Breaking News

Yearly Archives: 2024

ಗದ್ದೆಗೆ ನುಗ್ಗಿದ ದೊಡ್ಡ ಹಳ್ಳದ ನೀರು. ನೂರಾರು ಎಕರೆ ಭತ್ತದ ಗದ್ದೆ ಜಲಾವೃತ

ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ದೊಡ್ಡ ಹಳ್ಳದ ನೀರು ನೂರಾರು ಎಕರೆ ಭತ್ತದ ಗದ್ದೆಗಳಿಗೆ ನುಗ್ಗಿದ್ದು, ಗದ್ದೆಗಳಲ್ಲಿ ಎಲ್ಲೆಲ್ಲಿಯೂ ನೀರು ಕಂಡುಬರುತ್ತದೆ. ತಾಲೂಕಿನ ಕರೂರು, ದರೂರು ಹಾಗಲೂರು, ಹೊಸಹಳ್ಳಿ, ಗೋಸಬಾಳ,ಬೂದುಗುಪ್ಪ ಗ್ರಾಮಗಳ ರೈತರು ನಾಟಿ ಮಾಡಿದ ನೂರಾರು ಎಕರೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು ಭತ್ತದ ಗದ್ದೆಗಳು ನೀರಿನ ಕೆರೆಗಳಂತೆ ಕಂಡುಬರುತ್ತವೆ ಮಳೆಗಾಲ ಆರಂಭವಾಗಿ ಮೂರು ತಿಂಗಳಾದರೂ ದೊಡ್ಡ ಹಳ್ಳದ ನದಿ ಪಾತ್ರದಲ್ಲಿ ದೊಡ್ಡ ಮಳೆಯಾಗಿರಲಿಲ್ಲ, ಆದರೆ ಕಳೆದ ತಿಂಗಳು ಸುರಿದ ಸಾಮಾನ್ಯ …

Read More »

ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಚಪ್ಪಲಿ ಹಾರ. ಬಿಗುವಿನ ವಾತಾವರಣ

ವಿಜಯಪುರ: ಸ್ವಾತಂತ್ರ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫೋಟೋಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅಪಮಾನಿಸಿರುವ ಘಟನೆ ಜಿಲ್ಲೆಯ ಹಗರಗುಂಡ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ತಾಳಿಕೋಟಿ ತಾಲೂಕಿನ ಹಗರಗುಂಡ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ರಾಯಣ್ಣ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದಾರೆ. ಸೋಮವಾರ ತಡರಾತ್ರಿ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮಂಗಳವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬರುತ್ತಲೇ ಗ್ರಾಮದಲ್ಲಿ …

Read More »

ಭಾರೀ ಮಳೆಗೆ ತುಂಬಿ ಹರಿದ ಹಳ್ಳ. ಹತ್ತಿ ಹೊಲದ ತುಂಬೆಲ್ಲ ನೀರು

ರಾಯಚೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೂ ಭಾರೀ ಮಳೆ ಸುರಿದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿದರೆ ಹೊಲದಲ್ಲೆಲ್ಲ ನೀರು ನುಗ್ಗಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗಧಾರ ಗ್ರಾಮದಲ್ಲಿ ಅಬ್ಬರಿಸಿದ ಮಳೆಯಿಂದ ಹಳ್ಳ ತುಂಬಿ ಹರಿದಿದೆ. ಗಧಾರ ಗ್ರಾಮದಿಂದ ಯರಗೇರಾಕ್ಕೆ ಹೋಗುವ ಮಾರ್ಗದಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಹತ್ತಿ ಹಾಗೂ ಇತರ ಬೆಳೆ ಹಾನಿಗೊಂಡಿವೆ. ಭಾರಿ ಮಳೆಯಿಂದ ಹಲವೆಡೆ ಸೇತುವೆ ಮೇಲ್ಬಾಗದಲ್ಲಿ …

Read More »

ಸಿಎಂ ಯಾವ ತಪ್ಪು ಮಾಡಿಲ್ಲ. ಹೆದರಿಕೆ ಅನ್ನೋದು ಅವರ ರಕ್ತದಲ್ಲೇ ಇಲ್ಲ: ಡಿಕೆಶಿ

ಕಲಬುರಗಿ: ಸಿದ್ದರಾಮಯ್ಯ ಅವರ ರಕ್ತದಲ್ಲೇ ಹೆದರಿಕೆ ಅನ್ನೋದಿಲ್ಲ, 40 ವರ್ಷ ಇಂತಹ ಎಷ್ಟೋ ರಾಜಕಾರಣ ನೋಡಿದ್ದಾರೆ. ಹೆದರಿಕೆ ಅನ್ನೋದು ಅವರ ರಕ್ತದಲ್ಲೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದರಿಕೆ ಅನ್ನೋದು ಸಿದ್ದರಾಮಯ್ಯ ಅವರ ರಕ್ತದಲ್ಲೇ ಇಲ್ಲ. ಸತ್ಯಕ್ಕೆ ಯಾವತ್ತಿಗೂ ಜಯ ಸಿಗುತ್ತದೆ. ನಮ್ಮ ಮುಖ್ಯಮಂತ್ರಿಗಳು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ದಲಿತ ರಾಜ್ಯಪಾಲ ಎನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ …

Read More »

ಶತಮಾನ ಕಂಡ ಶಾಲೆ ಕಟ್ಟಡ ಧ್ವಂಸ ಮಾಡಿದ ಕಿಡಿಗೇಡಿಗಳು

ಹುಬ್ಬಳ್ಳಿ: ಇಲ್ಲಿನ ಗಿರಣಿಚಾಳದಲ್ಲಿರುವ ಶತಮಾನ ಕಂಡ ಶಾಲೆ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯವಾಗಿದ್ದು, ಜಾಗ ಕಬಳಿಸುವ ಹುನ್ನಾರವಾಗಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಸುಮಾರು 135 ವರ್ಷಗಳ ಇತಿಹಾಸವುಳ್ಳ ಶಾಲೆಯಾಗಿದ್ದು, ಹಳೆ ಕಟ್ಟಡವನ್ನು ಕೆಡವಿದ್ದಾರೆ. ತಡರಾತ್ರಿ ಕಿಡಿಗೇಡಿಗಳು ಕಟ್ಟಡ ಕೆಡವಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಕೆಡವಿರುವ ಕಟ್ಟಡದಲ್ಲಿ 4 ಮತ್ತು 5ನೇ ವರ್ಗದ ತರಗತಿಗಳು ನಡೆಯುತ್ತಿದ್ದವು. ಬಾಗಿಲು ಹಾಗೂ ಗೋಡೆ ಭಾಗ ಕೆಡವಿದ್ದು, …

Read More »

ಅಂಬೇಡ್ಕರ ಭವನವನ್ನು ಸಧ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮೂಡಲಗಿ- ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾಜದ ವಿವಿಧ ಚಟುವಟಿಕೆಗಳಿಗೆ ಸುಸಜ್ಜಿತವಾದ ಅಂಬೇಡ್ಕರ ಭವನವನ್ನು ಸಧ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಕಳೆದ ರವಿವಾರದಂದು ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಡಾ. ಬಿ.ಆರ್. ಅಂಬೇಡ್ಕರ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಅನುಕೂಲವಾಗಲು ಈ ಭವನವನ್ನು ನಿರ್ಮಿಸಿದ್ದು, ಸ್ವಚ್ಛತೆಯ ಜತೆಗೆ ಉತ್ತಮ ಕಾರ್ಯಗಳಿಗೆ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಬಾಂಧವರಲ್ಲಿ …

Read More »

ರಮೇಶ , ಸತೀಶ ಜಾರಕಿಹೊಳಿ, ಸಿಎಂ ಹೆಸರಲ್ಲಿ ಪೊಲೀಸರಿಗೆ ಧಮ್ಕಿ,ಹಾಕಿ ‌ಪೊಲೀಸರ ಅತಿಥಿಯಾದ ಸುನೀಲ್ ದಾಸರ್

ಇವನ್ಯಾರೋ ಗೋಕಾಕ ಹೊಸ ಎಂ ಎಲ್ ಎ ?? ಪೊಲೀಸರನ್ನ ಎತ್ತಂಗಡಿ ಮಾಡಾಕ್ ಹೋಗಿ ತಾನೇ ಅಂದರ್.. ಹಲೋ ನಾನ್ ಗೋಕಾಕ ಎಂ ಎಲ್ ಎ ಮಾತಾಡೋದ್ರಿ ನಾ ಹೇಳಿದಂಗ್ ಕೇಳಲಿಲ್ಲ ಅಂದ್ರ ನಿಮ್ಮನ್ನ ಎತ್ತಂಗಡಿ ಮಾಡಿಸ್ತಿನಿ ಹುಷಾರ್ “ ಎಸ್ಪಿ ಐಜಿಗೂ ಎತ್ತಂಗಡಿಯ ಭಯ ಹುಟ್ಟಿಸಿದ್ದ ಖತರ್ನಾಕ್ ಆಸಾಮಿ ಅಂದರ್ , ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಸಿಎಂ ಹೆಸರಲ್ಲಿ ಪೊಲೀಸರಿಗೆ ಧಮ್ಕಿ . ಎಂ ಎಲ್ ಎ …

Read More »

ದುರ್ಗಾದೇವಿ ಕಳಶಾಭಿಷೇಕ: ಹೊರ ರಾಜ್ಯದ ಭಕ್ತರೂ ಭಾಗಿ

ದುರ್ಗಾದೇವಿ ಕಳಶಾಭಿಷೇಕ: ಹೊರ ರಾಜ್ಯದ ಭಕ್ತರೂ ಭಾಗಿ ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಆಗಸ್ಟ್‌ 15ರಿಂದ ಪ್ರಾರಂಭವಾಗಿರುವ ಮಹಾ ದುರ್ಗಾದೇವಿಗೆ ಸಹಸ್ರ ಕಳಶಾಭಿಷೇಕ, ಶತಚಂಡಿಕಾ ಹೋಮ, ಶ್ರೀ ಚಕ್ರ ಪೂಜೆ ಕಾರ್ಯಕ್ರಮಕ್ಕೆ ರಾಜ್ಯವೂ ಸೇರಿ ಹೊರರಾಜ್ಯಗಳ ಅಧಿಕ ಸಂಖ್ಯೆಯ ಭಕ್ತರು ಶ್ರದ್ಧಾಭಕ್ತಿಯೊಂದಿಗೆ ಭಾಗವಹಿಸಿದ್ದಾರೆ. ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸಾಗಿವೆ. ಜ್ಯೋತಿಷಿ ವಿಷ್ಣು ಪ್ರಸಾದ ಹೆಬ್ಬಾರ ಹಾಗೂ ಅರ್ಚಕ ರಾಜಪ್ಪ ಹೊಸಮನಿ ಅವರ ನೇತೃತ್ವದಲ್ಲಿ ಆಗಸ್ಟ್‌ …

Read More »

ಕಾರ್ಖಾನೆ ಅಗ್ನಿ ದುರಂತ: ಸ್ಪಷ್ಟ ವರದಿಗೆ ಎಸ್.ಕೆ.ವಂಟಿಗೋಡಿ ಸೂಚನೆ

ಬೆಳಗಾವಿ: ‘ತಾಲ್ಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ಈಚೆಗೆ ಸಂಭವಿಸಿದ ಅಗ್ನದುರಂತದಲ್ಲಿ ಮೃತಪಟ್ಟ ಕಾರ್ಮಿಕನ ದೇಹದ ಅವಶೇಷಗಳನ್ನು ಗೌರವದಿಂದ ನೀಡಿಲ್ಲ ಎಂಬ ಸಂಗತಿ ಮಾಧ್ಯಮಗಳಿಂದ ಗೊತ್ತಾಯಿತು. ಇಂಥ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.   ಕಾರ್ಖಾನೆಗೆ ಸೋಮವಾರ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ‘ಘಟನೆ ಕುರಿತು ಪತ್ರಿಕೆಗಳ ವರದಿ …

Read More »

19,969 ಪಡಿತರ ಚೀಟಿ ರದ್ದು: ₹1.89 ಕೋಟಿ ದಂಡ ವಸೂಲಿ

ಬೆಳಗಾವಿ: ಕಳೆದ ಆರು ತಿಂಗಳಿಂದ ಪಡಿತರ ಪಡೆಯದ 19,969 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಅಲ್ಲದೇ, ಸುಳ್ಳು ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ ₹1.89 ಕೋಟಿ ದಂಡ ಕೂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ 557 ಅಂತ್ಯೋಂದಯ, 19,412 ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 19,969 ಪಡಿತರ ಚೀಟಿದಾರರು ಕಳೆದ 6 ತಿಂಗಳು (ನವೆಂಬರ್-2023ರಿಂದ ಏಪ್ರಿಲ್-2024) ರವರೆಗೆ ಪಡಿತರ ಧಾನ್ಯ ಪಡೆದಿಲ್ಲ. ಹೀಗಾಗಿ, ಈ ಎಲ್ಲ ಪಡಿತರ …

Read More »