ಹಾಸನ: ಸೆಪ್ಟಂಬರ್ 15ರಂದು ಅಂದರೆ ನಾಳೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಾಸನದಲ್ಲಿ ಇಂದು ಬೈಕ್ ರ‍್ಯಾಲಿಗೆ ಹಾಸನದ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಸ್ವತಃ ಬೈಕ್ ಚಾಲನೆ ಮಾಡುವ ಮೂಲಕ ಇಂದು ಹಸಿರು ನಿಶಾನೆ ತೋರಿದರು. ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ “ನನ್ನ ಮತ ನನ್ನ ಹಕ್ಕು” ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ‍್ಯಾಲಿ ನಡೆಸಲಾಯಿತು. ರ‍್ಯಾಲಿ ಉದ್ಘಾಟಿಸಿ ಮಾತನಾಡಿದ ಅವರು, “ತಾಲ್ಲೂಕಿನಲ್ಲಿ …
Read More »Yearly Archives: 2025
ಗಮನ ಸೆಳೆಯುತ್ತಿದೆ ವಿಸ್ಮಯಕಾರಿ ಕೀಟ ಪ್ರಪಂಚ
ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿ ಹಲವು ಬಗೆಯ ಮೇಳಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ವಿಸ್ಮಯಕಾರಿ ಕೀಟ ಪ್ರಪಂಚ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕೀಟದಲ್ಲಿ ಆಹಾರ, ಆಪರೇಷನ್ ಸಿಂದೂರ ಮಾದರಿ, ಕೀಟಾಭರಣಗಳನ್ನು ಸಹ ತಯಾರಿಸಲಾಗಿದೆ. ಮಿಡತೆ ಬರ್ಗರ್, ಹುಳು ಪ್ಯೂಪಾ ಸಲಾಡ್, ಸಿಕಾಡ ಡ್ರೈ, ಮಿಶದರ ಕೀಟಗಳ ಡ್ರೈ, ಮಿಡತೆ ಫ್ರೈ, ಸ್ಯಾಂಡ್ವೀಜ್, ಕಪ್ಪು ಸೈನಿಕ್, ಮಿಡತೆ ಮಸಾಲ, ಆಪರೇಷನ್ ಸಿಂದೂರದ ಮಾದರಿ, …
Read More »ಹೊಸಕೋಟೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಹೊಸಕೋಟೆ: ಸಾಲಬಾಧೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಓರ್ವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಸಾಲಬಾಧೆಯಿಂದ ಹೆದರಿ ದಂಪತಿಯು ಇಬ್ಬರು ಮಕ್ಕಳನ್ನು ಸಾಯಿಸಿ ತಾವೂ ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು. ಅಂತೆಯೇ ಇಬ್ಬರು ಮಕ್ಕಳನ್ನು ಸಾಯಿಸಿ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮಹಿಳೆ ಬದುಕುಳಿದಿದ್ದಾರೆ. ಶಿವು (32), ಮಗಳು ಚಂದ್ರಕಳಾ (11), ಮಗ …
Read More »ಹುಕ್ಕೇರಿ ತಾಲೂಕಿನ ಘೊಡಗೇರಿ, ಹುಲ್ಲೊಳಿ, ಎಲೆ ಮುನೊಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ:ಬಾಲಚಂದ್ರ ಜಾರಕಿಹೊಳಿ
ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರ ಸಂಘದ ಚುನಾವಣೆಯ ಪ್ರಚಾರ ಸಭೆ ನಡೆಸಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹುಕ್ಕೇರಿ ತಾಲೂಕಿನ ಘೊಡಗೇರಿ, ಹುಲ್ಲೊಳಿ, ಎಲೆ ಮುನೊಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ . ಬೆಳಗಾವಿ- ನಷ್ಟದಲ್ಲಿರುವ ಹುಕ್ಕೇರಿ ತಾಲೂಕಿನ ಸಹಕಾರ ಸಂಸ್ಥೆಗಳನ್ನು ಉಳಿಸಿ, ಬೆಳೆಸಬೇಕೆಂಬ ಸಂಕಲ್ಪದೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಸೇರಿಕೊಂಡು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಸಹಕಾರ …
Read More »ಸವದತ್ತಿ ಪಟ್ಟಣದಲ್ಲಿ ಹೂಗಾರ ಸಮಾಜದಿಂದ ಮಾದಯ್ಯನವರ ಜಯಂತಿ ಆಚರಣೆ.
ಸವದತ್ತಿ ಪಟ್ಟಣದಲ್ಲಿ ಹೂಗಾರ ಸಮಾಜದಿಂದ ಮಾದಯ್ಯನವರ ಜಯಂತಿ ಆಚರಣೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಇಂದು ರವಿವಾರ 11 ಗಂಟೆಗೆ ಅದ್ದೂರಿ ಹೂಗಾರ ಸಮಾಜದ ಮಾದಯ್ಯನವರ ಅದ್ದೂರಿ ಜಯಂತೋತ್ಸವ ನಡೆಯಿತು ಈ ಸಂದರ್ಭದಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹಾಗೂ ಸವದತ್ತಿ ಶಾಸಕ ವಿಶ್ವಾಸ ವೈದ್ಯ,ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಸೇರಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು ಈ ಮೆರವಣಿಗೆ ಸವದತ್ತಿ ಪಟ್ಟಣದ ಎಪಿಎಂಸಿ …
Read More »ಹಾಸನ ಭೀಕರ ಅಪಘಾತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಹಾಸನ: ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಣೇಶ ನಿಮಜ್ಜನ ಮೆರವಣಿಗೆಯ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿನ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ. ಗಂಭೀರವಾಗಿ ಗಾಯಗೊಂಡು ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಯ್ಯನ ಕೊಪ್ಪಲು ಗ್ರಾಮದ ಚಂದನ್ (26) ಇಂದು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಏರಿದೆ. ಹಲವು ಗಾಯಾಳುಗಳು ಇನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿಯ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ. ದೇವೇಗೌಡರಿಂದ ಪರಿಹಾರ …
Read More »ಕರ್ನಾಟಕದ ಜನತೆಗೆ ಮತ್ತೆ ಕರೆಂಟ್ ಶಾಕ್: ವಿದ್ಯುತ್ ದರ ಏರಿಕೆಗೆ ಪ್ಲ್ಯಾನ್
ಬೆಂಗಳೂರು, (ಸೆಪ್ಟೆಂಬರ್ 14): ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯೂನಿಟ್ ಗೆ 1 ರೂಪಾಯಿಯಂತೆ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ. ಈಗಾಗಲೇ ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಮಾಡಿ ಶಾಕ್ ಕೊಟ್ಟಿರುವ …
Read More »ರಾಜವಂಶಸ್ಥರಿಂದ ನವರಾತ್ರಿ ಧಾರ್ಮಿಕ ಕಾರ್ಯ: 5 ದಿನಗಳ ಕಾಲ ಅರಮನೆಗೆ ಪ್ರವಾಸಿಗರ ನಿರ್ಬಂಧ
ಮೈಸೂರು: ನವರಾತ್ರಿ ಹಿನ್ನೆಲೆ ಮೈಸೂರು ಅರಮನೆಯ ಒಳಗಡೆ ರಾಜ ವಂಶಸ್ಥರು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಈ ನಿಮಿತ್ತ 5 ದಿನಗಳ ಕಾಲ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಸೆ.16ರ ಬೆಳಗ್ಗೆ 8.30 ರಿಂದ 1 ರವರೆಗೆ ಸಿಂಹಾಸನ ಜೋಡಣೆ, ಸೆ.22 ರಂದು ಬೆಳಗ್ಗೆಯಿಂದ 2 ಗಂಟೆಯವರೆಗೆ ಖಾಸಗಿ ದರ್ಬಾರ್ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಿಮಿತ್ತ, ಅ. 1 ಆಯುಧ ಪೂಜೆ, ಅ. 2 ವಿಜಯದಶಮಿ ದಿನ ಪೂರ್ತಿ ಅರಮನೆಗೆ ಪ್ರವಾಸಿಗರಿಗೆ …
Read More »ಹಾವೇರಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಕಾಲೇಜಿಗಿಲ್ಲ ಉದ್ಘಾಟನೆ ಭಾಗ್ಯ
ಹಾವೇರಿ: ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿ ವರ್ಷ ಕಳೆಯುತ್ತಿದ್ದರೂ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಕಾಲೇಜು ಇನ್ನೂ ಉದ್ಘಾಟನೆಯಾಗಿಲ್ಲ. ಕಾಲೇಜಿಗೆ ತೆರಳಲು ರಸ್ತೆಯೂ ಇಲ್ಲದೆ ವಿದ್ಯಾರ್ಥಿಗಳು ಕೊನೇಪಕ್ಷ ಬಸ್ ಆದರೂ ಬಿಡಿ ಎಂದು ಆಗ್ರಹಿಸಿದ್ದಾರೆ. 2017ರಲ್ಲಿ ಸಿಎಂ ಸಿದ್ದರಾಮಯ್ಯ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ ಸುಮಾರು 10 ಜಿಲ್ಲೆಗಳಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಿದ್ದರು. ನಂತರ ಈ ಕಾಲೇಜುಗಳನ್ನು ಅವುಗಳದೇ ಆದ ಕಟ್ಟಡಗಳಿಗೆ ಸ್ಥಳಾಂತರಿಸಲಾಯಿತು. ಈ ರೀತಿ ಸ್ಥಳಾಂತರವಾದ ಕಾಲೇಜುಗಳಲ್ಲಿ ಒಂದು ಹಾವೇರಿ ಸರ್ಕಾರಿ ಪ್ರಥಮ …
Read More »ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ SITಗೆ ರಾಜಕೀಯ ಒತ್ತಡ: ಬೊಮ್ಮಾಯಿ
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ಎಸ್ಐಟಿಗೆ ರಾಜಕೀಯ ಒತ್ತಡವಿದೆ. ನಿರೀಕ್ಷೆಗೆ ತಕ್ಕಂತೆ, ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಾಸ್ಕ್ ಮ್ಯಾನ್ನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿ ಇದೆ. ಎಸ್ಐಟಿಯವರು ಷಡ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್ಐಟಿಯವರು ನಮ್ಮನ್ನು …
Read More »
Laxmi News 24×7