ಈ ರೈತನಿಗೆ ಐವರು ‘ಹೆಣ್ಣು ಮಕ್ಕಳು’, ಎಲ್ರೂ ‘IAS’ ಅಧಿಕಾರಿಗಳು, ಈ ಸ್ಟೋರಿ ಓದಿ, ನಿಮ್ಗೂ ‘ಸ್ಫೂರ್ತಿ’ ಆಗ್ತಾರೆ ಮನುಷ್ಯ ಆಕಾಶವನ್ನ ಮುಟ್ಟುತ್ತಿದ್ರೂ, ಸಾಗರದ ಆಳವನ್ನ ಅಳೆಯುತ್ತಿದ್ರೂ, ಅಸಾಧ್ಯವಾದ್ದನ್ನ ಸಾಧ್ಯ ಮಾಡುವತ್ತ ಹೆಜ್ಜೆ ಹಾಕುತ್ತಿದ್ರೂ, ಇಂದಿಗೂ ಹಲವಾರು ಮೂಢ ನಂಬಿಕೆಗಳನ್ನ ನಂಬುತ್ತಾರೆ. ಅದರಲ್ಲೂ ನಮ್ಮ ದೇಶದಲ್ಲಿ ಹುಡುಗಿ ಅಂದ್ರೆ ಮೈನಸ್, ಹುಡುಗ ಪ್ಲೆಸ್ ಎಂಬ ಕಲ್ಪನೆ ಚಾಲ್ತಿಯಲ್ಲಿದೆ. ಗಂಡು-ಹೆಣ್ಣು ಎಂಬ ಭೇದವಿಲ್ಲ ತಡೆಯಲು ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಹೆಣ್ಣು …
Read More »Monthly Archives: ಮಾರ್ಚ್ 2023
ಹಾಜರಾತಿ ಕೊರತೆ : 4,492 ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ!
ಬೆಂಗಳೂರು : ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಹಾಜರಾತಿ ಕೊರತೆಯಿಂದಾಗಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳಿಂದ 4,492 ವಿದ್ಯಾರ್ಥಿಗಳು ಹೊರಗುಳಿಯಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ವರ್ಷದಿಂದ ಶೇಕಡಾ 75 ರಷ್ಟು ಕಡ್ಡಾಯ ಹಾಜರಾತಿ ನಿಯಮವನ್ನು ಮರಳಿ ತಂದಿದೆ. ಶೇ.75ರಷ್ಟು ಹಾಜರಾತಿ ಕಾಯ್ದುಕೊಳ್ಳದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ. ಪಿಯು ಶಿಕ್ಷಣ ಇಲಾಖೆಯು ಈ ಬಗ್ಗೆ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿತ್ತು ಮತ್ತು ಹಾಜರಾತಿ ಕೊರತೆಯ …
Read More »ಆರೋಗ್ಯ ಇಲಾಖೆ’ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ : ವೇತನ ಹೆಚ್ಚಳ, ಸೇವಾ ಭದ್ರತೆ ಕಡತ ಮಂಡಿಸಿ ಸಿಎಂ ಆದೇಶ
ಬೆಂಗಳೂರು: ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸಿ ಒತ್ತಾಯಿಸಿದ್ದರು. ಇಂತಹ ನೌಕರರ ವೇತನ ಹೆಚ್ಚಳ ( Salary Hike ), ಸೇವಾ ಭದ್ರತೆ ಸೇರಿದಂತೆ ವಿವಿಧ ಡಿಕೆ ಈಡೇರಿಕೆಯ ಕಡತವನ್ನು ಮಂಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಆದೇಶಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್ …
Read More »ಬಡ ಜನರ ಕಲ್ಯಾಣವೇ ರಾಜ್ಯ ಬಿಜೆಪಿ ಸರ್ಕಾರದ ಗುರಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬಳ್ಳಾರಿ : ಬಡ ಜನರ ಕಲ್ಯಾಣವೇ ಸರ್ಕಾರದ ಗುರಿಯಾಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ನೇರವಾಗಿ ತಲುಪುವಂತೆ ಮಾಡಲಾಗಿದೆ. ಇದು ಬಡಸಮರ್ಪಿತ ಸರ್ಕಾರವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು. ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. …
Read More »ಬೆಳಗಾವಿ: ‘ಜನಪದರು ವಿದ್ವಾಂಸರಿಗಿಂತ ಜ್ಞಾನಿಗಳು
ಬೆಳಗಾವಿ: ‘ಜನಪದರು ವಿದ್ವಾಂಸರಿಗಿಂತ ಜ್ಞಾನವಂತರು. ಅವರು ರೂಪಕ, ಪ್ರತಿಮೆಗಳನ್ನು ಬಹು ಸೊಗಸಾಗಿ ದೈನಂದಿನ ಬದುಕಿನಲ್ಲಿ ಬಳಸುತ್ತಲೇ ಬಂದಿರುವರು. ಅವುಗಳನ್ನೇ ನಾವು ನಾಟಕ, ಸಾಹಿತ್ಯ, ಕಲೆಗಳಲ್ಲಿ ಪುನಃ ರಚಿಸಿ ಹಣ, ಪ್ರಶಸ್ತಿಗಳನ್ನು ಪಡೆಯುತ್ತೇವೆ. ಆದರೆ ನಿಜವಾದ ಕಲಾವಿದರಾದ ಅವರು ಮಾತ್ರ ಸರ್ಕಾರದ ಸಹಾಯ ಧನಕ್ಕೆ ಕೈಚಾಚಿ ನಿಲ್ಲುವಂಥ ಪರಿಸ್ಥಿತಿ ಇರುವುದು ದುರಂತ’ ಎಂದು ನಾಟಕಕಾರ ಡಿ.ಎಸ್.ಚೌಗಲೆ ಬೇಸರ ವ್ಯಕ್ತಪಡಿಸಿದರು. ಇಲ್ಲಿಯ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ …
Read More »ಐಗಳಿ: ಗಮನ ಸೆಳೆದ ಜಾನುವಾರ ಜಾತ್ರೆ
ಐಗಳಿ: ಐಗಳಿ ಕ್ರಾಸ್‌ನ ಮಣಿಕಪ್ರಭು ದೇವರ ಜಾತ್ರೆಯ ಪೂರ್ವದಲ್ಲಿ ಬೃಹತ್ ಪ್ರಮಾಣದ ಜಾನುವಾರ ಜಾತ್ರೆ ಸೋಮವಾರ ಆರಂಭವಾಯಿತು. ರಾಜ್ಯವೂ ಸೇರಿದಂತೆ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಪಂಡರಪುರ, ಆಂಧ್ರ ಪ್ರದೇಶದಿಂದಲೂ ವ್ಯಾಪಾರಿಗಳು ಬಂದಿದ್ದಾರೆ. ಜಾತ್ರಾ ಕಮಿಟಿಯವರು ನೀರಿನ ಹಾಗೂ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ರಾಚೋಟೇಶ್ವರ ಶಿವಯೋಗಿಗಳು ಕಂಡ ಕನಸು ನನಸಾಗಲೂ ಸಮೀಪಕ್ಕೆ ಬಂದಿದೆ ಎಂದು ಹಿರಿಯ ವ್ಯವಸ್ಥಾಪಕ ಶಿದರಾಯ ಬಿರಾದಾರ ಹೇಳಿದರು. ಟ್ರಸ್ಟ್ ಅಧ್ಯಕ್ಷ ಪ್ರಲ್ಹಾದ್ …
Read More »ಬೆಳಗಾವಿ: ‘ಸಾಂಪ್ರದಾಯಿಕ ತಂತ್ರಜ್ಞಾನದಿಂದ ಸ್ವಾವಲಂಬನೆ’
ಬೆಳಗಾವಿ: ‘ಸಾಂಪ್ರಾದಾಯಿಕ ತಂತ್ರಜ್ಞಾನವು ಆಧುನಿಕ ಯುಗದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬಲ್ಲದು. ಮಹಿಳಾ ಸ್ವಾವಲಂಬನೆಗೆ ಇದು ಅತ್ಯಂತ ಸುಲಭ ಮಾರ್ಗ’ ಎಂದು ಪುಣೆಯ ದಿ ಎಕೊಸೋಸಿಯೊ ಟ್ರೈಬ್‌ನ ಸಂಸ್ಥಾಪಕಿ ಅಮಿತಾ ದೇಶಪಾಂಡೆ ಸಲಹೆ ನೀಡಿದರು. ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಾಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್‌ನಿಂದ ಆದಿವಾಸಿ ಮಹಿಳೆಯರ ಜೀವನಮಟ್ಟ ಸುಧಾರಿಸಲು ಸಾಧ್ಯ. …
Read More »ಮದುವೆಯಾಗಿ ಮಕ್ಕಳನ್ನು ಪಡೆಯಲೇಬೇಕೇ? ಕಟೀಲ್‌ಗೆ ನಟ ಚೇತನ್ ಪ್ರಶ್ನೆ
ಬೆಂಗಳೂರು: ಲಸಿಕೆ ಪಡೆದರೆ ಮಕ್ಕಳಾಗದೆಂಬ ಸಿದ್ದರಾಮಯ್ಯ ಅವರ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ನಟ ಚೇತನ್ ಅಹಿಂಸಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಟೀಲ್ ಹೇಳಿಕೆಯು ಕೀಳು ಮಟ್ಟದ್ದು ಮತ್ತು ತರ್ಕವಿಲ್ಲದ್ದು ಎಂದು ಚೇತನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಬಿಜೆಪಿ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ್ದ ಕಟೀಲ್, ‘ಕೊರೊನಾ ಲಸಿಕೆ ಹಾಕಿಸಿಕೊಂಡರೆ …
Read More »ಹಬ್ಬಕ್ಕೆಂದು ಅಕ್ಕನ ಮನೆಗೆ ಬಂದಿದ್ದ ಗೃಹಿಣಿ ದುರಂತ ಅಂತ್ಯ: ಭಗ್ನ ಪ್ರೇಮಿಯಿಂದಲೇ ಘೋರ ಕೃತ್ಯ
ವಿಜಯನಗರ: ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಗೃಹಿಣಿಯನ್ನು ಮಾಜಿ ಪ್ರಿಯಕರನೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ (27) ಕೊಲೆಯಾದ ಮೃತ ದುರ್ದೈವಿ. ಚಿರಸ್ತಹಳ್ಳಿ ಮೂಕಪ್ಪನವರ ಹನುಮಂತಪ್ಪ ಕೊಲೆ ಆರೋಪಿ. ರಾಣೆಬೆನ್ನೂರಿನ ಪ್ರತಿಭಾ ತನ್ನ ಪುತ್ರನೊಂದಿಗೆ ದುಗ್ಗಾವತಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಪ್ರತಿಭಾ ಮೇಲೆ ಹನುಮಂತ ಏಕಾಏಕಿ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಹತ್ಯೆಯ ಬಳಿಕ …
Read More »ಇನ್ಮುಂದೆ ನಾವೆಲ್ಲರು ಜೆಡಿಎಸ್ ಪರ ಕೆಲಸ ಮಾಡ್ಬೇಕು: ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ ಎ. ಮಂಜು
ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು ದಿಢೀರ್ ಕಾರ್ಯಕರ್ತರ ಸಭೆ ಕರೆದಿದ್ದು, ಇನ್ನು ಮುಂದೆ ಎಲ್ಲರು ಜೆಡಿಎಸ್ ಪರ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಸಭೆ ಕರೆದು ಪ್ರತಿಜ್ಞೆ ಮಾಡಿಸಿದ್ದಾರೆ. ಇನ್ನು ಮುಂದೆ ನಾವೆಲ್ಲರು ಜೆಡಿಎಸ್ನವರು, ಜೆಡಿಎಸ್ ಪಕ್ಷದಿಂದ ಎ.ಮಂಜು ಅವರನ್ನು ಗೆಲ್ಲಿಸಬೇಕು ಎಂದು ಪ್ರತಿಜ್ಞೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು …
Read More »