Breaking News

Monthly Archives: ಏಪ್ರಿಲ್ 2025

ಕೊಪ್ಪಳದಲ್ಲಿ ಬಿರುಗಾಳಿ ಸಹಿತ ಮಳೆ: ಸಿಡಿಲು ಬಡಿದು ಇಬ್ಬರು ಸಾವು

ಕೊಪ್ಪಳ: ತಾಲೂಕಿನ ಹಲವೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಚುಕ್ಕನಕಲ್ ಬಳಿ ತೋಟದ ಮನೆಯಲ್ಲಿ ಜರುಗಿದೆ. ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ (62) ಸಾವನ್ನಪ್ಪಿದ ದುರ್ದೈವಿಗಳು. ಮಳೆ ಬರುವ ಸಂದರ್ಭದಲ್ಲಿ ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮುದ್ದಾಬಳ್ಳಿಯಲ್ಲಿ …

Read More »

ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ

ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ ಹಿಪ್ಪರಗಿ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 0.20 ಟಿಎಂಸಿ ನೀರು ಬಿಡುಗಡೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾದ ಹಿನ್ನಲೆ ನೀರಾವರಿ ಇಲಾಖೆಯಿಂದ ಹಿಪ್ಪರಗಿ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 0.20 ಟಿಎಂಸಿ ನೀರನ್ನು ಹರಿಬಿಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾದ ಹಿನ್ನಲೆ ಅಧಿಕಾರಿಗಳು ಹಿಪ್ಪರಗಿ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ ನೀರು …

Read More »

ಬೆಳಗಾವಿಯಲ್ಲಿ ಅಕ್ರಮ ಮದ್ಯ ದಾಸ್ತಾನು; ಶಹಾಪೂರ ಪೊಲೀಸರಿಂದ ದಾಳಿ 1,37,681 ರೂ ಮೌಲ್ಯದ 313.3 ಲೀಟರ್ ಗೋವಾ ಮದ್ಯ ವಶ

ಬೆಳಗಾವಿಯಲ್ಲಿ ಅಕ್ರಮ ಮದ್ಯ ದಾಸ್ತಾನು; ಶಹಾಪೂರ ಪೊಲೀಸರಿಂದ ದಾಳಿ 1,37,681 ರೂ ಮೌಲ್ಯದ 313.3 ಲೀಟರ್ ಗೋವಾ ಮದ್ಯ ವಶ ಗೋವಾ ರಾಜ್ಯದ ಮಧ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಮನೆಯ ಮೇಲೆ ಬೆಳಗಾವಿ ನಗರ ಶಹಾಪೂರ ಪೊಲೀಸರು ದಾಳಿ ಮಾಡಿದ್ದಾರೆ. 1,37,681 ರೂ ಮೌಲ್ಯದ ವಿವಿಧ ಕಂಪನಿಯ 313.3 ಲೀಟರ್ ಗೋವಾ ರಾಜ್ಯದ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಮಹಾದ್ವಾರ ರಸ್ತೆಯ ರಹಿವಾಸಿ ಸುಭಾಷ ಸುಧೀರ ಡೇ ಗೋವಾ ರಾಜ್ಯದ ಮದ್ಯವನ್ನು …

Read More »

ಕಟಾವಿಗೆ ಬಂದ ಕಬ್ಬಿಗೆ ಬೆಂಕಿ…ಪ್ರಕರಣ ದಾಖಲಾದ್ರೂ ಕ್ರಮಕೈಗೊಳ್ಳದ ಪೊಲೀಸರು…

ಕಟಾವಿಗೆ ಬಂದ ಕಬ್ಬಿಗೆ ಬೆಂಕಿ…ಪ್ರಕರಣ ದಾಖಲಾದ್ರೂ ಕ್ರಮಕೈಗೊಳ್ಳದ ಪೊಲೀಸರು… ಬೆಳಗಾವಿ ಎಸ್ಪಿಗೆ ದೂರು ನೀಡಿದ ಮುಲ್ಲಾ ಕುಟುಂಬ ಕಟಾವು ಮಾಡಬೇಕಿದ್ದ ಕಬ್ಬಿನ ಬೆಳೆಗೆ ಬೆಂಕಿ ಇಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಷ್ಟಕ್ಕೊಳಗಾದ ರೈತನ ಕುಟುಂಬ ಬೆಳಗಾವಿ ಎಸ್ಪಿ ಕಚೇರಿಗೆ ಆಗಮಿಸಿ ದೂರು ನೀಡಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನವಲಿಹಾಳ ಗ್ರಾಮದ ಯೂನಸ್ ಮುಲ್ಲಾ ಎಂಬುವವರ ಕಟಾವು ಮಾಡಬೇಕಿದ್ದ ಕಬ್ಬಿನ ಬೆಳೆಗೆ ಬೆಂಕಿ ಇಡಲಾಗಿದೆ. ಬೆಂಕಿಯಿಟ್ಟಿರುವ ಆರೋಪಿಗಳ ವಿರುದ್ಧ …

Read More »

ಗುಂಡೇನಟ್ಟಿ ಗ್ರಾಮದಲ್ಲಿ ಹಾಸ್ಯ ಪ್ರಧಾನ ಕನ್ನಡ ಸಾಮಾಜಿಕ ನಾಟಕವನ್ನು ಉದ್ಘಾಟಿಸಿದ ಶಾಸಕ ವಿಠ್ಠಲ ಹಲಗೇಕರ

ಗುಂಡೇನಟ್ಟಿ ಗ್ರಾಮದಲ್ಲಿ ಹಾಸ್ಯ ಪ್ರಧಾನ ಕನ್ನಡ ಸಾಮಾಜಿಕ ನಾಟಕವನ್ನು ಉದ್ಘಾಟಿಸಿದ ಶಾಸಕ ವಿಠ್ಠಲ ಹಲಗೇಕರ ಖಾನಾಪೂರ ತಾಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿ ಸಸ್ಸಿಗೆ ನೀರು ಹಾಕಿ, ರಿಬ್ಬನ್ ಕಟ್ ಮಾಡುವ ಮೂಲಕ ಇನ್ನಿತರ ಮುಖಂಡರೊಂದಿಗೆ ಸಾಮಾಜಿಕ ನಾಟಕ ಉದ್ಘಾಟನೆ ನೆರವೇರಿಸಿದ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ಅಧ್ಯಕ್ಷ ಶಾಸಕ ವಿಠ್ಠಲ ಹಲಗೇಕರ ತದನಂತರದಲ್ಲಿ ಮಾತನಾಡಿದ ಅವರು ಶ್ರೀ ಸತ್ಯಮ ದೇವಿ ಹಾಗೂ ಶ್ರೀ ಕರೇಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಗುರು …

Read More »

ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಉಪಾಧ್ಯಕ್ಷರಾಗಿ ಸರ್ವೋತ್ತಮ ಜಾರಕಿಹೊಳಿ ಆಯ್ಕೆ

ಗೋಕಾಕ್ – ರಾಜ್ಯ ವಾಲಿಬಾಲ್ ಅಸೋಸಿಯೇಷನ್ ನೂತನ ಉಪಾಧ್ಯಕ್ಷರಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಸೆಂಚುರಿ ಕ್ಲಬ್ ನಲ್ಲಿ ಕಳೆದ ೫ ರಂದು ಜರುಗಿದ ವಾಲಿಬಾಲ್ ಅಸೋಸಿಯೇಷನ್ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆಯು ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಸೋಸಿಯೇಷನ್ ಅಧ್ಯಕ್ಷ, ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರು ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸರ್ವೋತ್ತಮ ಜಾರಕಿಹೊಳಿ ಅವರಿಗೆ ಹೂ ಗುಚ್ಛ …

Read More »

ಯುವಕನೋರ್ವನಿಗೆ ಚಾಕು ಇರಿತ: 6 ಆರೋಪಿಗಳ ಬಂಧನ- ಹು-ಧಾ ಪೊಲೀಸ್ ‌ಕಮಿಷನರ್

ಹುಬ್ಬಳ್ಳಿ: ಯುವಕನೋರ್ವನಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌ ಎಂದು ಹು-ಧಾ ಪೊಲೀಸ್ ‌ಕಮಿಷನರ್ ಎನ್.ಶಶಿಕುಮಾರ್ ‌ಹೇಳಿದರು. ನಗರದಲ್ಲಿಂದು ಮಾಧ್ಯಮಗಳಿಗೆ ‌ಮಾಹಿತಿ ನೀಡಿದ ಅವರು, ಇಬ್ರಾಹಿಂ ಎಂಬಾತನಿಗೆ ತಮ್ಮ ಗುಂಪಿಗೆ ಸೇರಿಕೊಳ್ಳಲು ಹೇಳಿದ್ದು, ಅದನ್ನು ನಿರಾಕರಿಸಿದ ಕಾರಣಕ್ಕಾಗಿ ಏ. 9ರಂದು ರಂದು ರಾತ್ರಿ 9:30 ಗಂಟೆಗೆ ಹುಬ್ಬಳ್ಳಿಯ ಬಾಕಳೆಗಲ್ಲಿ ಹತ್ತಿರ ಆರೋಪಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದರು ಎಂದಿದ್ದಾರೆ. ಈ ಕುರಿತು ಹುಬ್ಬಳ್ಳಿ …

Read More »

ಕೊಲೆಗಾರನ ಕಾಲಿಗೆ ಪೊಲೀಸ್​ ಗುಂಡೇಟು

ವಿಜಯನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿ, ಸ್ಥಳ ಪಂಚನಾಮೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಆತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೊನ್ನೂರ ಅಲಿಯಾಸ್ ಹೊನ್ನೂರ ಸ್ವಾಮಿ (28) ಎನ್ನುವವನನ್ನು ಕೊಲೆ ಮಾಡಿರುವ ಘಟನೆ ಹೊಸಪೇಟೆ ನಗರದ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರದ …

Read More »

ಪ್ರೀತಿಸುತ್ತಿದ್ದ ಬಾಲಕಿಗೆ ಸಾರಾಯಿ ಕುಡಿಸಿ ಅತ್ಯಾಚಾರ

ಬೆಳಗಾವಿ: ಪ್ರೀತಿಸುತ್ತಿದ್ದ ಬಾಲಕಿಗೆ ತಾನೇ ಸಾರಾಯಿ ಕುಡಿಸಿ ಆಕೆಯ ಮೇಲೆ ಯುವಕಯೋರ್ವ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಬೇಕಿದೆ ಎಂದು ತಿಳಿಸಿದ್ದಾರೆ. ಆ ಪ್ರಮುಖ ಆರೋಪಿ ಅಪ್ರಾಪ್ತೆ ವಯಸ್ಸಿನ ಬಾಲಕಿಯನ್ನು ಪ್ರೀತಿಸುತ್ತಿದ್ದ. ಅಲ್ಲದೆ ಪದೇ …

Read More »

ಭಗವಾನ್ ಮಹಾವೀರರು ಜಗತ್ತಿಗೆ ಶಾಂತಿ, ಅಹಿಂಸೆ, ಕರುಣೆಯನ್ನು ಸಾರಿದ್ದಾರೆ: ರಾಜ್ಯಪಾಲ ಗೆಹ್ಲೋಟ್

ಹಾಸನ: ಮಾನವ ಕುಲದ ಲೋಕ ಕಲ್ಯಾಣಕ್ಕಾಗಿ ಮಹಾಪುರುಷರಾದ ಭಗವಾನ್ ಮಹಾವೀರರು ಇಡೀ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಕರುಣೆಯನ್ನು ಸಾರಿದ್ದಾರೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಶ್ರವಣಬೆಳಗೊಳ ಕ್ಷೇತ್ರದ ಚಾವುಂಡರಾಯ ಸಭಾಮಂಟಪದಲ್ಲಿ ಗುರುವಾರ ಶ್ರೀ ಜೈನ ಮಠದ ಆಡಳಿತ ಮಂಡಳಿ ಆಯೋಜಿಸಿದ್ದ ಭಗವಾನ್ ಮಹಾವೀರಸ್ವಾಮಿಯ 2624ನೇ ಜನ್ಮ ಕಲ್ಯಾಣ ಮಹೋತ್ಸವವನ್ನು ತೀರ್ಥಂಕರರಿಗೆ ಅರ್ಘ್ಯ, ಪುಷ್ಪಾರ್ಚನೆ ಸಮರ್ಪಣೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಭಗವಾನ್ ಮಹಾವೀರರು, ಭಗವಾನ್ ಬಾಹುಬಲಿ ರಾಜಕುಮಾರರಾಗಿ …

Read More »