ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶನಿವಾರ ರಾತ್ರಿ ಸೂಫಿ ಸಂತರ ಸೌಹಾರ್ದ ವೇದಿಕೆ ವತಿಯಿಂದ ಆಯೋಜಿಸಿದ್ದ ಸೂಫಿ ಸಂತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ.. ಸಮಾನ ಶಿಕ್ಷಣ, ಹಕ್ಕು ಮತ್ತು ಅವಕಾಶಗಳು ದೊರೆತಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ. ನಾವೆಲ್ಲರೂ ಒಂದಾಗಿ ಹೋರಾಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ನಮ್ಮೆಲ್ಲರನ್ನೂ ಬೆಸೆಯುವ ಭಾವೈಕ್ಯತೆ ಸಮಾಜದಲ್ಲಿ ನೆಲೆಸಬೇಕು, ಅಂಬೇಡ್ಕರ್ ಮತ್ತು ಬಸವೇಶ್ವರರ ಚಿಂತನೆಗಳು ಸಮಾಜದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ …
Read More »Yearly Archives: 2025
ಬೈಲಹೊಂಗಲ ನಗರದ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ಪದಗ್ರಹಣ
ಬೈಲಹೊಂಗಲ ನಗರದ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ‘ಯುವ ಪರ್ವ ಪ್ರತಿಜ್ಞೆ’ ಸಮಾರಂಭದಲ್ಲಿ ಭಾಗವಹಿಸಿ, ಪದಾಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿದೆ. ಯುವಕರು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು, ನಿಷ್ಠೆಯಿಂದ ಕೆಲಸ ಮಾಡಬೇಕಿದೆ. ಇಂದು ಬಿಜೆಪಿಯವರು ಪ್ರಚಾರದ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ, ಆದರೆ ನಾವು ಕಾಂಗ್ರೆಸ್‌ನವರು ನಿಸ್ವಾರ್ಥವಾಗಿ ಕೆಲಸ ಮಾಡಿದರೂ ಅದರ ಬಗ್ಗೆ ಸಾಕಷ್ಟು ಪ್ರಚಾರವಾಗುತ್ತಿಲ್ಲ. ನಮ್ಮ …
Read More »ಪಂಜಾ ಕೈ ಕುಸ್ತಿ” ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿ
ಸವದತ್ತಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘ (ರಿ), ಛತ್ರಪತಿ ಫೌಂಡೇಶನ್ (ರಿ) ಹಾಗೂ VJ ಫಿಟ್ನೆಸ್ ಸ್ಟುಡಿಯೋ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಪಂಜಾ ಕೈ ಕುಸ್ತಿ” ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕೈ ಕುಸ್ತಿ ಪಟುಗಳು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು.
Read More »ಮೂಡಲಗಿ ಪುರಸಭೆ ವ್ಯಾಪ್ತಿಯ ಗುರ್ಲಾಪೂರ (ಕ್ರಾಸ್) ದಲ್ಲಿ ನೂತನವಾಗಿ ಪ್ರವಾಸಿ ಮಂದಿರ: ಬಾಲಚಂದ್ರ ಜಾರಕಿಹೊಳಿ
ಮೂಡಲಗಿ-* ಸಾರ್ವಜನಿಕರ ಕೋರಿಕೆಯ ಮೇರೆಗೆ ಮೂಡಲಗಿ ಪುರಸಭೆ ವ್ಯಾಪ್ತಿಯ ಗುರ್ಲಾಪೂರ (ಕ್ರಾಸ್) ದಲ್ಲಿ ನೂತನವಾಗಿ ಪ್ರವಾಸಿ ಮಂದಿರವನ್ನು ನಿರ್ಮಿಸಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ಪಟ್ಟಣದ ಗುರ್ಲಾಪೂರ( ಕ್ರಾಸ್) ಬಳಿ ನೀರಾವರಿ ಇಲಾಖೆಯಿಂದ ಸುಮಾರು 5.40 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸಿ ಮಂದಿರ ನಿರ್ಮಾಣದಿಂದ ಗಣ್ಯರು, ಅಧಿಕಾರಿಗಳು …
Read More »ಬೆಂಗಳೂರು: ಗಸ್ತಿನಲ್ಲಿದ್ದ ಕಾನ್ಸ್‌ಟೇಬಲ್ ಮೇಲೆ ಡ್ಯಾಗರ್‌ನಿಂದ ಹಲ್ಲೆ; ಅಪ್ರಾಪ್ತ ಸಹಿತ ನಾಲ್ವರ ಬಂಧನ
ಬೆಂಗಳೂರು: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರ ಮೇಲೆ ಕಿಡಿಗೇಡಿಗಳು ಡ್ಯಾಗರ್‌ನಿಂದ ಹಲ್ಲೆಗೈದಿರುವ ಘಟನೆ ಚಾಮರಾಜಪೇಟೆಯ ವಾಲ್ಮೀಕಿನಗರದ 2ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಜುಲೈ 26ರಂದು ರಾತ್ರಿ 9:30ರ ಸುಮಾರಿಗೆ ಘಟನೆ ನಡೆದಿದೆ. ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಅವರ ಎಡಗೈಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ತಬ್ರೇಜ್, ಅಬ್ರೇಜ್, ಸಲ್ಮಾನ್ ಪಾಶಾ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಮದ್ಯದ ನಶೆಯಲ್ಲಿ ಹಲ್ಲೆ: …
Read More »ಚಿಕಿತ್ಸೆ ಫಲಿಸದೇ 11 ವರ್ಷದ ಬಾಲಕ ಸಾವು
ಕಾರವಾರ: ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಯೊಂದಿಗೆ ಹೋರಾಡುತ್ತಿದ್ದ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ 11 ವರ್ಷದ ಬಾಲಕ ಆರವ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಏಪ್ರಿಲ್‌ನಲ್ಲಿ ಆರವ್‌ಗೆ ಕೆಎಫ್‌ಡಿ ಇರುವುದು ದೃಢಪಟ್ಟಿತ್ತು. ನಂತರ ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ದಾಖಲಾಗಲು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ನೆರವು ನೀಡಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳದಿದ್ದಾಗ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಮತ್ತು ನಂತರ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ತೊಡಕುಗಳು ಉಂಟಾದವು. …
Read More »ಕಮಲಾಪುರದ ಮೃಗಾಲಯದಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ. ಇನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ಯುವಕನೋರ್ವ ಮೃತಪಟ್ಟಿದ್ದಾನೆ.
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿನ ‘ಸಿಂಧು’ ಎಂಬ ಹೆಸರಿನ ಹೆಣ್ಣು ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಈ ಹುಲಿಗೆ ಅಂದಾಜು 17 ರಿಂದ 18 ವರ್ಷ ವಯಸ್ಸಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಯೋಸಹಜವಾಗಿ ಮೃತಪಟ್ಟಿರುತ್ತದೆ ಎಂದು ಉಪಸಂರಕ್ಷಣಾಧಿಕಾರಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜೇಶ್ ನಾಯ್ಕ ತಿಳಿಸಿದ್ದಾರೆ.ಎರಡು ತಿಂಗಳಲ್ಲಿ ಎರಡು ಹುಲಿ ಸಾವು: ಕಳೆದ ತಿಂಗಳು ಜೂನ್ನಲ್ಲಿ ಇದೇ ಮೃಗಾಲಯದಲ್ಲಿ ದೇವಿ ಹೆಸರಿನ ಹೆಣ್ಣು ಹುಲಿ ವಯೋಸಹಜ …
Read More »ಸರ್ಕಾರ ಜನರ ಅಪೇಕ್ಷೆಯಂತೆ ಎಸ್ಐಟಿ ತನಿಖೆಗೆ ಆದೇಶಿಸಿದೆ : ಡಾ. ಜಿ. ಪರಮೇಶ್ವರ್
ದಾವಣಗೆರೆ: ಸರ್ಕಾರ ಜನರ ಅಪೇಕ್ಷೆಯಂತೆ ಎಸ್ಐಟಿ ತನಿಖೆಗೆ ಆದೇಶಿಸಿದೆ. ಶನಿವಾರದಿಂದ (ಜು.26) ತನಿಖೆ ಆರಂಭವಾಗಿದೆ. ತನಿಖೆಯ ವರದಿ ಬರುವವರೆಗೂ ನಾವು ಏನೂ ಮಾಹಿತಿ ನೀಡುವಂತಿಲ್ಲ ಎಂದು ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಸಹಜ ಸಾವಿನ ಪ್ರಕರಣಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದರು. ಈ ಕುರಿತು ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಕ್ಲು ಶಿವು ಕೊಲೆ ಪ್ರಕರಣ ಕೂಡ ಸಿಒಡಿಗೆ ನೀಡಲಾಗಿದೆ. ವಿಚಾರಣೆ ನಡೆಯುತ್ತಿದೆ, ಬೈರತಿ ಬಸವರಾಜ್ ಅಲ್ಲ …
Read More »ನಾಲ್ವಡಿ ಒಡೆಯರ್ ಅವರೊಂದಿಗೆ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ: ಸಚಿವ ಮಹದೇವಪ್ಪ
ನಾಲ್ವಡಿ ಒಡೆಯರ್ ಅವರೊಂದಿಗೆ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ: ಸಚಿವ ಮಹದೇವಪ್ಪ ದಾವಣಗೆರೆ/ಹಾವೇರಿ: “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಪರ, ಸಾಮಾಜಿಕ ನ್ಯಾಯದ ಪರವಾಗಿ ಮಹತ್ವದ ಸಮ ಸಮಾಜವನ್ನು ನಿರ್ಮಾಣ ಮಾಡಿದವರು. ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿ ಜೊತೆಗೆ ಹೋಲಿಕೆ ಮಾಡುವುದು ಸರಿಯಲ್ಲ, ಅವರು ಅವರಿಗೆ ಸಾಟಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ. ಕಾಮಾಲೆ ಕಣ್ಣಿಂದ ನೋಡಿದ್ದೆಲ್ಲ ಹಳದಿ, …
Read More »ಉತ್ತರಕನ್ನಡದಲ್ಲಿ ಭಾರಿ ಮಳೆ
ಕಾರವಾರ (ಉತ್ತರಕನ್ನಡ): ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಗಾಳಿ ಸಹಿತ ಮಳೆಗೆ ಜನಜೀವನ ತತ್ತರಗೊಂಡಿದೆ. ಜಿಲ್ಲೆಯ ಕೆಲ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿರುವುದು ಒಂದೆಡೆಯಾದರೆ, ಹಲವೆಡೆ ಹೆದ್ದಾರಿಗಳಲ್ಲಿ ಗುಡ್ಡ ಕುಸಿತವಾಗುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 312 ಮಿ.ಮೀ ಮಳೆಯಾಗಿದೆ. ಅದರಲ್ಲಿಯೂ ಘಟ್ಟದ ಮೇಲ್ಭಾಗದ ಸಿದ್ದಾಪುರ ತಾಲೂಕು ಸೇರಿದಂತೆ ಕರಾವಳಿ ತಾಲೂಕುಗಳಲ್ಲಿ 400 ರಿಂದ 600 ಮಿ.ಮೀ.ವರೆಗೆ ಮಳೆ …
Read More »
Laxmi News 24×7