ಚಿತ್ರದುರ್ಗ, ಏಪ್ರಿಲ್ 15: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿರುವ (Parappana Agrahara Jail) ಕೊಲೆ ಆರೋಪಿಯೊಬ್ಬ ಚಿತ್ರದುರ್ಗದ (Chitradurga) ಹಿರಿಯೂರಿನ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ (Death threat) ಹಾಕಿರುವ ಆರೋಪ ಕೇಳಿಬಂದಿದೆ. ತುಮಕೂರಿನ ಮಾಜಿ ಮೇಯರ್ ಗಡ್ಡ ರವಿ ಕೊಲೆ ಪ್ರಕರಣದ ಆರೋಪಿ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ, ಹಿರಿಯೂರಿನ ಉದ್ಯನಿ ಅರ್ಜುನ್ ಸಿಂಗ್ಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವಿದೆ. ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದಲ್ಲದೆ, ನಿರಂತರವಾಗಿ ವಾಯ್ಸ್ ಕಾಲ್, ಮೆಸೇಜ್ಗಳ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. …
Read More »Yearly Archives: 2025
ಬೆಳಗಾವಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು
ಬೆಳಗಾವಿ, ಏಪ್ರಿಲ್ 15: ಬೆಳಗಾವಿ (Belagavi) ರೈಲ್ವೆ ನಿಲ್ದಾಣದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ (Goods train derail) ಕಾರಣ ಸುಮಾರು 4 ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ರಾಣಿ ಚೆನ್ನಮ್ಮ ರೈಲು ಸಂಚರಿಸುವುದರಲ್ಲಿತ್ತು. ಅಧಿಕಾರಿಗಳ ಸಮಯಪ್ರಜ್ಞೆಯಿಂದ ರಾಣಿ ಚೆನ್ನಮ್ಮ ರೈಲು (Rani Chennamma Train) ನಿಲುಗಡೆಗೊಳಿಸಲಾಯಿತು. ಇದರಿಂದಾಗಿ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಗೂಡ್ಸ್ ರೈಲು ಎರಡು ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತಿತ್ತು. …
Read More »5 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು, ಏಪ್ರಿಲ್ 15: ಸಿಸಿಬಿ (CCB) ಮಾದಕವಸ್ತು ನಿಗ್ರಹದಳ ಬೆಂಗಳೂರಿನಲ್ಲಿ (Bengaluru) ನಡೆಸಿದ ಕಾರ್ಯಾಚರಣೆಯಲ್ಲಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ (Drugs) ಜಪ್ತಿ ಮಾಡಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಒಂದು ಪ್ರಕರಣದಲ್ಲಿ 3.5 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದ್ದು, ಬಂಧಿತನ ಬಳಿಯಿದ್ದ 30 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಜತೆಗೆ, ಮತ್ತೊಂದು ಪ್ರಕರಣದಲ್ಲಿ 1.5 ಕೋಟಿ ರೂ. ಮೌಲ್ಯದ ಸುಮಾರು 1 ಕೆಜಿ ಎಂಡಿಎಂಎ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ …
Read More »ಜಾತಿ ಜನಗಣತಿಯ ಸತ್ಯ ಮಿತ್ಯಗಳು.:ಲೇಖಕರು .ಜಿ.ಬಿ.ಪಾಟೀಲ.ಬೆಂಗಳೂರು.
ಜಾತಿ ಜನಗಣತಿಯ ಸತ್ಯ ಮಿತ್ಯಗಳು. ಓದುವ ಮುಂಚೆ: ಮೊದಲನೆಯದಾಗಿ ಬಾಬಾಸಾಹೇಬರ ಜಯಂತಿಯ ಶುಭಾಶಯಗಳು. ಅವರಿಗೆ ಶರಣು ಶರಣಾರ್ತಿ. ನಮ್ಮ ದೇಶದಲ್ಲಿ ಕೊನೆಯ ಜಾತಿಗಣತಿಯಾಗಿದ್ದು ೧೯೩೧ ಬ್ರಿಟಿಷರ ಆಡಳಿತದ ಕಾಲದಲ್ಲಿ. ಸ್ವಾತಂತ್ರ್ಯದ ನಂತರ ಇದು ಬೇಕಿಲ್ಲ ಎಂದಿದ್ದರು ನಮ್ಮ ಹಿರಿಯರು. ಇತ್ತೀಚಿನ ದಿನಗಳಲ್ಲಿ ಸರಕಾರಿ ಮೀಸಲಾತಿಯನ್ನು ಎಲ್ಲರೂ ಕೇಳುತ್ತಿದ್ದು ಅರ್ಹ ಪಲಾನುಭಾವಿಗಳು ಯಾರು? ಎಂಬ ಪ್ರಶ್ನೆಗೆ ಜಾತಿಗಣತಿ ಬೇಕೇಬೇಕು ಎನ್ನುತ್ತಿವೆ ಎಲ್ಲ ಸಮಾಜಗಳು. ಎಲ್ಲರ ಬೇಡಿಕೆಯನ್ನು ಮನ್ನಿಸುತ್ತ ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ …
Read More »ಸಂವಿಧಾನಕ್ಕೆ ಅಪಚಾರ ಆರೋಪ: ಸಚಿವ ಕೆಎನ್ ರಾಜಣ್ಣ ವಿರುದ್ಧ ದಾಖಲಾಯ್ತು ದೂರು
ಬೆಂಗಳೂರು, ಏಪ್ರಿಲ್ 14: ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂದು ಆರೋಪಿಸಿ ಸಚಿವ ಕೆ.ಎನ್.ರಾಜಣ್ಣ (K. N. Rajanna) ವಿರುದ್ಧ ನಗರದ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಎಂಬುವವರಿಂದು ದೂರು ನೀಡಲಾಗಿದೆ. ಪ್ರಮಾಣವಚನ ಸ್ವೀಕಾರ ವೇಳೆ ಗೌಪ್ಯತೆ ಕಾಪಾಡುತ್ತೇನೆ ಅಂದಿದ್ದರು. ಆದರೆ ಸಚಿವರಾಗಿ ಸದನದಲ್ಲಿ ಹನಿಟ್ರ್ಯಾಪ್ (Honeytrap) ವಿಚಾರ ಪ್ರಸ್ತಾಪಿಸಿದ್ದಾರೆ. ಆ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಚಿವ ರಾಜಣ್ಣ ನಮ್ಮ ಬಳಿ ಸಿಡಿ ಇದೆ ಅಂತ ಹೇಳಿದ್ದಾರೆ. …
Read More »ಬಾವಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಪತ್ತೆ
ಚಾಮರಾಜನಗರ: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಲ ಗ್ರಾಮದ ಬಾವಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಲ ಗ್ರಾಮದ ಸುಶೀಲ (30) ಮತ್ತು 8 ವರ್ಷದ ಮಗ, 11 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾಡುಹೊಲ ಗ್ರಾಮದ ಸುಶೀಲ ಅವರ ಮನೆಗೆ ಸುಶೀಲರ ತಮ್ಮ ಮಾದೇವ ಆಗಮಿಸಿ …
Read More »ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಭಾರತ ಸುಭದ್ರ: ಹೆಚ್ ಕೆ ಪಾಟೀಲ್
ಗದಗ : ಸರ್ವ ಜನಾಂಗವನ್ನು ಸಮದೃಷ್ಟಿಯಿಂದ ನೋಡುವ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿಕೊಟ್ಟರು. ಜೊತೆಗೆ ನಮ್ಮ ಕರ್ತವ್ಯ ನಮಗೆ ಸೂಚಿಸಿದರು. ಅವರ ಆದರ್ಶಗಳ ಪಾಲನೆ ಅತ್ಯವಶ್ಯ. ಅದೇ ರೀತಿ ಬಾಬು ಜಗಜೀವನರಾಮ್ ಅವರು ಹೊಂದಿದ ಸಂಸ್ಕೃತ ಪಾಂಡಿತ್ಯ ಮೆಚ್ಚುವಂತದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು. ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಗದಗ ಜಿಲ್ಲೆಯ ವಿವಿಧ …
Read More »ಕುಡಚಿ ಠಾಣೆಯ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು
ಕುಡಚಿ ಠಾಣೆಯ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು ಕುಡಚಿ: ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕುಡಚಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯಲ್ಲಪ್ಪ ಭೋಜ ಅವರಿಗೆ ರವಿವಾರ ರಾತ್ರಿ ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಕಾಣಿಸಿಕೊಂಡಾಗ ಅವರು ತಮ್ಮ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ, ನಂತರ ಅವರನ್ನು ತಕ್ಷಣವೇ ಮಹಾರಾಷ್ಟ್ರದ ಸಾಂಗಲಿ ನಗರದ ಭಾರತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು …
Read More »ನಮಗೆ ಅಂಬೇಡ್ಕರರನ್ನು ಬಿಟ್ಟರೇ ಯಾರು ಶ್ರೇಷ್ಠರಲ್ಲ. ಅವರು ನಮಗೆ ಸಿಕ್ಕಿದ್ದೆ ಶ್ರೇಷ್ಠ; ಸಚಿವ ಸತೀಶ ಜಾರಕಿಹೊಳಿ
ನಮಗೆ ಅಂಬೇಡ್ಕರರನ್ನು ಬಿಟ್ಟರೇ ಯಾರು ಶ್ರೇಷ್ಠರಲ್ಲ. ಅವರು ನಮಗೆ ಸಿಕ್ಕಿದ್ದೆ ಶ್ರೇಷ್ಠ; ಸಚಿವ ಸತೀಶ ಜಾರಕಿಹೊಳಿ ಗೋಕಾಕ : ಯಾರೊ ಬಂದು ಇನ್ಮೊಬ್ಬರು ಶ್ರೇಷ್ಟ ಅಂತಾರೆ ನಮಗೆ ಅಂಬೇಡ್ಜರ ಬಿಟ್ಟರೆ ಯಾರು ಶ್ರೇಷ್ಟ,ಅವರೆ ಶ್ರೇಷ್ಟ, ಅವರು ಸಿಕ್ಕಿದ್ದೆ ಶ್ರೇಷ್,ಬಸವಣ, ಮಹಾತ್ಮೆ ಪುಲೆ,ಸಾವಿತ್ರಿ ಬಾಯಿ ಪುಲೆ, ನಾರಾಯಣಗುರು, ಪೇರಿಯಾರ ನಾರಾಯಣಸ್ವಾಮಿ ಶ್ರೇಷ್ಟ ರಿದ್ದಾರೆ, ಬಾಬಾಸಾಹೇಬರು ಕೊಟ್ಟಂತಹ ಸಂವಿಧಾನದಿಂದ ನಮಗೆ ನೌಕರಿ ಬಂದಿವೆ, ರಾಜಕಾರಣಿಗಳಾಗಿದ್ದೇವೆ, ನಮಗೆ ಮಾತಾಡುವ ಸ್ವಾತಂತ್ರ್ಯವನ್ನು ಅಂಬೇಡ್ಜರ ಅವರು ಕೊಟ್ಟಿದ್ದನ್ನು …
Read More »ಒಂದೇ ಗ್ರಾಮದ ಎಂಟ ಜನರಿಗೆ ಕಚ್ಚಿದ ಬೀದಿ ನಾಯಿ.
ಬೆಳಗಾವಿಯಲ್ಲಿ ಒಂದೇ ಗ್ರಾಮದ ಎಂಟ ಜನರಿಗೆ ಕಚ್ಚಿದ ಬೀದಿ ನಾಯಿ. ಹುಚ್ಚು ನಾಯಿ ದಾಳಿಗೆ ಎಂಟಕ್ಕೂ ಹೆಚ್ಚು ಜನರಿಗೆ ಗಾಯ. ಓರ್ವನ ಕೈ ಬೆರಳು ಕೈಗಳು ಮೊನಕೈ ಸೇರಿ ದೇಹದ ವಿವಿಧ ಭಾಗಗಳ ಮೇಲೆ ಹು**ಚ್ಚು ನಾಯಿ ದಾ*ಳಿ. ಬೆಳಗಾವಿ ತಾಲೂಕಿನ ಕುದುರೆಮನಿ ಗ್ರಾಮದಲ್ಲಿ ನಡೆದ ಘಟನೆ. ವಿಠ್ಠಲ್ ಮಂದಿರಲ್ಲಿ ಸಂಜೆ ಕುಳಿತಿದ್ದ ಗ್ರಾಮಸ್ಥರು. ಈ ವೇಳೆ ದೇವಸ್ಥಾನದ ಒಳಗೆ ನುಗ್ಗಿ ದಾ*ಳಿ ಮಾಡಿರೋ ಹುಚ್ಚು ನಾಯಿ. ಗಾಯ*ಗೊಂಡವರು ಬೀಮ್ಸ್ …
Read More »