Breaking News

Yearly Archives: 2025

ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಓರ್ವ ಶವವಾಗಿ ಪತ್ತೆ

ಉತ್ತರ ಕನ್ನಡ (ಯಲ್ಲಾಪುರ) : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿ ಹಿಂದಿರುಗುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಸಹೋದರರಿಬ್ಬರಲ್ಲಿ ಓರ್ವನ ಶವ ಸೋಮವಾರ ಪತ್ತೆಯಾಗಿದೆ. ತಾಲೂಕಿನ ಶಿರನಾಲ ಮಾದನಸರದ ಮಹ್ಮದ್ ರಫೀಕ್ ಸಾಬ್ ಸೈಯದ್ (27) ಅವರ ಶವ ಪತ್ತೆಯಾಗಿದೆ. ನಾಪತ್ತೆಯಾದ ಮಹ್ಮದ್ ಹನೀಫ್ ಸಾಬ್ ಸೈಯದ್ (25) ಅವರಿಗೆ ಹುಡುಕಾಟ ಮುಂದುವರಿದಿದೆ. ಭಾನುವಾರ ಬೆಳಗ್ಗೆ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು …

Read More »

ಮಲಗಿದ್ದ ಯುವತಿಗೆ ಮಚ್ಚಿನಿಂದ ಹೊಡೆದ ಮನೆಕೆಲಸದ ಮಹಿಳೆ

ಬೆಂಗಳೂರು: ಮನೆಯಲ್ಲಿ ಮಲಗಿದ್ದ ಯುವತಿಗೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ ಆರೋಪದಡಿ ಮನೆ ಕೆಲಸದ ಮಹಿಳೆಯನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 10ರಂದು ಬೆಳಗಿನ ಜಾವ ಬಸಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿತ್ತು. ಸುಶ್ಮಿತಾ (21) ಎಂಬಾಕೆಯ ಮೇಲೆ ಹಲ್ಲೆಗೈದ ಆರೋಪದಡಿ ಲಲಿತಾ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಲಲಿತಾ, ಬಸಪ್ಪ ಗಾರ್ಡನ್‌ನಲ್ಲಿರುವ ಸರೋಜಮ್ಮ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡು ಅವರೊಂದಿಗೆ ವಾಸವಿದ್ದಳು. ಸರೋಜಮ್ಮ ಅವರಿಗೆ ಪರಿಚಿತಳಾಗಿದ್ದ ಸುಶ್ಮಿತಾ ಆಗಾಗ …

Read More »

20 ವರ್ಷಗಳಿಂದ ಕೆಲಸ ನೀಡಿದ್ದ ಮಾಲೀಕನಿಗೆ ವಂಚಿಸಿ ಕಳ್ಳತನ: ನಕಲಿ ಕೀ ಸಮೇತ ಆರೋಪಿ ಬಂಧನ

ಬೆಂಗಳೂರು‌: ಉದ್ಯಮಿಯೊಬ್ಬರ ಕಚೇರಿಯಲ್ಲಿ ಹಂತ ಹಂತವಾಗಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಬಂಧಿತ ಆರೋಪಿಯಾಗಿದ್ದು, ಆತನಿಂದ 89.09 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 8 ವರ್ಷಗಳ ಹಿಂದೆಯೇ ನಕಲಿ ಕೀ ಮಾಡಿಸಿದ್ದ ಆರೋಪಿ: ಗ್ರಾನೈಟ್ ಉದ್ಯಮಿಯೊಬ್ಬರ ಜಯನಗರದ 8ನೇ ಬ್ಲಾಕ್‌ನ ಸಂಗಂ ಸರ್ಕಲ್‌ನಲ್ಲಿರುವ ಕಚೇರಿಯಲ್ಲಿ 20 ವರ್ಷಗಳಿಂದಲೂ ವ್ಯವಸ್ಥಾಪಕನಾಗಿ ಕಾರ್ತಿಕ್ ಕೆಲಸ ಮಾಡಿಕೊಂಡಿದ್ದ. ಸಾಲದ ಸುಳಿಯಲ್ಲಿ …

Read More »

ಶವ ಸಂಸ್ಕಾರಕ್ಕೆ ಬಳಸುವ ವಸ್ತುಗಳನ್ನು ಕದ್ದ ಖದೀಮರು

ಬಂಟ್ವಾಳ (ದಕ್ಷಿಣ ಕನ್ನಡ): ಮನೆ, ದೇವಸ್ಥಾನ, ಅಂಗಡಿ, ವಾಣಿಜ್ಯ ಕೇಂದ್ರಗಳಿಗೆ ಖದೀಮರು ಕನ್ನ ಹಾಕೋದನ್ನು ಕೇಳಿದ್ದೇವೆ. ಆದರೆ, ಇಲ್ಲಿ ರುದ್ರಭೂಮಿ (ಸ್ಮಶಾನ) ಯನ್ನು ಕಳ್ಳರು ಬಿಡದೇ, ಕೃತ್ಯ ಎಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದಲ್ಲಿ ನಡೆದಿದೆ. ಸ್ಮಶಾನದಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳು ಕಳ್ಳತನ ಆಗಿರುವ ಬಗ್ಗೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್ ತಿಳಿಸಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ …

Read More »

ಬಾವಿಯಲ್ಲಿ ಬಿದ್ದು 8 ವರ್ಷದ ಬಾಲಕಿ ದುರ್ಮರಣ

ಬಾವಿಯಲ್ಲಿ ಬಿದ್ದು 8 ವರ್ಷದ ಬಾಲಕಿ ದುರ್ಮರಣ ಆಟವಾಡಲು ಹೋಗಿ ಬಾವಿಯಲ್ಲಿ ಬಾಲಕಿ ಬಿದ್ದು ಬಾಲಕಿಯ ರಕ್ಷಣೆಗೆ ಹರಸಾಹಸ ಪಟ್ಟು ಕೊನೆಗೆ ಪ್ರಯತ್ನ ವಿಫಲವಾಗಿ ಅಗ್ನಿ ಶಾಮಕ ಸಿಬ್ಬಂದಿ ತಡರಾತ್ರಿ ಬಾಲಕಿ ಶವ ಹೊರಗೆ ತೆಗೆದಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಳಿಯ ಧನಸಿಂಗ್ ( ಮೋನಪ್ಪ ನಗರ) ತಾಂಡಾದಲ್ಲಿ ನಡೆದಿದೆ. ತಾಯಿಯೊಂದಿಗೆ ಕುರಿ ಮೇಯಿಸುವಾಗ ಆಟವಾಡುತ್ತಾ 8 ವರ್ಷದ ಅರ್ಚನಾ ರಾಠೋಡ ಬಾವಿಯಲ್ಲಿ ನಿನ್ನೆ ಸಾಯಂಕಾಲ ಬಾವಿಯಲ್ಲಿ …

Read More »

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ!

ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಾಚೋಹಳ್ಳಿಯಲ್ಲಿ ನಡೆದಿದೆ. ವಿಜಯ್ ಕುಮಾರ್ (39) ಹತ್ಯೆಗೀಡಾದ ಉದ್ಯಮಿ ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ಈ ಘಟನೆ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೆಲಸದ ನಿಮಿತ್ತವಾಗಿ ನಿನ್ನೆ ಸಂಜೆ ಮನೆಯಿಂದ ಹೊರಗೆ ಹೋದ ವಿಜಯ್ ಕುಮಾರ್​, ಮಾಚೋಹಳ್ಳಿಯ ಡಿ-ಗ್ರೂಪ್ ಲೇಔಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೆಲಮಂಗಲ …

Read More »

ಬೀದಿ ನಾಯಿಗಳ ಹಾವಳಿ: ಪರಿಷತ್​​ನಲ್ಲಿ ಜೋರು ಚರ್ಚೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ವಿಧಾನಪರಿಷತ್ ನಲ್ಲಿ ಜೋರು ಚರ್ಚೆ ನಡೆಯಿತು. ಪ್ರಶ್ತೋತರ ಕಲಾಪ ವೇಳೆ ವಿಪಕ್ಷ ಸದಸ್ಯ ಎಸ್. ಎಲ್. ಭೋಜೇಗೌಡ ಅವರು ಚಿಕ್ಕಮಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ಹಿರಿಯ ನಾಗರಿಕರ ಮೇಲೆ ನಾಯಿ ಕಚ್ಚುವ ಪ್ರಕರಣಗಳು ಅಧಿಕವಾಗುತ್ತಿವೆ. ಚಿಕ್ಕಮಗಳೂರಿಗೆ ಸೀಮಿತವಾಗಿರದೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಈ ಸಮಸ್ಯೆ ಉಲ್ಬಣಗೊಂಡಿದೆ. ಸಚಿವರು, ಶಾಸಕರು, ಜಡ್ಜ್ ಮಕ್ಕಳಿಗೆ ಬೀದಿನಾಯಿಗಳಿಂದ ಸಮಸ್ಯೆಯಿಲ್ಲ. ಬೀದಿಯಲ್ಲಿ ಓಡಾಡುವ …

Read More »

ಅವಧಿಗೂ ಮುನ್ನ ಜನಿಸಿದ, ಕಡಿಮೆ ತೂಕದ ಎರಡು ಶಿಶುಗಳ ಜೀವ ಉಳಿಸಿದ ವೈದ್ಯರು

ಮೈಸೂರು: ಮದರ್‌ಹುಡ್ ಆಸ್ಪತ್ರೆಯಲ್ಲಿ ಅವಧಿಗೂ ಮುನ್ನ ಜನಿಸಿದ ಹಾಗೂ ಕಡಿಮೆ ತೂಕ ಹೊಂದಿದ್ದ ಎರಡು ಶಿಶುಗಳ ಜೀವ ಉಳಿಸಲಾಗಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಶ್ವೇತಾ ನಾಯಕ್ ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸವದ ಅವಧಿಗೂ ಬಹಳ ಮುಂಚಿತವಾಗಿ ಜನಿಸಿದ ಹಾಗೂ ಜನನದ ಸಮಯದಲ್ಲಿ ಬಹಳ ಕಡಿಮೆ ದೇಹ ತೂಕ ಹೊಂದಿದ್ದ ಶಿಶುಗಳು ಬದುಕುಳಿದಿದ್ದು, ಮಾತ್ರವಲ್ಲದೇ ದೇಹ ತೂಕದಲ್ಲಿ ಉತ್ತಮ ಬೆಳವಣಿಗೆ ಕೂಡ ಕಂಡು ಬಂದಿದೆ …

Read More »

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

ಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸೌರಶಕ್ತಿ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸೋಲಾರ್ ಪ್ಲಾಂಟ್ ಮೂಲಕ ನಿತ್ಯ 8 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ದೇಶದ ಮೊದಲ ವಿಮಾನ ನಿಲ್ದಾಣದ ಎಂಬ ಖ್ಯಾತಿಗೆ ಪಾತ್ರವಾಗಿದೆ.ಇಲ್ಲಿ ಸೌರಶಕ್ತಿ ಘಟಕ 2022ರಲ್ಲಿಯೇ ಸ್ಥಾಪಿಸಲ್ಪಟ್ಟಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಯಾವುದೇ ನಿಲ್ದಾಣದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ವಿದ್ಯುತ್ ಉತ್ಪಾದಿಸುವ …

Read More »

ಬಂಡೀಪುರದಲ್ಲಿ ಆನೆ ಜೊತೆ ಫೋಟೋ ತೆಗೆದುಕೊಳ್ಳಲು ಹೋದ ವ್ಯಕ್ತಿಗೆ 25 ಸಾವಿರ ರೂಪಾಯಿ ದಂಡ

ಚಾಮರಾಜನಗರ: ಆಹಾರ ಅರಸಿ ರಸ್ತೆಗಿಳಿದಿದ್ದ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಲು ಹೋಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆ ದಂಡ ವಿಧಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಮುಚ್ಚಳಿಕೆ ಬರೆಸಿಕೊಂಡಿದೆ. ನಂಜನಗೂಡಿನ ಬಸವರಾಜು ಎಂಬವರಿಗೆ 25 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಆಹಾರ ಅರಸಿ ರಸ್ತೆಗಿಳಿದಿದ್ದ ಕಾಡಾನೆ ಲಾರಿಯಿಂದ ಕ್ಯಾರೆಟ್ ಚೀಲ ಕಿತ್ತು ತಿನ್ನುತ್ತಿದ್ದಾಗ ಬಸವರಾಜು ಕಾರಿನಿಂದ ಇಳಿದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ, ರೊಚ್ಚಿಗೆದ್ದ ಕಾಡಾನೆ …

Read More »