ಬೆಂಗಳೂರು : ಧರ್ಮದ ಆಧಾರದ ಮೇಲೆ ಜನರನ್ನು ಗುರುತಿಸಿ ಟಾರ್ಗೆಟ್ ಮಾಡಿದ್ದು ಕ್ರೂರ ಕೃತ್ಯವಾಗಿದೆ ಎಂದು ಸಚಿವ ಆರ್. ಬಿ. ತಿಮ್ಮಾಪುರ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ಕೃತ್ಯವನ್ನು ಇಂದು ಖಂಡಿಸಿದ್ದಾರೆ. ನಿನ್ನೆ ಬಾಗಲಕೋಟೆಯಲ್ಲಿ ಪಹಲ್ಗಾಮ್ ಉಗ್ರರ ಅಟ್ಟಹಾಸ ವಿಚಾರವಾಗಿ ಮಾತನಾಡುತ್ತಾ, ಧರ್ಮ ಕೇಳಿ ಹೊಡೆಯೋಕಾಗುತ್ತಾ, ಧರ್ಮ ಕೇಳಿ ಹೊಡೆಯುವಷ್ಟು ವ್ಯವಧಾನ ಯಾರಿಗೂ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ …
Read More »Monthly Archives: ಏಪ್ರಿಲ್ 2025
ಮನೆ ಬಳಿ ಪ್ರತ್ಯಕ್ಷವಾದ 15 ಅಡಿ ಉದ್ದದ ಮೊಸಳೆಯನ್ನು ಯುವಕರ ತಂಡ ಹರಸಾಹಸಪಟ್ಟು ಸೆರೆ ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿದೆ.
ಚಿಕ್ಕೋಡಿ: ತೋಟದ ಮನೆ ಬಳಿ ಬಂದ ಬೃಹತ್ ಗಾತ್ರದ ಮೊಸಳೆಯನ್ನು ಯುವಕರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ. ಸುಟ್ಟಟ್ಟಿ ಗ್ರಾಮದ ಆಲಗೂರ ತೋಟದ ಮನೆ ಬಳಿ 15 ಅಡಿ ಉದ್ದದ ಮೊಸಳೆ ದಿಢೀರ್ ಪ್ರತ್ಯಕ್ಷವಾಗಿ, ಆತಂಕ ಸೃಷ್ಟಿಸಿದೆ. ನಂತರ ನಾಲ್ಕೈದು ಯುವಕರು ಸೇರಿಕೊಂಡು ಮೊಸಳೆಯನ್ನು ಕೃಷಿ ಜಮೀನಿನ ಕಡೆ ಕೊಂಡೊಯ್ದು ಹಗ್ಗದಲ್ಲಿ ಕಟ್ಟಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. …
Read More »ರಿಕ್ಕಿ ರೈ ಮೇಲಿನ ಗುಂಡಿನ ದಾಳಿ: ವಿಚಾರಣೆಗೆ ಹಾಜರಾದ ಮುತ್ತಪ್ಪ ರೈ ಎರಡನೇ ಪತ್ನಿ
ರಾಮನಗರ: ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದ ಎರಡನೇ ಆರೋಪಿಯಾಗಿರುವ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಅವರು ವಿಚಾರಣೆಗಾಗಿ ಬಿಡದಿ ಪೊಲೀಸ್ ಠಾಣೆಗೆ ಭಾನುವಾರ ಹಾಜರಾಗಿದ್ದರು. ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಅನುರಾಧ ಅವರು ಎ2 ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ತಮ್ಮ ವಕೀಲರ ಜೊತೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಬಿಡದಿ …
Read More »ಬೆಳಗಾವಿಯ ಮೇಲ್ಸೇತುವೆಗೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ…
ಬೆಳಗಾವಿಯ ಮೇಲ್ಸೇತುವೆಗೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ… ಬೆಳಗಾವಿಯ ಮೇಲ್ಸೇತುವೆಗೆ ಬಸವ ಜಯಂತಿಯ ಹಿನ್ನೆಲೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ ಮಾಡಿ, ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಬೆಳಗಾವಿಯ ಮೇಲ್ಸೇತುವೆಗೆ ಬಸವ ಜಯಂತಿಯ ಹಿನ್ನೆಲೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ ಮಾಡಿ, ಸಂಸದ ಜಗದೀಶ್ ಶೆಟ್ಟರ್, ದಕ್ಷಿಣ ಶಾಸಕ ಅಭಯ್ ಪಾಟೀಲ್, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಮಾಜಿ …
Read More »ಬೆಳಗಾವಿಯಲ್ಲಿ ರ್ಯಾಪಿಡೋ ಬೈಕ್ ವಿರುದ್ಧ ತಿರುಗಿ ಬಿದ್ದ ಆಟೋ ಚಾಲಕರು!
ಬೆಳಗಾವಿಯಲ್ಲಿ ರ್ಯಾಪಿಡೋ ಬೈಕ್ ವಿರುದ್ಧ ತಿರುಗಿ ಬಿದ್ದ ಆಟೋ ಚಾಲಕರು! ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರ್ಯಾಪಿಡೋ ವರ್ಸಸ್ ಆಟೋ ಚಾಲಕರ ಜಪಾಪಟಿ ನಡೆದು ಹೋಗಿದೆ. ಮೊದಲೇ ಶಕ್ತಿ ಯೋಜನೆ ರಿಕ್ಷಾ ಚಾಲಕರ ಶಕ್ತಿ ಕುಂದಿಸಿದ್ದು, ಬೆಳಗಾವಿ ನಗರದಲ್ಲಿ ರ್ಯಾಪಿಡೋ ಬೈಕ್ ಸರ್ವಿಸ್ ಬೇಡ ಎಂದಿದ್ದಾರೆ. ಹೌದು, ಬೆಳಗಾವಿ ನಗರದಲ್ಲಿ ನೂತನವಾಗಿ ರ್ಯಾಪಿಡೋ ಬೈಕ್ ಸರ್ವಿಸ್ ಕಾಲಿಟ್ಟಿದ್ದಕ್ಕೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರ್ಯಾಪಿಡೋ …
Read More »ಗೋಕಾಕ : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನಿಗೆ ಥಳಿತ…
ಗೋಕಾಕ : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನಿಗೆ ಥಳಿತ….. ಪಿಎಸ್ಐ ವಿರುದ್ಧ ಎಸ್ಪಿಗೆ ದೂರು ನೀಡಿದ ಯುವಕ… ಪೆಹಲ್ಗಾಂ ಘಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಥಳಿಸಿದ್ದರಿಂದ ಪಿಎಸ್ಐ ವಿರುದ್ಧ ಯುವಕ ಎಸ್ ಪಿ ಗೆ ದೂರು ನೀಡಿದ್ದಾನೆ ಪಹಲ್ಗಾಂನಲ್ಲಿ ಗುಂಡಿನ ದಾಳಿಯ ನಂತರ ಸ್ಥಳೀಯ ಮುಸ್ಲಿಮರು ಹತ್ಯೆಯಾದವರ ಕುಟುಂಬ ಸದಸ್ಯರಿಗೆ ಸಹಾಯ ಸಹಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋಕಾಕ್ ನಿವಾಸಿ ಶಾನುಲ್ ಸೌದಾಗರ ಎಂಬ …
Read More »ತ್ರಯಂಬಕೇಶವದಿಂದ ಕಾಲ್ನಡಿಗೆಯಲ್ಲಿ ವಿಜಯಪುರಕ್ಕೆ ಆಗಮಿಸಿದ ಬಸವ ಜ್ಯೋತಿ
ತ್ರಯಂಬಕೇಶವದಿಂದ ಕಾಲ್ನಡಿಗೆಯಲ್ಲಿ ವಿಜಯಪುರಕ್ಕೆ ಆಗಮಿಸಿದ ಬಸವ ಜ್ಯೋತಿ ಬಸವ ಜಯಂತಿ ಹಿನ್ನೆಲೆಯಲ್ಲಿ ವಿಜಯಪುರ ನಗರಕ್ಕೆ ಬಸವೇಶ್ವರ ಜ್ಯೋತಿ ಯಾತ್ರೆ ಆಗಮಿಸಿತು. ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದ ಬಸವೇಶ್ವರ ದೇವಸ್ಥಾನ ಯುವ ಕಮಿಟಿಯ 50 ಜನ ಮಹಾರಾಷ್ಟ್ರದ ತೃಯಂಭಕೇಶವ ಕ್ಷೇತ್ರದಿಂದ “ಬಸವ ಜ್ಯೋತಿ” ಯನ್ನು ಕಾಲ್ನಡಿಗೆ ಮುಖಾಂತರ ಜ್ಞಾನ ಯೋಗಾಶ್ರಮಕ್ಕೆ ಆಗಮಿಸಿದರು. ಪೂಜ್ಯ ಬಸವಲಿಂಗ ಸ್ವಾಮೀಜಿಗಳು ಜ್ಯೋತಿಯನ್ನು ಸ್ವಾಗತಿಸಿ ಯುವಕರಿಗೆ ಬಸವೇಶ್ವರ ವಚನ ಸಾಹಿತ್ಯದ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಅಖಿಲ ಭಾರತ …
Read More »ಪ್ರೇಮ ವೈಫಲ್ಯ ಬ್ರಿಡ್ಜ್ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ
ಪ್ರೇಮ ವೈಫಲ್ಯ ಬ್ರಿಡ್ಜ್ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಯುವಕನೋರ್ವ ದೇವರಗುಡಿ ಹಾಳ ರಸ್ತೆಯ ಹತ್ತಿರದ ನ್ಯಾಶನಲ್ ಹೈವೇ ಬ್ರಿಡ್ಜ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕಿಕೊಂಡ ಘಟನೆ ನಡೆದಿದೆ. ನಗರದ ಹೆಗ್ಗೆರಿ ಜಗದೀಶ್ ನಗರ ನಿವಾಸಿ 21 ವರ್ಷದ ಅವಿನಾಶ್ ಮುದ್ದಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವತಿಯು ಪ್ರೇಮದ ವಿಷಯದಲ್ಲಿ ನಿರಾಕರಣೆ ಮಾಡಿದ ವಿಚಾರಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾನೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ …
Read More »ತಿರುವಿನಲ್ಲಿ KSRTC ಬಸ್ ಬ್ರೇಕ್ ಫೇಲ್ ಚಾಲಕನ ಸಮಯ ಪ್ರಜ್ಞೆ ಹಾಗೂ ಐಡಿಯಾಕ್ಕೆ ಪ್ರಯಾಣಿಕರು ಕೃತಜ್ಞತೆ
ಚಾಮರಾಜನಗರ, (ಏಪ್ರಿಲ್ 27): ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ KSRTC ಬಸ್ ಬ್ರೇಕ್ ಫೇಲ್ ಆಗಿದೆ. ಕೂಡಲೇ ಎಚ್ಚೆತ್ತ ಡ್ರೈವರ್ ಬಸ್ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಇದರಿಂದ ಬಸ್ ನಿಂತುಕೊಂಡಿದ್ದು, ಅದೃಷ್ಟವಶಾತ್ ಬಸ್ನಲ್ಲಿ 60ಕ್ಕೂ ಹೆಚ್ಚು ಜನರು ಬಚಾವ್ ಆಗಿದ್ದಾರೆ. KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್, ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ಈ ವೇಳೆ ಮಲೆ ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದೆ. …
Read More »ನೀರಿಲ್ಲಂತ ಮನೀಗೆ ಬೀಗರು ಬರುತ್ತಿಲ್ಲರಿ,
ಗದಗ, ಏಪ್ರಿಲ್ 27: ಗದಗ-ಬೆಟಗೇರಿ (Gadag-Betageri) ಅವಳಿ ನಗರದಲ್ಲಿ ನೀರಿಗಾಗಿ (Water) ಹಾಹಾಕರ ಶುರುವಾಗಿದೆ. ಎರಡು ತಿಂಗಳಿಂದ ನಗರಸಭೆ ಹನಿ ನೀರು ಪೂರೈಕೆ ಮಾಡಿಲ್ಲ. ಹೀಗಾಗಿ, ರೊಚ್ಚಿಗೆದ್ದ ಮಹಿಳೆಯರು ಖಾಲಿ ಕೊಡಗಳ ಸಮೇತ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇಕಡಾ 100ರಷ್ಟು ಟ್ಯಾಕ್ಸ್ ತುಂಬುತ್ತೇವೆ. ಆದರೆ, ನಮಗೇಕೆ ನೀರು ಕೊಡಲ್ಲ ಅಂತ ನಗರಸಭೆಯನ್ನು ಮಹಿಳೆಯರು ಪ್ರಶ್ನೆ ಮಾಡಿದ್ದಾರೆ. ಶಾಸಕರು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಬಿರು ಬೇಸಿಗೆ ನೆತ್ತಿ ಸುಡುತ್ತಿದೆ. ಉರಿ ಬಿಸಿಲಿಗೆ ಗಂಟಲು …
Read More »