ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ಕ್ಷೇತ್ರವನ್ನು ಮಾದರಿಯನ್ನಾಗಿಸಲು ವಿಧಾನ ಪರಿಷತ್ ಸದಸ್ಯ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ ಹೇಳಿದರು. ಭಾನುವಾರ ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,ಪ್ರತಿವೊಂದು ರಸ್ತೆ,ಚರಂಡಿ,ನೀರಾವರಿ,ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಎಂದರು.ವಿಶ್ವೇಶ್ವರಯ್ಯ ನಗರ ಹಾಗೂ ಕುವೆಂಪು ಮತ್ತು ಸಂಗೊಳ್ಳಿ ರಾಯಣ್ಣಾ ನಗರಕ್ಕೆ 90 ಲಕ್ಷ ಅನುದಾನ …
Read More »Yearly Archives: 2025
1250 ಎಕರೆ ಇದ್ದ ಐತಿಹಾಸಿಕ ಹೆಗ್ಗೇರಿ ಕೆರೆಯ ವಿಸ್ತೀರ್ಣ 681 ಎಕರೆಗೆ ಕುಸಿತ: ಒತ್ತುವರಿ ತೆರವಿಗೆ ರೈತರ ಒತ್ತಾಯ
ಹಾವೇರಿ: ನಗರದ ಸಮೀಪ ಇರುವ ಹೆಗ್ಗೇರಿ ಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಕೆರೆಯನ್ನು ನಳ ಮಹಾರಾಜ ಕಟ್ಟಿಸಿದ ಎಂಬ ಪ್ರತೀತಿ ಇದೆ. ಅಲ್ಲದೆ, ದಕ್ಷಿಣ ಭಾರತದ ರಾಜ ಮನೆತನಗಳಲ್ಲಿ ಒಂದಾದ ಚೋಳರ ಕಾಲದಲ್ಲಿ ಈ ಕೆರೆ ಕಟ್ಟಲ್ಪಟ್ಟಿತು ಎಂಬ ಇತಿಹಾಸವಿದೆ. ಆದರೆ, ಈ ಕೆರೆ ಈಗ ಒತ್ತುವರಿಗೆ ತುತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಖಂಡ ಧಾರವಾಡ ಜಿಲ್ಲೆಯಿದ್ದಾಗಲೇ ಹೆಗ್ಗೇರಿ ಹಾವೇರಿ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿತ್ತು. ಸಾಕಷ್ಟು ಪ್ರಮಾಣದ ನೀರು …
Read More »ಬೆಂಗಳೂರು: ಮೆಟ್ರೋ ರೈಲು ಹಳಿಗೆ ಜಿಗಿದಿದ್ದ ಡಿ ಗ್ರೂಪ್ ನೌಕರನ ಸ್ಥಿತಿ ಗಂಭೀರ
ಬೆಂಗಳೂರು: ಮೆಟ್ರೋ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಯಾಣಿಕ ವೀರೇಶ್ (35) ಸ್ಥಿತಿ ಗಂಭೀರವಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ವೀರೇಶ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಡಿ ಗ್ರೂಪ್ ನೌಕರನಾಗಿದ್ದ ವೀರೇಶ್, ಶನಿವಾರ ಮಧ್ಯಾಹ್ನ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಗಾಯಾಳು ವೀರೇಶ್‌ಗೆ ತುರ್ತು ಚಿಕಿತ್ಸಾ ಘಟಕದಲ್ಲಿ …
Read More »ಮರ ಬಿದ್ದು ಯುವತಿ ಸಾವು,
ಬೆಂಗಳೂರು: ಮರವೊಂದು ಬಿದ್ದ ಪರಿಣಾಮ ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಇಲ್ಲಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಹೆಬ್ಬಾಳದ ನಿವಾಸಿಯಾಗಿದ್ದ ಕೀರ್ತನಾ (24) ಮೃತ ಯುವತಿ. ಮತ್ತೋರ್ವ ದ್ವಿಚಕ್ರ ವಾಹನ ಸವಾರ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಯುವತಿಯ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಯುವತಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಭಾನುವಾರ ರಜೆ ಇದ್ದಿದ್ದರಿಂದ ಕೀರ್ತನಾ ಹಾಗೂ …
Read More »ಸಿನಿಮಾ ನೋಡಲು ಹೋದವರು ನೀರುಪಾಲು
ರಾಯಚೂರು: ಕಾಲುವೆಗೆ ಈಜಲು ಹೋದಾಗ ನಾಪತ್ತೆಯಾದ ಇಬ್ಬರು ಯುವಕರು ಶವವಾಗಿ ಪತ್ತೆಯಾದ ಯುವಕರ ಸಾವಿನ ಕುರಿತು ಸಂಶಯ ವ್ಯಕ್ತವಾಗಿ ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ನಿವಾಸಿಗಳಾದ ಯಲ್ಲಾಲಿಂಗ ಹಾಗೂ ವೆಂಕಟೇಶ ಇಬ್ಬರು ಯುವಕರು ಮುದಗಲ್‌ನಿಂದ ಮಸ್ಕಿ ಪಟ್ಟಣಕ್ಕೆ ಕಾಂತಾರ ಸಿನಿಮಾ ನೋಡಲು ಬಂದಿದ್ದರು. ಆದ್ರೆ ಸಿನಿಮಾ ಟಿಕೆಟ್ ಸಿಗಲಿಲ್ಲವೆಂದು ಮಸ್ಕಿ ಪಟ್ಟಣದ ತುಂಗಭದ್ರಾ ಎಡದಂಡೆ ನಾಲೆಗೆ ಈಜಲು ತೆರಳಿದ್ದರು. ಈ ವೇಳೆ ಯಲ್ಲಾಲಿಂಗ ಹಾಗೂ …
Read More »ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ರಾಜ್ಯದಲ್ಲಿ ಶೇ.76.41 ಪೂರ್ಣ, ಬೆಂಗಳೂರಲ್ಲಿ 1.19 ಲಕ್ಷ ಮನೆಯಲ್ಲಿ ಸಮೀಕ್ಷೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಎರಡು ದಿನಗಳಲ್ಲಿ 1.19 ಲಕ್ಷ ಮನೆಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆಯನ್ನು ಶನಿವಾರದಿಂದ ಪ್ರಾರಂಭಿಸಲಾಗಿದೆ. ಈವರೆಗೆ 1.19 ಲಕ್ಷ ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಭಾನುವಾರ 5 ನಗರ ಪಾಲಿಕೆಗಳಲ್ಲಿ ಸಂಜೆ 7 ಗಂಟೆಯವರೆಗೆ 95,024 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಶನಿವಾರ ಮೊದಲ ದಿನ 24,453 ಮನೆಗಳನ್ನು ಸಮೀಕ್ಷೆ ಮಾಡಲಾಗಿತ್ತು. ಭಾನುವಾರ ಸಂಜೆವರೆಗೆ …
Read More »1250 ಎಕರೆ ಇದ್ದ ಐತಿಹಾಸಿಕ ಹೆಗ್ಗೇರಿ ಕೆರೆಯ ವಿಸ್ತೀರ್ಣ 681 ಎಕರೆಗೆ ಕುಸಿತ: ಒತ್ತುವರಿ ತೆರವಿಗೆ ರೈತರ ಒತ್ತಾಯ
ಹಾವೇರಿ: ನಗರದ ಸಮೀಪ ಇರುವ ಹೆಗ್ಗೇರಿ ಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಕೆರೆಯನ್ನು ನಳ ಮಹಾರಾಜ ಕಟ್ಟಿಸಿದ ಎಂಬ ಪ್ರತೀತಿ ಇದೆ. ಅಲ್ಲದೆ, ದಕ್ಷಿಣ ಭಾರತದ ರಾಜ ಮನೆತನಗಳಲ್ಲಿ ಒಂದಾದ ಚೋಳರ ಕಾಲದಲ್ಲಿ ಈ ಕೆರೆ ಕಟ್ಟಲ್ಪಟ್ಟಿತು ಎಂಬ ಇತಿಹಾಸವಿದೆ. ಆದರೆ, ಈ ಕೆರೆ ಈಗ ಒತ್ತುವರಿಗೆ ತುತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಖಂಡ ಧಾರವಾಡ ಜಿಲ್ಲೆಯಿದ್ದಾಗಲೇ ಹೆಗ್ಗೇರಿ ಹಾವೇರಿ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿತ್ತು. ಸಾಕಷ್ಟು ಪ್ರಮಾಣದ ನೀರು …
Read More »ಕೌಟುಂಬಿಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಕೌಟುಂಬಿಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ಇಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಹೊರ ವಲಯ ಊರುಗಡೂರು(ಸೊಳೆಬೈಲು)ನಲ್ಲಿ ಶಬ್ಬಿರ್(32) ಹಾಗೂ ಶಹಬಾಜ್ (40) ಗಾಯಗೊಂಡವರು. ಶಬ್ಬಿರ್ನನ್ನು ಮೇಟ್ರೋ ಆಸ್ಪತ್ರೆಗೆ ದಾಖಲಿಸಿದರೆ, ಶಹಬಾಜ್ನನ್ನು ಮಲ್ನಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಶಬ್ಬೀರ್ ಸಹೋದರಿ ಸಲ್ಮೀಯಾ ಫರ್ದಿನ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದಕ್ಕೆ ಶಬ್ಬಿರ್ ವಿರೋಧ ವ್ಯಕ್ತಪಡಿಸಿದ್ದ. ಆದರೆ, ಸಲ್ಮೀಯಾ ಕೆಲ ತಿಂಗಳ ಹಿಂದೆ …
Read More »ಸಿಎಂ ಭೇಟಿಯಾದ ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಯ ಭಾರತದ ಮುಖ್ಯಸ್ಥ: ಹೂಡಿಕೆ ಬಗ್ಗೆ ಚರ್ಚೆ
ಬೆಂಗಳೂರು: ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್ ವೂ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಐಫೋನ್ ಮತ್ತು ಅದರ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಫಾಕ್ಸ್‌ಕಾನ್‌ನ ರಾಬರ್ಟ್ ವೂ ಅವರು ಸಿಎಂ ಜೊತೆಗಿನ ಭೇಟಿಯ ವೇಳೆ, ರಾಜ್ಯದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆ ಸೇರಿದಂತೆ ಮತ್ತಿತರ ಸಂಗತಿಗಳ ಬಗ್ಗೆ ಚರ್ಚಿಸಿದರು. ವೂ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಫಾಕ್ಸ್‌ಕಾನ್ ಕಂಪನಿಯು ದೇವನಹಳ್ಳಿಯ …
Read More »ಸಿನಿಮಾ ಟಿಕೆಟ್ ಸಿಗದೆ ಈಜಲು ಕಾಲುವೆಗಿಳಿದ ಇಬ್ಬರು ಯುವಕರು ನೀರುಪಾಲು
ರಾಯಚೂರು: ಸಿನಿಮಾ ನೋಡಲು ಹೋಗಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ನಿವಾಸಿಗಳಾದ ಯಲ್ಲಾಲಿಂಗ (28), ವೆಂಕಟೇಶ ಮೋಚಿ (30) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಮಸ್ಕಿ ಪಟ್ಟಣದ ಬಳಗಾನೂರು ರಸ್ತೆಗೆ ಬರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಈ ಇಬ್ಬರು ಈಜಲು ತೆರಳಿದ್ದರು. ಮುದಗಲ್ ಪಟ್ಟಣದ ನಾಲ್ವರು ಸ್ನೇಹಿತರು ಶನಿವಾರ ಮಸ್ಕಿ ಪಟ್ಟಣಕ್ಕೆ …
Read More »
Laxmi News 24×7