ಬೆಂಗಳೂರು, ಸೆಪ್ಟೆಂಬರ್ 06:ಆರೋಗ್ಯ ವಿಮೆಯ ಮೇಲಿನ ಶೇ 18 ರಷ್ಟು ಜಿ.ಎಸ್.ಟಿಯನ್ನ ಮರು ಪರಿಶೀಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಆರೋಗ್ಯ ಸಚಿವರು, ಸೆಪ್ಟೆಂಬರ್ 9 ರಂದು ಸಭೆ ಸೇರಲಿರುವ GST ಕೌನ್ಸಿಲ್‌ಗೆ ಮಧ್ಯಮ ಮತ್ತು ಕಡಿಮೆ ಆದಾಯದ ಪಾಲಿಸಿದಾರರಿಗೆ ಆರೋಗ್ಯ ವಿಮೆಯ ಮೇಲಿನ 18% ತೆರಿಗೆಯನ್ನು ಮರು ಪರಿಶೀಲಿಸುವಂತೆ ಶಿಫಾರಸು ಮಾಡಲು ಮನವಿ ಮಾಡಿದ್ದಾರೆ. ಆರೋಗ್ಯ ವಿಮೆ ಮೇಲೂ ಶೇ …
Read More »Yearly Archives: 2024
ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!
ಬಾಗಲಕೋಟೆ: ಗಣೇಶ ಉತ್ಸವದ ರಜೆಗೆಂದು ಊರಿಗೆ ಬಂದಿದ್ದ ಬೆಂಗಳೂರಿನ ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಮೃತಪಟ್ಟ ಘಟನೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸಂಭವಿಸಿದೆ. ಮೃತಪಟ್ಟರನ್ನು ಬೆಂಗಳೂರಿನ ಸಾಪ್ಟವೇರ್ ಎಂಜಿನಿಯರ್ ರಜನಿ ಒಂದಕುದರಿ (34), ಬಾಗಲಕೋಟೆಯ ಬಿವಿವಿ ಸಂಘದ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಶೃತಿ ಒಂದಕುದರಿ (32) ಹಾಗೂ ಅಭಿಷೇಕ ದೋತ್ರೆ (20) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಇನ್ನೋರ್ವ ತೀವ್ರವಾಗಿ ಗಾಯಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. …
Read More »ರೇಣುಕಸ್ವಾಮಿ ಹತ್ಯೆ ಬಳಿಕ ಪವಿತ್ರಾ ಗೌಡ ಕರೆ ಮಾಡಿದ್ದು ಯಾರಿಗೆ, ಹೋಗಿದ್ದು ಎಲ್ಲಿಗೆ? ಚಾರ್ಜ್ಶೀಟ್ನಲ್ಲಿ ಬಯಲಾಯ್ತು ‘ಡಿ ಗ್ಯಾಂಗ್’ನ ಮತ್ತೊಂದು ಕರಾಳ ಮುಖ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ನ ಕರಾಳ ಕೃತ್ಯಗಳು ದಿನ ಕಳೆದಂತೆ ಒಂದೊಂದೇ ಬಯಲಾಗುತ್ತಿದೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ ನಟನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಚಾರ್ಜ್ಶೀಟ್ನಲ್ಲಿ ಪೊಲೀಸರು ಉಲ್ಲೇಖಿಸಿರುವ ಆಘಾತಕಾರಿ ಅಂಶಗಳು ಡಿ ಗ್ಯಾಂಗ್ನ ಕರಾಳ ಮುಖವನ್ನು ಹೊರಜಗತ್ತಿಗೆ ಪರಿಚಯಿಸುತ್ತಿದೆ. ಪ್ರಕರಣದ …
Read More »ರಾಜ್ಯದ ಸಂಸದರು ಗಂಡಸರೋ ಅಥವಾ ಹೆಂಗಸರೋ :ಸಿ.ಎಂ ಇಬ್ರಾಹಿಂ ಆಕ್ರೋಶ
ಹುಬ್ಬಳ್ಳಿ, ಸೆಪ್ಟೆಂಬರ್ 06: ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿಯೇ ಸರ್ಕಾರ, ಪ್ರತಿಪಕ್ಷಗಳು ಕಾಲಹರಣ ಮಾಡುತ್ತಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಆರೋಪ ಹಾಗೂ ಪ್ರತ್ಯಾರೋಪದಲ್ಲಿಯೇ ಕಾಲಹರಣ ಹಾಕಲಾಗುತ್ತಿದ್ದು, ಸರಿಯಾಗಿ ನಮ್ಮ ವಿರೋಧ ಪಕ್ಷ ವಿರೋಧ ಪಕ್ಷವಾಗಿ ಕೆಲಸ …
Read More »ಇಬ್ಬರು `IAS’, ಮೂವರು `IFS’ ಅಧಿಕಾರಿಗಳನ್ನು ವರ್ಗಾವಣೆ
ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ರಾಜ್ಯ ಸರ್ಕಾರ ಇಬ್ಬರು ಐಎಎಸ್, ಮೂವರು ಐಎಫ್ ಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಟಿ.ಹೆಚ್.ಎಂ.ಕುಮಾರ್ ಅವರನ್ನು ಸಹಕಾರ ಸೊಸೈಟಿ ರಿಜಿಸ್ಟ್ರಾರ್ ಆಗಿ ಹಾಗೂ ಡಾ.ರಾಜೇಂದ್ರ ಅವರನ್ನು ಸಣ್ಣ ಕೈಗಾರಿಕಾ ನಿಗಮ ಎಂಡಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ಐಎಫ್ ಎಸ್ ಅಧಿಕಾರಿ ಬಿ.ಪಿ. ರವಿ, ರುಥ್ರೆನ್ ಪಿ ಹಾಗೂ ಐಎಸ್ …
Read More »ಬೈಕ್ ಗೆ ಲಾರಿ ಡಿಕ್ಕಿ: ಮೂವರು ಕಾರ್ಮಿಕರ ಸಾವು
ರಾಮನಗರ: ತಾಲ್ಲೂಕಿನ ಮಾಯಗಾನಹಳ್ಳಿಯ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಎದುರು ಶುಕ್ರವಾರ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಾದ ಗುರುಮೂರ್ತಿ (39), ಶೇಕ್ ಅಫೀಸ್ (45) ಹಾಗೂ ವೆಂಕಟೇಶ್ (50) ಮೃತರು. ಘಟನೆಯಲ್ಲಿ ಹನುಮಂತ ಅವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲಸದ ನಿಮಿತ್ತ ನಾಲ್ವರು ಕಾರ್ಮಿಕರು ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು. ಆಗ ಎದುರಿಗೆ ಬಂದ …
Read More »ನಕಲಿ ವಿದ್ಯಾರ್ಥಿಗಳ ಹೆಸರಲ್ಲಿ ಹಣ ದುರುಪಯೋಗ: ತನಿಖೆಗೆ ಜಿ.ಪಂ ಸಿಇಒ ಆದೇಶ
ವಿಜಯಪುರ: 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಕೊಡುವ ₹20 ಸಾವಿರ ನಗದು ಯೋಜನೆಯ ಹಣವನ್ನು ಇಲಾಖೆ ಸಿಬ್ಬಂದಿ ನುಂಗಿ ಹಾಕಿರುವ ಪ್ರಕರಣದ ತನಿಖೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಆದೇಶಿಸಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ‘ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಹಣ ಗುಳುಂ!’ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ …
Read More »ಲಕ್ಷ್ಮೇಶ್ವರ: ರೈತನ ಕೈ ಹಿಡಿದ ತರಕಾರಿ ಕೃಷಿ
ಲಕ್ಷ್ಮೇಶ್ವರ: ಅಲ್ಪಸ್ವಲ್ಪ ಭೂಮಿಯಲ್ಲೇ ಕಷ್ಪಪಟ್ಟು, ವಿವಿಧ ತರಕಾರಿಗಳನ್ನು ಬೆಳೆದು ಸೈ ಎನಿಸಿಕೊಂಡವರು ತಾಲ್ಲೂಕಿನ ಗುಲಗಂಜಿಕೊಪ್ಪ ಗ್ರಾಮದ ರಾಮನಗೌಡ ಶಂಕರಗೌಡ ದುರುಗನಗೌಡ್ರ. ಮೂಲತಃ ಲಕ್ಷ್ಮೇಶ್ವರ ತಾಲ್ಲೂಕು ಗುಲಗಂಜಿಕೊಪ್ಪದ ನಿವಾಸಿಯಾದ ರಾಮನಗೌಡ್ರ ಈಗ ಲಕ್ಷ್ಮೇಶ್ವರದ ರಂಭಾಪುರಿ ನಗರದ ಆಶ್ರಯ ಕಾಲೊನಿಯಲ್ಲಿ ವಾಸವಾಗಿದ್ದಾರೆ. ಲಕ್ಷ್ಮೇಶ್ವರದ ಮಾನ್ವಿ ಎಂಬುವವರಿಗೆ ಸೇರಿದ ಆರು ಎಕರೆ ತೋಟವನ್ನು ವರ್ಷಕ್ಕೆ ₹50 ಸಾವಿರದಂತೆ ಇವರು ಲಾವಣಿ ಆಧಾರದ ಮೇಲೆ ಪಡೆದುಕೊಂಡು ವಿವಿಧ ತರಕಾರಿ, ಗಲಾಟೆ ಹೂವು ಬೆಳೆಯುತ್ತಿದ್ದಾರೆ. ಹದಿನೈದು ಗುಂಟೆಯಲ್ಲಿ …
Read More »171 ಶಾಲಾ ಕೊಠಡಿ ನಿರ್ಮಾಣ: ಹುಕ್ಕೇರಿ
ಚಿಕ್ಕೋಡಿ: ‘ಕಳೆದ ಎರಡು ವರ್ಷಗಳಲ್ಲಿ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ₹30 ಕೋಟಿ ಮೊತ್ತದಲ್ಲಿ 171 ಶಾಲಾ ಕೊಠಡಿ, ತಲಾ ₹50 ಲಕ್ಷ ಅನುದಾನದಲ್ಲಿ 3 ಪಿಯು ಕಾಲೇಜು ಕಟ್ಟಡಗಳು ನಿರ್ಮಾಣವಾಗುತ್ತಿವೆ’ ಎಂದು ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಹೇಳಿದರು. ಪಟ್ಟಣದ ಹೊರ ವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, …
Read More »ಈಜು ರಿಲೆ: ದಾಖಲೆ ಬರೆದ ತಾಯಿ-ಮಗ
ಬೆಳಗಾವಿ: ಇಲ್ಲಿನ ಸ್ವಿಮ್ಮರ್ಸ್ ಕ್ಲಬ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಈಜುಪಟುಗಳಾದ ಜ್ಯೋತಿ ಕೋರಿ (ಹೊಸಟ್ಟಿ) ಹಾಗೂ ಅವರ ಪುತ್ರ ವಿಹಾನ್ ಜತೆಯಾಗಿ, ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಗುರುವಾರ ನಡೆದ ‘ನಾನ್‌ಸ್ಟಾಪ್ ಸ್ವಿಮ್ಮಿಂಗ್ ರಿಲೆ’ಯಲ್ಲಿ 12 ಗಂಟೆ, 22 ನಿಮಿಷ ಈಜಿ ಇಂಡಿಯಾ ಅಂಡ್ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದರು. 44 ವರ್ಷ ವಯಸ್ಸಿನ ಜ್ಯೋತಿ ಮತ್ತು …
Read More »