Breaking News

Yearly Archives: 2024

ಅದು ಭಾರತೀಯ ಜನತಾ ಪಕ್ಷಅಲ್ಲ, ಬ್ರಿಟಿಷ್ ಜನತಾ ಪಕ್ಷ:ಮಧು ಬಂಗಾರಪ್ಪ

ಬೆಂಗಳೂರು, : “ಅದು ಭಾರತೀಯ ಜನತಾ ಪಕ್ಷ (bharatiya janata party) ಅಲ್ಲ, ಬ್ರಿಟಿಷ್ ಜನತಾ ಪಕ್ಷ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಕೂತು ಅಂಕಿ ಅಂಶಗಳನ್ನು ಹೇಳಿದರೆ ಆಗುವುದಿಲ್ಲ. 4 ಲಕ್ಷ ಚಿಲ್ಲರೆ ಎಲ್ಲಿ, ಇವರು ಕೊಟ್ಟಿರುವ 1 ಲಕ್ಷ ಚಿಲ್ಲರೆ ಎಲ್ಲಿ”? ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ವಾಗ್ದಾಳಿ ನಡೆಸಿದರು. ತೆರಿಗೆ ಹಣದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ …

Read More »

ಶರದ್ ಪವಾರ್ ಬಣಕ್ಕೆ ಹೊಸ ಹೆಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಶರದ್ಚಂದ್ರ ಪವಾರ್

ಮುಂಬೈ: ತಾವು ಸ್ಥಾಪಿಸಿದ ಪಕ್ಷವಾದ ಎನ್‌ಸಿಪಿಯ (NCP) ಹೆಸರು ಮತ್ತು ಚಿಹ್ನೆಗಾಗಿ ನಡೆದ ಜಗಳದಲ್ಲಿ ಭಾರಿ ಹಿನ್ನಡೆಯನ್ನು ಎದುರಿಸಿದ ಒಂದು ದಿನದ ನಂತರ, ಹಿರಿಯ ನಾಯಕಶರದ್ ಪವಾರ್(Sharad Pawar) ಅವರ ಬಣಕ್ಕೆ ಚುನಾವಣಾ ಆಯೋಗವು ಬುಧವಾರ ಹೊಸ ಹೆಸರನ್ನು ನಿಗದಿಪಡಿಸಿದೆ. ಶರದ್ ಪವಾರ್ ಬಣಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ – ಶರದ್ಚಂದ್ರ ಪವಾರ್ ಎಂಬ ಹೆಸರು ಸಿಕ್ಕಿದೆ. ಚುನಾವಣಾ ಸಂಸ್ಥೆಯು ಅಜಿತ್ ಪವಾರ್ (Ajit pawar) ಬಣವನ್ನು ನಿಜವಾದ ರಾಷ್ಟ್ರೀಯವಾದಿ …

Read More »

ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ: ದೂರಿನ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರು ಕೋರ್ಟ್

ಮಂಗಳೂರು, ಫೆಬ್ರವರಿ 7: ಕೇಂದ್ರದ ಮಧ್ಯಂತರ ಬಜೆಟ್​ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಬರದಲ್ಲಿ ದಕ್ಷಿಣ ಭಾರತ ಪ್ರತ್ಯೇಕ ದೇಶದ ಬಗ್ಗೆ ಸಂಸದ ಡಿ.ಕೆ.ಸುರೇಶ್(DK Suresh)ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ವಿಚಾರವಾಗಿ ಡಿಕೆ ಸುರೇಶ್ ವಿರುದ್ದದ ದೂರಿನ‌ ವಿಚಾರಣೆಯನ್ನು ಮಂಗಳೂರು ಕೋರ್ಟ್ ಕೈಗೆತ್ತಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ದೂರುದಾರ ವಿಕಾಸ್ ಪುತ್ತೂರು ಪರ ವಕೀಲ ಮೋಹನ್ ರಾಜ್ ಕೆ.ಆರ್ ವಾದ ಮಂಡಿಸಿದ್ದಾರೆ. …

Read More »

ಮೋದಿ ಮತ್ತೇ ಪ್ರಧಾನಿಯಾದರೆ ಭಾರತ ಪ್ರಪಂಚದಲ್ಲಿಯೇ ಶಕ್ತಿ ಶಾಲಿ ರಾಷ್ಟ್ರವಾಗಲಿದೆ

ಗೋಕಾಕದಲ್ಲಿಂದು ಜರುಗಿದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ: ಭಾರತವು ಮತ್ತಷ್ಟು ಗಟ್ಟಿಯಾಗಲು ನರೇಂದ್ರ ಮೋದಿಯವರು ಮತ್ತೋಮ್ಮೆ ನಮ್ಮ ರಾಷ್ಟ್ರದ ಪ್ರಧಾನಿಯಾಗಬೇಕು. ಮತ್ತೋಮ್ಮೆ ಮೋದಿಯವರಿಗಾಗಿ ಕಾರ್ಯಕರ್ತರು ಪ್ರತಿ ಮನೆ-ಮನೆ ಬಾಗಿಲಿಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಬೇಕು. ಬರುವ ಮಾರ್ಚ-ಎಪ್ರೀಲ್ ತಿಂಗಳಲ್ಲಿ ಜರುಗುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶ್ರಮಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು. ಬುಧವಾರದಂದು …

Read More »

ಬಿಜೆಪಿಗೆ ವಾಪಸ್ಸು ಹೋಗಲು ತನಗೇನು ಹುಚ್ಚಾ ಎಂದು ಸವದಿ

ಬಿಜೆಪಿಯಲ್ಲಿ ಅವಮಾನಕ್ಕೀಡಾಗಿ ನೋವು ಅನುಭವಿಸುತ್ತಿದ್ದ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತನಗೆ ಆಶ್ರಯ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರು ತಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ, ವಾಸ್ತವತೆ ಹೀಗಿರುವಾಗ ಬಿಜೆಪಿಗೆ ವಾಪಸ್ಸು ಹೋಗಲು ತನಗೇನು ಹುಚ್ಚಾ ಎಂದು ಸವದಿ ಹೇಳಿದರು.

Read More »

ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಓಕೆ: ಆಗದಿರಲಿ ಭಾರತದ ಸಮಗ್ರತೆಗೆ ಧಕ್ಕೆ

ಸ್ವಲ್ಪ ನೆನಪು ಮಾಡಿಕೊಳ್ಳಿ. 2018 ವಿಧಾನಸಭೆ ಚುನಾವಣೆಗೆ 10 ತಿಂಗಳು ಸಮಯ ಇದೆ ಎನ್ನುವಾಗ ನಡೆದ ಆ ಚರ್ಚೆ. ಆಗ ಚರ್ಚೆಗೆ ರಾಜ್ಯದಲ್ಲಿ ದೊಡ್ಡ ರಾಜಕೀಯ ವಿಷಯ ಇರಲಿಲ್ಲ. ಆಡಳಿತರೂಢ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟುವ ಲಕ್ಷಣ ಇತ್ತು. ಆಗ ಮುಖ್ಯಮಂತ್ರಿ ಆಗಿದ್ದ, ಕರ್ನಾಟಕದ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಮ್ಮಿಂದೊಮ್ಮೆಲೆ ಹಿಂದಿ-ವಿರೋಧಿ ಚಳವಳಿಯ ತಿದಿ ಒತ್ತಿದರು. ಒಮ್ಮೆಲೆ ಎಲ್ಲೆಲ್ಲೂ ಚರ್ಚೆ ಮೊಳಗಿತು. ಕನ್ನಡದ ಅಸ್ಮಿತೆ ಉಳಿಸಿ ಎಂಬ ಉದ್ಘೋಷ ಎಲ್ಲೆಲ್ಲೂ …

Read More »

ಧಾರವಾಡದಲ್ಲಿ ಸನಾತನವಾದಿಗಳ ವಿರುದ್ಧ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಆಕ್ರೋಶ

ಧಾರವಾಡ, : ಸನಾತನವಾದಿಗಳ ವಿರುದ್ಧ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ (Sanehalli panditaradhya shivacharya swamiji) ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಡ(Dharwad) ದಲ್ಲಿ ಸಂಶೋಧಕ ಡಾ.ಕಲಬುರ್ಗಿ ಹತ್ಯೆ ಪ್ರಸ್ತಾಪಿಸಿ ಮಾತನಾಡಿದ ಅವರು ‘ ಡಾ.ಎಂ.ಎಂ.ಕಲಬುರ್ಗಿಯನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ. ಅಂತಹ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಸನಾತನವಾದಿಗಳು ಮೊದಲಿನಿಂದಲೂ ಇಂತಹ ಕಿರುಕುಳ ಕೊಡುತ್ತಿದ್ದಾರೆ. ಅದು 12ನೇ ಶತಮಾನದಲ್ಲೂ ಸತ್ಯ, 21ನೇ ಶತಮಾನದಲ್ಲೂ ಸತ್ಯ ಎಂದು ಕಿಡಿಕಾರಿದರು. ಅವರು ವ್ಯಕ್ತಿಯನ್ನು ಕೊಲ್ಲಬಹುದು, ವ್ಯಕ್ತಿಯ ವಿಚಾರವನ್ನು …

Read More »

ಕಾಂಗ್ರೆಸ್​ ತೊರೆದು ವಾಪಸ್ ಬಿಜೆಪಿ ಸೇರ್ಪಡೆಗೆ ಮುಂದಾದ ಮಾಜಿ ಶಾಸಕ!

ದಾವಣಗೆರೆ, : ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮತ್ತೆ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ. ಲೋಕಾಯುಕ್ತ ಬಲೆಗೆ ಬಿದ್ದು ಪಕ್ಷದಿಂದ ಉಚ್ಛಾಟನೆಗೊಂಡಿರುವ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಅವರು ನಾಳೆ ಅಂದರೆ ಫೆಬ್ರವರಿ 07ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್​​ ಮಾಜಿ ಶಾಸಕ ಎಚ್. ಪಿ. ರಾಜೇಶ್ ಬಿಜೆಪಿಯತ್ತ ಮುಖ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪರಿಶಿಷ್ಟ ಪಂಗಡ ಮೀಸಲು‌ ಕ್ಷೇತ್ರದ ಕಾಂಗ್ರೆಸ್​ನ ಮಾಜಿ ಶಾಸಕ ಎಚ್. …

Read More »

ರಸ್ತೆಯಲ್ಲಿ ಹರಿದ ಡೀಸೆಲ್, ಆಯಿಲ್

ಚಾಲುಕ್ಯ ಸರ್ಕಲ್ ನಲ್ಲಿ ಸುಮಾರು 100 ಮೀಟರ್ ವರೆಗೆ ಡೀಸೆಲ್ ಹಾಗೂ ಆಯಿಲ್ ಹರಿದಿತ್ತು. ಈ ವೇಳೆ ಪೊಲೀಸರು ರಸ್ತೆಯಲ್ಲಿ ಹರಿದಿದ್ದ ಆಯಿಲ್ ಹಾಗೂ ಡೀಸೆಲ್ ಸ್ವಚ್ಛಗೊಳಿಸುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದಿದ್ದ ಹಿನ್ನಲೆ ರಸ್ತೆಯಲ್ಲಿ ಹರಿದಿದ್ದ ಆಯಿಲ್ ಹಾಗೂ ಡೀಸೆಲ್ ಮೇಲೆ ಮಣ್ಣು ಹಾಕಿ ಸಂಚಾರಿ ಪೊಲೀಸರೇ ರಸ್ತೆ ಸ್ವಚ್ಛಗೊಳಿಸಿದ್ದಾರೆ. ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಟಿಪ್ಪರ್ ಹತ್ತಿದೆ. ಈ ಪರಿಣಾಮ ಚಾಲುಕ್ಯ …

Read More »

ಪೊಲೀಸ್ ಇಲಾಖೆಯಲ್ಲಿ ಕಳ್ಳಾಟ ಆಡುತ್ತಿದ್ದ ಅಧಿಕಾರಿಗಳಿಗೆ ಶಾಕ್; ವರ್ಗಾವಣೆ ನಂತರ NOC, LPC ಕಡ್ಡಾಯ

ಬೆಂಗಳೂರು, : ಪೊಲೀಸ್ ಇಲಾಖೆಯಲ್ಲಿ (Police Department) ಕಳ್ಳಾಟ ಆಡುತ್ತಿದ್ದ ಅಧಿಕಾರಿಗಳಿಗೆ ಶಾಕ್. ವರ್ಗಾವಣೆ ನಂತರ ಇಷ್ಟ ಬಂದಂತೆ ವರ್ತಿಸುತ್ತಿದ್ದವರಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಚಾಟಿ ಬೀಸಿದ್ದಾರೆ. ನಗರ ಪೊಲೀಸ್ ಆಯುಕ್ತರು ಪ್ರತಿ ಠಾಣೆಗೆ ಭೇಟಿ ಮಾಡಿದಾಗ ಪೊಲೀಸರ ಕಳ್ಳಾಟ ಬಯಲಾಗಿದೆ. ಹೀಗಾಗಿ ಮುಂದೆ ಹೀಗೆ ಆಗದಂತೆ ಖಡಕ್ ಆಗಿ ಸೂಚನೆ ಕೊಟ್ಟಿದ್ದಾರೆ. ಹಾಗೂ ಕೆಲವು ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. ವರ್ಗಾವಣೆ ನಂತರ ಕೆಲಸಕ್ಕೆ …

Read More »