ಚಿಕ್ಕೋಡಿ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ ಕಾಮಗಾರಿ ಮುಗಿದು ಒಂದು ವರ್ಷ ಕಳೆದಿದೆ. ಆದರೆ, ಅದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. 1997ರಲ್ಲಿ ಚಿಕ್ಕೋಡಿಗೆ ಈ ವಸತಿ ನಿಲಯ ಮಂಜೂರಾಯಿತು. ಅಂದಿನಿಂದಲೂ ಪಟ್ಟಣದಲ್ಲಿ ಬೇರೆ ಬೇರೆ ಬಾಡಿಗೆ ಕಟ್ಟಡಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಅಲ್ಲಿ ದಾಖಲಾಗುವ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳಲು ಸರಿಯಾಗಿ ಬಸ್ …
Read More »Yearly Archives: 2024
ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಎಚ್‌ಡಿಕೆ
ಮಂಡ್ಯ: ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಇಂದು ಮಧ್ಯಾಹ್ನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ರೈತ ಲಕ್ಷ್ಮಣ ಅವರ ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು. ಈ ಕುರಿತ ಚಿತ್ರಗಳನ್ನು ಅವರು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಭೂಮಿ ತಾಯಿ ಮಕ್ಕಳಾದ ನಮ್ಮೆಲ್ಲರಿಗೂ ಭೂಮಿಯೇ ಸರ್ವಸ್ವ. ಬೇಸಾಯವೇ ಬದುಕು. ಭತ್ತದ ನಾಟಿ ನನ್ನ ಮನೆಯ ಕಾರ್ಯಕ್ರಮವೇ ಆಗಿತ್ತು. ರೈತಾಪಿ ಜನರೊಂದಿಗೆ ಇಂತಹ ಸಾರ್ಥಕ, ಅನನ್ಯ …
Read More »ಮದ್ವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 100 ಬಗೆಯ ಖಾದ್ಯ ತಯಾರಿಸಿ, ಉಣಬಡಿಸಿದ ಅತ್ತೆ!
ವಿಜಯವಾಡ: ಮನೆಗೆ ಬಂದ ಅಳಿಯನಿಗೆ ಅತ್ತೆ-ಮಾವಂದಿರು ವಿಶೇಷ ಮನ್ನಣೆ ನೀಡುವುದು ಸಾಮಾನ್ಯ ಸಂಗತಿ. ಆದರೆ, ಆಂಧ್ರಪ್ರದೇಶದಲ್ಲಿ ಬಹಳ ಹಿಂದಿನಿಂದ ಒಂದು ವಿಶೇಷ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಅದೇನೆಂದರೆ, ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಉಣಬಡಿಸುವುದು. ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಇಂತಹ ಆಚರಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಕಾಕಿನಾಡದಲ್ಲಿ ಮನೆಗೆ ಬಂದ ಹೊಸ ಅಳಿಯನಿಗೆ ಅತ್ತೆ 100 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದಾರೆ. ಇದಕ್ಕೆ …
Read More »HMT ವಶದಲ್ಲಿರುವ ₹10 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿ ಮರುವಶಕ್ಕೆ ಖಂಡ್ರೆ ಸೂಚನೆ
ಬೆಂಗಳೂರು: ನಗರದ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ. 1 ಮತ್ತು 2ರಲ್ಲಿ ₹ 10 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಮರಳಿ ಪಡೆಯಲು ಕ್ರಮ ವಹಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಈ ಕುರಿತು ಟಿಪ್ಪಣಿ ಕಳುಹಿಸಿರುವ ಸಚಿವರು, ‘ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು ಘೋಷಣೆಯಾಗಿ, ಮೈಸೂರು ಮಹಾರಾಜರ …
Read More »‘KSRTC’ಗೆ ಮತ್ತೊಂದು ಗರಿಮೆ
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿಸಿಗೆ ಈಗಾಗಲೇ ಅನೇಕ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ರಾಜ್ಯದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿರುವಂತ ನಿಗಮಕ್ಕೆ, ಈಗ ಮತ್ತೊಂದು ಗರಿಮೆ ಸಂದಿದೆ. ಅದೇ ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ ಪ್ರಶಸ್ತಿ 2024 ಅನ್ನು ತನ್ನದಾಗಿಸಿಕೊಂಡಿದೆ. ಈ ಕುರಿತಂತೆ ನಿಗಮದವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೆ.ಎಸ್.ಆರ್.ಟಿ.ಸಿ ಗೆ ಟಿವಿ-9 ನೆಟ್ವರ್ಕ್ ನ ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ ಪ್ರಶಸ್ತಿ-2024 …
Read More »‘ಕರ್ನಾಟಕ’ದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ‘CCA ಕಾಯ್ದೆ’ಯಡಿ ‘ಭಾರತೀಯ ಪೌರತ್ವ’
ರಾಯಚೂರು: ಕರ್ನಾಟಕದಲ್ಲಿ ವಾಸಿಸುತ್ತಿದ್ದಂತ ಐವರು ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಪ್ ಗಳಲ್ಲಿ ಐವರು ಬಾಂಗ್ಲಾ ನಿರಾಶ್ರಿತರು ವಾಸಿಸುತ್ತಿದ್ದರು. ಅವರಿಗೆ ಸಿಎಎ ಅಡಿಯಲ್ಲಿ ಈಗ ಭಾರತೀಯ ಪೌರತ್ವ ದೊರೆತಿದೆ. ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಗ್ ನ ನಿವಾಸಿಗಳಾದಂತ ರಾಮಕೃಷ್ಣನ್ ಅಭಿಕರಿ, ಸುಕುಮಾರ, ಮೊಂಡಲ್, ಬಿ.ಪ್ರಸಾದ ಗೋಲ್ಡರ್, ಜಯಂತ್ ಮೊಂಡಲ್ ಹಾಗೂ ಅದ್ವಿತ …
Read More »ಚಿಕ್ಕಣ್ಣಗೆ ಶುರುವಾಯ್ತು ಸಂಕಷ್ಟ!
ದರ್ಶನ್ ಪ್ರಕರಣದಲ್ಲಿ ನಟ ಚಿಕ್ಕಣ್ಣ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಚಿಕ್ಕಣ್ಣ ಅವರ ಹೇಳಿಕೆಯೇ ಈಗ ದರ್ಶನ್‌ಗೆ ಕಂಟಕವಾಗಿದ್ದು ಚಿಕ್ಕಣ್ಣ ಅವರಿಗೆ ತಲೆನೋವಾಗಿದೆ. ದರ್ಶನ್ ವಿರುದ್ಧ ಹಲವು ಮಹತ್ವದ ಸಾಕ್ಷಿಗಳನ್ನು ಕಲೆಹಾಕಿರುವ ಪೊಲೀಸರು, ಚಿಕ್ಕಣ್ಣ ವಿಚಾರದಲ್ಲೂ ಚಾಣಾಕ್ಷತೆಯಿಂದ ನಡೆದುಕೊಂಡಿದ್ದಾರೆ. ಈಗ ಚಿಕ್ಕಣ್ಣ ಅವರ ಹೇಳಿಕೆ ಕೂಡ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಗ್ಯಾಂಗ್‌ಗೆ ಶಿಕ್ಷೆ ಕೊಡಿಸಲು ಮಹತ್ವದ ಸಾಕ್ಷಿಯಾಗುವ ಸಾಧ್ಯತೆ ಇದೆ. …
Read More »ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್- ಸೋನಲ್
ಬೆಂಗಳೂರು: ಡೈರೆಕ್ಟರ್ ತರುಣ್ ಕಿಶೋರ್ ಸುಧೀರ್ ಹಾಗೂ ಕನ್ನಡದ ನಟಿ ಸೋನಲ್ ಮಂಥೆರೊ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತರುಣ್ ಕಿಶೋರ್ ಸುಧೀರ್ , ಸೋನಲ್ ಮಂಥೆರೊ ಜೋಡಿ ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಈ ಜೋಡಿಯ ಹೊಸ ಜೀವನಕ್ಕೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಆಗಸ್ಟ್-11 ರಂದು ಬೆಳಗ್ಗೆ 10:50 ರಿಂದ 11:35 ಸಮಯದ ತುಲಾ ಲಗ್ನದಲ್ಲಿ …
Read More »ವಿಜಯೇಂದ್ರ ಹಗರಣದ ತನಿಖೆಗೆ ಯತ್ನಾಳ ಪಾದಯಾತ್ರೆ ನಡೆಸಲಿ:ಎಂ.ಬಿ.ಪಾಟೀಲ ವ್ಯಂಗ್ಯ
ವಿಜಯಪುರ: ಬಿಜೆಪಿ ಪಕ್ಷದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಮತ್ತೊಂದು ಪಾದಯಾತ್ರೆ ನಡೆಸಲಿದ್ದಾರಂತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿರುವ ಭ್ರಷ್ಟಾಚಾರದ ಪಟ್ಟಿ ಇರಿಸಿಕೊಂಡು ಯತ್ನಾಳ್ ಪಾದಯಾತ್ರೆ ನಡೆಸಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ. ಭಾನುವಾರ (ಆ.11) ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ, ಬಿಎಸ್ವೈ ಒಂದು ಬಣ, ಅಶೋಕ್ ಬಣ, ಅಶ್ವತ್ಥನಾರಾಯಣ ಬಣ, ರಮೇಶ ಜಾರಕಿಹೊಳಿ, ಯತ್ನಾಳ ಬಣ, ಬಿ.ಎಲ್. ಸಂತೋಷ …
Read More »ಬೆಂಗಳೂರಿನ ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್
ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಕಾಫಿ ಔಟ್ ಲೆಟ್ ನ ಕಸದ ಬುಟ್ಟಿಯೊಳಗೆ ಸುಮಾರು ಎರಡು ಗಂಟೆಗಳ ಕಾಲ ವೀಡಿಯೊ ರೆಕಾರ್ಡಿಂಗ್ ಮಾಡಿದಂತ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಸಂಬಂಧ ಕೆಫೆ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾನಗರದ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಔಟ್ ಲೆಟ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಶೌಚಾಲಯದಲ್ಲಿ ಫೋನ್ ಅಡಗಿಸಿಟ್ಟಿದ್ದಾರೆ ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ಸಿನಿಪುರ್’ ಎಂಬ …
Read More »