ಬೆಂಗಳೂರು, ಮಾರ್ಚ್ 12 : ಸದನದಲ್ಲಿ ಹಲವಾರು ಚರ್ಚೆಗಳಾಗಬೇಕಿದೆ, ಅನುದಾನ ಹಂಚಿಕೆಯಲ್ಲಿ (grants distribution) ಯಾವುದಾದರೂ ಪ್ರಾಂತ್ಯಕ್ಕೆ ಅನ್ಯಾಯವಾಗಿದೆಯಾ ಅಂತ ಚರ್ಚಿಸಬೇಕಿದೆ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿದೆ, ಇದನ್ನೆಲ್ಲ ಬಿಟ್ಟು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ನೀಡುತ್ತಿರುವ ಸಂಬಳದ ಬಗ್ಗೆ ಬಿಜೆಪಿ ಮುಖಂಡರು ರ‍್ಯಾಲಿ ನಡೆಸಿ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸಮಿತಿ ರಚನೆಯಾಗಿ ಒಂದೂವರೆ ವರ್ಷ ಕಳೆದಿದೆ, ಇದುವರೆಗೆ ಅವರೇನು ನಿದ್ರಿಸುತ್ತಿದ್ದರೇ ಎಂದು ಲಕ್ಷ್ಮಿ ಹೆಬ್ಬಾಳ್ಕರ್ …
Read More »Daily Archives: ಮಾರ್ಚ್ 12, 2025
ಬಾಲಕಿಯನ್ನು ಪುಸಲಾಯಿಸಿ ಗರ್ಭಿಣಿ ಮಾಡಿದ 2 ಮಕ್ಕಳ ತಂದೆ ಅರೆಸ್ಟ್
ಬೆಳಗಾವಿ, (ಮಾರ್ಚ್ 11): ಎರಡು ಮಕ್ಕಳಿರುವ ವ್ಯಕ್ತಿಯೋರ್ವ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿರುವ ಘಟನೆ ಬೆಳಗಾವಿಯ ಕುಲಗೋಡ (Kulagod) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದು ಇಡೀ ಮಾನವ ಕುಲವೇ ತಲೆ ತಗ್ಗಿಸುವ ಪೈಶಾಚಿಕ ಕೃತ್ಯವಾಗಿದೆ. ಬಾಲಕಿ ಬಾಣಂತಿಯಾದ ವಿಚಾರ ಗೊತ್ತಾಗುತ್ತಿದ್ದಂತೆ ಪೋಷಕರು ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಪ್ರಕರಣದಡಿಯಲ್ಲಿ ಆರೋಪಿ ಬಸಪ್ಪ ಅಡಿವೆಪ್ಪ ಹಳ್ಳೂರ್(32) ಎನ್ನುವಾತನನ್ನು ಬಂಧಿಸಿದ್ದಾರೆ. ಟ್ರ್ಯಾಕ್ಟರ್ ಡ್ರೈವರ್ ಆಗಿರುವ ಬಸಪ್ಪ ಅಡಿವೆಪ್ಪ …
Read More »ಹುಬ್ಬಳ್ಳಿಯಲ್ಲಿ ನಕಲಿ ಆಹಾರ ಇಲಾಖೆ ಅಧಿಕಾರಿಗಳ ಹಾವಳಿ
ಹುಬ್ಬಳ್ಳಿ, ಮಾರ್ಚ್ 12: ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ (Hubballi) ನಕಲಿ ಮದ್ಯ ತಯಾರಿಕೆ ಗ್ಯಾಂಗ್ ಅಬಕಾರಿ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಇದಕ್ಕೂ ಮುನ್ನ ಅಂಗನವಾಡಿ ಮಕ್ಕಳ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ನಕಲಿ ಅಧಿಕಾರಿಗಳು ತಲೆ ಎತ್ತಿದ್ದಾರೆ.ಹಣ ಮಾಡೋ ಉದ್ದೇಶಕ್ಕೆ ಕೆಲವರು ಅಧಿಕಾರಿಗಳ ಸೋಗಿನಲ್ಲಿ ರೋಲ್ ಕಾಲ್ಗೆ ಇಳದಿದ್ದಾರೆ. ಆಹಾರ ಇಲಾಖೆ ಹೆಸರಿನಲ್ಲಿ ದುರ್ಗದ ಬೈಲ್ನಲ್ಲಿನ ಕಿರಾಣಿ ಅಂಗಡಿಗಳ …
Read More »ಕಂಡಕ್ಟರ್ ಮೇಲಿನ ಹಲ್ಲೆ ಮಾಸುವ ಮುನ್ನವೇ…ಗ್ರಾ.ಪಂ ಕಾರ್ಯದರ್ಶಿ ಮೇಲೆ ಹಲ್ಲೆ…!!!
ಕಂಡಕ್ಟರ್ ಮೇಲಿನ ಹಲ್ಲೆ ಮಾಸುವ ಮುನ್ನವೇ…ಗ್ರಾ.ಪಂ ಕಾರ್ಯದರ್ಶಿ ಮೇಲೆ ಹಲ್ಲೆ…!!! ಎಂ.ಇ.ಎಸ್. ಸದಸ್ಯರ ವಿರುದ್ಧ ಕ್ರಮಕೈಗೊಳ್ಳದಿದ್ದರೇ ಉಗ್ರ ಹೋರಾಟ; ಮಹಾದೇವ ತಳವಾರ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಮೇಲೆ ಹಲ್ಲೆ ಮಾಡಿರುವ ಗ್ರಾಮ ಪಂಚಾಯತ ಸದಸ್ಯ, ಆತನ ಮಗ ಮತ್ತು ಆತನೊಂದಿಗಿದ್ದವರ ವಿರುದ್ಧ ಸೂಕ್ಷ ಕ್ರಮ ಕೈಗೊಂಡು ಕನ್ನಡಿಗ ಅಧಿಕಾರಿಗೆ ನ್ಯಾಯ ಒದಗಿಸಬೇಕೆಂದು ಕಿತ್ತೂರು ಕರ್ನಾಟಕ ಸೇನೆಯ ಅಧ್ಯಕ್ಷ ಮಹಾದೇವ ತಳವಾರ ಅವರು ಆಗ್ರಹಿಸಿದ್ದಾರೆ. ಬೆಳಗಾವಿ ತಾಲೂಕಿನ …
Read More »ನಟಿ ರನ್ಯಾ ರಾವ್ ಅಕೌಂಟಿಗೆ ದುಡ್ಡು ಸಂದಾಯ ಸುಳ್ಳು- ಸೌಹಾರ್ದ ಜಿಲ್ಲಾಧಿಕಾರಿ
ಮುಧೋಳ : ನಟಿ ರನ್ಯಾ ರಾವ್ ಅಕೌಂಟಿಗೆ ದುಡ್ಡು ಸಂದಾಯ ಸುಳ್ಳು- ಸೌಹಾರ್ದ ಜಿಲ್ಲಾಧಿಕಾರಿ ನಟಿ ರನ್ಯಾ ರಾವ್ ಖಾತೆಗೆ 10 ಲಕ್ಷ ರೂಪಾಯಿ ಸಂದಾಯವಾಗಿದೆ ಎಂಬ ಸುದ್ದಿ ಸುಳ್ಳು ಎಂದು ಮುಧೋಳದ ಓಂಕಾರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಸ್ಪಷ್ಟನೆ ನೀಡಿದ್ದಾರೆ ಬಾಗಲಕೋಟ ಜಿಲ್ಲೆ ಮುಧೋಳದ ಓಂಕಾರ್ ಸಹಕಾರಿ ಬ್ಯಾಂಕ್ ನಿಂದ ಏಪ್ರಿಲ್ 27 ಮತ್ತು 28-2022 ರಲ್ಲಿ ನಟಿ, ಉದ್ಯಮಿ ಇದೀಗ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ …
Read More »ಹೋಳಿ ಹಬ್ಬದ ಪೂರ್ವದಲ್ಲೇ ಬೆಳಗಾವಿ ಖಡೇಬಝಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆ
ಹೋಳಿ ಹಬ್ಬದ ಪೂರ್ವದಲ್ಲೇ ಬೆಳಗಾವಿ ಖಡೇಬಝಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಬೆಳಗಾವಿಯ ಗುಡಶೆಡ್ ರಸ್ತೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸುಮಾರು 7 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಸಂಗ್ರಹಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೋವಾ ರಾಜ್ಯದಿಂದ ಮದ್ಯವನ್ನು ತಂದು ಕರ್ನಾಟಕದಲ್ಲಿ ಮಾರಾಟ ಮಾಡುವ ಉದ್ಧೇಶದಿಂದ ಸಂಗ್ರಹಿಸಿಟ್ಟ ಮಾಹಿತಿ ದೊರೆಯುತ್ತಿದ್ದಂತೆ , ಖಡೇಬಝಾರ್ ಪೊಲೀಸರು ವಿಶೇಷ ತಂಡವನ್ನು ರಚಿಸಿ ದಾಳಿಯನ್ನು ನಡೆಸಲಾಗಿದೆ. ದಾಳಿಯ ವೇಳೆ ಸುಮಾರು 7 ಲಕ್ಷ 30 ಸಾವಿರದ …
Read More »ಬೆಳಗಾವಿಯಲ್ಲಿ ಸಮುದಾಯದ ಭವನ ನಿರ್ಮಾಣದ ಜಮೀನಿಗಾಗಿ ಗಲಾಟೆ.
ಬೆಳಗಾವಿಯಲ್ಲಿ ಸಮುದಾಯದ ಭವನ ನಿರ್ಮಾಣದ ಜಮೀನಿಗಾಗಿ ಗಲಾ*ಟೆ. ನಗರದ ಗಣಾಚಾರಿ ಗಲ್ಲಿಯಲ್ಲಿ ನಡೆದ ಘಟನೆ. ರಾಜು ತಳವಾರ, ಸುದೇಶ ಲಾಠೆಗೆ ಇಬ್ಬರಿಗೆ ತಲೆಗೆ ಗಾಯ. ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಿದ ಸ್ಥಳೀಯರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ. ಮಹಾನಗರ ಪಾಲಿಕೆಯ ಜಾಗವನ್ನು ಕಬ್ಜಾ ಮಾಡಿರೋ ಕೆಲವರು. ಅತಿಕ್ರಮಣ ತೆರವುಗೊಳಿಸಿ ಭವನ ನಿರ್ಮಾಣಕ್ಕೆ ಮುಂದಾಗಿದ್ದ ಸ್ಥಳೀಯರು. ಪಾಲಿಕೆಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆಯಲ್ಲಿ ಇಪ್ಪತ್ತುಕ್ಕೂ ಹೆಚ್ಚು ಜನರಿಂದ …
Read More »