Breaking News

Yearly Archives: 2025

ವಿಜಯಪುರದಲ್ಲಿ ಸಚಿವ ಸಂತೋಷ ಲಾಡ್ ಕ್ರೇಜ್; ಸೆಲ್ಪಿಗಾಗಿ ಮುಗಿಬಿದ್ದ ಕಾರ್ಯಕರ್ತರು

ವಿಜಯಪುರದಲ್ಲಿ ಸಚಿವ ಸಂತೋಷ ಲಾಡ್ ಕ್ರೇಜ್; ಸೆಲ್ಪಿಗಾಗಿ ಮುಗಿಬಿದ್ದ ಕಾರ್ಯಕರ್ತರು ಕಾರ್ಮಿಕ ಸಚಿವ ಸಂತೋಷ ಲಾಡ್ ಜೊತೆ ಸೆಲ್ಪಿ ಕ್ಲಿಕಿಸಿಕೊಳ್ಳಲು ಕೈ ಪಕ್ಷದ ಕಾರ್ಯಕರ್ತರು ಮುಗಿಬಿದ್ದ ಪ್ರಸಂಗ ನಡೆಯಿತು. ವಿಜಯಪುರ ನಗರದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯಪುರ ಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಲು ಹೊದಿಸಿ ಹಾರ ಹಾಕಿ ವಿವಿಧ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ನಗರದ …

Read More »

ಪತ್ರಕರ್ತ ಅಲ್ತಾಫ್ ಬಸರೀಕಟ್ಟಿ ಅವರಿಗೆ ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪ್ರಶಸ್ತಿ

ಪತ್ರಕರ್ತ ಅಲ್ತಾಫ್ ಬಸರೀಕಟ್ಟಿ ಅವರಿಗೆ ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪ್ರಶಸ್ತಿ ಖಾನಾಪೂರ ಇನ್ ನ್ಯೂಸ್ ಚಾನಲ್ ರಿಪೋರ್ಟರ್ ಅಲ್ತಾಫ್ ಎಂ ಬಸರೀಕಟ್ಟಿ ಅವರಿಗೆ ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿ ನಡೆದ ೫ನೇ ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರೇರಣಾ ಗೌರವ ಪ್ರಶಸ್ತಿ 2025 ರ ಸಮ್ಮಾನ ಪತ್ರ, “ರಾಷ್ಟ್ರೀಯ ಆದರ್ಶ ಪತ್ರಕರ್ತ ಗೌರವ ಪ್ರಶಸ್ತಿ” ನೀಡಿ ಗೌರವಿಸಲಾಯಿತು ಇನ್ ನ್ಯೂಸ್ ಚಾನಲ್ ರಿಪೋರ್ಟರ್ ಆಗಿ ಸೇವೆ ಸಲ್ಲಿಸಿದ ಇವರ …

Read More »

ನಾನು ಆಕ್ಟರ್ ಮಾತ್ರ, ಡೈರೆಕ್ಟರ್ – ಪ್ರೋಡ್ಯೂಜರ್ ಬೇರೆಯವರು; ಸಚಿವ ಸತೀಶ ಜಾರಕಿಹೊಳಿ

ನಾನು ಆಕ್ಟರ್ ಮಾತ್ರ, ಡೈರೆಕ್ಟರ್ – ಪ್ರೋಡ್ಯೂಜರ್ ಬೇರೆಯವರು; ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಬಿ ಡಿ ಸಿ ಸಿ ಬ್ಯಾಂಕ್, ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರಿ ಸಂಘ, ಹಿರಣ್ಯಕೇಶಿ ಸಹಕಾರಿ ಸಕ್ಜೆರೆ ಕಾರ್ಖಾನೆ ಒಳಗೊಂಡು ನಡೆಯುವ ಚುನಾವಣೆಗಳಲ್ಲಿ ನಾನು ನಟ ಮಾತ್ರ ನಿರ್ಮಾಪಕರು, ನಿರ್ದೆಶಕರು ಬೇರೆ ಇದ್ದಾರೆ ಎಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು. ಅವರು ಇಂದು ಹುಕ್ಕೇರಿ ತಾಲೂಕಿನ …

Read More »

ಕರ್ನಾಟಕದಲ್ಲಿ ಈ ಎರಡು ದಿನ ಎಸ್ಕಾಂ ವ್ಯಾಪ್ತಿಯಲ್ಲಿ ಆನ್​ ಲೈನ್​ ಸೇವೆ ಸ್ಥಗಿತ

ಬೆಂಗಳೂರು, (ಜುಲೈ.22): ಮಾಹಿತಿ ತಂತ್ರಜ್ಞಾನ ಉನ್ನತೀಕರಣ ಹಿನ್ನೆಲೆಯಲ್ಲಿ ಕರ್ನಾಟಕದ ಐದೂ ಎಸ್ಕಾಂಗಳ (Escom) ವ್ಯಾಪ್ತಿಯಲ್ಲಿನ ಆನ್​ ಲೈನ್​ ಸೇವೆ ಇರುವುದಿಲ್ಲ. ಜುಲೈ 25ರ ರಾತ್ರಿ 8.30 ರಿಂದ ಜುಲೈ 27ರ ರಾತ್ರಿ 10 ರವರೆಗೆ ಬೆಸ್ಕಾಂ (bescom), ಹೆಸ್ಕಾಂ (hescom), ಜೆಸ್ಕಾಂ, ಮೆಸ್ಕಾಂ ಹಾಗೂ ಸೆಸ್ಕ್ ಗಳ ವ್ಯಾಪ್ತಿಗಳ ಆನ್​ ಲೈನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ಆನ್​​ ಲೈನ್​​​ ಮೂಲಕ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಮತ್ತು ಹೊಸ ಸಂಪರ್ಕ …

Read More »

ರಾಯಚೂರು: ಊಟ ಸೇವನೆ ಬಳಿಕ ಹೊಟ್ಟೆನೋವು, ಒಂದೇ ಕುಟುಂಬದ ಮೂವರು ಸಾವು

ರಾಯಚೂರು, ಜುಲೈ 22: ಊಟ ಸೇವಿಸಿದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ರಾಯಚೂರು (Raichur) ಜಿಲ್ಲೆ ಸಿರವಾರ ತಾಲೂಕಿನ ಕೆ.ತಿಮ್ಮಾಪುರದಲ್ಲಿ (K Timmapur) ಸಂಭವಿಸಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ರಮೇಶ್(35), ಪುತ್ರಿ ನಾಗಮ್ಮ(8) ಮೃತಪಟ್ಟರೆ, ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ದೀಪಾ(6) ಸಾವಿಗೀಡಾಗಿದ್ದಾಳೆ. ಸದ್ಯ ರಮೇಶ್ ಅವರ​ ಪತ್ನಿ ಪದ್ಮಾರನ್ನು ರಿಮ್ಸ್​ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಮತ್ತಿಬ್ಬರು ಮಕ್ಕಳಾದ ಕೃಷ್ಣ, ಚೈತ್ರಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕುಟುಂಬದವರೆಲ್ಲ ಸೋಮವಾರ ರಾತ್ರಿ …

Read More »

ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ನೋಟಿಸ್: ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದ ಜೋಶಿ

ಬೆಂಗಳೂರು, (ಜುಲೈ 22): ಕರ್ನಾಟಕದ ಕಾಂಗ್ರೆಸ್ ಸರ್ಕಾರ (Karnataka Congress Government)  ಸಣ್ಣಪುಟ್ಟ ವ್ಯಾಪಾರಿಗಳಿಗೆ (small traders) ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿ ಎಸ್ ಟಿ ನೋಟಿಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. GST ನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ CGST ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ SGST ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ …

Read More »

ಅಣ್ಣನ ಮೇಲಿನ ಸೇಡಿಗೆ ಮಗನನ್ನೇ ಬಲಿ ಪಡೆದ: 3 ವರ್ಷದ ಬಾಲಕನ ಕತ್ತು ಕೊಯ್ದ ಚಿಕ್ಕಪ್ಪ

ಬಾಗಲಕೋಟೆ, (ಜುಲೈ 22): ಅಂಗನವಾಡಿಗೆ ಹೋಗಿದ್ದ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಜೀವ ತೆಗೆದಿರುವ ಘಟನೆ ಬಾಗಲಕೋಟೆ (bagalkot) ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ ತಮ್ಮ ಈ ಕೃತ್ಯ ಎಸಗಿದ್ದಾನೆ. ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬುವರ 3 ವರ್ಷದ ಮಧುಕುಮಾರನ ಜೀವವನ್ನ ಚಿಕ್ಕಪ್ಪ ಭೀಮಪ್ಪ ತೆಗೆದಿದ್ದಾನೆ. ಬಾಲಕ ಮುಂಜಾನೆ ಎಂದಿನಂತೆ ಗ್ರಾಮದ ಅಂಗನವಾಡಿಗೆ ಹೋಗಿದ್ದ. ಎಲ್ಲರೊಂದಿಗೆ ಅಂಗನವಾಡಿಯಲ್ಲಿ ಕುಳಿತ್ತಿದ್ದ ಬಾಲಕನನ್ನ …

Read More »

ಪ್ರೌಢಶಾಲೆ ಕೊಠಡಿ ನಿರ್ಮಾಣಕ್ಕೆ ಎಂಎಲ್ ಸಿ ಚನ್ನರಾಜ ಭೂಮಿಪೂಜೆ

ಯರಗಟ್ಟಿ : 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿ.ಎಂ.ಎಫ್) ಯೋಜನೆಯಡಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರ ಸೂಚನೆಯಂತೆ, ಯರಗಟ್ಟಿಯ ಶ್ರೀ ಬಸವೇಶ್ವರ ಪ್ರೌಢಶಾಲೆಗೆ ಹೊಸ ಕೊಠಡಿ ಮಂಜೂರಾಗಿದ್ದು, ನಿರ್ಮಾಣದ ಕಾಮಗಾರಿಗೆ ಮಂಗಳವಾರ ಚನ್ನರಾಜ ಹಟ್ಟಿಹೊಳಿ ಮತ್ತು ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯರ ನಿಧಿಯಲ್ಲದೆ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಜಿಲ್ಲಾದ್ಯಂತ ವಿವಿಧ ಅಭಿವೃದ್ದಿ ಕಾಮಗಾರಿ …

Read More »

ನ್ಯಾಯಾಲಯದ ಆವರಣದಲ್ಲಿ ಪತ್ನಿಯ ಮೇಲೆ ಗಂಡನಿಂದ ಹಲ್ಲೆ

ನ್ಯಾಯಾಲಯದ ಆವರಣದಲ್ಲಿ ಪತ್ನಿಯ ಮೇಲೆ ಗಂಡನಿಂದ ಹಲ್ಲೆ ನ್ಯಾಯಾಲಯದ ಆವರಣದಲ್ಲಿ ಪತಿಯೊಬ್ಬರು ಪತ್ನಿಯ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ ಗಂಭೀರ ಘಟನೆ ನಡೆದಿದೆ. ವಿಚ್ಛೇದನ ವಿಚಾರಣೆಗಾಗಿ ಪತಿ ಮತ್ತು ಪತ್ನಿ ನ್ಯಾಯಾಲಯಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಸವದತ್ತಿ ತಾಲೂಕಿನ ಕರಿಂಕಟ್ಟಿ ಗ್ರಾಮದ ನಿವಾಸಿ ಐಶ್ವರ್ಯ ಗಣಾಚಾರಿ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಪತಿ ಮುತ್ತಪ್ಪ ಗಣಾಚಾರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೌಟುಂಬಿಕ …

Read More »

ಟ್ರೇನ್ ಡಿಕ್ಕಿ ಹೊಡೆದು ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವು!

ಟ್ರೇನ್ ಡಿಕ್ಕಿ ಹೊಡೆದು ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವು! ಬೆಳಗಾವಿ ಸಮರ್ಥ ನಗರದಲ್ಲಿ ಘಟನೆ ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ ಬಾತಕಾಂಡೆ(75) ರೈಲ್ವೇ ಹಳಿ ದಾಟುವಾಗ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ, ಪರಿಶೀಲನೆ ರೈಲ್ವೇ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಸಂಬವಿಸಿದೆ ಬೆಳಗಾವಿ ಮಹಾನಗರದ ಸಮರ್ಥ ನಗರದ ಹತ್ತಿರ ಖಡಕ್ ಗಲ್ಲಿಯ ನಿವಾಸಿ ಪಾಡುಗರಂಗ …

Read More »