ಬೈಲಹೊಂಗಲ: ಪಟ್ಟಣದ ಹೊಸೂರ ರಸ್ತೆಯ ಶತಮಾನ ಪೂರೈಸಿದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ರವಿವಾರ ಮಧ್ಯಾಹ್ನ ಕಿಡಿಗೇಡಿಗಳಿಂದ ಶಾಲಾ ಕೊಠಡಿಗೆ ಬೆಂಕಿ ತಗುಲಿದ ಪರಿಣಾಮ ದಗದಗ ಹೊತ್ತಿ ಉರಿದ ಘಟನೆ ಜರುಗಿದೆ. ಸುಡು ಬಿಸಿಲಿನಲ್ಲಿ ಶಾಲಾ ಕೊಠಡಿಗೆ ಬೆಂಕಿ ತಗುಲಿದ ಪರಿಣಾಮ ಬಾಗಿಲು ಇಲ್ಲದ ಕೊಠಡಿಯಲ್ಲಿದ್ದ ಹಳೆ ಡೆಸ್ಕ್, ಹಳೆಯ ಕಾಗದ ಪತ್ರಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಸುಡು ಬಿಸಿಲಿನಲ್ಲಿ ಬೆಂಕಿಯ ಕೆನ್ನಾಲಿಗೆ ಜ್ವಾಲಾ ಮುಖಿಯಂತೆ ಕಂಡಿತು. ಕಿಡಗೇಡಿಗಳು ಹೊತ್ತಿಸಿದ …
Read More »Yearly Archives: 2023
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಸಂಗ್ರಹ ಸೋಮವಾರದಿಂದ ಆರಂಭ
ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಸಂಗ್ರಹ ಸೋಮವಾರದಿಂದ ಆರಂಭವಾಗಲಿದೆ. ಬೆಂಗಳೂರು- ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ಆರಂಭಿಸಲಾಗಿದೆ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ. ರಸ್ತೆಗೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಲಘು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಹಾಗೂ ಅದೇ ದಿನ ಮರು ಸಂಚಾರಕ್ಕೆ 205 ರೂ., ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌ಗಳ ಏಕಮುಖ …
Read More »ಆಕಾಶಕ್ಕೆ ಲಗ್ಗೆ ಇಟ್ಟ ಚಿಣ್ಣರ ದಂಡು
ಚನ್ನಮ್ಮನ ಕಿತ್ತೂರು: ಅತ್ತ ರಾಜುವಿನ ಗಾಳಿಪಟ, ಇತ್ತ ಚಂದ್ರಿಕಾಳ ಗಾಳಿಪಟ, ರಮ್ಯ ಕೈಯಲ್ಲಿ ದಾರದ ಉಂಡೆ, ಉಸ್ತಾದನ ಕೈಯಲ್ಲಿ ಬಾಲಂಗೋಚಿ, ಸೂತ್ರ ಹರಿದು ಮಾಯವಾಯಿತು ಪರಮೇಶಿಯ ಪಟ, ಅದ ನೋಡಿ ಹೋಯ್… ಎಂದು ಕೂಗಿದ ಚಿಣ್ಣರ ದಂಡು. ‘ ವಿವಿಧ ಶಾಲೆಗಳಿಂದ ಬಂದಿದ್ದ ನೂರಾರು ಮಕ್ಕಳಿಗೆ ಬಣ್ಭಬಣ್ಣದ ಪಟಗಳನ್ನು ಉಚಿತವಾಗಿ ನೀಡಲಾಯಿತು. ಪಟ ಮತ್ತು ದಾರದ ಉಂಡೆಗಳು ಕೈಗೆ ಸಿಕ್ಕಿದ್ದೇ ತಡ ಚಿಣ್ಣರು ನಾ ಮುಂದು, ತಾ ಮುಂದು ಎಂದು …
Read More »ವಿಶಿಷ್ಟ ರೀತಿಯಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಜ್ಜಾದ ಬೆಳಗಾವಿ|
ಬೆಳಗಾವಿ: ಸೋಮವಾರ (ಫೆ.27) ಬೆಳಗಾವಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲು, ವಿವಿಧ ಕ್ಷೇತ್ರಗಳ ಆರು ಕಾರ್ಮಿಕರನ್ನು ಸಿದ್ಧಗೊಳಿಸಲಾಗಿದೆ. ಪೌರಕಾರ್ಮಿಕ ಮಹಿಳೆ ಮೀನಾಕ್ಷಿ ಕೃಷ್ಣ ತಳವಾರ, ಕೃಷಿ ಕಾರ್ಮಿಕ ಮಹಿಳೆ ಶೀಲಾ ಖನ್ನೂಕರ, ನೇಕಾರ ಕಲ್ಲಪ್ಪ ತಂಬಗಿ, ಆಟೊ ಚಾಲಕ ಮಯೂರ ಯಶವಂತ ಚವ್ಹಾಣ, ಹೋಟೆಲ್ ಮಾಣಿ ಚಂದ್ರಕಾಂತ ಮಹಾದೇವ ಹೋನಕರ, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ ಅವರಿಗೆ ಶಿಷ್ಟಾಚಾರದ ತರಬೇತಿ ನೀಡಲಾಗಿದೆ. ಸೋಮವಾರ ಮಧ್ಯಾಹ್ನ …
Read More »ಶಿವಮೊಗ್ಗ ವಿಮಾನ ನಿಲ್ದಾಣ: ಲೋಕಾರ್ಪಣೆ ಇಂದು
ಶಿವಮೊಗ್ಗ: ಸಮೀಪದ ಸೋಗಾನೆ ಗ್ರಾಮದ ಬಳಿ ನಿರ್ಮಿಸಲಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ. ಶಿವಮೊಗ್ಗ- ಭದ್ರಾವತಿ ನಗರಗಳ ಮಧ್ಯೆ ಇರುವ ಸೋಗಾನೆ ಬಳಿ ₹449.22 ಕೋಟಿ ವೆಚ್ಚದಲ್ಲಿ 778.62 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. 2007ರಲ್ಲಿ ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಮೊದಲು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಿಂದ ಹಿಂದೆ …
Read More »ಸಿದ್ದರಾಮಯ್ಯ – ಖರ್ಗೆ ರಹಸ್ಯ ಚರ್ಚೆ | ಹೆಚ್ಚಿದ ಆಕಾಂಕ್ಷಿಗಳ ಕುತೂಹಲ
ಬೆಂಗಳೂರು: ಛತ್ತೀಸಗಢದ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾಧಿವೇಶನದ ವೇಳೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಮಾರು 45 ನಿಮಿಷ ರಹಸ್ಯ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಈ ಮಧ್ಯೆ ಇಬ್ಬರ ನಡುವಿನ ಚರ್ಚೆ ಟಿಕೆಟ್ ಆಕಾಂಕ್ಷಿಗಳ ಕುತೂಹಲ ಹೆಚ್ಚಿಸಿದೆ. ‘ಸಿದ್ದರಾಮಯ್ಯ ವಾಸ್ತವ್ಯವಿದ್ದ ಹೋಟೆಲ್ ಕೊಠಡಿಯ ಎದುರಿನ ಕೊಠಡಿಯಲ್ಲಿ ಖರ್ಗೆ ಕೂಡಾ ಇದ್ದಾರೆ. ಶನಿವಾರ ರಾತ್ರಿ …
Read More »ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರಿನ ಶಾಪ ಬಿಜೆಪಿಗೆ ತಟ್ಟಲಿದೆ. ಚುನಾವಣೆಯಲ್ಲಿ 40 ಸ್ಥಾನ ಗೆಲ್ಲಲು ಆ ಪಕ್ಷಕ್ಕೆ ಸಾಧ್ಯವಿಲ್ಲ’ :ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ‘ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರಿನ ಶಾಪ ಬಿಜೆಪಿಗೆ ತಟ್ಟಲಿದೆ. ಯಡಿಯೂರಪ್ಪ ಇಲ್ಲದ ಈ ಬಾರಿಯ ಚುನಾವಣೆಯಲ್ಲಿ 40 ಸ್ಥಾನ ಗೆಲ್ಲಲು ಆ ಪಕ್ಷಕ್ಕೆ ಸಾಧ್ಯವಿಲ್ಲ’ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಲೇವಡಿ ಮಾಡಿದರು. ‘ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿ.ಎಸ್. ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಅಂದರೆ ಬಿಜೆಪಿಯಲ್ಲಿನ ದುಷ್ಟ ಶಕ್ತಿಗಳಾದ ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ ಹಾಗೂ ಬಸನಗೌಡ ಯತ್ನಾಳ ಷಡ್ಯಂತ್ರದಿಂದ ಯಡಿಯೂರಪ್ಪ ಕಣ್ಣೀರಿಟ್ಟಿದ್ದಾರೆ. ಯಡಿಯೂರಪ್ಪ ಅವರನ್ನು ಬಿಟ್ಟು …
Read More »ಎಂಬಿ.ಪಾಟೀಲ್ ನನ್ನ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲ್ಲಿಸುವ ಹೊಣೆ ನನ್ನದು: ಶಿವಾನಂದ ಪಾಟೀಲ್
ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಬಬಲೇಶ್ವರ ಬಿಟ್ಟು ನಾನು ಪ್ರತಿನಿಧಿಸುತ್ತಿರುವ ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನಗಿರಲಿ ಎಂದು ಸ್ವಪಕ್ಷೀಯ ಬಸವನಬಾಗೇವಾಡಿ ಹಾಲಿ ಶಾಸಕ ಶಿವಾನಂದ ಪಾಟೀಲ ಆಹ್ವಾನಿಸಿದ್ದಾರೆ. ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ನನ್ನ ಮೂಲ ಕ್ಷೇತ್ರವಾಗಿದ್ದು, ಅಲ್ಲಿಂದ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ಧೇನೆ. ರಾಜಕೀಯ ಕಾರಣದಿಂದ ಬಬಲೇಶ್ವರ ಕ್ಷೇತ್ರದ ಜನರಿಗೆ ಹೇಳದೇ ನಾನು …
Read More »ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್
ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ದೇಶಾದ್ಯಂತ ಹೊಸ ನಿಯಮ ಜಾರಿಯಾಗ್ತಿದೆ. ಈ ಮೂಲಕ ಪಡಿತರ ಚೀಟಿಯಿಂದ ಆಹಾರ ಧಾನ್ಯ ಪಡೆಯುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗಿದ್ದು, ಇದರ ನಂತರ ಎಲ್ಲಾ ಅಂಗಡಿಗಳಲ್ಲಿ ಆನ್‌ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್(ಪಿಒಎಸ್) ಸಾಧನಗಳನ್ನು ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ …
Read More »ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ
ಬೆಂಗಳೂರು: ಮೈಸೂರು – ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದಾಗಿ ಕೋಚ್‌ನ ಎರಡು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನ ಕೆ.ಆರ್‌ಪುರಂ ಬಳಿ ಶನಿವಾರ ಈ ಘಟನೆ ಸಂಭವಿಸಿದೆ. ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈನಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಬೆಂಗಳೂರಿನಲ್ಲಿ ಇಲ್ಲಿವರೆಗೆ …
Read More »