Breaking News

Monthly Archives: ಮಾರ್ಚ್ 2025

ಸ್ನೇಹಮಯಿ ಕೃಷ್ಣ ಮತ್ತೆ ಕೋರ್ಟ್​ ಮೊರೆ

ಮೈಸೂರು/ಬೆಂಗಳೂರು, : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣವನ್ನು ದೂರುದಾರ ಸ್ನೇಹಮಯಿಕೃಷ್ಣ ಸುಮ್ಮನೇ ಬಿಡುವಂತೆ ಕಾಣುತ್ತಿಲ್ಲ. ಪ್ರಕರಣವನ್ನು ಕೊನೆವರೆಗೂ ತೆಗೆದುಕೊಂಡು ಹೋಗುವ ತೀರ್ಮಾನ ಮಾಡಿದ್ದು, ಇದೀಗ ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದ ಬಳಿಕ ಕೊಂಚ ರಿಲ್ಯಾಕ್ಸ್​ನಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಮತ್ತೆ ಟೆನ್ಷನ್ ಶುರುವಾದಂತಾಗಿದೆ. ಮುಡಾ ಹಗರಣ …

Read More »

ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಮೂವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ, ಮಾರ್ಚ್​ 5: ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ, ಟ್ರಕ್​ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಲಾರಿ ಚಾಲಕ ಹಾಗೂ ಕಲ್ಲಂಗಡಿ ಸಾಗಿಸುತ್ತಿದ್ದ ಟ್ರಕ್‌ನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಚಿತ್ರದುರ್ಗ ಡಿವೈಎಸ್​​ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ …

Read More »

ಪ್ರೇಮಿಗಳ ದುರಂತ ಸಾವು

ಬೆಳಗಾವಿ, (ಮಾರ್ಚ್ 04): ಪಾಗಲ್ ಪ್ರೇಮಿಯೊಬ್ಬ ಪ್ರೇಯಿಸಿಯ ಕತ್ತು ಸೀಳೆ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಶಹಾಪುರದ ನವಿಗಲ್ಲಿಯಲ್ಲಿ ನಡೆದಿದೆ. ಐಶ್ವರ್ಯಾ ಮಹೇಶ್ ಲೋಹಾರ(18) ಕೊಲೆಯಾದ ಯುವತಿ. ಇನ್ನು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರನನ್ನು ಪ್ರಶಾಂತ್ ಯಲ್ಲಪ್ಪ ಕುಂಡೇಕರ(29) ಎಂದು ಗುರುತಿಸಲಾಗಿದೆ. ಇಂದು (ಮಾರ್ಚ್​ 04) ಸಂಜೆ ಈ ಜೋಡಿ, ಐಶ್ವರ್ಯಾ ಚಿಕ್ಕಮ್ಮನ ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ನಂತರ …

Read More »

ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮಂಗಳವಾರ ರಾತ್ರಿ ಹಿಂದುಳಿದ ವರ್ಗಗಳ ಶಾಸಕರು ಸಭೆ ಬೇಡಿಕೆ ಪಟ್ಟಿಸಿದ್ಧ

ಬೆಂಗಳೂರು, ಮಾರ್ಚ್​ 5: ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮಂಗಳವಾರ ರಾತ್ರಿ ಹಿಂದುಳಿದ ವರ್ಗಗಳ ಶಾಸಕರು ಸಭೆ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ಸಿಎಂ ಹುದ್ದೆ ಕುರಿತ ಚರ್ಚೆ, ಬಣ ಜಗಳ ನಡೆಯುತ್ತಿರುವ ಬೆನ್ನಲ್ಲೇ ಈ ಸಭೆ ನಡೆದಿದೆ. ಸಭೆಯಲ್ಲಿ ಎಸ್​​ಸಿ, ಎಸ್​ಟಿ ಸಮುದಾಯಗಳ ಶಾಸಕರು ಬೇಡಿಕೆ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ. ಸಮುದಾಯದ ಬೇಡಿಕೆಗಳೇನು? ಎಸ್​​ಸಿ, ಎಸ್​ಟಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುವುದು. ಕರ್ನಾಟಕ …

Read More »

ಕನ್ನಡ ಸಾಹಿತ್ಯ ಪರಿಷತ್ತಿನ‌ ಕಾರ್ಯ ಚಟುವಟಿಕೆ ಮಾದರಿಯಾಗಿವೆ ಎಂದು ಬೆಳಗಾವಿ ಕೆಎಲ್ ಇ ಸಂಸ್ಥೆಯ ಖ್ಯಾತ ವೈದ್ಯ ಡಾ.ಸಂಗಮೇಶ ಕತ್ತಿ ಹೇಳಿದರು‌.

ಬೆಳಗಾವಿ- ಕನ್ನಡ ಸಾಹಿತ್ಯ ಪರಿಷತ್ತಿನ‌ ಕಾರ್ಯ ಚಟುವಟಿಕೆ ಮಾದರಿಯಾಗಿವೆ ಎಂದು ಬೆಳಗಾವಿ ಕೆಎಲ್ ಇ ಸಂಸ್ಥೆಯ ಖ್ಯಾತ ವೈದ್ಯ ಡಾ.ಸಂಗಮೇಶ ಕತ್ತಿ ಹೇಳಿದರು‌. ಬೆಳಗಾವಿಯ ರಾಮತೀರ್ಥ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತವತಿಯಿಂದ ದಿ.ಶ್ರೀಮತಿ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ಪುಸ್ತಕ ದತ್ತಿ ನಿಮಿತ್ಯ ವಿಜ್ಞಾನ ಉಪನ್ಯಾಸ ಹಾಗೂ ದತ್ತಿ ಪುಸ್ತಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು.ಕೆಟ್ಟ ಚಟಗಳನ್ನು ತ್ಯಜಿಸಿ …

Read More »

ಬಂಡೀಪುರಕ್ಕೆ ತೆರಳಿದ್ದ ಕುಟುಂಬ ನಿಗೂಢವಾಗಿ ನಾಪತ್ತೆ

ಚಾಮರಾಜನಗರ, ಮಾರ್ಚ್​ 04: ಗುಂಡ್ಲುಪೇಟೆ (Gundlupete) ತಾಲೂಕಿನ ಬಂಡೀಪುರಕ್ಕೆ (Bandipur) ತೆರಳಿದಿದ್ದ ಕುಟುಂಬವೊಂದು ನಿಗೂಢವಾಗಿ ನಾಪತ್ತೆಯಾಗಿದೆ. ಬಂಡೀಪುರ ಬಳಿಯ ಕಂಟ್ರಿ ಕ್ಲಬ್ ರೆಸಾರ್ಟ್‌ನಲ್ಲಿ ಕುಟುಂಬ ಭಾನುವಾರ (ಮಾ.02) ರಾತ್ರಿ ವಾಸ್ತವ್ಯ ಹೂಡಿತ್ತು. ಸೋಮವಾರ (ಮಾ.03) ಮಧ್ಯಾಹ್ನದಿಂದ ಕುಟುಂಬ ನಾಪತ್ತೆಯಾಗಿದೆ. ಬೆಂಗಳೂರು ಮೂಲದ ಜೆ.ನಿಶಾಂತ್ (40), ಪತ್ನಿ ಚಂದನಾ ಮತ್ತು 10 ವರ್ಷದ ಗಂಡು ಮಗು ನಾಪತ್ತೆಯಾಗಿದ್ದಾರೆ. ಜೆ.ನಿಶಾಂತ್ ಬ್ಯಾಗ್​ ಕಂಟ್ರಿ ಕ್ಲಬ್ ರೆಸಾರ್ಟ್​​ನಲ್ಲೇ ಇವೆ. ರೆಸಾರ್ಟ್​ನಲ್ಲಿ ಲಗೇಜ್ ಬಿಟ್ಟು ಮೂವರು ಕಾರಿನಲ್ಲಿ …

Read More »

ಕಾರಿನ ಗಾಜಿಗೆ ಆಟೋ ಚಾಲಕನಿಂದ ಯದ್ವಾತದ್ವಾ ಗುದ್ದು: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಅರೆಸ್ಟ್

ಬೆಂಗಳೂರು, ಮಾರ್ಚ್ 4: ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ರಸ್ತೆಯಲ್ಲಿ ಕೋಪದಿಂದ ಕಿರುಚಾಡುತ್ತಾ ಕಾರಿನ ಗಾಜಿನ ಮೇಲೆ ಯದ್ವಾತದ್ವಾ ಗುದ್ದಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋ ಗಮನಿಸಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ರೋಡ್​ರೇಜ್ ಪ್ರಕರಣಗಳಿಗೆ ನಗರದಲ್ಲಿ ಆಸ್ಪದ ನೀಡುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ಜತೆಗೆ, ಆಟೊ ಚಾಲಕನ ದುಂಡಾವರ್ತನೆಯ ಹಾಗೂ ಆತನನ್ನು ಬಂಧಿಸಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.ಆಟಫ ಚಾಲಕನ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿಯೂ ವ್ಯಾಪಕ …

Read More »

ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯ ಚಿಕಿತ್ಸಾ ಶುಲ್ಕ ಏರಿಕೆ, ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿ, ಮಾರ್ಚ್​ 04: ಹುಬ್ಬಳ್ಳಿಯ (Hubballi) ಕಿಮ್ಸ್​ (KIMS) ಆಸ್ಪತ್ರೆ ಉತ್ತರ ಕರ್ನಾಟಕ ಜನರ ಸಂಜೀವಿನಿಯಾಗಿದೆ. ನಿತ್ಯ ನೂರಾರು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇದೀಗ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸಾ ಶುಲ್ಕ ಏರಿಕೆಯಾಗಿದೆ. ಹೊರ ರೋಗಿಗಳ ನೊಂದಣಿ ವಿಭಾಗದ ಶುಲ್ಕ 10 ರೂಪಾಯಿಂದ 20 ರೂಪಾಯಿಗೆ ಏರಿಕೆಯಾಗೊದೆ. ಒಳ ರೋಗಿಗಳ ನೊಂದಣಿ ವಿಭಾಗದ ಶುಲ್ಕ 30 ರೂಪಾಯಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಜೊತೆಗೆ ಎಕ್ಸರೇ, ಸ್ಕ್ಯಾನಿಂಗ್, ಜನನ, ಮರಣ ಪ್ರಮಾಣ …

Read More »

ಕೊಪ್ಪಳ ಜನರ ಹೋರಾಟಕ್ಕೆ ಸಂದ ಜಯ: ಬಲ್ಡೋಟ ಪ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ

ಕೊಪ್ಪಳ, (ಮಾರ್ಚ್ 04): ನಗರದಲ್ಲಿ ಬಲ್ಟೋಟ ಸ್ಟೀಲ್ ಪ್ಯಾಕ್ಟರಿಗೆ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು. ಈಗಾಗಲೇ ಕೊಪ್ಪಳ ಬಂದ್ ಕೂಡಾ ನಡೆಸಿದ್ದಾರೆ. ಸ್ವತ ಗವಿಮಠದ ಸ್ವಾಮೀಜಿ, ಯಾವುದೇ ಕಾರಣಕ್ಕೂ ಪ್ಯಾಕ್ಟರಿ ಆರಂಭವಾಗಬಾರದು ಎಂದು ಬೀದಿಗಳಿದು ಹೋರಾಟ ಮಾಡಿದ್ದಾರೆ. ಈ ಸಂಬಂಧ ಇಂದು(ಮಾರ್ಚ್ 04) ಜನಪ್ರತಿನಿಧಿಗಳು ಮತ್ತು ಹೋರಾಟಗಾರರ ನಿಯೋಗ, ಸಿಎಂ ಭೇಟಿ ಮಾಡಿದ್ದು, ಕೂಡಲೇ ಫ್ಯಾಕ್ಟರಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸಿಎಂ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲಾ ಜನರು …

Read More »

21 ಕೋಟಿಯಿಂದ 3.71 ಲಕ್ಷ ಕೋಟಿವರೆಗಿನ ಬಜೆಟ್ ಇತಿಹಾಸ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಇದೇ ಮಾರ್ಚ್‌ 7ರಂದು ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದ ಬಜೆಟ್ ಇತಿಹಾಸ 21 ಕೋಟಿ ರೂ‌. ನಿಂದ ಆರಂಭವಾಗಿ ಇದೀಗ 3.71 ಲಕ್ಷ ಕೋಟಿ ರೂ.ಗೆ ತಲುಪಿದೆ. ರಾಜ್ಯ ಬಜೆಟ್ ಮೈಲಿಗಲ್ಲುಗಳ ವಿಶೇಷ ವರದಿ ಇಲ್ಲಿದೆ. ಕರ್ನಾಟಕ ದೇಶದ ಮಂಚೂಣಿಯಲ್ಲಿನ ಪ್ರಗತಿಶೀಲ ರಾಜ್ಯ. ಆರ್ಥಿಕವಾಗಿ ಸದೃಢವಾಗುವ ಮೂಲಕ ಕರ್ನಾಟಕ ದೇಶದ ಅಭಿವೃದ್ಧಿಶೀಲ ರಾಜ್ಯಗಳಲ್ಲಿ ಅಗ್ರಗಣ್ಯವಾಗಿದೆ. …

Read More »