Breaking News

Yearly Archives: 2023

ಎಮ್ಮೆನೋ..ಹಸುನೋ.. ಕರು ಹಾಕಿದರು ಸಿದ್ದರಾಮಯ್ಯ ಅದು ನನ್ನದು ಅಂತಾರೆ:ಪ್ರಹ್ಲಾದ್ ಜೋಶಿ

ಹಾಸನ: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಅಭ್ಯಾಸ ಶುರುವಾಗಿದೆ. ಯಾರು ಏನೇ ಮಾಡಿದ್ರು ಅದು ನನ್ನದು ಎಂದು ಹೇಳುತ್ತಾರೆ. ಎಮ್ಮೆನೋ..ಹಸುನೋ.. ಸುಂದರವಾದ ಕರು ಹಾಕಿದರು ಸಿದ್ದರಾಮಯ್ಯ ಅದು ನನ್ನದು ಅಂತಾರೆ ಎಂದು ಬಿಜೆಪಿ ವಿಜಯ ಸಂಕಲ್ಪಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.   ಹಾಸನ ಅರಸೀಕೆರೆ ತಾಲೂಕ್ ಬೇಲೂರು ವಿಧಾನ ಸಭಾ ಕ್ಷೇತ್ರ ಜಾವಗಲ್​​ನಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಜನಕವೇ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ‌ಕಾಲದಲ್ಲಿ ಭ್ರಷ್ಟಾಚಾರ …

Read More »

ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ: ನಗರದಲ್ಲಿ ವಿವಿಧ ಕಡೆಗಳಲ್ಲಿ ಇಂದು ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು, ಸುಮಾರು 3 ಕೋಟಿಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅಶೋಕ ನಗರದಲ್ಲಿ ಸುಮಾರು 27 ಲಕ್ಷ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ, ಅಮನ ನಗರ ಮತ್ತು ಮಾರುತಿ ನಗರದಲ್ಲಿ 2.5 ಕೋಟಿ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ಚಾಲನೆ, ಎಸ್ ಮೋಟರ್ಸ ಹತ್ತಿರ 50 ಲಕ್ಷ ವೆಚ್ಚದಲ್ಲಿ ರಸ್ತೆ …

Read More »

ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಬಿಜೆಪಿ ಸರ್ಕಾರ, ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಮುಂಡರಗಿ: ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವ ಹಿನ್ನೆಲೆಯಲ್ಲಿ ಪಟ್ಟಣದ ಕೊಪ್ಪಳ ಸರ್ಕಲ್‍ನಲ್ಲಿ ಬಿಜೆಪಿ ಮುಂಡರಗಿ ಮಂಡಲದ ಕಾರ್ಯಕರ್ತರು ಗುರುವಾರ ಸಿಹಿ ಹಂಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು. ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಎಸ್.ಸಿ.ಮೋರ್ಚಾ ಮಾಜಿ ಅಧ್ಯಕ್ಷ ಸುಭಾಸ ಗುಡಿಮನಿ, ಮುಂಡರಗಿಮಂಡಲ ಪ್ರಧಾನ ಕಾರ್ಯದರ್ಶಿ ದೇವಪ್ಪ ಇಟಗಿ, ಮುಂಡರಗಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪವಿತ್ರಾ ಕಲ್ಲಕುಟಗರ ಮಾತನಾಡಿದರು.   ಪುರಸಭೆ …

Read More »

ಕನ್ನಡ ವಿಷಯದಲ್ಲಿ ನಕಲು ಮಾಡುತ್ತಿದ್ದ P.U.C. ವಿದ್ಯಾರ್ಥಿ ಡಿಬಾರ್‌

ಬೆಳಗಾವಿ: ಜಿಲ್ಲೆಯಲ್ಲಿ ಗುರುವಾರದಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆ ಸುಗಮವಾಗಿ ನಡೆದಿದ್ದು, ನಗರದ ಕೇಂದ್ರವೊಂದರಲ್ಲಿ ಕನ್ನಡ ವಿಷಯದಲ್ಲಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿ ಡಿಬಾರ್‌ ಮಾಡಲಾಗಿದೆ. 1,668 ವಿದ್ಯಾರ್ಥಿಗಳು ಗೈರು: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 42 ಕೇಂದ್ರಗಳಲ್ಲಿ ಕನ್ನಡ ವಿಷಯ ಪರೀಕ್ಷೆ ನಡೆಯಿತು. ನೋಂದಾಯಿಸಿಕೊಂಡಿದ್ದ 14,489 ವಿದ್ಯಾರ್ಥಿಗಳ ಪೈಕಿ 13,883 ವಿದ್ಯಾರ್ಥಿಗಳು ಹಾಜರಾದರು. 606 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಚಿಕ್ಕೋಡಿಯಲ್ಲಿ 53 ಕೇಂದ್ರಗಳಲ್ಲಿ ನಡೆದ ಕನ್ನಡ ವಿಷಯ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ …

Read More »

ಎ.ಪಿ.ಚಂದ್ರಶೇಖರ್‌, ಶಿವಾಜಿ ಕಾಗಣಿಕರ್‌ಗೆ ಗೌರವ ಡಾಕ್ಟರೇಟ್‌

ಗದಗ: ಗಾಂಧಿವಾದಿ, ಜಲಸಂರಕ್ಷಕ ಬೆಳಗಾವಿಯ ಶಿವಾಜಿ ಕಾಗಣಿಕರ್ ಹಾಗೂ ಸಾವಯವ ಕೃಷಿಕ, ಮೈಸೂರಿನ ಎ.ಪಿ.ಚಂದ್ರಶೇಖರ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದ್ದಾರೆ. ಶಿವಾಜಿ ಕಾಗಣಿಕರ್‌ ರಾತ್ರಿ ಶಾಲೆಗಳನ್ನು ಆರಂಭಿಸಿ, ಗ್ರಾಮೀಣ ಜನರಲ್ಲಿ ಶಿಕ್ಷಣ ಹಾಗೂ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿ ಸಿದ್ದಾರೆ. ಕೆರೆಗಳನ್ನು ನಿರ್ಮಿಸಿದ್ದಾರೆ. ಮೈಸೂರಿನ ಎ.ಪಿ. ಚಂದ್ರಶೇಖರ್‌ 40 ವರ್ಷಗಳಿಂದ ಸಾವಯವ …

Read More »

ವಿಧಾನಸಭೆ ಚುನಾವಣೆ | 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ: ಕುರುಬ ಸಮುದಾಯ ಆಗ್ರಹ

ಬೆಂಗಳೂರು:‌ ರಾಜ್ಯದಲ್ಲಿನ ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿದೆ. ‘ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯವಾಗಿದ್ದರೂ ಕುರುಬರಿಗೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕರಾಗಿದ್ದಾರೆ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಇದ್ದರೂ ಹಲವು ದಶಕಗಳಿಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ …

Read More »

ವಿಧಾನಸಭೆ ಚುನಾವಣೆ: ಕಾಂಗ್ರೆಸ್‌ನ 120 ಕ್ಷೇತ್ರಗಳ ಪಟ್ಟಿ 20ರೊಳಗೆ ಪ್ರಕಟ?

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ 120 ಕ್ಷೇತ್ರಗಳಿಗೆ ಇದೇ 20ರ ಒಳಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಎರಡು ದಿನಗಳಿಂದ ನಡೆಯುತ್ತಿರುವ ಸ್ಕ್ರೀನಿಂಗ್‌ ಸಮಿತಿ ಸಭೆಯಲ್ಲಿ ಈ ಕ್ಷೇತ್ರಗಳಿಗೆ ಸಂಭವನೀಯ ಒಬ್ಬ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.   70 ಕ್ಷೇತ್ರಗಳಿಗೆ ಎರಡು-ಮೂರು ಅಭ್ಯರ್ಥಿಗಳಿದ್ದಾರೆ. ಆ ಕ್ಷೇತ್ರಗಳಿಗೂ ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪಕ್ಷದ ವರಿಷ್ಠರಿಗೆ …

Read More »

ಯಶಸ್ವಿನಿ ಯೋಜನೆ ನೋಂದಣಿ: ಮಾರ್ಚ್‌ 31ರವರೆಗೆ ಅವಧಿ ವಿಸ್ತರಣೆ

ಬೆಂಗಳೂರು: ಯಶಸ್ವಿನಿ ಯೋಜನೆಯ ನೋಂದಣಿಗೆ ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ. 2022-23ನೇ ಸಾಲಿನಿಂದ ಈ ಯೋಜನೆಯನ್ನು ಮರು ಜಾರಿಗೊಳಿಸಲಾಗಿದ್ದು, ಮೂರನೇ ಬಾರಿ ನೋಂದಣಿಯ ಅವಧಿಯನ್ನು ವಿಸ್ತರಿಸಲಾಗಿದೆ.   ಹೊಸ ಸದಸ್ಯರ ನೋಂದಣಿಗೆ 2023ರ ಫೆ.28 ಕೊನೆಯ ದಿನವಾಗಿತ್ತು. ಈ ಯೋಜನೆ ಅಡಿಯಲ್ಲಿ 30 ಲಕ್ಷ ಸದಸ್ಯರನ್ನು ನೋಂದಾಯಿಸಲು ಗುರಿ ನಿಗದಿಪಡಿಸಲಾಗಿತ್ತು. ಇಲ್ಲಿಯವರೆಗೆ 34.52 ಲಕ್ಷ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗಿದೆ. 2023ರ ಜನವರಿ 1ರಿಂದ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ಆರಂಭಿಸಲಾಗಿದ್ದು, …

Read More »

ಹೊಲದಲ್ಲಿ ಹಾರಿ ಬಂತು ಸಂದೇಹಾಸ್ಪದ ಬೆಲೂನ್; ಸುದ್ದಿ ಕೇಳಿ ಬೆಚ್ಚಿಬಿತ್ತು ಬೈಲಹೊಂಗಲ ಜನತೆ !

ಬೈಲಹೊಂಗಲ: ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿರುವ ಬೆಲೂನ್ ಒಂದು ಜನತೆ ಬೆಚ್ಚಿಬೀಳುವಂತೆ ಮಾಡಿದೆ. ಇತ್ತೀಚೆಗಷ್ಟೇ ಚೀನಾ ಹಾರಿ ಬಿಟ್ಟಿದ್ದು ಎನ್ನಲಾದ ಗೂಢಚಾರ ಬೆಲೂನ್ ಗಳು ಅಮೆರಿಕ ಮತ್ತಿತರೆಡೆ ಪತ್ತೆಯಾಗಿರುವ ಹಾಗೂ ಅವುಗಳನ್ನು ವೈಮಾನಿಕ ದಾಳಿಯಿಂದ ನಾಶಪಡಿಸಿದ ಘಟನೆಗಳು ಸ್ಮೃತಿಪಟಲದಿಂದ ಮಾಸಿ ಹೋಗುವ ಮುನ್ನ ವಿಚಿತ್ರ ಬೆಲೂನ್ ಹೊಲದಲ್ಲಿ ಹಾರಿಬಂದಿರುವುದು ನಾನಾ ರೀತಿಯ ಸಂದೇಹಗಳು, ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತು.     ಬಿಳಿಯ ಬಣ್ಣದ ಈ ಬೆಲೂನ್ ನಲ್ಲಿ ಬ್ಯಾಟರಿ ಹಾಗೂ …

Read More »

ನಾಳೆಯಿಂದ 29ರವರೆಗೆ ದ್ವಿತೀಯ ಪಿಯು ಪರೀಕ್ಷೆ; ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ್ದವರ ಮೇಲೆ ನಿಗಾ

ಬೆಂಗಳೂರು: 2023ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ನಾಳೆ (ಮಾ.9) ಆರಂಭವಾಗಲಿದ್ದು ರಾಜ್ಯಾದ್ಯಂತ 1,109 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಮಾ. 29ರ ವರೆಗೂ ನಡೆಯಲಿರುವ ಈ ಪರೀಕ್ಷೆಗೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮರಾ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.   3,63,698 ಬಾಲಕರು ಮತ್ತು 3,62.497 ಬಾಲಕಿಯರು ಸೇರಿ ಒಟ್ಟಾರೆ 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಹೊಸದಾಗಿ 6.29 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 25,847 ಖಾಸಗಿ ಮತ್ತು 70,589 …

Read More »