ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ಕೆಲವು ಪ್ರಗತಿಪರ ಸಂಘಟನೆಗಳು ಚಾಮುಂಡಿಬೆಟ್ಟದಲ್ಲಿ ಭಾನುವಾರ ಹಮ್ಮಿಕೊಂಡಿರುವ ಮಹಿಷ ದಸರಾ ಆಚರಣೆ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಕಾರ್ಯಕ್ರಮ ಮಾಡುವವರು ಕಾನೂನು-ಸುವ್ಯವಸ್ಥೆಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಷ್ಟೆ’ ಎಂದರು. ‘ಇಂಥದ್ದನ್ನು ಮಾಡಿ ಅಥವಾ ಮಾಡಬೇಡಿ ಎಂದು ಹೇಳಲು ನಾವ್ಯಾರು? ದೇಶದ ನಾಗರಿಕತೆಯಲ್ಲೇ ನೀರು, ಕಲ್ಲು, ಮಣ್ಣನ್ನು …
Read More »Yearly Archives: 2024
ಚುನಾವಣಾ ಬಾಂಡ್ ಸೋಗಿನಲ್ಲಿ ಸುಲಿಗೆ; ನಿರ್ಮಲಾ ಸೀತಾರಾಮನ್ ವಿರುದ್ದ ಎಫ್‌ಐಆರ್
ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ವಿರುದ್ದ ಈಗ ರದ್ದಾಗಿರುವ ಚುನಾವಣಾ ಬಾಂಡ್ (Electoral Bonds Scheme) ಗಳ ಮೂಲಕ ಸುಲಿಗೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸೂಚಿಸಿದೆ. ಸೀತಾರಾಮನ್ ಮತ್ತು ಇತರರು ಚುನಾವಣಾ ಬಾಂಡ್ ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಸಂಘಟನೆ (JSP) ಆದರ್ಶ್ ಅಯ್ಯರ್ ಎಂಬವರು ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಎಫ್‌ಐಆರ್ …
Read More »ಪೊಲೀಸರ ಹೆಸರಿನಲ್ಲಿ ಸ್ವಾಮೀಜಿಗೆ ₹1 ಕೋಟಿ ವಂಚನೆ
ಬಾಗಲಕೋಟೆ: ತಾಲ್ಲೂಕಿನ ಗದ್ದನಕೇರಿ ಬಳಿ ಇರುವ ರಾಮಾರೂಢ ಮಠದ ಸ್ವಾಮೀಜಿಗೆ ಉನ್ನತ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ₹1 ಕೋಟಿ ವಂಚನೆ ಮಾಡಲಾಗಿದೆ. ಜೆಡಿಎಸ್ ಮುಖಂಡ ಪ್ರಕಾಶ ಮುಧೋಳ ಎನ್ನುವವರು ಡಿವೈಎಸ್‌ಪಿ ಹೆಸರಿನಲ್ಲಿ, ಇಬ್ಬೊಬ್ಬರು ಎಡಿಜಿಪಿ ಹೆಸರಿನಲ್ಲಿ ರಾಮಾರೂಢ ಮಠದ ಪರಮಹಂಸ ಪರಮರಾಮರೂಢ ಸ್ವಾಮೀಜಿಗೆ ಕರೆ ಮಾಡಿ, ಗೃಹ ಸಚಿವರ ಕಚೇರಿಯಿಂದ ನಮ್ಮ ಕಚೇರಿಗೆ ಸಾಕಷ್ಟು ದೂರುಗಳು ಬಂದಿವೆ. ಅವುಗಳನ್ನು ವಿಚಾರಣೆ ಮಾಡಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ. ಜೈಲಿಗೆ ಕಳುಹಿಸುತ್ತೇವೆ …
Read More »ದಾಖಲೆ ಇಟ್ಟರೆ 6-7 ಸಚಿವರ ತಲೆದಂಡವಾಗುತ್ತೆ: HDK
ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ಮುಂದುವರೆದಿದೆ. ದಾಖಲೆಗಳನ್ನು ನಾನು ಮುಂದಿಟ್ಟರೆ ರಾಜ್ಯದ 6-7 ಸಚಿವರ ತಲೆದಂಡವಾಗಲಿದೆ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ಬಯಲು ಮಾಡಿದರೆ ಕೊನೇಪಕ್ಷ 6ರಿಂದ 7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಿಡುತ್ತೇನೆ ಎಂದು …
Read More »ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ- ಪುನಸ್ಕಾರವಿರಲಿ. ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆಯು ನಮ್ಮ ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ.
ಮೂಡಲಗಿ- ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ- ಪುನಸ್ಕಾರವಿರಲಿ. ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆಯು ನಮ್ಮ ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ. ಅದು ಯಾವುದೇ ಕೆಲಸವಿರಲಿ. ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗಲಿವೆ ಎಂಬ ನಂಬಿಕೆಯು ಈಗಲೂ ನಮ್ಮ ಪೂರ್ವಜರಲ್ಲಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರದಂದು ಪಟ್ಟಣದ ಬಸವ ಮಂಟಪದಲ್ಲಿ ಏಕದಂತ ಉತ್ಸವ ಸಮೀತಿಯಿಂದ ಜರುಗಿದ ಮೂಡಲಗಿ ಮಹಾರಾಜ ಗಣೇಶನ …
Read More »ಪ್ರಿಯಕರನನ್ನೇ ರಾಬರಿ ಮಾಡಿಸಿದ ಕಿಲಾಡಿ ಪ್ರಿಯತಮೆ: ಪ್ರೇಯಸಿ ಸೇರಿ ನಾಲ್ವರು ಅರೆಸ್ಟ್
ಬೆಂಗಳೂರು: ಪ್ರಿಯಕರನ ಮೊಬೈಲ್ ನಲ್ಲಿದ್ದಂತ ತನ್ನ ಖಾಸಗಿ ಪೋಟೋ, ವೀಡಿಯೋ ಡಿಲೀಟ್ ಮಾಡೋ ಸಲುವಾಗಿ ಚಾಲಾಕಿ ಪ್ರಿಯತಮೆಯೊಬ್ಬಳು ಆತನ ಮೊಬೈಲ್ ರಾಬರಿ ಮಾಡಿಸಿ, ತಗಲಾಕಿಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಿಯಕರನನ್ನೇ ರಾಬರಿ ಮಾಡಿದಂತ ಪ್ರಿಯತಮೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಂತ ಶೃತಿ ಎಂಬಾಕೆ ಪ್ರಿಯಕರ ವಂಶಿಕೃಷ್ಣನನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಳು. ಕೆಲ ದಿನಗಳಿಂದ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರಾಗುವಂತ ಪ್ಲಾನ್ ಮಾಡಿದ್ದಳು. …
Read More »ಅಮಾನತು ಪ್ರಕರಣ ರದ್ದತಿಗೆ ಆಗ್ರಹ
ಶಿಗ್ಗಾವಿ: ಮೊಬೈಲ್ ತಂತ್ರಾಂಶಗಳ ಕುರಿತ ಅಮಾನತು ಪ್ರಕರಣಗಳನ್ನು ರದ್ದು ಪಡಿಸಬೇಕು, ಕೇರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು. ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸಾದ್ ಅಕ್ಕಿ ಮಾತನಾಡಿ, ‘ಗ್ರಾಮ ಲೆಕ್ಕಾಧಿಕಾರಿಗಳು ನಿತ್ಯ ಸುಮಾರು 21 ವೆಬ್, …
Read More »ಆರೀಕಟ್ಟಿ | ಸರ್ಕಾರಿ ಶಾಲೆಗೆ ಶತಮಾನ ಸಂಭ್ರಮ: ಬೇಕಿದೆ ಕಾಯಕಲ್ಪ
ಆರೀಕಟ್ಟಿ (ಹಂಸಬಾವಿ): ಇಲ್ಲಿಯ ಆರೀಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಇದರ ಜೊತೆಯಲ್ಲಿಯೇ ಹಲವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿದ ಗ್ರಾಮಸ್ಥರು, ‘ನಮ್ಮ ಶಾಲೆ ಮೂಲ ಸೌಕರ್ಯ ಕಲ್ಪಿಸಬೇಕು. ಶತಮಾನ ಸಂಭ್ರಮದಲ್ಲಿರುವ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು. ಶತಮಾನದ ಸಂಭ್ರಮದಲ್ಲಿರುವ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ದಾಖಲಾತಿ ಪ್ರಮಾಣ ಹೆಚ್ಚಿಸಲು ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು …
Read More »3 ವರ್ಷದ ಬಾಲಕಿಯ ಅಪಹರಣ,ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ
ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ 7 ವರ್ಷಗಳ ಹಿಂದೆ ನಡೆದಿದ್ದ 3 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ತನಿಖಾ ಅಂತಿಮ ಹಂತ ತಲುಪಿದ್ದು, ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ. 2017ರ ಸೆಪ್ಟೆಂಬರ್ 21ರಂದು, ಕುರುಬಗೋಡಿ ಹಾರೂಗೇರಿಯ ನಿವಾಸಿ ಸುಧಾ ಅಪ್ಪಾಸಾಬ ಸಣ್ಣಕ್ಕಿ ಅವರು ತಮ್ಮ 3 ವರ್ಷದ ಮಗಳ ನಾಪತ್ತೆ ಬಗ್ಗೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ …
Read More »ಬಾಡಿಗೆ ಮನೆಯಲ್ಲಿ ಅಂಗನವಾಡಿ: ಮಳೆ ಬಂದರೆ ಆತಂಕ
ಅಡವಿಸೋಮಾಪುರ (ತಡಸ): ಕುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಡವಿಸೋಮಾಪುರ ಗ್ರಾಮದಲ್ಲಿ ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಯುತ್ತಿದ್ದು, ಮಳೆ ಬಂದರೆ ಹಂಚಿನ ಮನೆ ಸೋರುತ್ತಿದೆ. ಇದರಿಂದಾಗಿ ಮಕ್ಕಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಅಡವಿಸೋಮಾಪುರ ಗ್ರಾಮದ 96ನೇ ಅಂಗನವಾಡಿ ಕೇಂದ್ರದ ಹಳೇ ಕಟ್ಟಡ ಎರಡು ವರ್ಷಗಳ ಹಿಂದೆ ಮಳೆಯಿಂದ ಹಾನಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಮಕ್ಕಳನ್ನು ಬಾಡಿಗೆ ಹಂಚಿನ ಮನೆಗೆ ಸ್ಥಳಾಂತರಿಸಿದ್ದರು. ಎರಡು ವರ್ಷವಾದರೂ ನೂತನ ಕಟ್ಟಡ ನಿರ್ಮಿಸುವಲ್ಲಿ …
Read More »