Breaking News

Daily Archives: ಮಾರ್ಚ್ 11, 2025

ಹೋಳಿ ಹಬ್ಬದ ಪೂರ್ವದಲ್ಲೇ ಬೆಳಗಾವಿ ಖಡೇಬಝಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆ

ಹೋಳಿ ಹಬ್ಬದ ಪೂರ್ವದಲ್ಲೇ ಬೆಳಗಾವಿ ಖಡೇಬಝಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಬೆಳಗಾವಿಯ ಗುಡಶೆಡ್ ರಸ್ತೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸುಮಾರು 7 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಸಂಗ್ರಹಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೋವಾ ರಾಜ್ಯದಿಂದ ಮದ್ಯವನ್ನು ತಂದು ಕರ್ನಾಟಕದಲ್ಲಿ ಮಾರಾಟ ಮಾಡುವ ಉದ್ಧೇಶದಿಂದ ಸಂಗ್ರಹಿಸಿಟ್ಟ ಮಾಹಿತಿ ದೊರೆಯುತ್ತಿದ್ದಂತೆ , ಖಡೇಬಝಾರ್ ಪೊಲೀಸರು ವಿಶೇಷ ತಂಡವನ್ನು ರಚಿಸಿ ದಾಳಿಯನ್ನು ನಡೆಸಲಾಗಿದೆ. ದಾಳಿಯ ವೇಳೆ ಸುಮಾರು 7 ಲಕ್ಷ 30 ಸಾವಿರದ …

Read More »

ನಟಿ ರನ್ಯಾ ರಾವ್ ಅಕೌಂಟಿಗೆ ದುಡ್ಡು ಸಂದಾಯ ಸುಳ್ಳು- ಸೌಹಾರ್ದ ಜಿಲ್ಲಾಧಿಕಾರಿ

ಮುಧೋಳ : ನಟಿ ರನ್ಯಾ ರಾವ್ ಅಕೌಂಟಿಗೆ ದುಡ್ಡು ಸಂದಾಯ ಸುಳ್ಳು- ಸೌಹಾರ್ದ ಜಿಲ್ಲಾಧಿಕಾರಿ ನಟಿ ರನ್ಯಾ ರಾವ್ ಖಾತೆಗೆ 10 ಲಕ್ಷ ರೂಪಾಯಿ ಸಂದಾಯವಾಗಿದೆ ಎಂಬ ಸುದ್ದಿ ಸುಳ್ಳು ಎಂದು ಮುಧೋಳದ ಓಂಕಾರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಸ್ಪಷ್ಟನೆ ನೀಡಿದ್ದಾರೆ ಬಾಗಲಕೋಟ ಜಿಲ್ಲೆ ಮುಧೋಳದ ಓಂಕಾರ್ ಸಹಕಾರಿ ಬ್ಯಾಂಕ್ ನಿಂದ ಏಪ್ರಿಲ್ 27 ಮತ್ತು 28-2022 ರಲ್ಲಿ ನಟಿ, ಉದ್ಯಮಿ ಇದೀಗ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ …

Read More »

ಚಿನ್ನ ಕಳ್ಳಸಾಗಾಣಿಕೆ ಪ್ರಕರಣ: ರನ್ಯಾ ರಾವ್ ನಿವಾಸ, ವಿವಾಹ ಜರುಗಿದ‌ ಹೋಟೆಲ್‌ನಲ್ಲಿ ಸಿಬಿಐ ಶೋಧ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ಬೆಂಗಳೂರಿನಲ್ಲಿರುವ ರನ್ಯಾ ರಾವ್‌ರ ನಿವಾಸ, ಅವರ ವಿವಾಹ ಜರುಗಿದ ಹೋಟೆಲ್‌,‌ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್‌ ಜೊತೆಗೆ ಸಂಪರ್ಕ ಹೊಂದಿರುವವರ ಕುರಿತು ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದರ ಭಾಗವಾಗಿ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಗಳು, ಬಂದಿರುವ ದುಬಾರಿ ಉಡುಗೊರೆಗಳು ಕುರಿತು …

Read More »

ಸಿಡಿಮದ್ದು ಜಗಿದು ಸ್ಫೋಟ: ಹಸುವಿನ ಬಾಯಿ ಛಿದ್ರ

ಚಾಮರಾಜನಗರ: ಹಂದಿಗಳ ಬೇಟೆಗೆ ಇರಿಸಿದ್ದ ಸಿಡಿಮದ್ದು ಜಗಿದು ಹಸುವಿನ ಬಾಯಿ ಛಿದ್ರವಾದ ದಾರುಣ ಘಟನೆ ಹನೂರು ತಾಲೂಕಿನ ಬೂದಬಾಳು ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಮೇವು ಮೇಯುತಿದ್ದಾಗ ಈ ಘಟನೆ ನಡೆದಿದೆ. ಮಲ್ಲಯ್ಯ ಎಂಬವರ ಹಸು ಇದಾಗಿದ್ದು, ಅದರ ಮೂಕ ರೋದನೆ ಮನಕಲಕುವಂತಿತ್ತು. ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಬಳಿ ಜಾನುವಾರುಗಳು ಮೇವು ಮೇಯಲು ತೆರಳುತ್ತಿದ್ದ ವೇಳೆ ಕಾಡುಹಂದಿ ಬೇಟೆಗೆ ಅಡಗಿಸಿಟ್ಟಿದ್ದ ಸಿಡಿಮದ್ದು ಜಗಿದು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಹಸುವಿನ ಮುಖ ಛಿದ್ರವಾಗಿದೆ ಎಂದು …

Read More »

ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ,

ಬೆಂಗಳೂರು: ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಕೊಡುವ 135 ಸಂಚಾರಿ ಆಸ್ಪತ್ರೆಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಮಾತ್ರ ಸಜ್ಜುಗೊಳಿಸಿರುವ 135 “ಸಂಚಾರಿ ಆರೋಗ್ಯ ಘಟಕ” ಆ್ಯಂಬುಲೆನ್ಸ್ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ಬಸವಣ್ಣನವರ ಕಾಯಕ – ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ‌ ಎಂದು ತಿಳಿಸಿದರು. ಸಮಾಜದಲ್ಲಿ ದುಡಿಯುವ ವರ್ಗ …

Read More »

ಬೆಳಗಾವಿ ತಾನಾಜೀ ಗಲ್ಲಿ ರೇಲ್ವೆ ಗೇಟ್ ಸಂಪೂರ್ಣವಾಗಿ ಬಂದ್….!!!

ಬೆಳಗಾವಿ ತಾನಾಜೀ ಗಲ್ಲಿ ರೇಲ್ವೆ ಗೇಟ್ ಸಂಪೂರ್ಣವಾಗಿ ಬಂದ್….!!! ಸ್ಥಳೀಯರಲ್ಲಿ ಮೂಡಿದ ಸಂಚಾರದ ಸಮಸ್ಯೆ…. ಬೆಳಗಾವಿ ತಾನಾಜೀ ಗಲ್ಲಿ ರೇಲ್ವೆ ಗೇಟ್ ಸಂಪೂರ್ಣವಾಗಿ ಬಂದ್….!!! ಸ್ಥಳೀಯರಲ್ಲಿ ಮೂಡಿದ ಸಂಚಾರದ ಸಮಸ್ಯೆ…. ಕಪಿಲೇಶ್ವರ ಮೇಲ್ಸೇತುವೆ ಮಾರ್ಗವಾಗಿ ಸಂಚರಿಸುವ ಪರ್ಯಾಯ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ನೈಋತ್ಯ ರೇಲ್ವೆಯ ವತಿಯಿಂದ ಬೆಳಗಾವಿಯ ತಾನಾಜೀ ಗಲ್ಲಿಯ ರೇಲ್ವೆ ಗೇಟ್ ನಿನ್ನೆಯಿಂದ ಬಂದ್ ಮಾಡಲಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಜನರಲ್ಲಿ ಗೊಂದಲ ಉಂಟಾಗಿದೆ. ಬೆಳಗಾವಿಯ ತಾನಾಜೀ ಗಲ್ಲಿಯ …

Read More »

ರಂಗಪಂಚಮಿ ವೇಳೆ ಅಶಾಂತಿ ಮೂಡಿಸಲು ಯತ್ನಿಸಿದರೇ ಹುಷಾರ್: ಕಮಿಷನರ್

ರಂಗಪಂಚಮಿ ವೇಳೆ ಅಶಾಂತಿ ಮೂಡಿಸಲು ಯತ್ನಿಸಿದರೇ ಹುಷಾರ್: ಕಮಿಷನರ್ ರಂಗಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹುಬ್ಬಳ್ಳಿಯಲ್ಲಿ ಕಾಮದೇವರನ್ನು ಪ್ರತಿಸ್ಥಾಪನೆ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಶಾಂತಿಯುತ ಹಬ್ಬ ಆಚರಣೆಗೆ ಕರೆ ಕೊಟ್ಟರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ಬಾರಿ ಹೋಳಿಹಬ್ಬವನ್ನು ಧಾರವಾಡದಲ್ಲಿ ಮಾರ್ಚ್ 15, ಹುಬ್ಬಳ್ಳಿಯಲ್ಲಿ 18 ನೇ ತಾರೀಖು ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಹೊರ …

Read More »

ಯುವಜನರನ್ನು ಸನ್ಮಾರ್ಗದತ್ತ ತರುವ ಕಾವ್ಯ ವಾಚಿಸಿದ ಕೋಟಾರಗಸ್ತಿ

*ರಾಷ್ಟ್ರ ರಾಜಧಾನಿಯಲ್ಲಿ ರಾಮಾಯಣ ರಚನೆಯ ಪ್ರಸಂಗ ನೆನೆದ ರವಿ ಬೆಳಗಾವಿ: ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ನವದೆಹಲಿಯಲ್ಲಿ ಆಯೋಜಿಸಿದ್ದ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ ‘ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವ’ಕ್ಕೆ ಬೆಳಗಾವಿಯ ಹಿರಿಯ ಸಾಹಿತಿ, ಕವಿ ಮತ್ತು ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ (ಎಸ್.ಸಿ.ಕೋಟಾರಗಸ್ತಿ) ಪಾಲ್ಗೊಂಡರು. ಮಾರ್ಚ್ 8ರಂದು ಖ್ಯಾತ ಹಿಂದಿ ಸಾಹಿತಿ ವಿನೋದ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ‘ಎಸೆಂಬಲ್ ಆಫ್ ಇಮೇಜ್ ರಿದಮ್ ಆ್ಯಂಡ್ ಬ್ಯೂಟಿ: …

Read More »

ನಗರಸೇವಕ ಹನುಮಂತ ಕೊಂಗಾಲಿಯವರಿಂದ ಗಾರ್ಡನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ನಗರಸೇವಕ ಹನುಮಂತ ಕೊಂಗಾಲಿಯವರಿಂದ ಗಾರ್ಡನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ವಿವಿಧ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ಕುಲಕರ್ಣಿ ಲೇಔಟ್ ಗಾರ್ಡನ್ (18,ಲಕ್ಷ )ಕಾಮಗಾರಿ ಉದ್ಘಾಟನೆ ಹಾಗೂ ರೇವನೂ ಕಾಲನಿ (20 ಲಕ್ಷ) ಅಭಿವೃದ್ದಿ ಕಾಮಗಾರಿ ಚಾಲನೆ ನೀಡಲಾಯಿತು ಮಹಾನಗರ ಪಾಲಿಕೆ ( ಶ್ರೀ ಹಣಮಂತ ಕೊಂಗಾಲಿ ನಗರ್ ಸೇವಕರ) 38 ಲಕ್ಷ ಅನುದಾನದಲ್ಲಿ ಗಾರ್ಡನ್ ಅಭಿವೃದ್ಧಿ ಕಾಮಗಾರಿಯನ್ನು ಪೂಜೆ ಮಾಡಲಾಯಿತು, ಶ್ರೀ ಹಣಮಂತ ಕೊಂಗಾಲಿ, ನಗರ ಸೇವಕರು,ನನ್ನೊಂದಿಗೆ ಕುಲಕರ್ಣಿ …

Read More »

ಬಿಆರ್‌ಟಿಎಸ್ ರಸ್ತೆ ಡಿವೈಡರ್ ಗ್ರೀಲ್ ಮುರಿದು ಬಿದ್ದರು ತಿರುಗಿ ನೋಡದ BRTS ಅಧಿಕಾರಿಗಳು

ಬಿಆರ್‌ಟಿಎಸ್ ರಸ್ತೆ ಡಿವೈಡರ್ ಗ್ರೀಲ್ ಮುರಿದು ಬಿದ್ದರು ತಿರುಗಿ ನೋಡದ BRTS ಅಧಿಕಾರಿಗಳು… ಅಧಿಕಾರಿಗಳ ವರ್ತನೆಗೆ ಬೇಸತ್ತು ಗ್ರೀಲ್ ಸರಿ ಮಾಡಿದ ಸಂಚಾರಿ ಪೊಲೀಸರು. ಹುಬ್ಬಳ್ಳಿ ಧಾರವಾಡ ಅವಳಿನಗರದ ಜನತೆಗೆ ತ್ವರಿತ ಸಂಚಾರ ಸೇವೆ ನೀಡುವ ಉದ್ದೇಶದಿಂದ ಆರಂವಾಗಿರೋ ಬಿಆರ್‌ಟಿಎಸ್ ಯೋಜನೆಯ ಸಂಚಾರ ಸೇವೆಯು, ತ್ವರಿತ ಸಂಚಾರ ಸೇವೆಯಲ್ಲಿ ಸುದ್ದಿಯಾಗುವುದರ ಬದಲು ಅವಾಂತರಗಳಿಂದಲ್ಲೇ ಹೆಚ್ಚು ಸುದ್ದಿಯಾಗುತ್ತಾ ಬಂದಿದೆ. ಈಗ ಮತ್ತೊಂದು ಅವಾಂತರದಿಂದ ಬಿಆರ್‌ಟಿಎಸ್ ಸುದ್ದಿಯಲ್ಲಿದೆ. ಧಾರವಾಡದಲ್ಲಿ ಬಿಆರಟಿಎಸ್ ಮಾರ್ಗದ ರಸ್ತೆ …

Read More »