Breaking News

Monthly Archives: ಸೆಪ್ಟೆಂಬರ್ 2025

ಇಡೀ ದಿನ ಕ್ಷೇತ್ರ ಸುತ್ತಿ ಸಾರ್ವಜನಿಕರ ಸಮಸ್ಯೆ ಜತೆಗೆ ಬೆಳೆ ಹಾನಿ ಸಮೀಕ್ಷೆ ನಡೆಸಿದ- ಸಚಿವ ಸಂತೋಷ ಲಾಡ್.

ಇಡೀ ದಿನ ಕ್ಷೇತ್ರ ಸುತ್ತಿ ಸಾರ್ವಜನಿಕರ ಸಮಸ್ಯೆ ಜತೆಗೆ ಬೆಳೆ ಹಾನಿ ಸಮೀಕ್ಷೆ ನಡೆಸಿದ- ಸಚಿವ ಸಂತೋಷ ಲಾಡ್. ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ ಲಾಡ್ ಅವರು ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ, ಬೆಳೆಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಕಲಘಟಗಿ ಪಟ್ಟಣದಲ್ಲಿ ಜನಸ್ಪಂದನ ಸಭೆ ಜರುಗಿಸಿ, ಸಾರ್ವಜನಿಕರ ಸಮಸ್ಯೆ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು. ಹುಲಕೊಪ್ಪ ಹಾಗೂ ಗಳಗಿ ಹುಲಕೊಪ್ಪ ಗ್ರಾಮಗಳ ಚನ್ನಬಸಪ್ಪ ಹಳ್ಯಾಳ …

Read More »

ಮೃತದೇಹ ಸ್ವೀಕರಿಸಲೊಪ್ಪದ ಸಹೋದರ; ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಮಾಜಸೇವಕ

ಉಡುಪಿ : ಜಿಲ್ಲೆಯ ಕಾಪು ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟ ವ್ಯಕ್ತಿಯ ಸಹೋದರ ಅಂತ್ಯಕ್ರಿಯೆಗೆ ಮೃತದೇಹ ಸ್ವೀಕರಿಸಲು ಒಪ್ಪದ ಕಾರಣ ಸಮಾಜ ಸೇವಕ ವಿಶು ಶೆಟ್ಟಿ ಅವರೇ ಮುಂದೆ ನಿಂತು ಮೃತನ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಮೃತನ ಸಹೋದರನನ್ನು ಕರೆಯಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಕೊನೆಗೆ ಅಂತ್ಯಸಂಸ್ಕಾರ ನಡೆಸಲು ಮೃತ ದೇಹವನ್ನು ಪಡೆಯಲು ಸಹೋದರ ನಿರಾಕರಿಸಿದರು. …

Read More »

ಬಿಜೆಪಿಯವರದ್ದು ಧರ್ಮ ಯಾತ್ರೆಯಲ್ಲ ರಾಜಕೀಯ ಯಾತ್ರೆ: ಸಿಎಂ

ಮೈಸೂರು: “ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮ ಯಾತ್ರೆಯಲ್ಲ ರಾಜಕೀಯ ಯಾತ್ರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ SIT ತನಿಖೆ ನಡೆಯುತ್ತಿದೆ. ಬಿಜೆಪಿ ಈಗ ಎನ್.ಐ.ಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ?” ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. “SIT ರಚನೆಯಾದ ಪ್ರಾರಂಭದಲ್ಲಿ ಎನ್​ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ದೇಹಗಳು ಸಿಗದೇ ಹೋದಾಗ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳದ …

Read More »

ಬೆಂಗಳೂರಿನಲ್ಲಿ ಮಳೆ ಅವಾಂತರ

(ಬೆಂಗಳೂರು): ಕಟ್ಟಡ ನಿರ್ಮಾಣಕ್ಕಾಗಿ ಪಾಯ ಅಗೆಯುತ್ತಿದ್ದ ವೇಳೆ ಮಳೆ ನೀರು ಪಾಯಕ್ಕೆ ನುಗ್ಗಿ ಪಾಯದಲ್ಲಿನ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಕಳೆದ ರಾತ್ರಿ ಯಲಹಂಕದಲ್ಲಿ ಸಂಭವಿಸಿದೆ. ಆಂಧ್ರ ಪ್ರದೇಶ ಮೂಲದ ಜೆ.ಶಿವಾ (32) ಮತ್ತು ಮಧುಸುದನ್ ರೆಡ್ಡಿ (58) ಮೃತ ಕಾರ್ಮಿಕರು. ಇಲ್ಲಿನ ಎಂಬೆಸ್ಸಿ ಗ್ರೂಪ್ ಸಂಸ್ಥೆಯ ಕಟ್ಟಡದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಕಾರ್ಮಿಕರು ದೊಡ್ಡದಾದ ಗುಂಡಿ ತೆಗೆದಿದ್ದರು. …

Read More »

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸೆಷನ್ಸ್​ ನ್ಯಾಯಾಲಯ ವಜಾಗೊಳಿಸಿದೆ.

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಅರ್ಜಿ ವಿಚಾರಣೆ ನಡೆಸಿದ 57ನೇ ಸೆಷನ್ಸ್​ ನ್ಯಾಯಾಲಯ ಪವಿತ್ರಾ ಗೌಡ ಅರ್ಜಿಯನ್ನು ವಜಾಗೊಳಿಸಿದೆ. ಮಹಿಳೆ ಹಾಗೂ ಸಿಂಗಲ್ ಪೇರೆಂಟ್ ಆಗಿರುವುದರಿಂದ ಮಗಳ ಆರೈಕೆ ಮಾಡಬೇಕಿದೆ ಎಂಬ ಕಾರಣ ನೀಡಿ ಪವಿತ್ರಾ ಗೌಡ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಪವಿತ್ರಾ ಗೌಡ ಅವರ ಮನವಿಯನ್ನ ಪರಿಗಣಿಸದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ …

Read More »

20 ವರ್ಷಕ್ಕೂ ಮೇಲ್ಪಟ್ಟು ಸೆರೆವಾಸಕ್ಕೆ ಗುರಿಯಾದವರ ಶಿಕ್ಷೆ ಮಾಫಿ ಮನವಿ ತಿರಸ್ಕರಿಸಬೇಕೆಂಬ ನಿಯಮವಿಲ್ಲ: ಹೈಕೋರ್ಟ್

ಬೆಂಗಳೂರು: ಇಪ್ಪತಕ್ಕೂ ಹೆಚ್ಚು ವರ್ಷಗಳ ಕಾಲ ಸೆರೆವಾಸಕ್ಕೊಳಗಾಗುವ ಅಪರಾಧಿಗಳು ನಿಗದಿತ ಅವಧಿಯ ಜೈಲು ವಾಸದ ಬಳಿಕ ಶಿಕ್ಷೆಯ ಮಾಫಿ ಕೋರಿ ಸಲ್ಲಿಸುವ ಮನವಿ ತಿರಿಸ್ಕರಿಸಬೇಕು ಎಂಬ ನಿಯಮವಿಲ್ಲ ಎಂದು ಹೈಕೋರ್ಟ್ ಇಂದು ಸ್ಪಷ್ಟಪಡಿಸಿದೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಆದೇಶದಲ್ಲಿ ಶಿಕ್ಷೆಯ ಮಾಫಿ ಕುರಿತು ಪ್ರಸ್ತಾಪವಿಲ್ಲದಿದ್ದಂತಹ ಸಂದರ್ಭದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಬೇಕೆಂದಿಲ್ಲ. ಇಂತಿಷ್ಟು ವರ್ಷ ಶಿಕ್ಷೆಯ ಬಳಿಕ ಶಿಕ್ಷೆಯ ಮಾಫಿ, ಪೆರೋಲ್, ಅವಧಿಪೂರ್ವ ಬಿಡುಗಡೆಗೆ ಅರ್ಹರಾಗಿರುತ್ತಾರೆ ಎಂದು ಪೀಠ ತಿಳಿಸಿದೆ. ತನ್ನ ಪತಿ, …

Read More »

ಗಣೇಶೋತ್ಸವಕ್ಕೆ ‘ಆಪರೇಷನ್ ಸಿಂಧೂರ’ ಟಚ್: ಗಣೇಶನೊಂದಿಗೆ ಭಾರತೀಯ ಸೈನಿಕರಿಗೂ ಪೂಜೆ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ‌ ಗಣೇಶ ಮೂರ್ತಿಗಳು ಒಂದಕ್ಕಿಂತ ಒಂದು ವಿಶಿಷ್ಟವಾಗಿವೆ. ಆಕರ್ಷಕ ಅಲಂಕಾರ, ಮಂಟಪಗಳು ಗಮನ ಸೆಳೆಯುತ್ತಿವೆ. ಇಲ್ಲೊಂದು ಮಂಡಳಿ ‘ಆಪರೇಷನ್ ಸಿಂಧೂರ’ ಟಚ್ ನೀಡಿದ್ದು, ಗಣೇಶನ ಜೊತೆಗೆ ಭಾರತೀಯ ಸೈನಿಕರಿಗೂ ಪೂಜೆ ಸಲ್ಲಿಸುವ ಮೂಲಕ ದೇಶಭಕ್ತಿ ಮೆರೆಯುತ್ತಿದೆ. ಒಂದೆಡೆ ಮಂಟಪದ ಹೊರಗೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಮನೆ ಮಾತಾಗಿದ್ದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾವಚಿತ್ರಗಳು. ಮತ್ತೊಂದೆಡೆ, ಮಂಟಪದೊಳಗೆ ಕಾಲಿಡುತ್ತಿದ್ದಂತೆ …

Read More »

ವಿಜಯಪುರ–ಮಂಗಳೂರು ನಡುವೆ ವಿಶೇಷ ರೈಲು ಇಂದಿನಿಂದ ಖಾಯಂ: ಟಿಕೆಟ್​ ವಿವರ ಇಲ್ಲಿದೆ

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ರೈಲು ಸಂಖ್ಯೆ 07377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಇಂದಿನಿಂದ ಅಂದರೆ ಸೆಪ್ಟೆಂಬರ್ 1ರಿಂದ ಹಾಗೂ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್‌-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್ 2ರಿಂದ ಖಾಯಂ ಸಂಚಾರ ಮಾಡಲಿದೆ. ಹೊಸ ದರ ಪಟ್ಟಿಯನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಿದೆ. ಈಗಾಗಲೇ ರೈಲು ಸಂಖ್ಯೆ ಬದಲಾವಣೆಯೊಂದಿಗೆ ರೈಲು ಸಂಖ್ಯೆ 17377/78 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್​ ಬುಕ್ಕಿಂಗ್ ಆರಂಭಗೊಂಡಿದೆ. ಕಾಯ್ದಿರಿಸಿದ ದರ್ಜೆಯ …

Read More »

ಚಿನ್ನಯ್ಯನಿಗೆ ಎಸ್​ಐಟಿ ಗ್ರಿಲ್: ‘ಬುರುಡೆ’ ಕೊಟ್ಟಿದ್ದೇ ಜಯಂತ್! ಮತ್ತಷ್ಟು ಸ್ಫೋಟಕ ಸಂಗತಿ ಬಹಿರಂಗ

ಬೆಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ (Dharmasthala) ಪ್ರಕರಣದಲ್ಲಿ ‘ಬುರುಡೆ ಗ್ಯಾಂಗ್‌’ನ ಬುರುಡೆಯಾಟ ಬಗೆದಷ್ಟು ಬಯಲಾಗುತ್ತಿದೆ. ಬೆಂಗಳೂರಿನ ಬಾಗಲುಗುಂಟೆ ಜಯಂತ್‌ ಮನೆ ಮತ್ತು ವಿದ್ಯಾರಣ್ಯಪುರ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಜರು ನಡೆಸಿದ ಬಳಿಕ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. ಬುರುಡೆ ಸಿಕ್ಕಿದ್ದು, ಬುರುಡೆ ರಿಹರ್ಸಲ್ ನಡೆದಿದ್ದ ಬಗ್ಗೆ ರೋಚಕ ಸಂಗತಿಗಳು ಎಸ್ಐಟಿ ತನಿಖೆಯಿಂದ ಬಹಿರಂಗೊಂಡಿದೆ. ಬುರುಡೆ ಪ್ಲ್ಯಾನ್‌ಗೂ ಮುನ್ನ ವಿಡಿಯೋ ರೆಕಾರ್ಡ್ ನೂರಾರು ಶವ ಹೂತಿದ್ದೇನೆ. ಹೂತಿರುವ ಜಾಗ ತೋರಿಸುತ್ತೇನೆ ಎಂದು ಕೈಯಲ್ಲೊಂದು ಬುರುಡೆ ಹಿಡಿದುಕೊಂಡು ಬಂದಿದ್ದ …

Read More »

ಮಹಿಳೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಮಾಜಿ ಪ್ರಿಯಕರ

ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಹಾಡಹಗಲೇ ತನ್ನ ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಹೊಮ್ಮದೇವನಹಳ್ಳಿಯಲ್ಲಿ ಇಂದು ನಡೆಯಿತು. ಸುಮಾರು ಶೇ 80ರಷ್ಟು ದೇಹ ಸುಟ್ಟು ಹೋಗಿದ್ದರಿಂದ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಂಬತ್ತಳ್ಳಿಯ ನಿವಾಸಿ ವನಜಾಕ್ಷಿ (28) ಮೃತರು. ಹಂತಕ ಮೆಳೆನಲ್ಲಸಂದ್ರದ ಕ್ಯಾಬ್ ಚಾಲಕ ವಿಠ್ಠಲ್ (52) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವನಜಾಕ್ಷಿ ಅವರನ್ನು ದಾಖಲಿಸಲಾಗಿತ್ತು. ಆದರೆ …

Read More »