Breaking News

Monthly Archives: ಅಕ್ಟೋಬರ್ 2023

ಧಾರವಾಡ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ಧಾರವಾಡ: ಸಭೆಗೆ ಸರಿಯಾಗಿ ಮಾಹಿತಿ ನೀಡದಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸಂತೋಷ್‌ ಲಾಡ್, ನಿಮ್ಮನ್ನು ಸಸ್ಪೆಂಡ್ ಮಾಡಬೇಕಾ? ಎಂದು ಗರಂ ಆದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎನ್.ಎಚ್.ಭಜಂತ್ರಿ ಅವರು ಸಮರ್ಪಕ ಮಾಹಿತಿ ನೀಡದೇ ಇದ್ದುದಕ್ಕೆ ಸಚಿವರು ಕ್ಲಾಸ್ ತೆಗೆದುಕೊಂಡರು. ಕೈಯಲ್ಲಿ ವರದಿ ಇದ್ದರೂ ಸರಿಯಾಗಿ ವಿವರಿಸಲು ಆಗೋದಿಲ್ವಾ, ಇಲ್ಲಿ ಬಂದು ಓದುತ್ತೀರಾ ಎಂಬ ಸಚಿವರ ಪ್ರಶ್ನೆಗೆ ಅಧಿಕಾರಿ ವಿಚಲಿತರಾದರು. ಆಗ ಸಚಿವರು, …

Read More »

ನಡುರಸ್ತೆಯಲ್ಲಿ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ.

ಬೆಂಗಳೂರು : ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ನಿನ್ನೆ ಸಂಜೆ ದುಷ್ಕರ್ಮಿಗಳು ಹಳೇ ದ್ವೇಷದ ಶಂಕೆ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಬಾಣಸವಾಡಿ ನಿವಾಸಿ ಮದನ್ (32) ಮೃತ ವ್ಯಕ್ತಿ. ಕೃತ್ಯವೆಸಗಿದ ಐದಾರು ಮಂದಿ ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ತಮಿಳುನಾಡಿನ ಚೆನ್ನೈ ಮೂಲದ ಮದನ್, ಈ ಮೊದಲು ಬೆಂಗಳೂರಿನಲ್ಲಿಯೇ ವಾಸವಾಗಿದ್ದ. ನಾಲ್ಕು ವರ್ಷಗಳ ಹಿಂದೆ ಚೆನ್ನೈಗೆ ಹೋಗಿ …

Read More »

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಆರೋಪ: ಹಾಲಶ್ರೀ ಸ್ವಾಮೀಜಿ ಜಾಮೀನು ಅರ್ಜಿ ಆದೇಶ ಅ.16ಕ್ಕೆ ಪ್ರಕಟ

ಬೆಂಗಳೂರು: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಆರೋಪ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆ ಹಿರೇಹಡಗಲಿ ಮಹಾಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 16ಕ್ಕೆ ಪ್ರಕಟಿಸುವುದಾಗಿ ಬೆಂಗಳೂರಿನ ನ್ಯಾಯಾಲಯವು ಹೇಳಿದೆ.   ಹಾಲಶ್ರೀ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಾದ – ಪ್ರತಿವಾದ ಆಲಿಸಿದ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಟಿ ಗೋವಿಂದಯ್ಯ ಬುಧವಾರ ಆದೇಶ …

Read More »

ಬೆಳಗಾವಿಯ ಸುವರ್ಣಸೌಧಕ್ಕೆ 12 ವರ್ಷ ತುಂಬಿದರೂ ಕೂಡ ಇನ್ನೂ ಸೌಧಕ್ಕೆ ಸುವರ್ಣ ಕಾಲವೇ ಕೂಡಿ ಬಂದಿಲ್ಲ.

ಬೆಳಗಾವಿ : ಉತ್ತರ ಕರ್ನಾಟದ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು. ಈ ಭಾಗದ ಜನರಿಗೆ ಶಕ್ತಿ ತುಂಬಬೇಕು ಎಂಬ ಸದುದ್ದೇಶದಿಂದ ಕುಂದಾನಗರಿ ಬೆಳಗಾವಿಯ ಹೊರವಲಯದಲ್ಲಿರುವ ಹಲಗಾ-ಬಸ್ತವಾಡ ಗ್ರಾಮಗಳ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುವರ್ಣ ವಿಧಾನಸೌಧವನ್ನು ಸರ್ಕಾರ ನಿರ್ಮಾಣ ಮಾಡಿತ್ತು. ಈ ಸುವರ್ಣಸೌಧಕ್ಕೆ ಇಂದು 12 ವರ್ಷಗಳ ಸಂಭ್ರಮಾಚರಣೆ. 2012ರ ಅಕ್ಟೋಬರ್‌ 11 ರಂದು 438 ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ಯಾವೆಲ್ಲಾ ಉದ್ದೇಶಗಳನ್ನಿಟ್ಟುಕೊಂಡು ಸುವರ್ಣಸೌಧವನ್ನು ನಿರ್ಮಾಣ ಮಾಡಿತ್ತೋ, ಆ ಉದ್ದೇಶಗಳನ್ನು …

Read More »

ರಾಜಸ್ಥಾನ ವಿಧಾನಸಭಾ ಚುನಾವಣೆ: ಸಾವಿರಾರು ಮದುವೆಗಳ ಕಾರಣಕ್ಕಾಗಿ ಮತದಾನದ ದಿನಾಂಕವೇ ಬದಲು!

ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತದಾನ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಇಂದು ಪರಿಷ್ಕರಿಸಿದೆ. ನವೆಂಬರ್ 23ರ ಬದಲಿಗೆ 25ರಂದು ಮತದಾನ ನಡೆಯಲಿದೆ ಎಂದು ಘೋಷಿಸಿದೆ. ನವೆಂಬರ್ 25 ಶನಿವಾರ ಆಗಿದ್ದು, ಹೆಚ್ಚಿನ ಜನರು ಮತದಾನದಲ್ಲಿ ಭಾಗವಹಿಸಲಿ ಎಂಬ ಕಾರಣಕ್ಕೆ ದಿನಾಂಕ ಬದಲಾವಣೆ ಮಾಡಲಾಗಿದೆ.     ಅಕ್ಟೋಬರ್​ 9ರಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ಮಿಜೋರಾಂ ಹಾಗೂ ತೆಲಂಗಾಣ ಸೇರಿ ಐದು …

Read More »

ಕಾಮಗಾರಿಯ ಬಿಲ್ ​ವಿಳಂಬ ಆರೋಪ: ಬೆಳಗಾವಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ

ಬೆಳಗಾವಿ: ಕಾಮಗಾರಿಯ ಬಿಲ್ ​ವಿಳಂಬವಾಗಿದೆ ಎಂದು ಆರೋಪಿಸಿದ ಗುತ್ತಿಗೆದಾರನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಇಂದು (ಮಂಗಳವಾರ) ನಡೆದಿದೆ. ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದ ನಾಗಪ್ಪ ಬಂಗಿ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ.   ಬಿಲ್ ​ವಿಳಂಬವಾಗಿದೆ ಎಂದು ಆರೋಪಿಸಿದ ನಾಗಪ್ಪ ಲೋಕೋಪಯೋಗಿ ಇಲಾಖೆ ಕಚೇರಿಯ ಮುಂದೆ ಕುಟುಂಬಸಹಿತ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

Read More »

ಆಯಂಗ್ರಿ ಯಂಗ್​​ ಮ್ಯಾನ್​ಗೆ ಇಂದು 81ರ ಸಂಭ್ರಮ… ನಡುರಾತ್ರಿಯಲ್ಲೇ ಅಭಿಮಾನಿಗಳ ಶುಭ ಹಾರೈಕೆ!

ಅಮಿತಾಬ್ ಬಚ್ಚನ್ ತಮ್ಮ 81 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮುಂಬೈನಲ್ಲಿರುವ ಅವರ ನಿವಾಸ ‘ಜಲ್ಸಾ’ದ ಹೊರಗೆ ಜಮಾಯಿಸಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಈ ವೇಳೆ ಅಭಿಮಾನಿಗಳತ್ತ ಕೈ ಬೀಸಿದ ಬಿಗ್​ ಬಿ, ಅವರಿಗೆಲ್ಲ ಕೃತಜ್ಞತೆ ಸಲ್ಲಿಸಿದರು.   ಇಂದು ಭಾರತೀಯ ಚಿತ್ರರಂಗದ ಎವರ್​​​ಗ್ರೀನ್​ ಹೀರೋ ಬಿಗ್​ ಬಿ ಅಮಿತಾಬ್​ ಬಚ್ಚನ್​ ಅವರ 81ನೇ ಹುಟ್ಟುಹಬ್ಬ.. ಈ ನಿಮಿತ್ತ ಅವರ ಸೊಸೆ, ಮೊಮ್ಮಗಳು, ಮಗಳು ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. …

Read More »

ಕಾವೇರಿ ನೀರು ಹಂಚಿಕೆ ವಿವಾದ: ತಮಿಳುನಾಡಿನ 8 ಜಿಲ್ಲೆಗಳಲ್ಲಿ ಬಂದ್​ಗೆ ಕರೆ

ನಾಗಪಟ್ಟಣಂ (ತಮಿಳುನಾಡು) : ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ. ಇಂದು ತಮಿಳುನಾಡಿನ 8 ಜಿಲ್ಲೆಗಳಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ನಾಗಪಟ್ಟಣಂ ಜಿಲ್ಲೆಯಲ್ಲಿ ಸುಮಾರು 12,000 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಂದ್​ ಮಾಡಿರುವ ವ್ಯಾಪಾರಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕುರುವಾಯಿ ಭತ್ತದ ಕೃಷಿ ಉಳಿಸಲು ಮತ್ತು ಸಾಂಬಾ ಕೃಷಿ ಪ್ರಾರಂಭಿಸಲು ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುವಂತೆ …

Read More »

ಗೂಗಲ್​ ಸೈನ್​ಇನ್​ಗೆ ಕಡ್ಡಾಯವಾಗಲಿದೆ ಪಾಸ್​ ಕೀ.. ಏನಿದು ಹೊಸ ವಿಧಾನ?

ನವದೆಹಲಿ : ಬರುವ ದಿನಗಳಲ್ಲಿ ಗೂಗಲ್ ಸೇವೆಗಳಿಗೆ ಸೈನ್ ಇನ್ ಮಾಡಲು ಪಾಸ್​ವರ್ಡ್​ ಬದಲಾಗಿ ಪಾಸ್​ಕೀ ಬಳಕೆ ಕಡ್ಡಾಯವಾಗಲಿದೆ. ಪಾಸ್​ಕೀ (ಪಾಸ್ ವರ್ಡ್ ಗಳಿಗೆ ಪರ್ಯಾಯ) ಮೂಲಕವೇ ಸೈನ್​ ಇನ್ ಮಾಡುವುದು ಡೀಫಾಲ್ಟ್ ಸೈನ್ – ಇನ್ ಪ್ರಕ್ರಿಯೆ ಆಗಲಿದೆ ಎಂದು ಗೂಗಲ್ ಹೇಳಿದೆ. ಪಾಸ್ ಕೀ ಬಳಸಿ ಬಳಕೆದಾರರು ಬಯೋಮೆಟ್ರಿಕ್ ಸೆನ್ಸರ್ (ಫಿಂಗರ್ ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ), ಪಿನ್ ಅಥವಾ ಪ್ಯಾಟರ್ನ್​ಗಳ ಮೂಲಕ ಅಪ್ಲಿಕೇಶನ್ ಗಳು ಮತ್ತು ವೆಬ್ …

Read More »

2ಎ ಮೀಸಲಾತಿ ಹೋರಾಟ: ಅ.13 ರಂದು ಗಬ್ಬೂರು ಬೈಪಾಸ್​ನಲ್ಲಿ ಇಷ್ಟಲಿಂಗ ಮಹಾಪೂಜೆ: ಬಸವಜಯ ಮೃತ್ಯಂಜಯ ಶ್ರೀ

ಹುಬ್ಬಳ್ಳಿ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಒತ್ತಾಯಿಸಿ 6 ನೇ ಹಂತದ ಚಳವಳಿಯನ್ನು ಅಕ್ಟೋಬರ್ 13 ರಂದು ಬೆಳಗ್ಗೆ 10ಕ್ಕೆ ನಗರದ ಹೊರವಲಯದ ಗಬ್ಬೂರು ಬೈಪಾಸ್ ಪಕ್ಕದ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯಂಜಯ ಸ್ವಾಮೀಜಿ ತಿಳಿಸಿದರು. ಹೋರಾಟ ಯಾತ್ರೆ: ನಗರದಲ್ಲಿ ಇಂದು (ಬುಧವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ”ಈಗಾಗಲೇ ಬೆಳಗಾವಿ‌ ಜಿಲ್ಲೆಯ ನಿಪ್ಪಾಣಿಯಲ್ಲಿ ಹೋರಾಟ …

Read More »