Breaking News

Daily Archives: ಆಗಷ್ಟ್ 18, 2025

ಸಂಬಳದ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕ್‌ನಿಂದ ₹23 ಲಕ್ಷ ಸಾಲ ಪಡೆದ ವಂಚಕರು

ಮೈಸೂರು: ನಕಲಿ ದಾಖಲೆಗಳನ್ನು ಸಲ್ಲಿಸಿ ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ)ಗೆ​ 23.16 ಲಕ್ಷ ರೂ. ವಂಚಿಸಲಾಗಿದೆ. ಈ ಕುರಿತು ಬ್ಯಾಂಕ್ ಮ್ಯಾನೇಜರ್​​​ ಪ್ರತಿಭಾ ಅವರು ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ವಿ.ವಿ.ಪುರಂ ಪೊಲೀಸ್​​​​​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸಂಬಳ​​​​​​ ಸೇರಿದಂತೆ ಇತರೆ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಬ್ಯಾಂಕ್‌ನಿಂದ ಮೂವರು ಸಾಲ ಪಡೆದಿದ್ದರು. ದಾಖಲಾತಿ ಪರಿಶೀಲನೆಯ ಸಂದರ್ಭದಲ್ಲಿ ದಾಖಲೆಗಳು ನಕಲಿ ಎಂದು ಗೊತ್ತಾಗಿದೆ ಎಂದು ಮ್ಯಾನೇಜರ್​ …

Read More »

‘ಧರ್ಮಸ್ಥಳವನ್ನು ಬಿಜೆಪಿ ನಮ್ಮ ಸ್ವತ್ತು ಅಂದಿಲ್ಲ, ಹಿಂದೂ ಸಮಾಜದ ಸ್ವತ್ತಿಗೆ ಕೈಹಾಕುವ ಪ್ರಯತ್ನವನ್ನು ಕಾಂಗ್ರೆಸ್ ಮಾಡ್ತಿದೆ’

ಹುಬ್ಬಳ್ಳಿ: ಧರ್ಮಸ್ಥಳವನ್ನು ಬಿಜೆಪಿ ನಮ್ಮ ಸ್ವತ್ತು ಅಂತ ಹೇಳಿಲ್ಲ. ಕಾಂಗ್ರೆಸ್ ಸಮಸ್ತ ಹಿಂದೂ ಸಮಾಜದ ಸ್ವತ್ತಿನಲ್ಲಿ ಕೈ ಹಾಕುವ ಪ್ರಯತ್ನ ಮಾಡುತ್ತಿದೆ. ದೇಶದ ಗುಡಿ-ಗುಂಡಾರಗಳ ದುಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಇಂದು ವರೂರಿನ ನವಗೃಹತೀರ್ಥ ಕ್ಷೇತ್ರದಲ್ಲಿ ಮಾಧ್ಯಮಗಳ ಜೊತೆ ‌ಮಾತನಾಡಿದ ಅವರು, ಕುಕ್ಕರ್ ಬ್ಲಾಸ್ಟ್ ಮಾಡಿದ ಭಯೋತ್ಪಾದಕರು ಸಹೋದರರಾಗಿದ್ದಾರೆ.‌ ಮುಸ್ಲಿಂ ಲೀಗ್, ಪಿಎಫ್​​ಐ ಜೊತೆಗೆ ಸಂಪರ್ಕವಿರುವುದು ನಿಮಗೆ ಬಹಳ ಸಂತೋಷವಾಗುತ್ತದೆ. ಯಾವುನೋ‌ …

Read More »

ಅಗ್ನಿ ಅವಘಡದಲ್ಲಿ ಐವರ ಸಾವು ಪ್ರಕರಣ: ಕಟ್ಟಡದ ಇಬ್ಬರು ಮಾಲೀಕರು ಪೊಲೀಸ್ ವಶಕ್ಕೆ

ಬೆಂಗಳೂರು: ಅಗ್ನಿ ಅವಘಡದಲ್ಲಿ ಐವರು ಸಜೀವ ದಹನವಾದ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರಿಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ದುರಂತ ಸಂಭವಿಸಿದ ಕಟ್ಟಡದ ಮಾಲೀಕರಾದ ಬಾಲಕೃಷ್ಣಯ್ಯ ಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಅವರನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ (ಆಗಸ್ಟ್ 16) ನಸುಕಿಜಾವ 3 ಗಂಟೆ ಸುಮಾರಿಗೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್ ಪೇಟೆಯಲ್ಲಿ ಸಂಭವಿಸಿದ …

Read More »

ಭಾರಿ ಮಳೆ ಮುನ್ಸೂಚನೆ, ರೆಡ್​ ಅಲರ್ಟ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು: ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಸೋಮವಾರ (ಆ.18) ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಅವರ ಮುನ್ಸೂಚನೆಯಂತೆ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಸೋಮವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ …

Read More »

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಪೂರ್ವಭಾವಿ ಸಭೆ

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದೆ. ಶ್ರೀ ಅಪ್ಪಣಗೌಡ ಪಾಟೀಲ ಅವರ ದೂರದೃಷ್ಟಿಯ ಪರಿಣಾಮವಾಗಿ ಆರಂಭವಾದ ಈ ಸಹಕಾರಿ ಸಂಘವು, ರೈತರ ಹಾಗೂ ಸಾಮಾನ್ಯ ಜನರ ಬೆಳವಣಿಗೆಗಾಗಿ ಸದಾ ಶ್ರಮಿಸಿರುವ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂಬರುವ ಈ ಚುನಾವಣೆ ಆ ದಿಸೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದಲೇ ನಾಳೆಯಿಂದ ಪ್ರಚಾರ ಪ್ರಾರಂಭಿಸಿ, …

Read More »