ಕನಕಪುರ: ಸರ್ಕಾರದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗದ ಬಿಜೆಪಿಯ ಸಂಸದರು ಒಳಗೊಳಗೆ ಭಾರಿ ಅವಮಾನ ಎದುರಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಎಂಟರಿಂದ ಹತ್ತು ಬಿಜೆಪಿ ಸಂಸದರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ‘ಈ ಸರ್ಕಾರದಲ್ಲಿ ಮಾತನಾಡಲು ನಮಗೆ ಧ್ವನಿ ಇಲ್ಲ ಎಂದು ಬಿಜೆಪಿ ಸಂಸದರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಸದ್ಯಕ್ಕೆ ಅವರ ಹೆಸರು ಬೇಡ. ಆ ಸಂಸದರ ಯಾರು …
Read More »Yearly Archives: 2023
20 ಎಕರೆ ಬೆಳೆದು ನಿಂತ ಕಬ್ಬು ಬೆಂಕಿಗೆ ಆಹುತಿ
ಆಕಸ್ಮೀಕವಾಗಿ ಹತ್ತಿದ ಬೆಂಕಿಗೆ ಅಂದಾಜು 20 ಎಕರೆ ಬೆಳೆದು ನಿಂತ ಕಬ್ಬು ಆಹುತಿಯಾದ ಘಟನೆ ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ ಉಪ್ಪಾರಟ್ಟಿಯ ಗ್ರಾಮದ ರೈತರಾದ ವಿಠ್ಠಲ ಚುನ್ನನವರ,ನಾರಾಯಣ ನಂದಿ, ಪುಂಡಲಿಕ್ ದರೆನ್ನವರ್, ರುದ್ರಪ್ಪ ಮುರ್ಕಿ ಭಾವಿ, ಗಂಗಪ್ಪ ಕೊಳವಿ, ಇವರು ತಮ್ಮ ಹೊಲದಲ್ಲಿನ ಕಬ್ಬು ಇನ್ನೆನು ಕೆಲವೆ ದಿನಗಳಲ್ಲಿ ಕಟಾವು ಮಾಡಿ ಕಾರ್ಖಾನೆಗೆ ಕಳಿಸುವ ವಿಚಾರದಲ್ಲಿದ್ದಾಗ ಇವತ್ತು ಅಪರಾಹ್ನ 12 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ಮೊದಲು …
Read More »‘ಸ್ಕಾಲರ್‌ಷಿಪ್‌ಗೆ ಕನ್ನ’ ಪ್ರಕರಣ: ತನಿಖೆಗೆ ಹಿನ್ನಡೆ
ಹಾವೇರಿ: ತಾಲ್ಲೂಕಿನ ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 2019ರಿಂದ ಇಲ್ಲಿಯವರೆಗೆ ‘ಅಕೌಂಟೆಂಟ್ ಜನರಲ್ ಆಡಿಟ್’ ನಡೆಯದ ಕಾರಣ ‘ಸ್ಕಾಲರ್‌ಶಿಪ್‌ಗೆ ಕನ್ನ’ ಪ್ರಕರಣದ ತನಿಖೆಯ ಮೇಲೆ ಕಾರ್ಮೋಡ ಕವಿದಿದೆ. ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ವಿದ್ಯಾಭ್ಯಾಸ ಸಾಲದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು 2022ರ ಜೂನ್‌ನಲ್ಲಿ ಬೆಳಕಿಗೆ ಬಂದಿತ್ತು. ನಂತರ ಕಾಲೇಜಿನ ಆಂತರಿಕ ತನಿಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ತನಿಖೆ ಆಧರಿಸಿ, ಇಬ್ಬರು ಅಧೀಕ್ಷಕರು ಸೇರಿ ಐವರು …
Read More »ಬೆಳಗಾವಿ| ಮೇಯರ್, ಉಪಮೇಯರ್; ಕೊನೆಕ್ಷಣದ ಕಸರತ್ತು
ಬೆಳಗಾವಿ: ಬೆಳಗಾವಿ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ನಗರದಲ್ಲಿ ಭಾನುವಾರ ಇಡೀ ದಿನ ತುರುಸಿನ ಚಟುವಟಿಕೆಗಳು ನಡೆದವು. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಆಕಾಂಕ್ಷಿಗಳು ಒಬ್ಬರಿಗಿಂತ ಒಬ್ಬರು ಉಮೇದಿನಲ್ಲಿದ್ದಾರೆ. ಉಪ ಮೇಯರ್ ಸ್ಥಾನಕ್ಕೂ ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್‌ಗಳಲ್ಲಿ ಇನ್ನಿಲ್ಲದ ಕಸರತ್ತು ನಡೆದವು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ ನೇತೃತ್ವದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮುಖಂಡರು …
Read More »ರೇಣುಕಾ ಸನ್ನಿಧಿಯಲ್ಲಿ ಭಕ್ತಿ ಹೊಳೆ- ಮುಗಿಲು ಮುಟ್ಟಿದ ಜೈಕಾರ
ಸವದತ್ತಿ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಕ್ತಿಯ ಹೊಳೆ ಹರಿಯಿತು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಜಗದಂಬಾ ಸನ್ನಿಧಿಯಲ್ಲಿ ಭಾರತ ಹುಣ್ಣಿಮೆ ಸಂಕ್ಷಿಪ್ತವಾಗಿ ಆಚರಿಸಲಾಗಿತ್ತು. ಈ ಬಾರಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಅಪಾರ ಜನ ಸೇರಿದರು. ರೇಣುಕಾದೇವಿ ಸನ್ನಿಧಿಗೆ ಬಂದು ಪರಡಿ ತುಂಬುವುದು ಭಾರತ ಹುಣ್ಣಿಮೆಯ ಸಂಪ್ರದಾಯಗಳಲ್ಲಿ ಒಂದು. ಅದರಂತೆ, ಭಾನುವಾರ ಕೂಡ ಅಪಾರ ಭಕ್ತರು ಬೆಟ್ಟದಲ್ಲೇ ಪುಣ್ಯಸ್ನಾನ ಮಾಡಿ, ನೈವೇದ್ಯ ಸಿದ್ಧಪಡಿಸಿ ಪರಡಿ ತುಂಬಿದರು. ಕರಿಗಡಬು, …
Read More »ಬೆಳಗಾವಿ ಮೇಯರ್ ಚುನಾವಣೆ: ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಬೆಂಬಲಿತ ಸದಸ್ಯರು
ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಮೇಯರ್, ಉಪಮೇಯರ್ ಚುನಾವಣೆಗೆ ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಮೂವರು ಸದಸ್ಯರು ಮತ್ತೆ ನಾಡದ್ರೋಹಿ ಘೋಷಣೆ ಕೂಗಿದರು. ಎಂಇಎಸ್ ಮುಖಂಡರೂ ಆಗಿರುವ ವೈಶಾಲಿ ಭಾತಖಾಂಡೆ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಂದರು. ಪಾಲಿಕೆ ಆವರಣ ಪ್ರವೇಶಿಸುತ್ತಿದ್ದಂತೆಯೇ ‘ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಖಾನಾಪುರ’ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು. ಅವರೊಂದಿಗೆ ಬಂದ ಇನ್ನಿಬ್ಬರು ಎಂಇಎಸ್ ಬೆಂಬಲಿತ ಸದಸ್ಯರೂ ಧ್ವನಿಗೂಡಿಸಿದರು. ಕೇಸರಿ …
Read More »ಶೋಭಾ ಸೋಮಣ್ಣಾಚೆ ಮೇಯರ್, ರೇಷ್ಮಾ ಪಾಟೀಲ ಉಪಮೇಯರ್
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಶೋಭಾ ಸೋಮನಾಚೆ ಮತ್ತು ಉಪ ಮೇಯರ್ ಆಗಿ ರೇಷ್ಮಾ ಮಾಟೀಲ ಆಯ್ಕೆ ಖಚಿತವಾಗಿದೆ. ಬಿಜೆಪಿಯಿಂದ ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅತೀ ಹೆಚ್ಚು ಸ್ಥಾನಗಳನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಖಚಿತವಾಗಿದೆ. ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ. ಮೇಯರ್ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದು, ಉಪ ಮೇಯರ್ ಸ್ಥಾನಕ್ಕೆ ಪಕ್ಷೇತರ ಸದಸ್ಯೆ ವೈಶಾಲಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ.
Read More »ಬಹಿರಂಗವಾಯಿತು ಹಿರಿಯ ಗಾಯಕಿ ವಾಣಿ ಜಯರಾಂ ಸಾವಿನ ಕಾರಣ!
ಹಿರಿಯ ಗಾಯಕಿ ವಾಣಿ ಜಯರಾಂ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು. ಅವರ ನಿಧನ ಅನೇಕ ಅನುಮಾನಗಳನ್ನು ಹುಟ್ಟು ಹಾಕಿವೆ. ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಅವರ ಹಣೆಯ ಮೇಲೆ ಗಾಯವಾಗಿದ್ದೂ ಕೂಡ ಸಾವಿನ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿತ್ತು. ಹಿರಿಯ ಗಾಯಕಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ಭಾನುವಾರ ಅವರ ಮರಣೋತ್ತರ ಪರೀಕ್ಷೆಯ ವಿವರ ಬಹಿರಂಗವಾಗಿದ್ದು, ಜೊತೆಗೆ …
Read More »ಪ್ರಹ್ಲಾದ್ ಜೋಶಿ ಮುಂದಿನ ಸಿಎಂ ‘ ಎಂಬ ಹೆಚ್ಡಿಕೆ ಹೇಳಿಕೆಗೆ ಸಿಎಂ ಬೊಮ್ಮಾಯಿ ಟಾಂಗ್
ನವದೆಹಲಿ : ಯಾರಿಗೂ ಬರದ ನ್ಯೂಸ್ ಗಳು ಕುಮಾರಸ್ವಾಮಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನವದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಮುಂದಿನ ಸಿಎಂ ಪ್ರಹ್ಲಾದ್ ಜೋಶಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕುಮಾರಣ್ಣನಿಗೆ ಇಂತಹ ಮಾಹಿತಿ ಎಲ್ಲಿಂದ ಬರುತ್ತೋ ಗೊತ್ತಿಲ್ಲ .ಹೆಚ್ಡಿಕೆ ಇಂತಹ ವಿಚಾರಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಸರ್ಕಾರದ ಪ್ರಸ್ತುತ ಕಾರ್ಯಕ್ರಮದ ಬಗ್ಗೆ ಮಾತನಾಡಲಿ ಎಂದರು.ಕುಮಾರಸ್ವಾಮಿ ಮೊದಲು …
Read More »ಬಿಜೆಪಿಯವರು ಮತಗಳನ್ನೇ ಕದಿಯುತ್ತಾರೆ: ಡಿಕೆಶಿ
ಮಾಲೂರು (ಕೋಲಾರ): ‘ಚಿನ್ನ, ಚಪ್ಪಲಿ ಕದಿಯೋದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಬಿಜೆಪಿಯವರು ಮತಗಳನ್ನೇ ಕದಿಯುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶನಿವಾರ ಪ್ರಜಾಧ್ವನಿ ಯಾತ್ರೆ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಅಡುಗೆ ಅನಿಲದ ಬೆಲೆ ಹತ್ತು ಪೈಸೆ ಹೆಚ್ಚಾದಾಗ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು ತಲೆ ಮೇಲೆ ಸಿಲಿಂಡರ್, ಸ್ಟೌ ಇಟ್ಟುಕೊಂಡು ಓಡಾಡಿದ್ರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ, ‘ಮತ ಹಾಕುವಾಗ …
Read More »