ಬೆಳಗಾವಿ : ವಿದ್ಯಾರ್ಥಿಗಳು ವಿವಿಧ ಆಟ ಹಾಗೂ ವಿಜ್ಞಾನ ಪ್ರದರ್ಶನದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಕೂಡಾ ಆಚರಿಸಲಾಯಿತು. ಬೆಳಗಾವಿ ಜಿಲ್ಲಾ ಮಾಹೇಶ್ವರಿ ಅಂಧರ ಸೇವಾ ಸಂಸ್ಥೆಯ ಮಕ್ಕಳ ಶಾಲೆ ಹಾಗೂ ವಿಷನ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.ರಾಷ್ಟ್ರೀಯ ವಿಜ್ಞಾನ ಮಹತ್ವ ಹಾಗೂ ವಿಷನ್ ಎಂಪವರ್ ಕಾರ್ಯವೈಖರಿ ಬಗ್ಗೆ ರಾಜೇಶ್ವರಿ ಪಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷರಾದ ವಾದಿರಾಜ ಕಲಘಟಗಿ ಮುಖ್ಯ ಅತಿಥಿಗಳಾದ ರವಿ ಭಜಂತ್ರಿ,ಸಂಸ್ಥೆಯ ಕಾರ್ಯದರ್ಶಿಗಳಾದ ಚಿಂತಾಮಣಿ, …
Read More »Daily Archives: ಫೆಬ್ರವರಿ 15, 2025
ಡಿ.ಕೆ.ಶಿ ಗೆ ವಿರೋಧವಿಲ್ಲ…ಎಲ್ಲರೂ ಒಂದೇ ಪಕ್ಷದಲ್ಲಿದ್ದೇವೆ ನಿವೃತ್ತಿಯಾದರೂ ಸಿದ್ಧರಾಮಯ್ಯ ಪಕ್ಷಕ್ಕೆ ಬೇಕೆಬೇಕು; ಸಚಿವ ಸತೀಶ ಜಾರಕಿಹೊಳಿ
ಬೆಂಗಳೂರು: ಡಿ.ಕೆ. ಶಿವಕುಮಾರ ಅವರಿಗೆ ವಿರೋಧವೆಂದಿನೂ ಇಲ್ಲ. ನಾವು ನಮ್ಮ ಹಕ್ಕುಗಳನ್ನು ಕೇಳಿದ್ದೇವೆ. ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದೇವೆ. ಸಿಎಂ ಸಿದ್ಧರಾಮಯ್ಯನವರ ಕೊಡುಗೆ ಕಾಂಗ್ರೆಸಗೆ ಅಪಾರವಾಗಿದ್ದು, ಒಂದು ವೇಳೆ ನಿವೃತ್ತಿಯಾದರೂ ಕೂಡ ಪಕ್ಷಕ್ಕೆ ಅವರ ಮಾರ್ಗದರ್ಶನ ಅತ್ಯವಶ್ಯಕವೆಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಎಂ ಸಿದ್ಧರಾಮಯ್ಯನವರು ನಮಗೆ ಬೇಕೆ ಬೇಕು. ಒಂದು ವೇಳೆ ಅವರು ರಾಜಕೀಯ ನಿವೃತ್ತಿಯಾದರೂ …
Read More »ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ; ಪ್ರಹ್ಲಾದ ಜೋಶಿ
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಇದಕ್ಕೆ ಮೈಸೂರ ಘಟನೆ ದೊಡ್ಡ ಉದಾಹರಣೆ. ಮೈಸೂರ ಗಲಭೆ ಪೂರ್ವ ತಯಾರಿ ಇರದೆ ಆಗಲು ಸಾಧ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಇಷ್ಟು ದೊಡ್ಡ ಗಲಾಟೆ ಅಂದ್ರೆ ಹೇಗೆ. ನನಗೆ ಈ ವಿಷಯದ ಸಂಪೂರ್ಣವಾಗಿ ಮಾಹಿತಿ ಇಲ್ಲ. ಆದ್ರೆ ಗಲಭೆಗೆ ಎಲ್ಲ ತಯಾರಿ …
Read More »ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು ಶ್ರೀ ಸಂತ ಸೇವಾಲಾಲ್ ಮಹಾರಾಜ್ ಜಯಂತಿ.
ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ನಿಮಿತ್ಯ ಪೋಟೋ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಉಪ ತಹಶೀಲ್ದಾರ್ ಕಲ್ಲಪ್ಪ ಕೋಲಕಾರ ಮತ್ತು ಸಂತ ಸೇವಾಲಾಲ್ ಮಹಾರಾಜ್ ಸಂಘದ ಅಧ್ಯಕ್ಷ ಯಮನಪ್ಪ ರಾಠೋಡ್ ಅವರು ಈ ಸಂದರ್ಭದಲ್ಲಿ ಬಾಲಬ್ರಮ್ಮಚಾರಿಗಳು, ಪವಾಡ ಪುರುಷರು , ಬಂಜಾರ ಕುಲಗುರು , ಸಾಮಾಜಿಕ ಹರಿಕಾರಕರು ಶ್ರೀ ಸಂತ ಸೇವಾಲಾಲ್ ಮಹಾರಾಜ್ ರ ಕುರಿತು ಗೌರವ ಪೂರ್ವಕ ನುಡಿಗಳು ಉಪಸ್ಥಿತ ಪಡಿಸಿದರು.ಈ ಸಂದರ್ಭದಲ್ಲಿ …
Read More »ಜಿಮ್ ಬಂಪರ್ ;ಬಿಯಾಂಡ್ ಬೆಂಗಳೂರು ಪ್ರದೇಶದಲ್ಲಿ ಶೇ 75ರಷ್ಟು ಹೂಡಿಕೆ ; ಉತ್ತರ ಕರ್ನಾಟಕಕ್ಕೆ ಹರಿದ ಶೇ.45ರಷ್ಟು ಬಂಡವಾಳ
ಬೆಂಗಳೂರು: ನಾಲ್ಕು ದಿನಗಳ ಕಾಲ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ಸದ್ಯಕ್ಕೆ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ. ಸಮಾವೇಶಕ್ಕೆ ತೆರೆ ಬಿದ್ದ ಬಳಿಕ ಅವರು ಅರಮನೆ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಲಯವಾರು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು. ಜತೆಯಲ್ಲಿ ಉಪಮುಖ್ಯಮಂತ್ರಿ ಡಿ …
Read More »ಕಾಡ್ಗಿಚ್ಚು ನಿಯಂತ್ರಣಕ್ಕೆ ಪಂಚಾಯ್ತಿ ಅಧಿಕಾರಿಗಳ ಜೊತೆ ಸಭೆ ಈಶ್ವರ ಬಿ ಖಂಡ್ರೆ ನಡೆಸಲು ಸೂಚನೆ
ಬೆಂಗಳೂರು : ಕಾಡ್ಗಿಚ್ಚು ನಿಯಂತ್ರಿಸಲು ಆಯಾ ವಿಭಾಗದ ಪಂಚಾಯ್ತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಸಹಯೋಗದೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ. ಅರಣ್ಯ ಭವನದಲ್ಲಿಂದು ವಿಡಿಯೋ ಕಾನ್ಘರೆನ್ಸ್ ಮೂಲಕ ಸಭೆ ನಡೆಸಿದ ಅವರು, ಕಳೆದ ವರ್ಷ ಸುರಿದ ಉತ್ತಮ ಮಳೆಯ ನಡುವೆಯೂ ಈ ಬಾರಿ ಬಿಸಿಲು ಹೆಚ್ಚಳವಾಗಿದ್ದು, ಕಾಡ್ಗಿಚ್ಚಿನ ಅಪಾಯ ಎದುರಿಸಲು ಸರ್ವಸನ್ನದ್ಧರಾಗಿರುವಂತೆ ಸೂಚನೆ ನೀಡಿದರು. …
Read More »ಟ್ಯಾಂಕರ್ ನಲ್ಲಿ ನೆರೆ ರಾಜ್ಯದ ತ್ಯಾಜ್ಯ: ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ
ಬೆಂಗಳೂರು : ನೆರೆ ರಾಜ್ಯದಿಂದ ಅಪಾಯಕಾರಿ ದ್ರವ ತ್ಯಾಜ್ಯವನ್ನು ಟ್ಯಾಂಕರ್ ಗಳಲ್ಲಿ ತದಂದು ಮಂಗಳೂರಿನ ಚರಂಡಿ ಮತ್ತು ರಾಜಕಾಲುವೆಗೆ ಸುರಿಯಲಾಗುತ್ತಿದೆ ಎಂಬ ಮಾಧ್ಯಮ ವರದಿಗೆ ಸ್ಪಂದಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಜಲ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಕಾಸಸೌಧದಲ್ಲಿಂದು ವರದಿಗಾರರೊಂದಿಗೆ ಮಾತನಾಡಿದ ಅವರು, ಚರಂಡಿ, ರಾಜಕಾಲುವೆಗಳಿಗೆ ಸುರಿದ ದ್ರವ ತ್ಯಾಜ್ಯ, ನದಿ, …
Read More »ಧಾರವಾಡ ರಾಯಾಪುರ ಕೈಗಾರಿಕೆ ಪ್ರದೇಶದಲ್ಲಿ ಗೀಡಗಂಟೆಗಳಿಂದ ಎಲ್ಲೆಂದರಲ್ಲಿ ರಸ್ತೆಗೆ ಬೀಳುತ್ತಿದೆ ರಾಶಿ ಕಸ;ಅಗ್ನಿ ಅವಘಡ ಭೀತಿಯಲ್ಲಿ ಇಂಡಸ್ಟ್ರಿಯಲಿಸ್ಟ.
ಧಾರವಾಡ : ಕೈಗಾರಿಕೆ ಪ್ರದೇಶಗಳ ಅಂದ್ಮೇಲೆ ಅಲ್ಲಿ ಕೈಗಾರಿಕೆಗಳ ಶೆಡ್, ಗೂಡೌನ ಕಾಣಬೇಕು ಉತ್ತಮ ರಸ್ತೆ ಇರಬೇಕು, ಆದರೆ ಧಾರವಾಡ ರಾಯಪುರ ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಗಳಿಗಿಂತ ದುಪ್ಪಟ್ಟು ಅವ್ಯವಸ್ಥೆಯೇ ಕಣ್ಣಿಗೆ ಕಾಣುತ್ತಿದ್ದು, ಗೀಡಗಂಟೆಗಳ ಕಾರುಬಾರು ಜೋರಾಗಿದೆ. ರಸ್ತೆ ಪಕಕ್ಲೆ ನೇಡಲಾದ ಗೀಡಗಳು ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆಗೆ ಬಾಗಿ ಓಡಾಟ ನಡೆಸಲು ವಾಹನಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಹೌದು ಇದು ಧಾರವಾಡ ರಾಯಾಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ಲಕ್ಷ್ಯಕ್ಕೆ …
Read More »ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ಎಸ್‌ಸಿ ಪ್ರಮಾಣ ಪತ್ರ ವಿತರಣೆ.
ಅಥಣಿ: ಹಂಪವ್ವ ಶಿಂಗೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿಗಳು ಕೇವಲ 10 ಸಾವಿರ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿನೊದ ಮಹಾದೇವ ಶಿಂಗೆ ಎಂಬ ಹೆಸರಿನ ವ್ಯಕ್ತಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಅಥಣಿ ತಾಲೂಕಿನ ಐಗಳಿ ಮೂಲದ ವಿನೋದ ಮಹಾದೇವ ಶಿಂಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಕಳೆದ ಹಲವು ವರ್ಷಗಳಿಂದ ಮೀಸಲಾತಿ ಪಡೆದಿದ್ದಾರೆ. …
Read More »ಖಾಸಗಿ ಶಾಲೆಯಲ್ಲಿ 61 ಲಕ್ಷ ರೂ. ಅವ್ಯವಹಾರದ ಆರೋಪದ ಕಿತ್ತಾಟ ನಕಲಿ ಸಹಿ ಮಾಡಿ ಲೆಕ್ಕ ಕೇಳಲು ಹೋದವರನ್ನೇ ಮನೆಗೆ ಕಳುಹಿಸಿದ್ರು..!
ಗೋಕಾಕ : ಶಾಲೆಯ ಚೆರಮನ್ನರು ಜೊತೆ ಶಾಲಾ ಕಾರ್ಯದರ್ಶಿ ಮತ್ತು ಪ್ರಿನ್ಸಿಪಾಲ ಸೇರಿಕೊಂಡು ಅಂದಾಜು 61 ಲಕ್ಷರೂ ಹಣದ ಅವ್ಯವಹಾರ ಮಾಡಿದ್ದಾರೆ ಎನ್ನಲಾದ ಆರೋಪವೊಂದು ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಕೇಳಿ ಬಂದಿದೆ. ಹೌದು ಪಾಮಲದಿನ್ನಿಯಲ್ಲಿ ಇರುವ ಶ್ರೀ ಬೀರಸಿದ್ದೇಶ್ವರ ಕನ್ನಡ ಮಾದ್ಯಮ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಪಾಮಲದಿನ್ನಿ, 1996 ನೆ ಇಸವಿಯಲ್ಲಿ ಪ್ರಾರಂಬಿಸಿದ್ದು ಅಂದಿನಿಂದ ಇಲ್ಲಿಯವರೆಗೆ ಶಾಲೆಗೆ ಬರುವ ಪೀ,ಖರ್ಚಿನ ಬಗ್ಗೆ ಲೆಕ್ಕಪತ್ರವನ್ನು ಕೆಲವು ಸದಸ್ಯರಿಗೆ ಅದ್ಯಕ್ಷರು,ಕಾರ್ಯದರ್ಶಿ …
Read More »