Breaking News

Yearly Archives: 2024

ಶವಸಂಸ್ಕಾರಕ್ಕೆ ಜಮೀನು ಬಿಡದ ಮಾಲೀಕ, ಗ್ರಾಮಸ್ಥರ ಕಿತ್ತಾಟ

ಬೆಳಗಾವಿ, : ಸ್ಮಶಾನ ವಿಲ್ಲದ ಕಾರಣ ಈ ಹಿಂದೆ ಜಮೀನೊಂದರಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ ಈಗ ಜಮೀನಿನ ಮಾಲೀಕ (Land Owner) ಕೋರ್ಟ್ ಆರ್ಡರ್ ತಂದಿದ್ದು ಅಂತ್ಯಸಂಸ್ಕಾರಕ್ಕೆ (Last Rites) ಅಡ್ಡಿಪಡಿಸಿದ್ದಾನೆ. ಈ ಹಿನ್ನೆಲೆ ಕುಟುಂಬಸ್ಥರು, ಸಂಬಂಧಿಗಳು ಕಳೆದ ಎರಡು ಗಂಟೆಗಳಿಂದ ಸ್ಥಳದಲ್ಲಿ ಶವ ಇಟ್ಟು ಆಕ್ರೋಶ ಹೊರ ಹಾಕಿದ್ದರು. ಸದ್ಯ ಗಲಾಟೆಯಿಂದ ಬೇಸತ್ತ ಮಹಿಳೆಯರು ಮುನ್ನುಗ್ಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಬೆಳಗಾವಿ (Belagavi) ತಾಲೂಕಿನ ಕಾವಳೇವಾಡಿ ಗ್ರಾಮದಲ್ಲಿ ಸ್ಮಶಾನವಿಲ್ಲದೆ, ಅಂತ್ಯಸಂಸ್ಕಾರ …

Read More »

ಮುಸ್ಲಿಮರಿಗೆ ಹೆಚ್ಚು ಅನುದಾನ ಕೊಟ್ರೆ ತಪ್ಪೇನು ಎಂದ ಪರಮೇಶ್ವರ: ಯತ್ನಾಳ ಆಕ್ರೋಶ

ವಿಜಯಪುರ: ಮುಸ್ಲಿಮರಿಗೆ ಸ್ವಲ್ಪ ಹೆಚ್ಚು ಅನುದಾನ ಕೊಟ್ಟರೆ ತಪ್ಪೇನು ಎಂದು ಗೃಹ ಸಚಿವ ಡಾ. ಪರಮೇಶ್ವರ ನೀಡಿರುವ ಹೇಳಿಕೆಯನ್ನು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಯತ್ನಾಳ, ಡಾ.ಪರಮೇಶ್ವರ್ ಅವರೇ, ಸರ್ವ ಧರ್ಮ ಸಹಿಷ್ಣುತೆ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷಣೆಗಳು ನಿಮ್ಮ ಭಾಷಣಕ್ಕೆ ಸೀಮಿತವಾಯಿತೇ? ತೆರಿಗೆ ದಾರರ ಹಣವನ್ನು equitable ಆಗಿ ಹಂಚಬೇಕಾಗಿದ್ದು ಸರ್ಕಾರದ ಹೊಣೆ. ಮುಸಲ್ಮಾನರಿಗೆ ಹೆಚ್ಚು, …

Read More »

ನೀರಿನ ಸಮಸ್ಯೆ ಉಲ್ಬಣ ಆತಂಕ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚತೊಡಗಿದೆ. ಮುಂದಿನ ದಿನಗಳಲ್ಲಿ ಇದು ತಾರರಕ್ಕೆ ಹೋಗುವ ಸಾಧ್ಯತೆ ಇದೆ. ಇದರ ನಿವಾರಣೆ ಮತ್ತು ತುರ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಜಿಲ್ಲೆಯ ಬರಪೀಡಿತ ಪ್ರತಿ ತಾಲ್ಲೂಕಿಗೆ ₹25 ಲಕ್ಷದಂತೆ 8 ತಾಲ್ಲೂಕುಗಳಿಗೆ ತಾತ್ಕಾಲಿಕವಾಗಿ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ.   ಧಾರವಾಡ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಶಹರ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಮತ್ತು ಕಲಘಟಗಿ ತಾಲ್ಲೂಕುಗಳಲ್ಲಿ ಕುಡಿಯುವ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಊರಿನ ಮುಖಂಡರಿಗೆ, ರೈತರಿಗೆ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗದವರಿಗೆ ಸತ್ಕಾರ

ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಕಟ್ಟಡದ ಉದ್ಘಾಟನೆ ನಿಮಿತ್ತವಾಗಿ ಆಧ್ಯಾತ್ಮಿಕ ನಾಟಕವನ್ನು ಹಮ್ಮಿಕೊಂಡಿದ್ದರು.   ಈ ಸಂದರ್ಭದಲ್ಲಿ ಪೂಜ್ಯರಿಗೆ, ಊರಿನ ಮುಖಂಡರಿಗೆ, ರೈತರಿಗೆ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗದವರಿಗೆ ಸತ್ಕಾರ ಮಾಡಿದರು.   ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಯುವ ನಾಯಕ ಸಂತೋಷ …

Read More »

ಕಲಘಟಗಿ: ಉಳವಿ ಪಾದಯಾತ್ರಿಗಳಿಗೆ ದಾಸೋಹ

ಕಲಘಟಗಿ: ಉಳವಿಯ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆಯಲ್ಲಿ ತೆರಳುವವರಿಗೆ ಪಟ್ಟಣದ ಹೊರವಲಯದ ತಡಸ ಕ್ರಾಸ್ ಹತ್ತಿರ ತಿಪ್ಪಣ್ಣ ಹಾಗೂ ಮಂಜುಳಾ ಕುರಗುಂದ ದಂಪತಿ ಪ್ರತಿ ವರ್ಷದಂತೆ ಈ ವರ್ಚವೂ ವಿಶ್ರಾಂತಿ ಮಂಟಪದಲ್ಲಿ ಅನ್ನ ದಾಸೋಹ ಹಮ್ಮಿಕೊಂಡಿದ್ದಾರೆ. ಭಕ್ತರ ಸಹಕಾರದಿಂದ ಈ ದಂಪತಿ 14 ವರ್ಷಗಳಿಂದ ಉಳವಿಗೆ ಪಾದಯಾತ್ರೆ ತೆರಳುವ ಭಕ್ತರಿಗೆ ಬೆಳಗಿನ ಉಪಾಹಾರ, ಚಹಾ, ಮಧ್ಯಾಹ್ನದ ಊಟ, ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುತ್ತಿದ್ದಾರೆ. ದಾಸೋಹದ ಜೊತೆಗೆ ಶರಣರ …

Read More »

ಜೈಲಿನಿಂದಲೇ ನಗ್ನ ವಿಡಿಯೋ ಕಳುಹಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್; ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಜೈಲಿನಿಂದಲೇ ರೌಡಿಶೀಟರ್ ನಗ್ನ ವಿಡಿಯೋ ಕಳುಹಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಸೇರಿದಂತೆ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ, ಸುಭಾಷ್ ಹಾಗೂ ಯೋಗೇಶ್ ಬಂಧಿತ ಆರೋಪಿಗಳು. ರೌಡಿಶೀಟರ್ ಮನೋಜ್ ಜೈಲಿನಲ್ಲಿ ಕುಳಿತು ಮಾರ್ಫ್ ಮಾಡಿದ ಮಹಿಳೆಯ ಬೆತ್ತಲೆ ಫೋಟೋ, ವಿಡಿಯೋಗಳನ್ನು ಕಳುಹಿಸಿ ಮಹಿಳೆಯ ತಾಯಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಿನ್ನ ಅಳಿಯನಿಗೆ ಫೋಟೋ, ವಿಡಿಯೋ ಕಳುಹಿಸಿ …

Read More »

ನಾಲತವಾಡ: ಡಿಜಿಟಲ್ ಪೇ ಮೂಲಕ ಬಸ್‌ ಪ್ರಯಾಣ

ನಾಲತವಾಡ: ಬೆಳಗಾವಿಯಿಂದ ನಾಲತವಾಡಕ್ಕೆ ಹಲವು ವಿಶೇಷತೆ ಒಳಗೊಂಡ ಬೆಳಗಾವಿ ಡಿಪೊದ ನೂತನ ಬಸ್ ಓಡಿಸಲಾಗುತ್ತಿದೆ. ಈ ಬಸ್‌ನಲ್ಲಿ ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಬಸ್‍ನಲ್ಲಿ ಹೋಗೋಕೆ ಜೇಬ್‍ನಲ್ಲಿ ದುಡ್ಡು ಇರಲೇ ಬೇಕು ಎನ್ನುವಂತಿಲ್ಲ. ಬಸ್‍ಗಳಲ್ಲಿ ಟಿಕೆಟ್ ಪಡೆಯಲು ಬೆಳಗಾವಿಯ ಈ ಬಸ್ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಇನ್ಮುಂದೆ ನಿಮ್ಮ ಮೊಬೈಲ್‌ನಲ್ಲಿ ಯುಪಿಐ ಪೇಮೆಂಟ್ ಅವಕಾಶ ಇದ್ರೆ ಸಾಕು ಬಸ್‌ನಲ್ಲಿ …

Read More »

ಮಗನ ಶವದ ಮುಂದೆ ‘ಸಿದ್ದರಾಮಯ್ಯ’ ಸರ್ಕಾರದ 2 ಸಾವಿರ ರೂ. ನೆನೆದ ತಾಯಿ: ವಿಡಿಯೋ ವೈರಲ್‌!!

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ ನಂತ್ರ, ಮಹಿಳೆಯರು ಪುಲ್ ಖುಷ್ ಆಗಿದ್ದಾರೆ. ಬಡತನದ ಬೇಗೆಯಲ್ಲಿ ಇದ್ದಂತ ಅದೆಷ್ಟೋ ಯಜಮಾನಿಯರಿಗೆ ಗೃಹ ಲಕ್ಷ್ಮೀ ಯೋಜನೆ ಸಂಸಾರದ ನೊಗವನ್ನೇ ಮುನ್ನೆಡೆಸೋ ಶಕ್ತಿಯನ್ನು ನೀಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅನಾರೋಗ್ಯದಿಂದ ಸಾವನ್ನಪ್ಪಿದಂತ ಮಗನ ಶವದ ಮುಂದೆ ತಾಯಿಯೊಬ್ಬಳು ಕಣ್ಣೀರಿಡುತ್ತಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಆಡುವ ಮಾತು ಮನ ಮಿಡಿಸುತ್ತದೆ. ಆ ಬಗ್ಗೆ ಮುಂದೆ ಓದಿ.   ಸೋಷಿಯಲ್ ಮೀಡಿಯಾದಲ್ಲಿ ಒಂದು …

Read More »

ಸಂಚಾರ ನಿಯಮ ಉಲ್ಲಂಘನೆ: 50 ಸಾವಿರಕ್ಕಿಂತ ಹೆಚ್ಚು ದಂಡವಿರುವ 85 ಬೈಕ್​​ ಸೀಜ್, ದಂಡ ವಸೂಲಿ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ದಂಡವಿದ್ದ ವಾಹನಗಳ ವಿರುದ್ದ ದಕ್ಷಿಣ ಸಂಚಾರ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 84 ದ್ವಿಚಕ್ರ ವಾಹನಗಳು ಮತ್ತು 1 ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದಿರುವ ಈ ವಾಹನಗಳ ಮೇಲೆ 10,210 ಉಲ್ಲಂಘನಾ ಪ್ರಕರಣಗಳು ದಾಖಲಾಗಿದ್ದು‌, ಸುಮಾರು 1.07 ಕೋಟಿ ರೂಪಾಯಿ ದಂಡ ಸಂಗ್ರಹಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಸಂಚಾರ ಪೊಲೀಸರ ಬದಲಾಗಿ ಆತ್ಯಾಧುನಿಕ …

Read More »

ರಾಜಕೀಯಕ್ಕೆ ಡಾಲಿ ಧನಂಜಯ: ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕೆ?

ಬೆಂಗಳೂರು: ವಿಧಾನಸಭಾ ಚುಣಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್‌ ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಕಾಂಗ್ರೆಸ್‌ ಮುಂದಿನ ಲೋಕಸಭಾ ಚುಣಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ‌ ದೊಡ್ಡದೊಂದು ಸಂಚಲನ ಸೃಷ್ಟಿ ಮಾಡಲು ಕಾಂಗ್ರೆಸ್‌ ಕಾರ್ಯತಂತ್ರ ಸಿದ್ಧವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಕ್ಷೇತ್ರವಾಗಿರುವ ಮೈಸೂರು ಕ್ಷೇತ್ರವನ್ನು ಗೆಲ್ಲಲು ಒಂದು …

Read More »