Breaking News

Daily Archives: ಜೂನ್ 20, 2024

14 ತಿಂಗಳಾದರೂ ಪುಸ್ತಕಗಳೇ ಪ್ರಕಟವಾಗಿಲ್ಲ

ಬಾಗಲಕೋಟೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 29 ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಈ ಬಾರಿ ಹತ್ತು ಪುಸ್ತಕಗಳ ಪ್ರಕಟಣೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮುಂದಾಗಿದೆ. ಆದರೆ, 16 ತಿಂಗಳ ಹಿಂದೆ ನಡೆದಿದ್ದ ಸಮ್ಮೇಳನದಲ್ಲಿ ಘೋಷಿಸಿದ್ದ ಪುಸ್ತಕಗಳೇ ಹೊರ ಬಂದಿಲ್ಲ. ಬೀಳಗಿಯಲ್ಲಿ ಅದ್ದೂರಿಯಾಗಿ ಸಮ್ಮೇಳನ ನಡೆದಿತ್ತು. ಸಮ್ಮೇಳನದಲ್ಲಿ ಪುಸ್ತಕಗಳ ಬಿಡುಗಡೆಯೂ ನಡೆದಿತ್ತು. ಬಿಡುಗಡೆಗಾಗಿ ಕೇವಲ ಐದು ಪ್ರತಿಗಳನ್ನು ತರಲಾಗಿತ್ತು. ನಂತರ ಅವುಗಳ ಪ್ರಕಟಣೆಗೆ ಕನ್ನಡ …

Read More »

ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದುಬಾರಿ ; ಸೈಕಲ್ ಏರಿ ಪ್ರತಿಭಟಿಸಿದ ಬಿಜೆಪಿ

ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಏರಿಕೆ ಖಂಡಿಸಿ ಬಿಜೆಪಿ ನಾಯಕರು ಇಂದು ಸೈಕಲ್ ಏರಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಯಿತು. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಮಾಜಿಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ್, ಸಿಟಿ ರವಿ,ಮಾಜಿ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, …

Read More »

ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ: ಪ್ರಯಾಣಿಕರಿಗೆ 2.50 ಲಕ್ಷ ರೂ. ಬ್ಯಾಗ್ ವಾಪಸ್

ರಾಯಚೂರು: ಬಸ್ ನಲ್ಲಿಯೇ ಹಣ ಇದ್ದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕನಿಗೆ ಚಾಲಕ ಮತ್ತು ನಿರ್ವಾಹಕ ಅದನ್ನು ಮರಳಿಸಿದ್ದಾರೆ. ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಬಸ್ ನಲ್ಲಿ ಮಾನ್ವಿ ಬಸ್ ನಿಲ್ದಾಣದಿಂದ ರಾಯಚೂರಿಗೆ ಬರುತ್ತಿದ್ದ ಪ್ರಯಾಣಿಕ ಸೋಮಶೇಖರ ಪಾಟೀಲ ಅವರು 2.50 ಲಕ್ಷ ರೂ. ಇದ್ದ ಬ್ಯಾಗ್ ಅನ್ನು ಬಸ್ ನಲ್ಲಿ ಬಿಟ್ಟು ರಾಯಚೂರಿನಲ್ಲಿ ಇಳಿದು ಹೋಗಿದ್ದಾರೆ. ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರು ಬಸ್ ನಿಂದ ಇಳಿದ ನಂತರ ಕಂಡಕ್ಟರ್ …

Read More »

ಕ್ಲಾಸ್​ರೂಮ್​ನಲ್ಲಿ ವಿದ್ಯಾರ್ಥಿಗಳು ಮಾಡಿದ ಕೆಲಸ ನೋಡಿ ಕಣ್ಣೀರಿಟ್ಟ ಶಿಕ್ಷಕಿ! ವಿಡಿಯೋ ವೈರಲ್​

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಶಿಕ್ಷಕರು ತಮ್ಮ ಬೋಧನೆಯಿಂದ ವಿದ್ಯಾರ್ಥಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತಾರೆ. ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸಿ, ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿ ಹೇಳಿ, ಸರಿದಾರಿಯಲ್ಲಿ ನಡೆಸುತ್ತಾರೆ. ಹೀಗಾಗಿಯೇ ವಿದ್ಯಾರ್ಥಿಗಳು ಸಹ ಇಂತಹ ಶಿಕ್ಷಕರ ಮೇಲೆ ಅಪಾರ ಪ್ರೀತಿಯನ್ನು ತೋರಿಸುತ್ತಾರೆ. ಇತ್ತೀಚಿಗೆ ಕೆಲವು ವಿದ್ಯಾರ್ಥಿಗಳು ಮಾಡಿದ ಕೆಲಸವನ್ನು ನೋಡಿ ಶಿಕ್ಷಕಿಯೊಬ್ಬರು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ …

Read More »

ಭಾರತದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಅಪರೂಪದ ಗ್ರಾಮ…!

ಅವಳಿ ಮಕ್ಕಳನ್ನು ಹೊಂದುವುದು ಅಪರೂಪ. ಆದರೆ ಭಾರತದ ಹಳ್ಳಿಯೊಂದರಲ್ಲಿ ಅವಳಿ ಮಕ್ಕಳ ಜನನ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಕೊಡಿನ್ಹಿ ಗ್ರಾಮವನ್ನು ಅವಳಿಗಳ ಗ್ರಾಮ ಎಂದೂ ಕರೆಯುತ್ತಾರೆ. ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ 1000 ಮಕ್ಕಳಲ್ಲಿ ಕೇವಲ 9 ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಕೇರಳದ ಈ ಹಳ್ಳಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಅವಳಿ ಮಕ್ಕಳಿದ್ದಾರೆ. 2008ರ ಮಾಹಿತಿ ಪ್ರಕಾರ ಎರಡು ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಅವಳಿ ಮಕ್ಕಳ ಸಂಖ್ಯೆ …

Read More »

ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ನೀರು, ಬಸ್ ಪ್ರಯಾಣ ದರವೂ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಸರ್ಕಾರಿ ಬಸ್ ಪ್ರಯಾಣ ದರ, ನೀರಿನ ದರ ಏರಿಕೆಯ ಸುಳಿವು ದೊರೆತಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಸ್ ಪ್ರಯಾಣತರ ಹೆಚ್ಚಳ ಬಗ್ಗೆ ಸಾರಿಗೆ ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲಿಸಿ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೂನ್ 15ರಂದು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ …

Read More »