Breaking News

Yearly Archives: 2024

ಶಿವಾಪುರ ಅಡವಿಸಿದ್ದೇಶ್ವರ ಜಾತ್ರೆ ಇಂದಿನಿಂದ

ಮೂಡಲಗಿ: ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಅಂಬಲಿ ಒಡೆಯ ಅಡವಿಸಿದ್ಧೇಶ್ವರ ಜಾತ್ರೆ ಸೆ. 6ರಿಂದ 9ರವರೆಗೆ ಪೀಠಾಧಿಪತಿ ಅಡವಿಸಿದ್ಧರಾಮ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಸೆ.6ರಂದು ಬೆಳಿಗ್ಗೆ ಜಾತ್ರೆಯು ಷಟಸ್ಥಲ್‌ ಧ್ವಜಾರೋಹಣದೊಂದಿಗೆ ಆರಂಭವಾಗುವುದು. ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.   ಮುಖ್ಯ ಅತಿಥಿಗಳಾಗಿ ಗೋಕಾಕದ ಅಶೋಕ ಪೂಜೇರಿ, ಭೀಮಪ್ಪ ಗಡಾದ, ಸರ್ವೋತ್ತಮ ಜಾರಕಿಹೊಳಿ ಭಾಗವಹಿಸುವರು. ಬೆಳಿಗ್ಗೆ 10ಕ್ಕೆ ಆರೋಗ್ಯ ಉಚಿತ ತಪಾಸಣೆ ಇರುವುದು. ಸಂಜೆ 4ಕ್ಕೆ ತಾಯಂದಿರಿಂದ ಬಸವ …

Read More »

ಜಿ.ಪಂ., ತಾ.ಪಂ. ಮೀಸಲು: ಸಮಯ ಕೇಳಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರ ಮತ್ತೆ 3 ವಾರ ಕಾಲಾವಕಾಶ ಕೇಳಿದೆ. ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫ‌ಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಜತೆಗೆ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠ ಆದೇಶ ಪಾಲಿಸುವಲ್ಲಿ ಸರ್ಕಾರ …

Read More »

ಸಚಿವರಿಗೆ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಂಡರು.ಸಿಎಂ

ಬೆಂಗಳೂರು:- ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ವಿರುದ್ಧವೇ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಕೆಲವು ಮಂದಿ ಸಚಿವರು ಅಧಿಕಾರಿಗಳನ್ನು ‘ಸರ್, ಸರ್’ ಎಂದು ಸಂಬೋಧಿಸಿ ಮಾತನಾಡುತ್ತಿದ್ದರು. ಇದನ್ನು ಕಂಡ ಸಿಎಂ ಸಿದ್ದರಾಮಯ್ಯ ಸಿಟ್ಟಾದರು. ಅಷ್ಟೇ ಅಲ್ಲ, ಕೆಲವು ಸಚಿವರಿಗೆ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಂಡರು. ಯಾವೊಬ್ಬ ಸಚಿವರೂ ಅಧಿಕಾರಿಗಳನ್ನು ‘ಸರ್’ ಎಂದು ಕರೆಯಕೂಡದು ಎಂದು ಅಧಿಕಾರಿಗಳೆದುರಿಗೇ ನೇರವಾಗಿ ಸಿಎಂ ಹೇಳಿದರು. ಸಾಂವಿಧಾನಿಕವಾಗಿ ನೀವು (ಸಚಿವರು) ಇಲಾಖೆಯ ನಾಯಕರು. ಅಧಿಕಾರಿ ವರ್ಗ ನಿಮ್ಮ ಕೈಯಡಿ …

Read More »

ಜನನಿಬಿಡ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಟಾಕಿ ಜಪ್ತಿ

ಗದಗ: ಜನನಿಬಿಡ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಜಪ್ತಿ ಮಾಡಲಾಗಿದೆ. ಗದಗ ನಗರದ ದಾಸರ ಓಣಿಯ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಜಪ್ತಿ ಮಾಡಲಾಗಿದೆ. ರಾಮಚಂದ್ರ ಸಿದ್ದಲಿಂಗ ಎಂಬುವರ ಮನೆಯಲ್ಲಿ ಪಟಾಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಗದಗ ಶಹರ ಠಾಣೆ ಸಿಪಿಐ ಡಿ.ಬಿ. ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಗದಗ ಶಹರ ಪೊಲೀಸ್ …

Read More »

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ SDPI ಖ್ಯಾತೆ

ಹುಬ್ಬಳ್ಳಿ, ಸೆಪ್ಟಂಬರ್ 06: ಇಲ್ಲಿನ ಚೆನ್ನಮ್ಮ ವೃತ್ತದ ಬಳಿ ಇರುವ ವಿವಾದಿತ ಈದ್ಗಾ ಮೈದಾನದಲ್ಲಿ ನಿರಂತರ ಪ್ರಯತ್ನ, ಹೋರಾಟಗಳ ಫಲವಾಗಿ ಗಣೇಶ ಕೂರಿಸಲು, ಆಗಸ್ಟ್ 15ರಂದು ಧ್ವಜಾರೋಹಣ ಮಾಡಲು ಅವಕಾಶ ಸಿಕ್ಕಿದೆ. ಮೊನ್ನೆಯಷ್ಟೆ ಸರ್ಕಾರವೇ ಇಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದರೂ ಸಹಿತ ಇಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ವಿರೋಧ ವ್ಯಕ್ತಪಡಿಸಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮೂರು ದಿನಗಳ ಅವಕಾಶ ಸಿಕ್ಕಿದೆ. ಪೊಲೀಸ್ ಬಿಗಿ …

Read More »

ನಿರ್ದೇಶಕ ಯೋಗರಾಜ್ ಭಟ್ ಮೇಲೆ ಎಫ್​ಐಆರ್

ಕಳೆದ ಕೆಲವು ದಿನಗಳಿಂದ ‘ಮನದ ಕಡಲು’ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿತ್ತು. 30 ಅಡಿ ಎತ್ತರದಲ್ಲಿದ್ದ ಲೈಟ್​ ಬಿಚ್ಚುವ ಸಂದರ್ಭದಲ್ಲಿ ಲೈಟ್​ ಮ್ಯಾನ್​ ಮೋಹನ್​ ಕುಮಾರ್​ ಎಂಬುವವರು ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್​ ಭಟ್​ ಹಾಗೂ ಇತರರ ಮೇಲೆ ಎಫ್​ಐಆರ್​ ದಾಖಲು ಮಾಡಲಾಗಿದೆ. ‘ಮನದ ಕಡಲು’ ಸಿನಿಮಾದ ಶೂಟಿಂಗ್​ ವೇಳೆ ದುರ್ಘಟನೆ ಸಂಭವಿಸಿದೆ. 30 ಅಡಿ ಮೇಲಿಂದ ಬಿದ್ದ ಲೈಟ್ ಮ್ಯಾನ್ ನಿಧನರಾಗಿದ್ದಾರೆ. ಈ …

Read More »

ಅಣ್ಣಾ ನಾನು ನಿನ್ನ ಪಕ್ಕಾ ಅಭಿಮಾನಿ, ತಪ್ಪಾಯ್ತು ಕ್ಷಮಿಸಿ ಬಿಡು’ ಎಂದು ಪ್ರಾಣ ಭಿಕ್ಷೆ ಬೇಡಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್

ಅಣ್ಣಾ ನಾನು ನಿನ್ನ ಪಕ್ಕಾ ಅಭಿಮಾನಿ, ತಪ್ಪಾಯ್ತು ಕ್ಷಮಿಸಿ ಬಿಡು’ ಎಂದು ಪ್ರಾಣ ಭಿಕ್ಷೆ ಬೇಡಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್ ಬೆಂಗಳೂರು: ಅಣ್ಣಾ ನಾನು ನಿನ್ನ ಪಕ್ಕಾ ಅಭಿಮಾನಿ, ನನ್ನಿಂದ ದೊಡ್ಡ ತಪ್ಪಾಗಿದೆ. ದಯಮಾಡಿ ಬಿಟ್ಟುಬಿಡಿ. ಇನ್ನು ಮುಂದೆ ಇಂತಹ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿಗೆ ಮೊದಲು ಪರಿಪರಿಯಾಗಿ ಪ್ರಾಣ ಭಿಕ್ಷೆ ಬೇಡಿದರೂ ನಟ ದರ್ಶನ್ ಮತ್ತು ಅವರ ಸಹಚರರು ನಿರ್ದಯವಾಗಿ ಹೊಡೆದು ಕೊಂದು ಹಾಕಿದ್ದಾರೆ. …

Read More »

ಸೆ.22ಕ್ಕೆ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಬೃಹತ್ ಸಮಾವೇಶ

ಚಿಕ್ಕೋಡಿ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿಗೆ ಕಾನೂನು ಮೂಲಕ ಹೋರಾಟ ನಡೆಸಲು ಪಂಚಮಸಾಲಿ ಲಿಂಗಾಯತ ಹೋರಾಟ ಸಮಿತಿ ನಿರ್ಧರಿಸಿದ್ದು, ಹೀಗಾಗಿ ಸೆ.22ರಂದು ಬೆಳಗಾವಿಯಲ್ಲಿ ಬೃಹತ್ ಪಂಚಮಸಾಲಿ ಲಿಂಗಾಯತ ವಕೀಲರ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಶ್ರೀ ಬಸವ ಜಯ ಮೃತುಂಜ್ಯಯ ಸ್ವಾಮೀಜಿ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಪಂಚಮಸಾಲಿ ಲಿಂಗಾಯತ ವಕೀಲರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ …

Read More »

ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

ದೊಡ್ಡನಗರ (ಸಕಲೇಶಪುರ): ಒಂದೆಡೆ ವರ್ಷ ಕಳೆದರೂ ಕಲ್ಯಾಣ ಕಾರ್ಯಕ್ರಮಗಳಿಗೇ ಸೀಮಿತ ಎಂಬ ಅಪವಾದ. ಮತ್ತೊಂದೆಡೆ ಮುಖ್ಯ ಮಂತ್ರಿ ಸೇರಿ ಸರಕಾರದ ಮೇಲೆ ಸರಣಿ ಹಗರಣಗಳ ಆರೋಪ. ಈ ಕರಿಮೋಡದ ಅಂಚಿನಲ್ಲಿ ಈಗ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಮೂಲಕ ಅಭಿವೃದ್ಧಿಯ “ಬೆಳ್ಳಿಗೆರೆ’ ಮೂಡುತ್ತಿದೆ. ಇದು ಬರದ ನಾಡಿಗೆ ನೀರನ್ನು ಹರಿಸುವುದರ ಜತೆಗೆ ಸರಕಾರಕ್ಕೆ ಅಭಿವೃದ್ಧಿಯ ಗರಿಯನ್ನು ಮುಡಿಸಲಿದೆ. ಎತ್ತಿನಹೊಳೆಯಿಂದ ಹರಿಯುವ ನೀರನ್ನು ಎತ್ತುವ ಪ್ರಮುಖ ಘಟ್ಟಕ್ಕೆ ಸರ ಕಾರ ಗೌರಿ ಹಬ್ಬದಂದು ಚಾಲನೆ …

Read More »

ಗಂಗಾ ಕಲ್ಯಾಣ’ ಯೋಜನೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆ.15 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.   ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ …

Read More »