Breaking News

Yearly Archives: 2024

ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಸಹಿತ ಮಳೆ ಆರ್ಭಟ

ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಸಹಿತ ಮಳೆ ಆರ್ಭಟ ಬೆಂಗಳೂರು:ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಮಿಂಚು ಸಹಿತ ಮಳೆ ಮುಂದುವರಿದ್ದು, ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ವರ್ಷಧಾರೆಯಿಂದ ನಗರದ ವಿವಿಧ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಯಿತು. ತಡರಾತ್ರಿವರೆಗೂ ಮಳೆ ಸುರಿಯುತ್ತಿತ್ತು. ಸರ್ಜಾಪುರ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದ ಪರಿಣಾಮ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದರೂ ಬಿಬಿಎಂಪಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ …

Read More »

ಶೋ ಹಾಳು ಮಾಡೋಕೆ ನಿಮ್ಮ ಅಪ್ಪನ ಆಣೆ ಸಾಧ್ಯವಿಲ್ಲʼ;ಕಿರಿಕ್‌ ಮಾಡಿದ್ದ ಜಗದೀಶ್‌..ಕಿಚಾಯಿಸಿದ ಸುದೀಪ್‌..!

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮಹತ್ವದ ಘಟ್ಟಕ್ಕೆ ತಲುಪಿದೆ. ಇಂದು ವಾರದ ಕಥೆ ಕಿಚ್ಚನ ಜೊತೆಯತ್ತ ಪ್ರೇಕ್ಷಕರ ಗಮನ ಹೋಗಿದೆ. ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಜಗದೀಶ್‌ ಅವರು ಮೊದಲ ವಾರ ಸೃಷ್ಟಿಸಿದ ಕೆಲವು ಅವಾಂತರಗಳು, ಬಿಗ್‌ಬಾಸ್‌ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇ ಈ ಕ್ಯೂರಿಯಾಸಿಟಿಗೆ ಕಾರಣ. ಖಡಕ್‌ ಮಾತು..ನೇರ ನುಡಿ ಮತ್ತು ಸ್ಪರ್ಧಿಗಳ ತಪ್ಪನ್ನ ನಾಜೂಕಾಗಿಯೇ ಎತ್ತಿತೋರಿಸುವ ಕಿಚ್ಚ, ಟೈಮ್‌ ಬಂದಾಗ್ಲೆಲ್ಲ ಬಿಗ್‌ಬಾಸ್‌ ವೇದಿಕೆ ಮೇಲೆ ರಾಂಗ್‌ ಆಗಿದ್ದಾರೆ. ಕೆಲವು …

Read More »

ದಾಂಡೇಲಿಯಲ್ಲಿ ವ್ಯಾಪಕ ಮಳೆ. ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ದಾಂಡೇಲಿ : ನಗರದಲ್ಲಿ ವ್ಯಾಪಕವಾಗಿ ಮಳೆಯಾಗಿ ಪಟೇಲ್ ವೃತ್ತದ ಹತ್ತಿರ ಎರಡು ಅಂಗಡಿ ಸೇರಿದಂತೆ ಸ್ಥಳೀಯ ಮನೆಗಳಿಗೆ ನೀರು ನುಗ್ಗಿರುವ ಘಟನೆ ಇಂದು ಶನಿವಾರ(ಅ.05) ನಡೆದಿದೆ. ನಗರದ ಪಟೇಲ್ ವೃತ್ತದ ಹತ್ತಿರ ಕಳೆದೆರಡು ತಿಂಗಳ ಹಿಂದೆ ಮುರಿದು ಬಿದ್ದಿದ್ದ ಬಿದಿರನ್ನು ತುಂಡರಿಸಿ ಅಲ್ಲಿ ರಾಶಿ ಹಾಕಿದ ಹಿನ್ನೆಲೆಯಲ್ಲಿ ಮಳೆಯ ನೀರು ಗಟಾರದಲ್ಲಿ ಸರಾಗವಾಗಿ ಹರಿಯದೆ ಇರುವುದರಿಂದ ಮಳೆಯ ನೀರು ಹಾಗು ತ್ಯಾಜ್ಯ ನೀರು ತುಂಬಿ ರಸ್ತೆ ಹಾಗೂ ಪಕ್ಕದಲ್ಲಿರುವ ಎರಡು ಅಂಗಡಿಗಳಿಗೆ …

Read More »

ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಸ್ವಚ್ಚತೆ ನಿರ್ಲಕ್ಷ್ಯ: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ.

ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಸ್ವಚ್ಚತೆ ನಿರ್ಲಕ್ಷ್ಯ: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ. ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ. ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರಿಂದ ಅಧಿಕಾರಿಗಳ ತರಾಟೆ. ಯಲ್ಲಮ್ಮನ ದೇವಸ್ಥಾನಕ್ಕೆ ಸರ್ಪೈಸ್ ವಿಸೀಟ್ ಕೊಟ್ಟು ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ. ಅಸ್ವಚ್ಛತೆ ಕಂಡು ಸ್ಥಳಕ್ಕೆ ಅಧಿಕಾರಿಗಳನ್ನು ಕರೆಯಿಸಿ ತರಾಟೆ ತೆಗೆದುಕೊಂಡ ಶಾಸಕ. ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತರಾಟೆಗೆ. ವರ್ಷವಿಡೀ ನಡೆಯುವ ಯಲ್ಲಮ್ಮನ ದೇವಿ ಜಾತ್ರೆ. …

Read More »

ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

ಬಳ್ಳಾರಿ: ಸಿದ್ದರಾಮಯ್ಯ ಹಿಂದೆ ಮಾಡಿದ್ದನ್ನು ಈಗ ಅನುಭವಿಸಬೇಕಾಗಿದೆ. ಮುಡಾ ಪ್ರಕರಣದಲ್ಲಿ ಕೇವಲ ಹದಿನಾಲ್ಕು ಸೈಟು, 62 ಕೋಟಿ ವಿಚಾರ ಅಲ್ಲ. ಅವರು ಬರೋಬ್ಬರಿ ಐದು ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ. ಅವರ ಕುಟುಂಬಸ್ಥರು, ಸಂಬಂಧಿಗಳ ಮೂಲಕ ಐದು ಸಾವಿರ ಕೋಟಿ ಆಸ್ತಿ ಬೇನಾಮಿಯಾಗಿ ಮಾಡಿದ್ದಾರೆ. ಇದೆಲ್ಲ ತನಿಖೆ ಆಗಬೇಕು ಎಂದು ಮಾಜಿ ಸಚಿವ, ಶಾಸಕ ಜನಾರ್ದನ ರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಿನಾಮೆ ಕೇಳಿ ಕೇಳಿ ಸಾಕಾಗಿದೆ. …

Read More »

ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Case) ಜೈಲಿನಲ್ಲಿರುವ ನಟ ದರ್ಶನ್‌(Actor Darshan) ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ಮತ್ತೆ (ಅ.5ರಂದು) ನಡೆದಿದೆ. 57ನೇ ಸಿಸಿಹೆಚ್‌ ಕೋರ್ಟಿನಲ್ಲಿ ದರ್ಶನ್‌ ಪರ ವಕೀಲ ಹಿರಿಯ ವಕೀಲರಾದ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಯ ಜಾಮೀನು ಅರ್ಜಿ ವಿಚಾರಣೆ 57ನೇ ಸಿಸಿಹೆಚ್‌ ಕೋರ್ಟ್‌ನಲ್ಲಿ ನಡೆಯುತ್ತಿದೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದ್ದು …

Read More »

ಸಾರಿಗೆ ಬಸ್ ಬೈಕ್ ಮಧ್ಯೆ ಅಪಘಾತ. ಸ್ಥಳದಲ್ಲಿಯೇ ಬೈಕ್ ಸವಾರ ಸಾವು

ಬೈಲಹೊಂಗಲ: ತಾಲೂಕಿನ ಹಳೇ ಜಾಲಿಕೊಪ್ಪ ಗ್ರಾಮದ ಮಲಪ್ರಭಾ ನದಿ ಸಮೀಪ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ತುರಮರಿ ಗ್ರಾಮದ ರಾಮನಿಂಗ ಫಕೀರಪ್ಪ ಶಿಂಗಾಡಿ (40) ಮೃತ ವ್ಯಕ್ತಿ. ಬೈಕ್ ಸವಾರ ಬೈಲಹೊಂಗಲದಿಂದ ತುರಮರಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಬೆಳಗಾವಿ ಘಟಕಕ್ಕೆ ಸೇರಿದ ಸಾರಿಗೆ ಬಸ್ ಯಲ್ಲಮ್ಮನಗುಡ್ಡದಿಂದ ಬೈಲಹೊಂಗಲ ಕಡೆ ಬರುವಾಗ ಮಲಪ್ರಭಾ ನದಿ ಬಳಿ ಈ ದುರ್ಘಟನೆ ಸಂಭವಿಸಿದೆ.   …

Read More »

ದೀಪಾವಳಿ ಕಾರಣಕ್ಕೆ ನವೆಂಬರ್‌ 1ರಂದು ರಾಜ್ಯೋತ್ಸವ ಮೆರವಣಿಗೆ ಆಯೋಜನೆಗೆ ಪರ-ವಿರೋಧ

ಬೆಳಗಾವಿ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಆಯೋಜನೆ ದಿನಾಂಕ ಅಂತಿಮಗೊಳಿಸುವ ವಿಚಾರವಾಗಿ, ಶನಿವಾರ ಜಿಲ್ಲಾಧಿಕಾರಿ ಭೇಟಿಯಾಗಿ ಚರ್ಚಿಸುವ ತೀರ್ಮಾನವನ್ನು ಇಲ್ಲಿ ಶುಕ್ರವಾರ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ಕೈಗೊಳ್ಳಲಾಯಿತು. ಪ್ರತಿವರ್ಷ ನವೆಂಬರ್‌ 1ರಂದು ಬೆಳಗಾವಿಯಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ನಡೆಯುತ್ತದೆ. ಈ ಬಾರಿ ನ.1ರಂದೇ ದೀಪಾವಳಿ ಹಬ್ಬವೂ ಇರುವ ಕಾರಣ, ರಾಜ್ಯೋತ್ಸವದ ಮೆರವಣಿಗೆ ಮುಂದೂಡಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಸಂಪ್ರದಾಯದಂತೆ ನವೆಂಬರ್‌ 1ರಂದೇ ಮೆರವಣಿಗೆ ಮಾಡಬೇಕು ಎಂಬ ಅಭಿಪ್ರಾಯವೂ …

Read More »

ಭೂ ಕಬಳಿಕೆ | ಮೊದಲು ಸಾಕ್ಷ್ಯಾಧಾರ ನೀಡಲಿ: ಸತೀಶ ಜಾರಕಿಹೊಳಿ

ಬೆಳಗಾವಿ: ‘ಬೆಳಗಾವಿ ಸಚಿವರೊಬ್ಬರು ಭೂಕಬಳಿಕೆ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಅವರು ‘ಸೂಕ್ತ ಸಾಕ್ಷ್ಯಾಧಾರ ನೀಡಲಿ’ ಎಂದು ಆಗ್ರಹಿಸಿದರು.   ‘ಭೂಕಬಳಿಕೆ ಯಾರು ಮತ್ತು ಎಲ್ಲಿ ಮಾಡಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಹೇಳಲಿ. ನಂತರ ಪ್ರತಿಕ್ರಿಯಿಸುವೆ’ ಎಂದು ಸತೀಶ ಜಾರಕಿಹೊಳಿ ತಿಳಿಸಿದರು. ‘ಆಧಾರ ರಹಿತ ಹೇಳಿಕೆಗೆ ಉತ್ತರಿಸುವ ಅಗತ್ಯ ಇಲ್ಲ. ಆಧಾರ ಸಹಿತ ಮಾತನಾಡಿದಾಗ, …

Read More »

ಮಾರಾಟಕ್ಕಿಲ್ಲ’ ಎಂದು‌ ಮುದ್ರಿಸದ ಔಷಧಿ ಖರೀದಿಸಿದ ಬಿಮ್ಸ್

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಖರೀದಿಸಿದ ಔಷಧಿ ಮತ್ತು ಕಾಸ್ಮೊಟಿಕ್ ಸಾಮಗ್ರಿಗಳ ಮೇಲೆ ‘ಮಾರಾಟಕ್ಕಿಲ್ಲ'(ನಾಟ್ ಫಾರ್ ಸೇಲ್) ಎಂಬ ಅಕ್ಷರ ಮುದ್ರಿಸಿಲ್ಲ. ಇದರಿಂದ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ‌ ಎಂದು ರೋಗಿಗಳು ದೂರಿದ್ದಾರೆ. ಇದರಿಂದ ಎಚ್ಚೆತ್ತ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕರು ಎಲ್ಲ ಔಷದಿಗಳನ್ನೂ ಹಿಂದಿರುಗಿಸಲು ಮುಂದಾಗಿದ್ದಾರೆ. ಬೆಂಗಳೂರಿನ ಅರ್ಚನಾ ಅಸೋಸಿಯೇಟ್ಸ್ ಎಂಬ ಔಷಧ ತಯಾರಿಕಾ ಕಂಪನಿ‌ಗೆ ಬಿಮ್ಸ್ ಫೆಬ್ರವರಿಯಲ್ಲಿ ಟೆಂಡರ್ ನೀಡಿದೆ. ಏಪ್ರಿಲ್‌ನಿಂದ ಔಷಧಿಗಳು‌ ಹಾಗೂ …

Read More »