Breaking News

Yearly Archives: 2024

ಸಾಂಪ್ರದಾಯಿಕ ಹಣತೆಗಳು, ಬೇಕಿದೆ ಸರ್ಕಾರದ ನೆರವು

ಚಿಕ್ಕೋಡಿ: ದೀಪಾವಳಿ ಬಂದರೆ ಸಾಕು; ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಸಡಗರ ಇಮ್ಮಡಿಯಾಗುತ್ತಿತ್ತು. ಮಣ್ಣಿನ ಹಣತೆಗಳನ್ನು ಮಾಡಲು ನಾಲ್ಕು ತಿಂಗಳು ಮೊದಲು ಸಿದ್ಧತೆ ನಡೆಯುತ್ತಿದ್ದವು. ಇಲ್ಲಿನ 30ಕ್ಕೂ ಹೆಚ್ಚು ಕುಂಬಾರ ಕುಟುಂಬಗಳು ಈ ಹಬ್ಬಕ್ಕಾಗಿ ಕಾಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಕುಂಬಾರರಿಗೂ ದೀಪಾವಳಿಗೆ ಸಂಬಂಧವೇ ಇಲ್ಲ ಎಂಬಷ್ಟು ಸಮಸ್ಯೆ ತಲೆದೋರಿದೆ. ಜೇಡಿಮಣ್ಣಿನ ಹಣತೆಗೆ ಬೇಡಿಕೆ ಇಲ್ಲದೇ ಕುಂಬಾರರು ಕುಂಬಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ದೀಪಾವಳಿ ಹಬ್ಬದಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿಸುವುದು ಸಾಮಾನ್ಯವಾಗಿತ್ತು. ಆದರೆ ಇಂದು …

Read More »

ಬಯಲು ನಾಡ’ಲ್ಲಿ ಬೆಳಕಿನ ಹಬ್ಬ: ಖರೀದಿ ಭರಾಟೆ ಜೋರು, ತರಹೇವಾರಿ ಖಾದ್ಯದ ಘಮಲು

ಬೈಲಹೊಂಗಲ: ಇದೀಗ ತಾನೆ ಚನ್ನಮ್ಮನ ವಿಜಯೋತ್ಸವದ ಸಂಭ್ರಮದಲ್ಲಿ ಮಿಂದೆದ್ದ ಬೈಲಹೊಂಗಲ ಜನರಿಗೆ ಮತ್ತೊಂದು ಸಡಗರ ಬಂದಿದೆ. ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲೆಡೆ ಈಗ ದೀಪಾವಳಿಯ ಸಂಭ್ರಮ ಮನೆಮಾಡಿದೆ. ತೋರಣ, ಕಬ್ಬು, ಕಾರ್ತಿಕ ಬುಟ್ಟಿ, ಹೊಸ ಬಟ್ಟೆ ಖರೀದಿ ಜೋರಾಗಿದೆ. ದೀಪಾವಳಿಯ ಹಬ್ಬದ ಉಡುಗೊರೆಯಾಗಿ ಕಳೆದ ಒಂದು ತಿಂಗಳ ಹಿಂದೆ ಸುರಿದ ದೊಡ್ಡ ಮಳೆಯಿಂದ ರೈತರು, ವ್ಯಾಪಾರಸ್ಥರು ಖುಷಿಯಾಗಿದ್ದಾರೆ. ದೀಪಾವಳಿ ಸಂಭ್ರಮ ಮನೆಮನೆಗಳಲ್ಲಿ ತುಪ್ಪದ ಘಮಲು ಬೀರುವಂತೆ ಮಾಡಿದೆ. ಭರ್ಜರಿ ಹೋಳಿಗೆ, ವಡೆ, …

Read More »

ರಿವಾಲ್ವರ್ ಇಟ್ಟುಕೊಂಡ ಆಂಜನೇಯ

ಚಿಕ್ಕೋಡಿ: ದೇವರ ಆಯುಧಗಳು ಎಂದರೆ, ಗದೆ, ಬಿಲ್ಲು, ಖಡ್ಗ, ತ್ರಿಶೂಲ, ಶಂಖ, ಚಕ್ರ ನೋಡಿರುತ್ತೀರಿ. ಆದರೆ, ಪಿಸ್ತೂಲ್‌ ಅನ್ನೇ ಆಯುಧವಾಗಿಸಿಕೊಂಡ ದೇವರನ್ನು ನೋಡಬೇಕಾದರೆ ತಾಲ್ಲೂಕಿನ ಜಾಗನೂರಿಗೆ ಬರಬೇಕು. ಇಲ್ಲಿನ ಆಂಜನೇಯ ತನ್ನ ಸೊಂಟಕ್ಕೆ ಪಿಸ್ತೂಲ್ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಜಾತ್ರೆ, ಉತ್ಸವ, ಹನುಮ ಜಯಂತಿ, ರಾಮನವಮಿ ಸೇರಿ ವಿಶೇಷ ಸಂದರ್ಭ ಹನುಮಾನ ದೇವರ ಮೂರ್ತಿ ಅಲಂಕರಿಸುವಾಗ, ಪಿಸ್ತೂಲ್ ಇರಿಸುವ ಪರಿಪಾಠ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೀಪಾವಳಿ ಪ್ರಯುಕ್ತ ನ.1, 2ರಂದು ವೈಭವದಿಂದ …

Read More »

ದೀಪಾವಳಿಗೆ ಆಕಾಶಬುಟ್ಟಿ ಹೊಳಪು

ಧಾರವಾಡ: ‘ಬೆಳಕಿನ ಹಬ್ಬ’ ದೀಪಾವಳಿಗೆ ಕಣ್ಣು ಕೋರೈಸುವ `ದೇಸಿ ಆಕಾಶಬುಟ್ಟಿ’ಗಳು ಮತ್ತು ತರಹೇವಾರಿ `ಮಣ್ಣಿನ ಹಣತೆ’ಗಳು ನಗರದ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ. ಬಟ್ಟೆ, ಕಟ್ಟಿಗೆ, ಮಿಂಚಿನ ಹಾಳೆ, ಉಲನ್ ದಾರದಿಂದ ತಯಾರಿಸಿದ ವಿಭಿನ್ನ ಶೈಲಿಯ ಆಕಾಶಬುಟ್ಟಿಗಳನ್ನು ನೋಡುಗರ ಗಮನ ಸೆಳೆಯುತ್ತಿವೆ. ಸ್ಟಾರ್, ಗಣಪ, ಲಕ್ಷ್ಮೀ ಬಣ್ಣದ ಬಟ್ಟೆಗಳು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಬಗೆಯ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಪ್ರತಿ ವರ್ಷ ಚೀನಾದ ಆಕಾಶಬುಟ್ಟಿಗಳು ಮಾರುಕಟ್ಟೆಗೆ …

Read More »

‘ಹಸಿರು’ ದೀಪಾವಳಿಗೆ ಇರಲಿ ಆದ್ಯತೆ

ಹುಬ್ಬಳ್ಳಿ: ದೀಪಾವಳಿ ಹಬ್ಬವೆಂದರೆ ಎಲ್ಲೆಡೆ ಸಡಗರ. ಹಬ್ಬದಲ್ಲಿ ದೀಪಗಳಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವವನ್ನು ಜನರು ಪಟಾಕಿಗಳಿಗೂ ನೀಡುತ್ತಾರೆ. ಪಟಾಕಿಗಳೆಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚು. ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಅ.31ರಿಂದ ನ.2ರವರೆಗೆ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿಗಳನ್ನು ಹಾರಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ. ಪಟಾಕಿ ಹಚ್ಚಿದಾಗ ಬರುವ ಶಬ್ದ, ವಿವಿಧ ಬಣ್ಣ, …

Read More »

ದೀಪಾವಳಿ, ಸಾಲು ಸಾಲು ರಜೆಗೆ ಊರಿಗೆ ಹೊರಟ ಭಾರೀ ಜನ: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್: ಬಸ್ ಸೀಟ್ ಗಾಗಿ ನೂಕುನುಗ್ಗಲು

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಜನ ಬೆಂಗಳೂರಿನಿಂದ ಊರಿಗೆ ತೆರಳುತ್ತಿದ್ದು, ಟೌನ್ ಹಾಲ್ ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಜೇಸಿ ರಸ್ತೆ, ಮೈಸೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಗಾಂಧಿನಗರ ಸುತ್ತಮುತ್ತ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ 2 ಗಂಟೆಯಿಂದಲೂ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದೆ. ಟ್ರಾಫಿಕ್ ಜಾಮ್ ಹಿನ್ನಲೆಯಲ್ಲಿ ಎಲ್ಲೆಂದರಲ್ಲಿ ಬೈಕ್ ಸವಾರರು ಯುಟರ್ನ್ ತೆಗೆದುಕೊಳ್ಳುತ್ತಿದ್ದಾರೆ. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಎಐ ಸಿಗ್ನಲ್ ಗಳು ಕೆಲಸಕ್ಕೆ ಬಾರದಂತಾಗಿದೆ. ವಾಹನಗಳ …

Read More »

ಕರ್ನಾಟಕದಲ್ಲಿ ಹೊಸ 11 ವೈದ್ಯಕೀಯ ಕಾಲೇಜು ನಿರ್ಮಾಣ

ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಸರ್ಕಾರ ರಾಜ್ಯದಲ್ಲಿ 11 ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಈ ಮಾದರಿ ಕಾಲೇಜುಗಳು ನಿರ್ಮಾಣವಾಗಲಿದೆ. ಯಾವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು ಇಲ್ಲವೋ ಅಲ್ಲಿ ಹೊಸ ಕಾಲೇಜುಗಳು ನಿರ್ಮಾಣಗೊಳ್ಳಲಿವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಶರಣ ಪ್ರಕಾಶ್ ಪಾಟೀಲ ಹೇಳಿದ್ದಾರೆ.   ಸದ್ಯ ರಾಜ್ಯದ 22 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. 11 ಜಿಲ್ಲೆಗಳಲ್ಲಿ ಕಾಲೇಜುಗಳಿಲ್ಲ. ಆದ್ದರಿಂದ ಸರ್ಕಾರ …

Read More »

ನಕಲಿ ವೈದ್ಯರಿಗೆ ಕಡಿವಾಣ ಹಾಕಿ’

ರಾಮದುರ್ಗ: ‘ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿದೆ. ಇದರಿಂದ ಜನರಿಗೆ ಸ್ವಲ್ಪ ಪ್ರಮಾಣದ ಸಹಾಯವಾಗಿದ್ದರೂ ಪ್ರಾಣದ ಜೊತೆಗೆ ಆಟವಾಡುವ ನಕಲಿ ವೈದ್ಯರಿಗೆ ಕಡಿವಾಣ ಹಾಕಲಾಗುವುದು’ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.   ರಾಮದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ₹55 ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್‌ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ‘ತರಬೇತಿ ಇಲ್ಲದೆ ನಕಲಿ ವೈದ್ಯರು ನೀಡುವ ಚಿಕಿತ್ಸೆ ಮತ್ತು ಔಷಧದಿಂದ ರೋಗಿಗಳಿಗೆ ತಾತ್ಕಾಲಿಕವಾಗಿ …

Read More »

ಕೃಷ್ಣೆ ಮಡಿಲ ಕುವರನಿಗೆ ‘ರಾಜ್ಯೋತ್ಸವ’ ಗರಿ

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಹಟ್ಟಿ ಮೂಲದವರಾದ, ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. 1955ರ ಆಗಸ್ಟ್‌ 1ರಂದು ತವನಪ್ಪ ಹಾಗೂ ಸಂಕವ್ವ ದಂಪತಿ ಪುತ್ರರಾಗಿ ಬಾಳಾಸಾಹೇಬ ಜನಿಸಿದರು. ಬಾಗಲಕೋಟೆಯ ಎಸ್‌.ಸಕ್ರಿ ಪದವಿಪೂರ್ವ ಕಾಲೇಜಿನಲ್ಲಿ ಭೂಗೋಳ ವಿಜ್ಞಾನ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.   8 ಕಥಾ ಸಂಕಲನಗಳು, 10 ಕಾದಂಬರಿಗಳು, 6 ವಿಮರ್ಶಾ ಕೃತಿಗಳು, ಎರಡು ಸಂಶೋಧನಾ ಗ್ರಂಥ, ಎರಡು …

Read More »

ಚಿಕ್ಕೋಡಿ | ಯಮನವ್ವಗೆ ಸುವರ್ಣ ಕರ್ನಾಟಕ ಪ್ರಶಸ್ತಿ

ಚಿಕ್ಕೋಡಿ: ತಾಲ್ಲೂಕಿನ ಧುಳಗನವಾಡಿ ಗ್ರಾಮದ ಹಿರಿಯ ಬಯಲಾಟ ಕಲಾವಿದೆ ಯಮನವ್ವಾ ಕಲಾಚಂದ್ರ(86) ಅವರ ಕಲೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಯಮನವ್ವಾ ಅವರು ವಿವಿಧ ಕಲಾ ಪ್ರಕಾರಗಳಲ್ಲಿ 6 ದಶಕಗಳಿಂದ ಕಲಾಸೇವೆ ಸಲ್ಲಿಸಿದ್ದಾರೆ. 2015-16ನೇ ಸಾಲಿನಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ ಪಡೆದುಕೊಂಡ ಅವರಿಗೆ ಸುವರ್ಣ ಕರ್ನಾಟಕದ ಸಂಭ್ರಮದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ಲಭಿಸಿದ್ದು ಚಿಕ್ಕೋಡಿ ಭಾಗದ ಕಲಾವಿದರಿಗೆ …

Read More »