Breaking News

Monthly Archives: ಜುಲೈ 2024

ಜನರನ್ನು ಪರಾವಲಂಬಿಯಾಗಿಸುತ್ತಿರುವ ‘ಗ್ಯಾರಂಟಿ’: ರಮೇಶ್ ಕತ್ತಿ ವಿಷಾದ

ಹುಕ್ಕೇರಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರೈತರು ಸೇರಿದಂತೆ ಜನರನ್ನು ಪರಾವಲಂಬಿಗಳಾಗಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು. ತಾಲ್ಲೂಕಿನ ನೇರಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2024-25 ರಿಂದ 2026-27ನೇ ಸಾಲಿಗೆ ಮಂಜೂರಾದ ₹5.59 ಕೋಟಿ ಪತ್ತನ್ನು ಬುಧವಾರ 811 ಸದಸ್ಯರಿಗೆ ವಿತರಿಸಿ ಮಾತನಾಡಿದರು.   ‘ಪಕ್ಷಾತೀತವಾಗಿ ಸರ್ಕಾರಗಳು ಬರಬರುತ್ತ ಜನರನ್ನು ಸ್ವಾವಲಂಬಿ ಬದುಕು …

Read More »

ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲು BSNL ಸಿದ್ಧ: 1000ಜಿಬಿ ಬ್ರಾಂಡ್‌ ಬ್ಯಾಂಡ್ ಪ್ಲ್ಯಾನ್‌

ಟೆಲಿಕಾಂ ಕ್ಷೇತ್ರದ ದೈತ್ಯಗಳಲ್ಲಿ ಒಂದಾಗಿರುವ ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್‌ ಈಗ ಗ್ರಾಹಕರನ್ನು ತನ್ನತ್ತ ಸೆಳೆಯಲು ಭರ್ಜರಿ ಪ್ಲ್ಯಾನ್‌ ಮಾಡಿಕೊಂಡಿದೆ. ಆರಂಭದಲ್ಲಿ ಅಗ್ಗದ ರಿಚಾರ್ಜ್‌ ಪ್ಲ್ಯಾನ್‌ ನೀಡಿ ಬಳಕೆದಾರರನ್ನು ಸೆಳೆದ ಬಿಎಸ್‌ಎನ್‌ಎಲ್‌, ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಮತ್ತೊಂದು ವಲಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಗೊಳಿಸಿಕೊಳ್ಳಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಜುಲೈನಲ್ಲಿ ಖಾಸಗಿ ಕಂಪನಿಗಳ ರಿಚಾರ್ಜ್‌ ದರಗಳಲ್ಲಿ ಏರಿಕೆ ಕಂಡಿದ್ದರಿಂದ ಬಳಕೆದಾರರ, ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, …

Read More »

ಧಾರಾಕಾರ ಮಳೆ , ಕರ್ನಾಟಕ-ಗೋವಾ ರಾಜ್ಯ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರಳಿದ ಲಾರಿ

ಧಾರಾಕಾರ ಮಳೆ ಹಿನ್ನೆಲೆ: ಕರ್ನಾಟಕ-ಗೋವಾ ರಾಜ್ಯ ಹೆದ್ದಾರಿಯಲ್ಲಿ ಪ್ರಪಾತಕ್ಕೆ ಉರಳಿದ ಲಾರಿ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ, ಕರ್ನಾಟಕ-ಗೋವಾ ರಾಜ್ಯ ಹೆದ್ದಾರಿಯ ಚೊರ್ಲಾ ಬಳಿ ಭೀಕರ ಘಟನೆ ನಡೆದಿದೆ. ರಸ್ತೆ ಪಕ್ಕದ ಮಣ್ಣು ಕುಸಿದು, ಲಾರಿ ಪ್ರಪಾತಕ್ಕೆ ಉರಳಿದೆ. ಘಟನೆಯ ತಕ್ಷಣ, ಜೆಸಿಬಿ ಸಹಾಯದಿಂದ ಲಾರಿಯನ್ನು ಪಕ್ಕಕ್ಕೆ ತರುವ ಕಾರ್ಯಾಚರಣೆ ಆರಂಭಗೊಂಡಿತು. ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಲಾರಿ ಉರಳಿ ಬೀಳುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕರ್ನಾಟಕದ ಗಡಿ ಭಾಗದಲ್ಲಿ ನಡೆದ …

Read More »

ಕೆಆರ್‌ಎಸ್ ಜಲಾಶಯ ಫುಲ್?

ಮಳೆ.. ಮಳೆ.. ಕರ್ನಾಟಕದಲ್ಲಿ ಭರ್ಜರಿ ಮುಂಗಾರು ಮಳೆ ಬೀಳುತ್ತಿರುವ ಕಾರಣಕ್ಕೆ ಈಗ ಜಲಾಶಯಗಳ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ನದಿಗಳು ಹುಟ್ಟುವ ಘಟ್ಟ ಪ್ರದೇಶಗಳಲ್ಲಿ ಅಂದ್ರೆ ಮಲೆನಾಡು ಭಾಗದಲ್ಲಿ ಭಾರಿ ಮಳೆಯು ಬೀಳುತ್ತಿದೆ. ಕಳೆದ 2 ವಾರಗಳಿಂದ ನಿರಂತರವಾಗಿ ಇದೇ ರೀತಿ ಮಳೆ ಬಿದ್ದ ಕಾರಣ ಈಗ ಕರ್ನಾಟಕದ ಡ್ಯಾಂಗಳ ಪರಿಸ್ಥಿತಿ ಹೇಗಿದೆ ಗೊತ್ತಾ? ಕೆಆರ್‌ಎಸ್ ಡ್ಯಾಂ ತುಂಬಲು ಇನ್ನು ಎಷ್ಟು ಅಡಿ ನೀರು ಬೇಕು? ಉಳಿದ …

Read More »

ರಷ್ಯಾ ಪ್ರವಾಸ ಮುಗಿಸಿ ಆಸ್ಟ್ರಿಯಾ ತಲುಪಿದ ಮೋದಿ

ವಿಯೆನ್ನಾ(ಜು.10): ರಷ್ಯಾ ನಂತರ ಪ್ರಧಾನಿ ನರೇಂದ್ರ ಮೋದಿ ಈಗ ಆಸ್ಟ್ರಿಯಾ ಪ್ರವಾಸದಲ್ಲಿದ್ದಾರೆ. ವಿಯೆನ್ನಾದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ದೊರೆಯಿತು. ತಮ್ಮ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಆಸ್ಟ್ರಿಯಾ ಅಧ್ಯಕ್ಷ ವ್ಯಾನ್ ಡೆರ್ ಬೆಲ್ಲೆನ್ ಮತ್ತು ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿಯವರು ಅಲ್ಲಿ ನೆಲೆಸಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವರದಿಗಳ ಪ್ರಕಾರ, ಈ ಭೇಟಿಯ ವೇಳೆ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಬಹುದು. …

Read More »

ವಾಲ್ಮೀಕಿ ನಿಗಮ ಹಗರಣ: ಶಾಸಕ ಬಿ. ನಾಗೇಂದ್ರ ಆಪ್ತ ಸಹಾಯಕರು ಇ.ಡಿ ವಶಕ್ಕೆ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಬಳ್ಳಾರಿ ನಿವಾಸದ ಮೇಲೆ ಬುಧವಾರ ಮುಂಜಾನೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ವಿಜಯಕುಮಾರ್ ಮತ್ತು ಚೇತನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಇಬ್ಬರೂ ನಾಗೇಂದ್ರ ಅವರ ಆಪ್ತ ಸಹಾಯಕರಾಗಿದ್ದರು‌. ಬುಧವಾರ ಮುಂಜಾನೆ, ಸಿಆರ್ಪಿಎಫ್ ಭದ್ರತೆಯೊಂದಿಗೆ ಮೂರು ತಂಡಗಳಾಗಿ ಬಳ್ಳಾರಿಗೆ ಆಗಮಿಸಿದ ಇ.ಡಿ, ದಾಳಿ ನಡೆಸಿತು. ನಾಗೇಂದ್ರ ಅವರ ಬೆಂಗಳೂರಿನ ನಿವಾಸದಲ್ಲೂ ಶೋಧ ನಡೆಯುತ್ತಿದೆ. ಸ್ಥಳೀಯ ಪೊಲೀಸರಿಗೂ …

Read More »

ಬಸನಗೌಡ ದದ್ದಲ್‌ ನಿವಾಸದ ಮೇಲೆ ಇಡಿ ದಾಳಿ

ರಾಯಚೂರು ಜುಲೈ 10: ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸದ ಮೇಲೆ ಬೆಳಿಗ್ಗೆ 7 ಗಂಟೆಗೆ ದಾಳಿ ಮಾಡಿದ್ದು, ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಮಂಗಳವಾರ ಎಸ್ ಐಟಿ ಅಧಿಕಾರಿಗಳು ದದ್ದಲ್‌ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇವತ್ತು ಮತ್ತೆ ವಿಚಾರಣೆಗೆ ಕರೆದಿದ್ದಾರೆ. ಇದೇ ಅವಧಿಯಲ್ಲೇ 18 ದಾಳಿ ನಡೆಸಿರುವ ಮಾಹಿತಿ ಇದೆ. ಜೊತೆಗೆ …

Read More »

ಸತತ ಏಳು ಬಾರಿ ಸಂಸದರಾಗಿ ಆಯ್ಕೆಸಂಪುಟದಲ್ಲಿ ಸಿಗದ ಸಚಿವ ಸ್ಥಾನಜಿಗಜಿಣಗಿ ತೀವ್ರ ಅಸಮಾಧಾನ

ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಹೆಗ್ಗಳಿಕೆ ಹೊಂದಿರುವ ರಮೇಶ್ ಜಿಗಜಿಣಗಿ, ಈ ಬಾರಿಯ ಕೇಂದ್ರ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಂಗಳವಾರದಂದು ನಡೆದ ಸಂಸದರ ಕಚೇರಿಯ ಪೂಜಾ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಯಾಗುವ ಸಂದರ್ಭದಲ್ಲಿಯೇ ನನ್ನ ಅನೇಕ ಸ್ನೇಹಿತರು ಆ ಪಕ್ಷ ದಲಿತ ವಿರೋಧಿ. ಸೇರ್ಪಡೆಯಾಗುವುದು ಬೇಡ ಎಂದು ಹೇಳಿದ್ದರು. ಇಷ್ಟಾದರೂ ನಾನು ಆ …

Read More »

ರಾಜ್ಯದಲ್ಲಿ ಮತ್ತೆ ಮೂರು ವೈದ್ಯ ಕಾಲೇಜು ಆರಂಭಕ್ಕೆ ‘ಗ್ರೀನ್ ಸಿಗ್ನಲ್’

ರಾಜ್ಯದಲ್ಲಿ ಮತ್ತೆ ಮೂರು ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಇದರಿಂದಾಗಿ ವೈದ್ಯಕೀಯ ಕಾಲೇಜುಗಳ ಒಟ್ಟು ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎಲೆಕ್ಟ್ರಾನಿಕ್ ಸಿಟಿಯ ಪಿಇಎಸ್ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆ ಎಸ್‌ಆರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಕಾಲೇಜು ಆರಂಭಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂ ಸಿ) ಅನುಮತಿ ನೀಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಮೂರೂ ಕಾಲೇಜುಗಳು ಆರಂಭವಾಗಲಿವೆ. …

Read More »

ಬೆಳೆ ವಿಮಾ‌ ಯೋಜನೆಗೆ ಅರ್ಜಿ‌ ಆಹ್ವಾನ

ಹೊಸಕೋಟೆ: 2024-25ನೇ ಸಾಲಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅಡಿಯಲ್ಲಿ ಹೊಸಕೋಟೆ ತಾಲ್ಲೂಕಿಗೆ ಮಾವು ಮತ್ತು ದ್ರಾಕ್ಷಿ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ರೈತ ಬಾಂಧವರು‌ ಸ್ವಇಚ್ಛೆಯಿಂದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕಾ ಇಲಾಖೆ ತಿಳಿಸಿದೆ. ಪ್ರತಿ ಹೆಕ್ಟೇರ್ ಮಾವಿಗೆ ₹80 ಸಾವಿರ, ದ್ರಾಕ್ಷಿಗೆ ₹2.80 ಲಕ್ಷ ವಿಮಾ ಮೊತ್ತವಾಗಿದ್ದು, ಅದರಲ್ಲಿ ಶೇ 5ರಷ್ಟು ರೈತರು ವಂತಿಗೆ ಪಾವತಿಸಬೇಕಿದ್ದು, ಅದರಂತೆ ಮಾವಿಗೆ ₹5 ಸಾವಿರ, ದ್ರಾಕ್ಷಿಗೆ ₹ 14 …

Read More »