ಬೆಂಗಳೂರು: ಬಿಜೆಪಿ ಇನ್ನೂ ಮೊದಲನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ನಡುವೆ ಸಚಿವ ವಿ ಸೋಮಣ್ಣ ಹೈಕಮಾಂಡ್ ಜತೆಗೆ ಚರ್ಚೆ ನಡೆಸಲು ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭ ಅವರು ಅರುಣ್ ಸೋಮಣ್ಣ ಪರವಾಗಿ ಬ್ಯಾಟಿಂಗ್ ಮಾಡಿದ್ದು ಅದಕ್ಕಾಗಿ ತಮ್ಮ ಟಿಕೆಟನ್ನೂ ಬಿಟ್ಟು ಕೊಡಲಿದ್ದಾರಾ ಎನ್ನುವ ಪ್ರಶ್ನೆಯೂ ಮೂಡಿದೆ. ಇದೀಗ ದೆಹಲಿಯಿಂದ ಸಚಿವ ವಿ ಸೋಮಣ್ಣ ವಾಪಾಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಗೋವಿಂದರಾಜ ನಗರ, ಚಾಮರಾಜನಗರ ಟಿಕೆಟ್ ಕೇಳಿದ್ದು ಬಿಜೆಪಿ ಹೈಕಮಾಂಡ್ …
Read More »Yearly Archives: 2023
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ? ಮಾಹಿತಿ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ!
ಬೆಂಗಳೂರು: ಮೇ 11 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಯನ್ನು ಮಂಗಳವಾರ ಅಥವಾ ಬುಧವಾರ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ. ಪಟ್ಟಿ ಅಂತಿಮಗೊಳಿಸುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದಿದ್ದು ಬಹುಶಃ ಮೊದಲ ಪಟ್ಟಿಯನ್ನು ನಾಳೆ ಅಥವಾ ನಾಡಿದ್ದು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ‘ಇದನ್ನು ಇಂದು ಸಂಜೆ ಬಿಡುಗಡೆ ಮಾಡುವ …
Read More »ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ
ಬೆಳಗಾವಿ: ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಕಮಲನಗರ ಗ್ರಾಮದ ಪಾಲ್ಗೊಫಾರ್ಮ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು 8 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅರುಣ ಮುರಗುಂಡಿ, ಪಿಐ ಬೆಳಗಾವಿ ಗ್ರಾಮೀಣ ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡ ಸಂಶಯುಕ್ತ ಆರೋಪಿತನಾದ ಪರಶುರಾಮ ಸಣ್ಣಭೀಮಪ್ಪಾ (28) ಇತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಬೈಕ್ ಗಳನ್ನು ಕಳ್ಳತನ ಮಾಡಿರುವ …
Read More »ದೇವಸ್ಥಾನದ ಬಳಿ ಬೃಹತ್ ಮರ ಬಿದ್ದು 7 ಜನ ಸಾವು.!
ದೇವಸ್ಥಾನದ ಬಳಿ ಬೃಹತ್ ಮರ ಬಿದ್ದು 7 ಜನ ಸಾವನ್ನಪ್ಪಿದ ದುರ್ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರ್ ತಾಲೂಕಿನ ಪರಾಸ್ ಸಂಸ್ಥಾನದಲ್ಲಿ ನಡೆದಿದೆ. ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಇದೇ ವೇಳೆ ಪಾರಸ್ ಗ್ರಾಮದ ಬಾಬೂಜಿ ಮಹಾರಾಜ ಸಂಸ್ಥಾನದಲ್ಲಿ ಸಂಜೆ ಆರತಿ ನಡೆಯುತ್ತಿದ್ದಾಗ ದೇವಸ್ಥಾನದ ಆವರಣದಲ್ಲಿರುವ ತಗಡಿನ ಶೆಡ್‌ನ ಕೆಳಗೆ ಆರತಿಗೆ ಹಲವರು ಸೇರಿದ್ದರು ಎಂದು ವರದಿಯಾಗಿದೆ. ದೇವಸ್ಥಾನದ ಬಳಿ ಇದ್ದ ದೊಡ್ಡ ಬೇವಿನ ಮರವೊಂದು …
Read More »ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜಕುಮಾರ ಟೋಪಣ್ಣವರ A.A.P. ಅಭ್ಯರ್ಥಿ
ಬೆಂಗಳೂರು ಆಮ್ ಆದ್ಮ ಪಕ್ಷದಿಂದ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು ರಾಜ್ಯ 28 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ. ಬೆಳಗಾವಿ ನಿಪ್ಪಾಣಿ ಮತಕ್ಷೇತ್ರದಿಂದ ರಾಜೇಶ ಅಣ್ಣಾಸಾಹೇಬ ಬಸವಣ್ಣ, ಬೆಳಗಾವಿ ಉತ್ತರ ಮತಕ್ಷೇತ್ರದಿಂದ ರಾಜಕುಮಾರ ಟೋಪಣ್ಣವರ ಹಾಗೂ ಸವದತ್ತಿ ಮತಕ್ಷೇತ್ರದಿಂದ ಬಾಪುಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
Read More »ಈ ಬಾರಿ ಹುಕ್ಕೇರಿ ಮತಕ್ಷೇತ್ರದ ಶಾಸಕ ಯಾರಾಗ್ತಾರೆ?
ಈ ಬಾರಿ ಹುಕ್ಕೇರಿ ಮತಕ್ಷೇತ್ರದ ಶಾಸಕ ಯಾರಾಗ್ತಾರೆ ಎಂದು ಜನ ಎದುರು ನೋಡುತ್ತಿದ್ದಾರೆ, ಉತ್ತರ ಕರ್ನಾಟಕದ ಬಲಿಷ್ಟ ನಾಯಕ ಉಮೇಶ್ ಕತ್ತಿ ನಿಧನದಿಂದ ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆ ಈ ಬಾರಿ ಕುತುಹಲ ಕೇರಳಿಸಿದೆ. ಹುಕ್ಕೇರಿ ಮತಕ್ಷೇತ್ರದಲ್ಲಿ ಯಾವದೇ ಪಕ್ಷದ ಮೇಲಿನ ಚುನಾವಣೆ ಜರುಗಿದ ಉದಾಹರಣೆಗಳಿಲ್ಲಾ, ಉಮೇಶ್ ಕತ್ತಿ ಯಾವಪಕ್ಷದಿಂದ ಸ್ಪರ್ಧೆ ಮಾಡುತ್ತಾರೋ ಅದೆ ಗೆಲವು ಪಡೆಯುತ್ತಿತ್ತು ಆದರೆ ಉಮೇಶ್ ಕತ್ತಿ ನಿಧನದಿಂದ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಚಟುವಟುಕೆಗಳು ಗದಿಗೇರಿವೆ ಈಗಾಗಲೇ …
Read More »ಒಂದು ನಿಂಬೆ ಹಣ್ಣಿಗೆ 10 ರೂಪಾಯಿ .!
ಬೇಸಿಗೆಯ ಸೆಖೆಯಲ್ಲಿ ತಣ್ಣನೆಯ ಲೆಮನ್ ಸಿರಪ್ ಕುಡಿದರೆ ಮನಸ್ಸು ಪ್ರಶಾಂತವಾಗುತ್ತದೆ. ಆದರೆ ಈಗ ನಿಂಬೆ ಹಣ್ಣಿನ ಬೆಲೆ ಏರಿಕೆಯಿಂದ ನೆಮ್ಮದಿಯೂ ಹೋಗಿದೆ. ಹೌದು, ಬಾಗಲಕೋಟೆ, ವಿಜಯಪುರದಲ್ಲಿ ಈಗ ನಿಂಬೆಹಣ್ಣು ಉತ್ಪಾದನೆ ಕಡಿಮೆ ಆಗಿದೆ. ಇದರಿಂದ ಬೆಳಗಾವಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 10 ರೂಪಾಯಿ ಇದೆ. ಇದರಿಂದ ಬೇಸಿಗೆಯಲ್ಲಿ ತಂಪು ನಿಂಬೆ ಪಾನಕವೂ ದುಬಾರಿಯಾಗಿದೆ. …
Read More »ಗೋವಾದಲ್ಲಿ ಹುಲಿಗಳ ಸಂಖ್ಯೆ ಇಳಿಮುಖ; ಕಾರಣವೇನು..?
ಪಣಜಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದಲ್ಲಿ ಹುಲಿ ಗಣತಿ ಘೋಷಿಸಿದರು. 2022 ರ ಹುಲಿ ಗಣತಿ ವರದಿಯ ಪ್ರಕಾರ, ಭಾರತದಲ್ಲಿನ ಹುಲಿಗಳ ಸಂಖ್ಯೆ 3,167 ಕ್ಕೆ ಏರಿದೆ. ದೇಶದಲ್ಲಿ ಹುಲಿಗಳ ಸಂಖ್ಯೆಯ ಪರಿಸ್ಥಿತಿ ಉತ್ತಮವಾಗಿದ್ದರೂ ಗೋವಾದಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದ್ದು,ಇಲ್ಲಿನ ಮಹದಾಯಿ ಮತ್ತು ಮೋಲೆಮ್ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಗೋವಾದಲ್ಲಿ ಹುಲಿಗಳ ಇರುವಿಕೆಯನ್ನು ದೃಢಪಡಿಸಲು ಅಭಯಾರಣ್ಯಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿ ಹುಲಿಗಳ …
Read More »ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ, ಹಣ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ
ಬೆಳಗಾವಿ: ಚುನಾವಣೆ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಪೊಲೀಸರು ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ, ಹಣ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಸವದತ್ತಿ ಚೆಕ್ ಪೊಸ್ಟ್ ನಲ್ಲಿ 1.95 ಲಕ್ಷ ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಲಗೋಡಲ್ಲಿ 52 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಸಂಕೇಶ್ವರ ಚೆಕ್ ಪೊಸ್ಟ್ ನಲ್ಲಿ 2.31 ಲಕ್ಷ ರೂ. ಮೌಲ್ಯದ 10 ಟನ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
Read More »ಹುನ್ನೂರು ಚೆಕ್ ಪೋಸ್ಟ್ ನಲ್ಲಿ ಬರೋಬ್ಬರಿ 2.10 ಕೋಟಿ ರೂಪಾಯಿ ಹಣ ಜಪ್ತಿ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 2.10 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಹುನ್ನೂರು ಚೆಕ್ ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳು ಮುಧೋಳದಿಂದ ಅಥಣಿ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನವನ್ನು ತಪಾಸಣೆ ನಡೆಸಿದಾಗ 2.10 ಕೋಟಿ ನಗದು ಹಣ ಪತ್ತೆಯಾಗಿದೆ. ಇಬ್ಬರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸಹಕಾರಿ ಬ್ಯಾಂಕ್ ಶಾಖೆಗೆ ಹಣ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಆದರೆ ಹಣದ …
Read More »