ ದೇಶದ ಆಸ್ತಿ ಆಗುತ್ತಾರೆ. ಇದಕ್ಕಾಗಿ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆದು ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ …

Read More »

ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಬ್ರಹ್ಮರಥೋತ್ಸವ

ದೊಡ್ಡಬಳ್ಳಾಪುರ : ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ಪ್ರಸಿದ್ಧ ಘಾಟಿ ದೇವಾಲಯದಲ್ಲಿ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಜರುಗಿತು. ರಥವನ್ನು ಎಳೆಯುವಾಗ ಗರುಡ ರಥದ ಸುತ್ತಲೂ ಮೂರು ಸುತ್ತು ಸುತ್ತಿದ್ದು, ಎಲ್ಲರ ಗಮನ ಸೆಳೆಯಿತು. ಇಂದು ನಾಡಿನೆಲ್ಲೆಡೆ ಚಂಪಾ ಷಷ್ಠಿ ಹಿನ್ನೆಲೆ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಬಳಿ ಬೆಳಗ್ಗೆಯಿಂದಲೂ ಸಾಗರೋಪಾದಿಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಜೊತೆಗೆ ದೇವಾಲಯದ ಆಡಳಿತ ಮಂಡಳಿ ಕೂಡ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿತ್ತು. ಹಾಗಾಗಿ ಮುಂಜಾನೆ …

Read More »

ಗಡಿ ಜಿಲ್ಲೆಯಲ್ಲಿ ಮುಚ್ಚಿದ 20 ಸರ್ಕಾರಿ ಶಾಲೆಗಳು

ಚಾಮರಾಜನಗರ: ಇಂಗ್ಲಿಷ್​​ ಮೇಲಿನ ಅಕ್ಕರೆ, ಕಾನ್ವೆಂಟ್​​​​ ವ್ಯಾಮೋಹ ಹಾಗೂ ಸಾರಿಗೆ ತೊಂದರೆಯಿಂದಾಗಿ ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ 20 ಸರ್ಕಾರಿ ಶಾಲೆಗಳು ಬಂದ್​ ಆಗಿವೆ. 2023-24ರಲ್ಲಿ 12 ಮತ್ತು ಈ ಸಾಲಿನಲ್ಲಿ 8 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯಿಂದ ಬಂದ್ ಆಗಿವೆ. ಪ್ರಿ ಕೆಜಿಗಳನ್ನು ಆರಂಭಿಸಿದರೆ, ಇಂಗ್ಲಿಷ್ ಮಾಧ್ಯಮ ಇದ್ದರೆ, ಶಾಲಾ ವಾಹನ ಸೌಲಭ್ಯ ಕಲ್ಪಿಸಿದರೆ ಮಾತ್ರ ಸರ್ಕಾರಿ ಶಾಲೆಗೆ ಸೇರಿಸುವುದಾಗಿ ಪೋಷಕರು ಶಿಕ್ಷಣ ಇಲಾಖೆಗೆ ತಿಳಿಸುತ್ತಿದ್ದಾರೆ. ಯಾವ್ಯಾವ …

Read More »

ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿ

ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಒಟ್ಟು 23.14 ಲಕ್ಷ ರೂಪಾಯಿಗಳ ಚೆಕ್ …

Read More »