Breaking News

Daily Archives: ಜನವರಿ 12, 2025

ವಿವೇಕಾನಂದರು ಸ್ಫೂರ್ತಿದಾಯಕ ಜೀವನ ಪ್ರಗತಿಗೆ ಸೇವೆ ಸಲ್ಲಿಸಿದ್ದರು: ಭಾಲಚಂದ್ರ ಜಾರಕಿಹೊಳಿ

ಬೆಳಗಾವಿ – ಸ್ವಾಮಿ ವಿವೇಕಾನಂದರು ಸ್ಫೂರ್ತಿದಾಯಕ ಜೀವನದ ಜತೆಗೆ ಮಾನವೀಯತೆ ಮತ್ತು ಸಮಾಜದ ಉನ್ನತಿ – ಪ್ರಗತಿಗೆ ಸೇವೆ ಸಲ್ಲಿಸಿದ್ದರು ಎಂದು ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಭಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರದಂದು ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಬೋಧಿಸಿದ ತತ್ವ- ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ತಮ್ಮ ಇಡೀ ಜೀವನವನ್ನು ಸಮಾಜಕ್ಕೆ …

Read More »

ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದ ಬಾಗಲಕೋಟೆ ಯುವಕ ರಮಜಾನ್

  ಬಾಗಲಕೋಟೆ (ಮಹಾಲಿಂಗಪುರ): ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ನಿರೂಪಣೆಯಲ್ಲಿ ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಾಲಿಂಗಪುರದ ಯುವಕ ರಮ್‌ಜಾನ್‌ ಮಲಿಕಸಾಬ ಪೀರಜಾದೆ 50 ಲಕ್ಷ ರೂ. ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ. ಸತತವಾಗಿ ಮೂರು ಬಾರಿ ಪ್ರಯತ್ನಿಸಿ ಕೊನೆಗೂ ಅಮಿತಾಬ್‌ ಬಚ್ಚನ್‌ ಎದುರಿಗೆ ಹಾಟ್‌ ಶೀಟ್‌ ಅಲಂಕರಿಸುವ ಸೌಭಾಗ್ಯ ಪಡೆದುಕೊಂಡಿದ್ದ ರಮಜಾನ್‌ ಹದಿನಾಲ್ಕು ಜಟೀಲ ಪ್ರಶ್ನೆಗಳಿಗೆ ಉತ್ತರಿಸಿ ಒಂದು ಕೋಟಿಯ 15ನೇ …

Read More »

ಬಾರ್ ಅಂಗಡಿ ಮುಂಗಟ್ಟುಗಳಿಗೆ ಕಣ್ಣು ಹಾಕುತ್ತಿದ್ದ ಆರೋಪಿತರನ್ನ ಪತ್ತೆ ಹಚ್ಚಿ ಜೈಲಿಗಟ್ಟಿದ ಘಟಪ್ರಭಾ ಪೊಲೀಸರು

ಬಾರ್ ಮತ್ತು ಅಂಗಡಿ ಕಳ್ಳರನ್ನ ಜೈಲಿಗಟ್ಟಿದ ಘಟಪ್ರಭಾ ಪೊಲೀಸರು. ಘಟಪ್ರಭಾ: ಬಾರ್ ಅಂಗಡಿ ಮುಂಗಟ್ಟುಗಳಿಗೆ ಕಣ್ಣು ಹಾಕುತ್ತಿದ್ದ ಆರೋಪಿತರನ್ನ ಪತ್ತೆ ಹಚ್ಚಿ ಜೈಲಿಗಟ್ಟಿದ ಘಟಪ್ರಭಾ ಪೊಲೀಸರು ಕಾರ್ಯಾಚರಣೆ ನಡೆಸಿದ ದಿನಾಂಕ. 11/05/2025 ರಂದು 3 ಜನ ಆರೋಪಿತರಿಗೆ ದಸ್ತಗೀರ ಮಾಡಿ ಅವರ ಕಡೆಯಿಂದ ಘಟಪ್ರಭಾ ಠಾಣೆಯ ಹದ್ದಿ ಹಾಗೂ ಹುಕ್ಕೇರಿ ಠಾಣೆಯ ಹದ್ದಿ ಮತ್ತು ಸಂಕೇಶ್ವರ ಠಾಣೆ ಹದ್ದಿ ಹಾಗೂ ರಾಯಭಾಗ ಠಾಣೆ ಹದ್ದಿ ವಿವಿಧ ಅಂಗಡಿಗಳಲ್ಲಿ ಕಳ್ಳತನ ಮಾಡಿದ …

Read More »

ಸತೀಶ ಲ ಜಾರಕಿಹೊಳಿ ಅವರ ಸೂಚನೆಯಂತೆ ಗೋಕಾಕ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ರಮೇಶ್ ಲ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಹೆಸ್ಕಾಂ ಘಟಪ್ರಭಾಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿ ರಚನೆ

ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸತೀಶ ಲ ಜಾರಕಿಹೊಳಿ ಅವರ ಸೂಚನೆಯಂತೆ ಗೋಕಾಕ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ರಮೇಶ್ ಲ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಹೆಸ್ಕಾಂ ಘಟಪ್ರಭಾಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಲಾಗಿದೆ ಈ ಸಮಿತಿಯಲ್ಲಿ ಘಟಪ್ರಭಾದ ಹಿರಿಯ ವೈದ್ಯರಾದ ಡಾ, ವಿರೂಪಾಕ್ಷ ಈಶ್ವರಪ್ಪ ಪತ್ತಾರ, ಸ್ನೇಹಿತರಾದ ಶ್ರೀ ಮಲ್ಲಿಕಾರ್ಜುನ ತುಕ್ಕಾನಟ್ಟಿ, …

Read More »

ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿ ವಿವೇಕಾನಂದರು: ವಿವೇಕ ಜತ್ತಿ ಗೋಕಾಕದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿ ವಿವೇಕಾನಂದರು: ವಿವೇಕ ಜತ್ತಿ ಗೋಕಾಕದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಗೋಕಾಕ: ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್‌ ಮುಖಂಡ ವಿವೇಕ ಜತ್ತಿ ಮಾತನಾಡಿ, “ವಿವೇಕನಾಂದರು ಹೊಂದಿರುವ ಜ್ಞಾನವನ್ನು ಮತ್ತೆ ಯಾರೂ ಹೊಂದಿರಲಿಲ್ಲ. ಅದಕ್ಕೆ ಅವರನ್ನು ತಿಳಿದುಕೊಳ್ಳಬೇಕೆಂದರೆ ಮತ್ತೊಬ್ಬ ವಿವೇಕಾನಂದರು ಹುಟ್ಟ ಬೇಕಾಗುತ್ತದೆ” ಎಂದು ಹೇಳಿದರು. ಭಾರತದ ಅತ್ಯಂತ …

Read More »

ಔಡಲ ಗಿಡದ ಕಾಯಿ ತಿಂದು ಅಸ್ವಸ್ಥರಾಗಿ ಮಕ್ಕಳು ಆಸ್ಪತ್ರೆಗೆ ದಾಖಲ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಲಾಡ್

ಧಾರವಾಡ: ಔಡಲ ಗಿಡದ ಕಾಯಿ ತಿಂದು ಅಸ್ವಸ್ಥರಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸಂತೋಷ್​ ಲಾಡ್ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ‌ ನಿನ್ನೆ ಸಂಜೆ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿಗಳು ದಾರಿಯಲ್ಲಿ ಔಡಲ ಗಿಡದ ಕಾಯಿ ತಿಂದು ಅಸ್ವಸ್ಥರಾಗಿದ್ದರು. ಬಳಿಕ ರಾತ್ರಿ ವಾಂತಿ ಬೇದಿಯಿಂದ ಬಳಲಿದ್ದು, ಪೋಷಕರು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ …

Read More »

ಸಂವಿಧಾನ ರಕ್ಷಣೆಯ ಕ್ರಾಂತಿಯಾಗಲಿ: ಬಸವರಾಜ ಬೊಮ್ಮಾಯಿ*

  ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ಕಲ್ಯಾಣ ರಾಜ್ಯದ ಕನಸಿಗೆ ಎಲ್ಲರೂ ಬೆಂಬಲ ಕೊಟ್ಟಾಗ ಮಾತ್ರ ವಿಕಸಿತ ಭಾರತ ಆಗುತ್ತದೆ. ಅದಕ್ಕೆ ಎಲ್ಲ ವರ್ಗದ ಜನರು ಬೆಂಬಲ ಕೊಡಬೇಕು. ಸಂವಿಧಾನ ವಿರೋಧಿ ಕಾಂಗ್ರೆಸನ್ನು ಎಲ್ಲರೂ ತಿರಸ್ಕರಿಸಬೇಕು. ಸಂವಿಧಾನಕ್ಕೆ ನಮ್ಮ ಬೆಂಬಲ ಎಂದು ಸಂಕಲ್ಪ ಮಾಡಬೇಕು. ಸಂವಿಧಾನ ರಕ್ಷಣೆಯ ಕಾಂತಿಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾಯಿ ಹೇಳಿದರು.   ಅವರು ಬಾಗಲಕೋಟೆಯಲ್ಲಿ ಶನಿವಾರ ಸಿಟಿಜನ್ ಫಾರ್ …

Read More »

ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ: ಎಂ ಬಿ ಪಾಟೀಲ

  ವಿಜಯಪುರ: ಇಲ್ಲಿನ ಹೊರವಲಯದ ಇಟ್ಟಂಗಿಹಾಳ ಬಳಿ 10 ಎಕರೆ ಜಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಆರಂಭಿಸಲಾಗುವುದು. ಇದರಿಂದ 400 ಮಂದಿಗೆ ಉದ್ಯೋಗ ಸಿಗಲಿದೆ. ಜತೆಗೆ ಬೆಂಗಳೂರಿನಲ್ಲೂ ಕೆಎಸ್ಡಿಎಲ್ ಕಾರ್ಖಾನೆ ವಿಸ್ತರಣೆ ಮತ್ತು ಆಧುನೀಕರಣ ನಡೆಯುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಶನಿವಾರ ಹೇಳಿದ್ದಾರೆ. ಇಲ್ಲಿ ಕೆಎಸ್ಡಿಎಲ್ ಏರ್ಪಡಿಸಿರುವ ಸಾಬೂನು ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದಕ್ಕೂ ಮೊದಲು …

Read More »

ಕಂಬಳ ಅತ್ಯಂತ ಜನಪ್ರಿಯ ಗ್ರಾಮೀಣ ಕ್ರೀಡೆ: ಸಿಎಂ ಸಿದ್ದರಾಮಯ್ಯ

    ಮಂಗಳೂರು : ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ.‌ ನಮ್ಮ ದೇಶ ಬಹುತ್ವದ ದೇಶ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.   ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.   ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ.   ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ …

Read More »

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ “ಫ್ಯಾಷನ್‌-ಶೋ” ನಡೆಸಲಾಯಿತು.   ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದಪ್ಪ ಅವರ ನೇತೃತ್ವದಲ್ಲಿ ಮಾಡೆಲ್‌ಗಳು ರ್ಯಾಂಪ್‌ ವಾಕ್‌ ಮಾಡುವ ಮೂಲಕ ಎಲ್ಲರನ್ನು ಮನರಂಜಿಸಿದರು. ವಿಭಿನ್ನ, ವಿಶೇಷ ಹಾಗೂ ಪ್ರಯಾಣಿಕರು ಧರಿಸಬಹುದಾದ ವಿನ್ಯಾಸಗಳನ್ನು ತೊಟ್ಟು ರ್ಯಾಂಪ್‌ ವಾಕ್‌ ಮಾಡಿದರು. ಡಿಸೆಂಬರ್‌ ಹಾಗೂ ಜನವರಿ ತಿಂಗಳಾಂತ್ಯ ನಡೆಯಲಿರುವ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಫ್ಯಾಷನ್‌ ಶೋ …

Read More »