Breaking News

Yearly Archives: 2025

ಕುರಿ ಮೇಯಿಸಿದ್ದಕ್ಕೆ ದಂಡ ಹಾಕಿ ಅರಣ್ಯ ಇಲಾಖೆಯಿಂದ ಕಿರುಕುಳ

ಕುರಿ ಮೇಯಿಸಿದ್ದಕ್ಕೆ ದಂಡ ಹಾಕಿ ಅರಣ್ಯ ಇಲಾಖೆಯಿಂದ ಕಿರುಕುಳ ಕುರಿಗಳೊಂದಿಗೆ ಬೀಳಗಿ ತಹಶೀಲ್ದಾರ ಕಾರ್ಯಾಲಯಕ್ಕೆ ಮುತ್ತಿಗೆಗೆ ಯತ್ನಿಸಿದ ಕುರಿಗಾಹಿಗಳು… ಗುಡ್ಡದಲ್ಲಿ ಕುರಿ ಮೇಯಿಸಲು ಹೋದ ಕುರಿಗಾಹಿಗಳನ್ನು ಹೊಡೆದು ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆಯ ನೀತಿಯನ್ನು ಖಂಡಿಸಿ ಇಂದು ಕುರಿಗಾಹಿಗಳು ಕುರಿಗಳ ಸಮೇತ ಬೀಳಗಿ ತಹಶೀಲ್ದಾರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಕುರಿಗಾಹಿಗಳಿಗೆ ಅರಣ್ಯ ಇಲಾಖೆಯಿಂದ ಕುರಿಗಾಹಿಗಳಿಗೆ ಕುರಿ ಮೇಯಿಸಲು ತೊಂದರೆ ನೀಡುತ್ತಿರುವ …

Read More »

ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ”

ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ” ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಪ್ರತಿವರ್ಷ ನೀಡುವ ” ಚಂಪಾ ಸಿರಿಗನ್ನಡ ಪ್ರಶಸ್ತಿ”ಯನ್ನು ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ನೀಡಿ ಸನ್ಮಾನಿಸಲಾಯಿತು. ಇಂದು ಬುಧವಾರ ಜೂನ್ 18 ರಂದು ಬೆಂಗಳೂರಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಖ್ಯಾತ ಸಾಹಿತಿ ಡಾ.ಬರಗೂರು …

Read More »

ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ

ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ ಬಾಗಲಕೋಟೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ ಎಂ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ನೂತನ ಜಿಲ್ಲಾಧಿಕಾರಿಗೆ ಪುಷ್ಪ ನೀಡಿ ಸ್ವಾಗತಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪವಿಭಾಗ ಅಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ ಸೇರಿದಂತೆ ಆಯಾ …

Read More »

ಹೆಣ್ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸಲು ವರವಾಗಿ ಬಂದಿದ್ದು ಭಾರತೀಯ ಸಂವಿಧಾನ; ಎಲ್.ಎನ್.ಮುಕುಂದರಾಜ್

ಹೆಣ್ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸಲು ವರವಾಗಿ ಬಂದಿದ್ದು ಭಾರತೀಯ ಸಂವಿಧಾನ; ಎಲ್.ಎನ್.ಮುಕುಂದರಾಜ್ ಎಲ್ಲ ಕ್ಷೇತ್ರಗಳಲ್ಲಿಯೂ ಈಗ ಹೆಣ್ಣು ಮಕ್ಕಳು ಈಗ ಮೇಲುಗೈ ಸಾಧಿಸಿದ್ದಾರೆ. ಇದಕ್ಕಾಗಿ ನಮಗೆಲ್ಲ ವರವಾಗಿ ಬಂದಿದ್ದು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅವರು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಳಗಾವಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಕರ್ನಾಟಕ ಲೇಖಕಿಯರ ಸಂಘ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ …

Read More »

ಆರ್.ಎಲ್.ಎಸ್. ಕಾಲೇಜಿನಲ್ಲಿ ಜಿಮ್’ಖಾನಾ ಚಟುವಟಿಕೆಗಳ ಉದ್ಘಾಟನೆ ಪರಿಶ್ರಮವೇ ಗೆಲುವಿನ ಮೂಲಮಂತ್ರ; ಅಭಿನವ್ ಜೈನ್

ಆರ್.ಎಲ್.ಎಸ್. ಕಾಲೇಜಿನಲ್ಲಿ ಜಿಮ್’ಖಾನಾ ಚಟುವಟಿಕೆಗಳ ಉದ್ಘಾಟನೆ ಪರಿಶ್ರಮವೇ ಗೆಲುವಿನ ಮೂಲಮಂತ್ರ; ಅಭಿನವ್ ಜೈನ್ ಬೆಳಗಾವಿಯ ಕೆ.ಎಲ್.ಇ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಿಮ್’ಖಾನಾ ಮತ್ತು ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಗುರುವಾರದಂದು ಬೆಳಗಾವಿಯ ಬೆಳಗಾವಿಯ ಕೆ.ಎಲ್.ಇ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಿಮ್’ಖಾನಾ ಮತ್ತು ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಪ್ರೋ. ಡಾ. ಎಂ.ಎಂ. ಪುರಾಣಿಕ ಮತ್ತು ಅಭಿನವ್ ಜೈನ್ ಉಪಸ್ಥಿತರಿದ್ಧರು. ಲಿಂಗೌಡಾ ದೇಸಾಯಿ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವೇಳೆ …

Read More »

ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ, ಯಾರಿಗೆ ಎಷ್ಟು ಹಣ

ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ, ಯಾರಿಗೆ ಎಷ್ಟು ಹಣ ಬೆಂಗಳೂರು, (ಜೂನ್ 18): 2025-26ನೇ ಸಾಲಿನಲ್ಲಿ ಕರ್ನಾಟಕದ (Karnataka)ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿಗದಿತ ಸಮಯಕ್ಕಿಂತ ಮೊದಲೇ ಮುಂಗಾರು ಮಳೆ  (Monsoon Rains) ಪ್ರಾರಂಭವಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಾಗಿ ರಾಜ್ಯ ಸರ್ಕಾರ, ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆ ಮಾಡಿದೆ. ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಅವರ …

Read More »

ಒಂದೇ ಮಳೆಗೆ 527 ಕೋಟಿ ರೂ. ವೆಚ್ಚದ ಹೈವೇ-13 ಬಣ್ಣ ಬಯಲು…!

ಶಿವಮೊಗ್ಗ, ಜೂನ್​ 18: ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ (Shivamogga-Chitradurga National Highway) ಕಾಮಗಾರಿ ಮುಗಿದು ಉದ್ಘಾಟನೆ ಕಾರ್ಯಕ್ರಮ ಕೂಡ ಆಗಿತ್ತು. ಉದ್ಘಾಟನೆಯಾಗಿ ಕೇವಲ ಒಂದೇ ತಿಂಗಳಲ್ಲಿ ಹೆದ್ದಾರಿ ಕಾಮಗಾರಿಯ ಬಣ್ಣ ಬಯಲಾಗಿದೆ. 527 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೆದ್ದಾರಿ ಬಿರುಕು ಬಿಟ್ಟಿದೆ. ಶಿವಮೊಗ್ಗದಿಂದ-ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 13 ಬಿರುಕುಬಿಟ್ಟಿದೆ. ಉದ್ಘಾಟನೆಗೊಂಡು ಒಂದೇ ತಿಂಗಳಿಗೆ ರಸ್ತೆ ಕುಸಿದಿರುವುದು ಕಾಮಗಾರಿಯ ಅಸಲಿ ಬಣ್ಣ ಬಯಲಾಗಿದೆ. ಒಂದೇ ಮಳೆಗೆ ರಸ್ತೆಯ ಕಳಪೆ …

Read More »

ಬೆಂಗಳೂರು ಟು ಗೋವಾ: ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ

ಹುಬ್ಬಳ್ಳಿ, ಜೂನ್​ 18: ಇದೊಂದು ವಿಚಿತ್ರ ಪ್ರಕರಣ. ಬೆಂಗಳೂರು (Bengaluru) ಮೂಲದ ಯುವತಿ ಗೋವಾದಲ್ಲಿ (Goa) ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿ ಕೂಡ ಬೆಂಗಳೂರು ನಿವಾಸಿಯಾಗಿದ್ದಾನೆ. ಆದರೆ, ಆರೋಪಿ ಸಿಕ್ಕಿಬಿದ್ದಿದ್ದು ಹುಬ್ಬಳ್ಳಿಯಲ್ಲಿ (Hubballi). ಪ್ರೀತಿಸಿದ ಹುಡಗಿಯ ಕತ್ತುಸೀಳಿ ಕೊಲೆ ಮಾಡಿದ ಪ್ರಿಯಕರ ಹುಬ್ಬಳ್ಳಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಬೆಂಗಳೂರಿನ ಲಿಂಗರಾಜಪುರ ಬಡಾವಣೆಯ ಡಾನ್ ಬಾಸ್ಕೋ ಶಾಲೆ ಸಮೀಪ ವಾಸವಾಗಿದ್ದ 22 ವರ್ಷದ ರೋಶನಿ ಗೋವಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಗೋವಾ ರಾಜ್ಯದ …

Read More »

ಅಂತರ್ಜಾತಿ ವಿವಾಹಗಳಿಗೆ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ

ಬೆಳಗಾವಿ: ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಜಾತಿ ಭೇದ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸುತ್ತಿದೆ. ಈ ರೀತಿ ಬೇರೆ ಜಾತಿಯ ವರ-ವಧು ಮದುವೆ ಆದಲ್ಲಿ ಅವರಿಗೆ ಸರ್ಕಾರ ಸಹಾಯಧನ ನೀಡಿ ಆರ್ಥಿಕ ಶಕ್ತಿ ತುಂಬುತ್ತಿದೆ. ಅಂತರ್ಜಾತಿ ವಿವಾಹ ಎಂದರೆ ವಧು ಮತ್ತು ವರ ಬೇರೆ ಬೇರೆ ಜಾತಿಗೆ ಸೇರಿದವರಾಗಿರಬೇಕು. ಹೀಗೆ ಮದುವೆ ಆಗಿರುವ ಆ ದಂಪತಿಗೆ ಸಹಾಯಧನವನ್ನು 1989ರಿಂದ ಕರ್ನಾಟಕ ರಾಜ್ಯದಲ್ಲಿ ನೀಡಲಾಗುತ್ತಿದೆ. ಆರಂಭದಲ್ಲಿ 12 ಸಾವಿರ …

Read More »

ಕುಂದಗಲ್ ಬಳಿ ಬಿರುಕು ಬಿಟ್ಟ ಭೂಮಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಶಿವಮೊಗ್ಗ: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈ ಮಧ್ಯೆ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮ‌ ಪಂಚಾಯತಿ ವ್ಯಾಪ್ತಿಯ ಕುಂದಗಲ್ ಗ್ರಾಮದ ಬಳಿ ಭೂಮಿ ಬಿರುಕು ಬಿಡಲು ಪ್ರಾರಂಭಿಸಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಭೂಮಿಯು ಸುಮಾರು ಮೂರು ಅಡಿಯಷ್ಟು ಅಗಲ ಬಾಯ್ಬಿಟ್ಟಿದೆ. ಅಲ್ಲದೆ ಎರಡು ಅಡಿಯಷ್ಟು ಭೂಮಿ ಕುಸಿತವಾಗಿದೆ. ಕುಂದಗಲ್ಲು ಗ್ರಾಮದಲ್ಲಿ ಭೂಮಿ ಕುಸಿತವಾಗಿರುವ ಸುದ್ದಿ ತಿಳಿದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ಪರಿಶೀಲಿಸಿದರು. ಸ್ಥಳದಲ್ಲಿ ಭಾರೀ …

Read More »