Breaking News

Monthly Archives: ಆಗಷ್ಟ್ 2025

ಧರ್ಮಸ್ಥಳ: ಮುಸುಕುಧಾರಿ ದೂರುದಾರ ತೋರಿಸಿದ ಪಾಯಿಂಟ್ 13ರಲ್ಲಿ 15 ಅಡಿ ಅಗೆದರೂ ಸಿಗದ ಶವ

ಬೆಳ್ತಂಗಡಿ(ದಕ್ಷಿಣ ಕನ್ನಡ): ನೂರಾರು ಮೃತದೇಹಗಳನ್ನು ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಾಯಿಂಟ್ ನಂಬರ್ 13ರಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಯಾವುದೇ ಕಳೇಬರದ ಕುರುಹುಗಳು ಪತ್ತೆಯಾಗಿಲ್ಲ. ಕಳೆದ 12 ದಿನಗಳಿಂದ ಎಸ್ಐಟಿ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ನೇತ್ರಾವತಿ ನದಿ ಬದಿಯಲ್ಲಿ ಗುರುತು ಮಾಡಿದ 13ರ ಶೋಧ ಕುತೂಹಲಕ್ಕೆ ಕಾರಣವಾಗಿತ್ತು. ಅನಾಮಧೇಯ ಮುಸುಕುಧಾರಿ ದೂರುದಾರ ವ್ಯಕ್ತಿ ಈ ಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಈ …

Read More »

ಸರ್ಕಾರಿ ನೌಕರಿ ನಕಲಿ ಆದೇಶ ಪತ್ರ, ರಾಜ್ಯಪಾಲರ ಸಹಿ: ಆರೋಪಿ ವಿರುದ್ಧ ಚಾರ್ಜ್​ಶೀಟ್​​ಗೆ ಬೆಳಗಾವಿ ಪೊಲೀಸರ ಸಿದ್ಧತೆ

ಬೆಳಗಾವಿ: ”ಸರ್ಕಾರಿ ನೌಕರಿ ಕೊಡಿಸುವುದಾಗಿ 14 ಜನರಿಗೆ 30 ಲಕ್ಷ ರೂ. ವಂಚಿಸಿದ್ದ ಪ್ರಕರಣದಲ್ಲಿ ಆರೋಪಿ ಬೇರೆ ಬೇರೆಯವರ ಹೆಸರು ಹೇಳಿಕೊಂಡು ಸರ್ಕಾರದ ಲೋಗೋ ಕಾಪಿ ಮಾಡಿ, ರಾಜ್ಯಪಾಲರ ಸಹಿಯನ್ನೂ ನಕಲು ಮಾಡಿ, ಸುಳ್ಳು ಸರ್ಕಾರಿ ನೌಕರಿಯ ಆದೇಶ ಪತ್ರ ಕೊಟ್ಟಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಹಾಗಾಗಿ, ಆರೋಪಿ ವಿರುದ್ಧ ಚಾರ್ಜ್​ಶೀಟ್ ಸಿದ್ಧಪಡಿಸುತ್ತಿದ್ದೇವೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು. ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಸ್​ಪಿ, ”ಮಂಜುನಾಥ …

Read More »

3ನೇ ಪಾಯಿಂಟ್​​​ನಲ್ಲೂ ಮೂಳೆಗಳು ಸಿಗದಿದ್ರೆ SIT ಶೋಧ ಸ್ಥಗಿತ, ಸಚಿವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ: ಸಿಎಂ

ಬೆಂಗಳೂರು: 13 ಸ್ಥಳಗಳಲ್ಲೂ ಶವ ಸಿಗದಿದ್ದರೆ ಎಸ್ಐಟಿ ಶವ ಶೋಧನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ವಿಚಾರವಾಗಿ ಬೇಳೂರು ಗೋಪಾಲಕೃಷ್ಣ ವಿಷಯ ಪ್ರಸ್ತಾಪಿಸಿದರು.‌ ಈ ಸಂಬಂಧ ಮಾತನಾಡಿದ ಸಿಎಂ, ಎಸ್ಐಟಿ ಮಾಡಿದ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ, 13 ಸ್ಥಳಗಳಲ್ಲಿ ಎಸ್ಐಟಿ ಶೋಧನೆ …

Read More »

ಯಲ್ಲಮ್ಮನ ಗುಡ್ಡದಲ್ಲಿ ಮಳೆ ಅವಾಂತರ: ಹುಂಡಿಗೆ ನುಗ್ಗಿದ ನೀರು, ತೊಯ್ದ ಕಾಣಿಕೆ ಹಣ

ಬೆಳಗಾವಿ: ಕೋಟ್ಯಂತರ ಭಕ್ತರ ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ದೇವಸ್ಥಾನ ಸಂಪೂರ್ಣವಾಗಿ ಮುಳುಗಿತ್ತು. ಶ್ರಾವಣ ಹಿನ್ನೆಲೆ ಬರುತ್ತಿರುವ ಭಕ್ತರು ಮಳೆಯಿಂದ ತೀವ್ರ ಸಂಕಷ್ಟ ಎದುರಿಸಿದ್ದರು. ಪ್ರವಾಹದ ನೀರು ದೇವಸ್ಥಾನದ ತುಂಬೆಲ್ಲಾ ವ್ಯಾಪಿಸಿದ್ದರಿಂದ ಕೊಳಚೆ, ಮಣ್ಣು, ಕೆಸರು ತುಂಬಿಕೊಂಡಿದೆ. ಇದರಿಂದ ದೇವಸ್ಥಾನದ ಆವರಣವು ಕೆಸರಿನಿಂದ ತುಂಬಿಕೊಂಡಿದೆ. ದೇವಸ್ಥಾನದ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ನೀರಿನಲ್ಲಿ ತೊಯ್ದ ಹುಂಡಿ …

Read More »

ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಓರ್ವ ಶವವಾಗಿ ಪತ್ತೆ

ಉತ್ತರ ಕನ್ನಡ (ಯಲ್ಲಾಪುರ) : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿ ಹಿಂದಿರುಗುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಸಹೋದರರಿಬ್ಬರಲ್ಲಿ ಓರ್ವನ ಶವ ಸೋಮವಾರ ಪತ್ತೆಯಾಗಿದೆ. ತಾಲೂಕಿನ ಶಿರನಾಲ ಮಾದನಸರದ ಮಹ್ಮದ್ ರಫೀಕ್ ಸಾಬ್ ಸೈಯದ್ (27) ಅವರ ಶವ ಪತ್ತೆಯಾಗಿದೆ. ನಾಪತ್ತೆಯಾದ ಮಹ್ಮದ್ ಹನೀಫ್ ಸಾಬ್ ಸೈಯದ್ (25) ಅವರಿಗೆ ಹುಡುಕಾಟ ಮುಂದುವರಿದಿದೆ. ಭಾನುವಾರ ಬೆಳಗ್ಗೆ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು …

Read More »

ಮಲಗಿದ್ದ ಯುವತಿಗೆ ಮಚ್ಚಿನಿಂದ ಹೊಡೆದ ಮನೆಕೆಲಸದ ಮಹಿಳೆ

ಬೆಂಗಳೂರು: ಮನೆಯಲ್ಲಿ ಮಲಗಿದ್ದ ಯುವತಿಗೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ ಆರೋಪದಡಿ ಮನೆ ಕೆಲಸದ ಮಹಿಳೆಯನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 10ರಂದು ಬೆಳಗಿನ ಜಾವ ಬಸಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿತ್ತು. ಸುಶ್ಮಿತಾ (21) ಎಂಬಾಕೆಯ ಮೇಲೆ ಹಲ್ಲೆಗೈದ ಆರೋಪದಡಿ ಲಲಿತಾ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಲಲಿತಾ, ಬಸಪ್ಪ ಗಾರ್ಡನ್‌ನಲ್ಲಿರುವ ಸರೋಜಮ್ಮ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡು ಅವರೊಂದಿಗೆ ವಾಸವಿದ್ದಳು. ಸರೋಜಮ್ಮ ಅವರಿಗೆ ಪರಿಚಿತಳಾಗಿದ್ದ ಸುಶ್ಮಿತಾ ಆಗಾಗ …

Read More »

20 ವರ್ಷಗಳಿಂದ ಕೆಲಸ ನೀಡಿದ್ದ ಮಾಲೀಕನಿಗೆ ವಂಚಿಸಿ ಕಳ್ಳತನ: ನಕಲಿ ಕೀ ಸಮೇತ ಆರೋಪಿ ಬಂಧನ

ಬೆಂಗಳೂರು‌: ಉದ್ಯಮಿಯೊಬ್ಬರ ಕಚೇರಿಯಲ್ಲಿ ಹಂತ ಹಂತವಾಗಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಬಂಧಿತ ಆರೋಪಿಯಾಗಿದ್ದು, ಆತನಿಂದ 89.09 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 8 ವರ್ಷಗಳ ಹಿಂದೆಯೇ ನಕಲಿ ಕೀ ಮಾಡಿಸಿದ್ದ ಆರೋಪಿ: ಗ್ರಾನೈಟ್ ಉದ್ಯಮಿಯೊಬ್ಬರ ಜಯನಗರದ 8ನೇ ಬ್ಲಾಕ್‌ನ ಸಂಗಂ ಸರ್ಕಲ್‌ನಲ್ಲಿರುವ ಕಚೇರಿಯಲ್ಲಿ 20 ವರ್ಷಗಳಿಂದಲೂ ವ್ಯವಸ್ಥಾಪಕನಾಗಿ ಕಾರ್ತಿಕ್ ಕೆಲಸ ಮಾಡಿಕೊಂಡಿದ್ದ. ಸಾಲದ ಸುಳಿಯಲ್ಲಿ …

Read More »

ಶವ ಸಂಸ್ಕಾರಕ್ಕೆ ಬಳಸುವ ವಸ್ತುಗಳನ್ನು ಕದ್ದ ಖದೀಮರು

ಬಂಟ್ವಾಳ (ದಕ್ಷಿಣ ಕನ್ನಡ): ಮನೆ, ದೇವಸ್ಥಾನ, ಅಂಗಡಿ, ವಾಣಿಜ್ಯ ಕೇಂದ್ರಗಳಿಗೆ ಖದೀಮರು ಕನ್ನ ಹಾಕೋದನ್ನು ಕೇಳಿದ್ದೇವೆ. ಆದರೆ, ಇಲ್ಲಿ ರುದ್ರಭೂಮಿ (ಸ್ಮಶಾನ) ಯನ್ನು ಕಳ್ಳರು ಬಿಡದೇ, ಕೃತ್ಯ ಎಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದಲ್ಲಿ ನಡೆದಿದೆ. ಸ್ಮಶಾನದಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳು ಕಳ್ಳತನ ಆಗಿರುವ ಬಗ್ಗೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯ್ ತಿಳಿಸಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ …

Read More »

ಬಾವಿಯಲ್ಲಿ ಬಿದ್ದು 8 ವರ್ಷದ ಬಾಲಕಿ ದುರ್ಮರಣ

ಬಾವಿಯಲ್ಲಿ ಬಿದ್ದು 8 ವರ್ಷದ ಬಾಲಕಿ ದುರ್ಮರಣ ಆಟವಾಡಲು ಹೋಗಿ ಬಾವಿಯಲ್ಲಿ ಬಾಲಕಿ ಬಿದ್ದು ಬಾಲಕಿಯ ರಕ್ಷಣೆಗೆ ಹರಸಾಹಸ ಪಟ್ಟು ಕೊನೆಗೆ ಪ್ರಯತ್ನ ವಿಫಲವಾಗಿ ಅಗ್ನಿ ಶಾಮಕ ಸಿಬ್ಬಂದಿ ತಡರಾತ್ರಿ ಬಾಲಕಿ ಶವ ಹೊರಗೆ ತೆಗೆದಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಳಿಯ ಧನಸಿಂಗ್ ( ಮೋನಪ್ಪ ನಗರ) ತಾಂಡಾದಲ್ಲಿ ನಡೆದಿದೆ. ತಾಯಿಯೊಂದಿಗೆ ಕುರಿ ಮೇಯಿಸುವಾಗ ಆಟವಾಡುತ್ತಾ 8 ವರ್ಷದ ಅರ್ಚನಾ ರಾಠೋಡ ಬಾವಿಯಲ್ಲಿ ನಿನ್ನೆ ಸಾಯಂಕಾಲ ಬಾವಿಯಲ್ಲಿ …

Read More »

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ!

ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಾಚೋಹಳ್ಳಿಯಲ್ಲಿ ನಡೆದಿದೆ. ವಿಜಯ್ ಕುಮಾರ್ (39) ಹತ್ಯೆಗೀಡಾದ ಉದ್ಯಮಿ ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ಈ ಘಟನೆ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೆಲಸದ ನಿಮಿತ್ತವಾಗಿ ನಿನ್ನೆ ಸಂಜೆ ಮನೆಯಿಂದ ಹೊರಗೆ ಹೋದ ವಿಜಯ್ ಕುಮಾರ್​, ಮಾಚೋಹಳ್ಳಿಯ ಡಿ-ಗ್ರೂಪ್ ಲೇಔಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೆಲಮಂಗಲ …

Read More »