Breaking News

Yearly Archives: 2024

ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

ಮುಧೋಳ: ರೈತರ ಖಾತೆಗೆ ಬಾಕಿ ಹಣ ಜಮಾ ಮಾಡುವಂತೆ ಒತ್ತಾಯಿಸಿ ಸಮೀಪದ ಐಸಿಪಿಎಲ್ ಕಾರ್ಖಾನೆ ಎದುರು ಕಬ್ಬು ಬೆಳೆಗಾರರು ಹಾಗೂ ರೈತರು ಧರಣಿ ನಡೆಸಿದರು. ಅ.24ರಂದು ನಗರದಲ್ಲಿ ಸಭೆ ಸೇರಿದ್ದ ರೈತರು 26ರೊಳಗೆ 2023ರ ಹಂಗಾಮಿನ ಪ್ರತಿಟನ್ನಿಗೆ ಹೆಚ್ಚುವರಿ 62ರೂ. ನೀಡಬೇಕು ಎಂದು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಗಡುವು ನೀಡಿದ್ದರು. ಆದರೆ ರೈತರ ಗಡುವಿಗೆ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದನೆ ನೀಡದ ಕಾರಣ ಶನಿವಾರ ಮತ್ತೆ ಸಭೆ ಸೇರಿದ …

Read More »

ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಇಬ್ಬರು ಎಂಎಲ್ ಎ ಗಳಿಗೆ ಕೊಕ್

ಮುಂಬಯಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಶನಿವಾರ(ಅ26) 22 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪಟ್ಟಿಯಲ್ಲಿ ಆರು ಹಾಲಿ ಶಾಸಕರಿಗೆ ಮತ್ತೆ ಅವಕಾಶ ನೀಡಲಾಗಿದೆ. ಶಿವಸೇನೆ(ಶಿಂಧೆ) ಮತ್ತು ಎನ್‌ಸಿಪಿ(ಅಜಿತ್ ಪವಾರ್) ಜತೆಗೆ ಆಡಳಿತಾರೂಢ ಮಹಾಯುತಿ ಒಕ್ಕೂಟದಲ್ಲಿರುವ ಬಿಜೆಪಿ ಇದುವರೆಗೆ 121 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.   ಅಕೋಟ್, ನಾಸಿಕ್ ಸೆಂಟ್ರಲ್, ಪೆನ್, ಖಡಕ್ವಾಸಲಾ, ಪುಣೆ ಕಂಟೋನ್ಮೆಂಟ್ ಮತ್ತು ಉಲ್ಲಾಸನಗರದ ಶಾಸಕರನ್ನು ಉಳಿಸಿಕೊಂಡು ವಾಶಿಮ್ …

Read More »

ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ದೀಪಾವಳಿಯ ವೇಳೆ ರಾಜ್ಯದಲ್ಲಿ ಪರಿಸರ ಸ್ನೇಹಿ ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ. ರಾಜ್ಯದಲ್ಲಿ ಪಟಾಕಿಗಳಿಂದ ಯಾವುದೇ ಹಾನಿ, ಗಾಯ ಅಥವಾ ಸಾವು ಸಂಭವಿಸಬಾರದು ಎಂದು ಅವರು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ ಒತ್ತಿ ಹೇಳಿದ್ದಾರೆ.   “ದೀಪಾವಳಿ ಸಮೀಪಿಸುತ್ತಿದ್ದು, ಯಾವ ರೀತಿಯ ಪಟಾಕಿಗಳನ್ನು ಸಿಡಿಸಬೇಕು ಎಂಬುದಕ್ಕೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ನೀಡಿದೆ. ಹಸುರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು …

Read More »

ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್‌?

ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣದ (Muda Case) ತನಿಖೆಯನ್ನು ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು ಪ್ರಕರಣದ ಎ1 ಆರೋಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರಿಗೆ ಶೀಘ್ರದಲ್ಲೇ ನೋಟಿಸ್‌ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಈಗಾಗಲೇ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಕ್ತಾಯಗೊಳಿಸಿದ್ದಾರೆ. ಹಾಗಾಗಿ 1ನೇ ಆರೋಪಿ ಸಿದ್ದರಾಮಯ್ಯ ಅವರನ್ನು ಯಾವಾಗ ವಿಚಾರಣೆಗೆ ಒಳಪಡಿಸುತ್ತಾರೆಂಬ ಪ್ರಶ್ನೆ ಇದೆ. ಶುಕ್ರವಾರವಷ್ಟೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ …

Read More »

ಬಿಎಂಟಿಸಿ ಕಂಡಕ್ಟರ್ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಕಂಡಕ್ಟರ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಕುಡಿದ ಮತ್ತಿನಲ್ಲಿ ಕಂಡಕ್ಟರ್ ಶಿವಕುಮಾರ್ ಅವರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಸಣ್ಣ ವಿಚಾರಕ್ಕೆ ಬಸ್ ಚಾಲಕ ಗಗನ್ ಮತ್ತು ಸವಾರನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸವಾರನಿಗೆ ಬಿಎಂಟಿಸಿ ಕಂಡಕ್ಟರ್ ಶಿವಕುಮಾರ್ ಬೈದಾಡಿದ್ದಾರೆ.   ಇದನ್ನು ಕೇಳಿಸಿಕೊಂಡ ಕಿಡಿಗೇಡಿಗಳು ಬಸ್ ಅಡ್ಡಗಟ್ಟಿ ಕಂಡಕ್ಟರ್ ನನ್ನು ರಸ್ತೆಗೆ …

Read More »

ದೀಪಾವಳಿಗೆ KSRTCಯಿಂದ 2000 ಹೆಚ್ಚುವರಿ ವಿಶೇಷ ಬಸ್, ಎಲ್ಲಿಂದ ಎಲ್ಲಿಗೆ…

ಬೆಂಗಳೂರು, ಅಕ್ಟೋಬರ್ 27: ಬೆಳಕಿನ ಹಬ್ಬ ದೀಪಾವಳಿ ಹಬ್ಬದಾಚರಣೆಗೆ ರಾಜ್ಯಾದ್ಯಂತ ಭರ್ಜರಿ ತಯಾರಿ ನಡೆದಿದೆ. ಹಬ್ಬಕ್ಕೆ ಉದ್ಯೋಗ ಸ್ಥಳದಿಂದ ತಮ್ಮೂರಿಗೆ ತೆರಳುವವರಿಗೆ ಅನುಕೂಲವಾಗಲೆಂದು ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲು ತೀರ್ಮಾನಿಸಿದೆ. ಹಾಗಾದರೆ ಯಾವ ದಿನಾಂಕದಂದು ಬಸ್‌ಗಳ ಲಭ್ಯತೆ, ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಇದೇ ಅಕ್ಟೊಬರ್ 31 ರಂದು ನರಕ ಚತುರ್ದಶಿ ಇದೆ. ಮರದುನ ನವೆಂಬರ್ 01ಕ್ಕೆ …

Read More »

ಕರಾಳ ದಿನಕ್ಕೆ ಅವಕಾಶ ಇಲ್ಲ: ರಾಜೇಶ ಬುರ್ಲಿ

ಕಾಗವಾಡ: ಪ್ರತಿಯೊಬ್ಬರು ಮಾತೃಭಾಷಾಭಿಮಾನ ಹೊಂದಿರಬೇಕು. ಆದರೆ ಇತರ ಭಾಷೆಗಳನ್ನು ದ್ವೇಷಿಸಬಾರದು. ಎಲ್ಲರೂ ಸೇರಿ ಕರ್ನಾಟಕ ರಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಕರಾಳ ದಿನಕ್ಕೆ ಅವಕಾಶ ಇಲ್ಲ‌ ಎಂದು ತಹಶೀಲ್ದಾರ್‌ ರಾಜೇಶ ಬುರ್ಲಿ ಹೇಳಿದರು. ಶುಕ್ರವಾರ ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಂಗಸೂಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕುರಿತು ನಡೆದ ಶಾಂತಿ ಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಮರಾಠಿ ಭಾಷಿಕರೇ ಹೆಚ್ಚಾಗಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ನ.1 …

Read More »

ಮತ್ತೆ ಬನ್ನಿ ಕಿತ್ತೂರು ಉತ್ಸವಕ್ಕೆ…:D.C.

ಚನ್ನಮ್ಮನ ಕಿತ್ತೂರು: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಶುಕ್ರವಾರ ತಡರಾತ್ರಿ ವೈಭವದ ತೆರೆ ಬಿದ್ದಿತು. ಬಾಲಿವುಡ್‌ ಖ್ಯಾತ ಗಾಯಕ ಅರ್ಮಾನ್‌ ಮಲೀಕ್‌ ಅವರ ಗಾನಸುಧೆಯ ಮೂಲಕ ಸಾಂಸ್ಕೃತಿಕ ಲೋಕವೊಂದು ನಿರ್ಮಾಣವಾಯಿತು. ರಾಜ್ಯದ ಎಲ್ಲೆಡೆಯಿಂದ ಸೇರಿದ್ದ ಅಪಾರ ಜನ ಮೂರು ದಿನಗಳ ವೈಭೋಗವನ್ನು ಕಣ್ಣು- ಮನದಲ್ಲಿ ಹಿಡಿದಿಟ್ಟುಕೊಂಡು ಮರಳಿದರು.   ದ್ವಿಶತಮಾನೋತ್ಸವಕ್ಕೆ ಜನ ನಿರೀಕ್ಷೆಗೆ ಮೀರಿ ಹರಿದುಬಂದರು. ರಾಣಿ ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಸಾಹಿತ್ಯ ಗೋಷ್ಠಿಗಳು ಮತ್ತು ಮಧ್ಯಾಹ್ನದ …

Read More »

ಬೈಲಹೊಂಗಲ ಉತ್ಸವಕ್ಕೆ ಭರದ ಸಿದ್ಧತೆ

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವಿಜಯೋತ್ಸವದ ವರ್ಷಾಚರಣೆ ಸವಿ ನೆನಪಿಗಾಗಿ ಅ.28ರಂದು ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ಪ್ರಥಮ ಬೈಲಹೊಂಗಲ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ.   ಪಟ್ಟಣದ ಕಲ್ಮಠ ಗಲ್ಲಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ ಸಮಾಧಿ ಸ್ಥಳದಲ್ಲಿ ಸರ್ಕಾರದಿಂದ ಉತ್ಸವ ನಡೆಸುವಂತೆ ವೀರರಾಣಿ ಕಿತ್ತೂರು ಚನ್ನಮ್ಮ ಸ್ಮರಣೋತ್ಸವ …

Read More »

ಮನೆ ಗೋಡೆ ಕುಸಿತ: ತಪ್ಪಿದ ದುರಂತ

 ಕಿತ್ತೂರು: ಇಲ್ಲಿಯ ಗುರುವಾರಪೇಟೆಯ ಶ್ರೀನಾಥ ಉಮರ್ಜಿ ಹಾಗೂ ಸಂಗೋಜಿ ಕುಟುಂಬಕ್ಕೆ ಸೇರಿದ ಮನೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಮಲಗುವ ಕೋಣೆಯ ಗೋಡೆಯಾಗಿದ್ದರಿಂದ ಕುಟುಂಬಸ್ಥರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಉಮರ್ಜಿ ಮತ್ತು ಸಂಗೋಜಿ ಕುಟುಂಬದ ಎರಡೂ ಮನೆಗಳಿಗೂ ಇದೊಂದೇ ಗೋಡೆಯಾಗಿತ್ತು. ಸಂಗೋಜಿ ಅವರ ಮನೆಯಲ್ಲಿ ಸದ್ಯ ಯಾರೂ ವಾಸಿಸುತ್ತಿಲ್ಲ. ಆದರೆ ಮನೆ ಸೋರುವ ವಿಷಯ ಅವರಿಗೆ ತಿಳಿಸಲಾಗಿತ್ತು. ಬೇಗ ಗಮನ ಹರಿಸದ್ದರಿಂದ ಉಮರ್ಜಿ ಅವರ ಮನೆ ಕಡೆಗೆ ಗೋಡೆ ಬಾಗಿ ಬಿದ್ದಿದೆ …

Read More »