ವಿಜಯಪುರ, ಏಪ್ರಿಲ್ 27: ನಿವೃತ್ತ ಡಿಜಿಪಿ ಓಂಪ್ರಕಾಶ ಅವರನ್ನು ಅವರ ಪತ್ನಿಯೇ (wife) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಈ ಮಧ್ಯೆ ಅದೇ ಮಾದರಿಯಲ್ಲಿ ವಿಜಯಪುರ ನಗರದಲ್ಲಿ ಪತ್ನಿಯೇ ಪತಿ (husband) ಕತ್ತಿಗೆ ಚಾಕು ಹಾಕಿ ಕೊಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಇಂದು ನಸುಕಿನ ಜಾವ ನಗರದ ಆಲಕುಂಟೆ ನಗರದಲ್ಲಿರುವ ಮನೆಯಲ್ಲಿ ಪತ್ನಿ ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜೀತ್ ರಾಠೋಡ್ ನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ. ಪತಿ ಗಾಢ ನಿದ್ರೆಯಲ್ಲಿದ್ದಾಗ …
Read More »Monthly Archives: ಏಪ್ರಿಲ್ 2025
ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ (Aishwarya gowda) ಪ್ರಕರಣದಲ್ಲಿ ಇಡಿ ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರು, (ಏಪ್ರಿಲ್ 27): ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ (Aishwarya gowda) ಪ್ರಕರಣದಲ್ಲಿ ಇಡಿ ತನಿಖೆ ಚುರುಕುಗೊಳಿಸಿದ್ದಾರೆ. ಇಡಿ (Enforcement Directorate) ಅಧಿಕಾರಿಗಳು ಐಶ್ವರ್ಯಾ ಗೌಡ, ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಹಾಗೂ ಶಿಲ್ಪಾಗೌಡ ನಿವಾಸ ಸೇರಿ 14 ಕಡೆ ದಾಳಿ ನಡೆಸಿದ್ದು, ಈ ವೇಳೆ ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದಾರೆ. ಅಲ್ಲದೆ ಶಾಸಕ ವಿನಯ್ ಕುಲಕರ್ಣಿ, ಐಶ್ವರ್ಯಾಗೌಡ ನಂಟಿನ ರಹಸ್ಯ ಬಯಲಾಗಿದ್ದು, ಇಬ್ಬರೂ ಕೋಟ್ಯಂತರ ರೂ. …
Read More »ಬೆಳಗಾವಿಯಲ್ಲೂ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಬಲು ಜೋರು
ಬೆಳಗಾವಿಯಲ್ಲೂ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಬಲು ಜೋರು ಬೆಟ್ಟಿಂಗ್ ಅಡ್ಡೆ ಮೇಲೆ ಬೆಳಗಾವಿ ಸಿಇಎನ್ ಠಾಣೆ ಪೊಲೀಸರ ದಾಳಿ ಬೆಳಗಾವಿಯಲ್ಲಿ ಇತ್ತಿಚೆಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿ ನಡೆದಿದೆ. ಸಿಇಎನ್ ಪೊಲೀರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದು, ಮತ್ತೋರ್ವ ಪರಾರಿ ಆರೋಪಿಗಾಗಿ ಬಲೆ ಬಿಸಿದ್ದಾರೆ. ಬೆಳಗಾವಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್’ನಲ್ಲಿ ತೊಡಗಿರುವವರಿಗೆ ಸಿ.ಇ.ಎನ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಸಿಇಎನ್ ಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ನಗರದ ಸಿಂಧಿ ಕಾಲನಿಯಲ್ಲಿರುವ ಬೆಟ್ಟಿಂಗ್ ಅಡ್ಡೆ …
Read More »ಏಳುವರೆ ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧನಿಂದ ಲೈಂಗಿಕ ದೌರ್ಜನ್ಯ ಆರೋಪ
ಹಾವೇರಿ: ಮನೆ ಮುಂದೆ ಆಟವಾಡುತ್ತಿದ್ದ ಏಳೂವರೆ ವರ್ಷದ ಬಾಲಕಿಯ ಮೇಲೆ 60 ವರ್ಷದ ವೃದ್ಧನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಶಿಗ್ಗಾವಿ ತಾಲೂಕು ಹುಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಘಟನೆ ನಡೆದಿದೆ. ಬಾಲಕಿಗೆ ಮಾವಿನಹಣ್ಣು ಕೊಡುವುದಾಗಿ ಆಮಿಷವೊಡ್ಡಿರುವ ಆರೋಪಿ, ಆಕೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ. ಹುಲಗೂರು ಪೊಲೀಸ್ ಠಾಣೆಯಲ್ಲಿ ಶನಿವಾರ …
Read More »ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ…
ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ… ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ; ಸಿಎಂ ಸಿದ್ಧರಾಮಯ್ಯ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ… ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ ಏನೇ ಕ್ರಮಕೈಗೊಂಡರೂ ಹೋದ ಜೀವಗಳು ಮರಳಿ ಬರಲಿವೇಯೇ?? ಮೈಸೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ‘ಪಾಕಿಸ್ತಾನದ ಜೊತೆ ಯುದ್ದದ ಅನಿವಾರ್ಯತೆ ಇಲ್ಲ, ನಾವು ಶಾಂತಿಯ ಪರವಾಗಿ ಇರುವವರು, ಆದರೆ ಪೆಹಲ್’ಗಾಮ್ ಉಗ್ರದ ದಾಳಿಯ ವಿಚಾರಕ್ಕೆ …
Read More »8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಈಜುಪಟುಗಳ ಸಾಧನೆ…
8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಈಜುಪಟುಗಳ ಸಾಧನೆ… ವಿಜಯದುರ್ಗದ ಜೆಐಎಂ ಈಜು ಅಕಾಡೆಮಿಯ ವತಿಯಿಂದ 8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆ 2025ರಲ್ಲಿ ಬೆಳಗಾವಿಯ ಈಜುಪಟುಗಳು ಸಾಧನೆಯನ್ನು ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದ ರಾಮನಮಳಾದಲ್ಲಿ ವಿಜಯದುರ್ಗದ ಜೆಐಎಂ ಈಜು ಅಕಾಡೆಮಿಯ ವತಿಯಿಂದ 8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆ 2025ನ್ನು ಇತ್ತಿಚೆಗೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ದುರ್ಗಾಮಾತಾ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಮಂಡಲ, ವಿಜಯದುರ್ಗ ಆಯೋಜಿಸಿದ್ದ 2 ಕಿ.ಮೀ. …
Read More »ಮರಾಠಾ ಮಂಡಳ ಪಾಲಿಟೆಕ್ನಿಕ್ ಪ್ರಾಂಶುಪಾಲರ ಕಾರ್ಯಕ್ಕೆ ಮನ್ನಣೆ
ಮರಾಠಾ ಮಂಡಳ ಪಾಲಿಟೆಕ್ನಿಕ್ ಪ್ರಾಂಶುಪಾಲರ ಕಾರ್ಯಕ್ಕೆ ಮನ್ನಣೆ ರವಿಕುಮಾರ್ ಸೂರ್ಯವಂಶಿ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವ ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ರವಿಕುಮಾರ್ ಸೂರ್ಯವಂಶಿ ಅವರಿಗೆ ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಆಡಳಿತ ಮತ್ತು ಸಾಮಾಜಿಕ ಚಟುವಟಿಕೆಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ತಾಜ್ ಪಶ್ಚಿಮ ಹೋಟೆಲ್‌ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ. ಆರ್. ಚಂದ್ರಶೇಖರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾಲೇಜಿನ …
Read More »ಬೆಳಗಾವಿ : ವಿಶ್ವ ಪಶು ವೈದ್ಯಕೀಯ ದಿನಾಚರಣೆ..
ಬೆಳಗಾವಿ : ವಿಶ್ವ ಪಶು ವೈದ್ಯಕೀಯ ದಿನಾಚರಣೆ.. ಜಾನುವಾರುಗಳ ಉದರ ಸಂಬಂಧಿ ಕಾಯಿಲೆ ಪತ್ತೆ ಮತ್ತು ಚಿಕಿತ್ಸೆ ಕುರಿತು ತಾಂತ್ರಿಕ ಸಮ್ಮೇಳನ.. ಕರ್ನಾಟಕ ಸರ್ಕಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳಗಾವಿ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಅಂಗವಾಗಿ ಜಾನುವಾರಗಳಲ್ಲಿ ಉದರ ಸಂಬಂಧಿ, ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸೆ ಕುರಿತು …
Read More »ಯಳ್ಳೂರು ಐತಿಹಾಸಿಕ ಗ್ರಾಮ…ಸ್ವಾತಂತ್ರ್ಯಪೂರ್ವದಿಂದಲೂ ಇಲ್ಲಿ ನಡೆದಿದೆ ಶಿಕ್ಷಣ ಕ್ರಾಂತಿ; ಮಹಾ ಮಾಜಿ ಸಿಎಂ ಶರದ್’ಚಂದ್ರ ಪವಾರ್
ಯಳ್ಳೂರು ಐತಿಹಾಸಿಕ ಗ್ರಾಮ…ಸ್ವಾತಂತ್ರ್ಯಪೂರ್ವದಿಂದಲೂ ಇಲ್ಲಿ ನಡೆದಿದೆ ಶಿಕ್ಷಣ ಕ್ರಾಂತಿ; ಮಹಾ ಮಾಜಿ ಸಿಎಂ ಶರದ್’ಚಂದ್ರ ಪವಾರ್ ಯಳ್ಳೂರ ಗ್ರಾಮದ ಸರ್ಕಾರಿ ಮರಾಠಿ ಮಾದರಿ ಶಾಲೆಯ 150ನೇ ವಾರ್ಷಿಕೋತ್ಸವ ಯಳ್ಳೂರ ಗ್ರಾಮವು ಇತಿಹಾಸವನ್ನು ನಿರ್ಮಿಸುವ ಗ್ರಾಮವಾಗಿದ್ದು, ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣಕ್ಕಾಗಿ ಒತ್ತು ನೀಡಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಶರದ್’ಚಂದ್ರಜೀ ಪವಾರ್ ಹೇಳಿದರು. ಇಂದು ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಸರ್ಕಾರಿ ಮರಾಠಿ ಮಾದರಿ ಶಾಲೆಯ 150ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ವೇದಿಕೆ …
Read More »ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ “ಫೂಡ್ ಫೆಸ್ಟಿವಲ್”
ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ “ಫೂಡ್ ಫೆಸ್ಟಿವಲ್” ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ ಫೂಡ್ ಫೆಸ್ಟಿವಲ್’ನ್ನು ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ, ಕಾಲೇಜು ವಿದ್ಯಾರ್ಥಿಗಳು ವಿವಿಧ ರಾಷ್ಟ್ರೀಯ ಮತ್ತು ಸ್ಥಳೀಯ ಖಾದ್ಯಗಳನ್ನೊಳಗೊಂಡ ಮಳಿಗೆಗಳನ್ನು ನಿರ್ಮಿಸಿ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಆಹಾರವನ್ನು ಮಾರಾಟ ಮಾಡಿದರು. ಅಲ್ಲದೇ ಆ ಆಹಾರದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಅದರಲ್ಲಿ ಮಜ್ಜಿಗೆ, ಸೊಲಕಡಿ, ಘಾವನ್, ಆಲೂ ವಡಿ, ಝೂಣಕಾ ಭಾಕರ್, ದಹಿ ಭಾತ್ , …
Read More »