ಬೆಳಗಾವಿ: ‘ಜನಪದರು ವಿದ್ವಾಂಸರಿಗಿಂತ ಜ್ಞಾನವಂತರು. ಅವರು ರೂಪಕ, ಪ್ರತಿಮೆಗಳನ್ನು ಬಹು ಸೊಗಸಾಗಿ ದೈನಂದಿನ ಬದುಕಿನಲ್ಲಿ ಬಳಸುತ್ತಲೇ ಬಂದಿರುವರು. ಅವುಗಳನ್ನೇ ನಾವು ನಾಟಕ, ಸಾಹಿತ್ಯ, ಕಲೆಗಳಲ್ಲಿ ಪುನಃ ರಚಿಸಿ ಹಣ, ಪ್ರಶಸ್ತಿಗಳನ್ನು ಪಡೆಯುತ್ತೇವೆ. ಆದರೆ ನಿಜವಾದ ಕಲಾವಿದರಾದ ಅವರು ಮಾತ್ರ ಸರ್ಕಾರದ ಸಹಾಯ ಧನಕ್ಕೆ ಕೈಚಾಚಿ ನಿಲ್ಲುವಂಥ ಪರಿಸ್ಥಿತಿ ಇರುವುದು ದುರಂತ’ ಎಂದು ನಾಟಕಕಾರ ಡಿ.ಎಸ್.ಚೌಗಲೆ ಬೇಸರ ವ್ಯಕ್ತಪಡಿಸಿದರು. ಇಲ್ಲಿಯ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ …
Read More »Daily Archives: ಮಾರ್ಚ್ 7, 2023
ಐಗಳಿ: ಗಮನ ಸೆಳೆದ ಜಾನುವಾರ ಜಾತ್ರೆ
ಐಗಳಿ: ಐಗಳಿ ಕ್ರಾಸ್‌ನ ಮಣಿಕಪ್ರಭು ದೇವರ ಜಾತ್ರೆಯ ಪೂರ್ವದಲ್ಲಿ ಬೃಹತ್ ಪ್ರಮಾಣದ ಜಾನುವಾರ ಜಾತ್ರೆ ಸೋಮವಾರ ಆರಂಭವಾಯಿತು. ರಾಜ್ಯವೂ ಸೇರಿದಂತೆ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಪಂಡರಪುರ, ಆಂಧ್ರ ಪ್ರದೇಶದಿಂದಲೂ ವ್ಯಾಪಾರಿಗಳು ಬಂದಿದ್ದಾರೆ. ಜಾತ್ರಾ ಕಮಿಟಿಯವರು ನೀರಿನ ಹಾಗೂ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ರಾಚೋಟೇಶ್ವರ ಶಿವಯೋಗಿಗಳು ಕಂಡ ಕನಸು ನನಸಾಗಲೂ ಸಮೀಪಕ್ಕೆ ಬಂದಿದೆ ಎಂದು ಹಿರಿಯ ವ್ಯವಸ್ಥಾಪಕ ಶಿದರಾಯ ಬಿರಾದಾರ ಹೇಳಿದರು. ಟ್ರಸ್ಟ್ ಅಧ್ಯಕ್ಷ ಪ್ರಲ್ಹಾದ್ …
Read More »ಬೆಳಗಾವಿ: ‘ಸಾಂಪ್ರದಾಯಿಕ ತಂತ್ರಜ್ಞಾನದಿಂದ ಸ್ವಾವಲಂಬನೆ’
ಬೆಳಗಾವಿ: ‘ಸಾಂಪ್ರಾದಾಯಿಕ ತಂತ್ರಜ್ಞಾನವು ಆಧುನಿಕ ಯುಗದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬಲ್ಲದು. ಮಹಿಳಾ ಸ್ವಾವಲಂಬನೆಗೆ ಇದು ಅತ್ಯಂತ ಸುಲಭ ಮಾರ್ಗ’ ಎಂದು ಪುಣೆಯ ದಿ ಎಕೊಸೋಸಿಯೊ ಟ್ರೈಬ್‌ನ ಸಂಸ್ಥಾಪಕಿ ಅಮಿತಾ ದೇಶಪಾಂಡೆ ಸಲಹೆ ನೀಡಿದರು. ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಾಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್‌ನಿಂದ ಆದಿವಾಸಿ ಮಹಿಳೆಯರ ಜೀವನಮಟ್ಟ ಸುಧಾರಿಸಲು ಸಾಧ್ಯ. …
Read More »ಮದುವೆಯಾಗಿ ಮಕ್ಕಳನ್ನು ಪಡೆಯಲೇಬೇಕೇ? ಕಟೀಲ್‌ಗೆ ನಟ ಚೇತನ್ ಪ್ರಶ್ನೆ
ಬೆಂಗಳೂರು: ಲಸಿಕೆ ಪಡೆದರೆ ಮಕ್ಕಳಾಗದೆಂಬ ಸಿದ್ದರಾಮಯ್ಯ ಅವರ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ನಟ ಚೇತನ್ ಅಹಿಂಸಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಟೀಲ್ ಹೇಳಿಕೆಯು ಕೀಳು ಮಟ್ಟದ್ದು ಮತ್ತು ತರ್ಕವಿಲ್ಲದ್ದು ಎಂದು ಚೇತನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಬಿಜೆಪಿ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ್ದ ಕಟೀಲ್, ‘ಕೊರೊನಾ ಲಸಿಕೆ ಹಾಕಿಸಿಕೊಂಡರೆ …
Read More »ಹಬ್ಬಕ್ಕೆಂದು ಅಕ್ಕನ ಮನೆಗೆ ಬಂದಿದ್ದ ಗೃಹಿಣಿ ದುರಂತ ಅಂತ್ಯ: ಭಗ್ನ ಪ್ರೇಮಿಯಿಂದಲೇ ಘೋರ ಕೃತ್ಯ
ವಿಜಯನಗರ: ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಗೃಹಿಣಿಯನ್ನು ಮಾಜಿ ಪ್ರಿಯಕರನೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ (27) ಕೊಲೆಯಾದ ಮೃತ ದುರ್ದೈವಿ. ಚಿರಸ್ತಹಳ್ಳಿ ಮೂಕಪ್ಪನವರ ಹನುಮಂತಪ್ಪ ಕೊಲೆ ಆರೋಪಿ. ರಾಣೆಬೆನ್ನೂರಿನ ಪ್ರತಿಭಾ ತನ್ನ ಪುತ್ರನೊಂದಿಗೆ ದುಗ್ಗಾವತಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಪ್ರತಿಭಾ ಮೇಲೆ ಹನುಮಂತ ಏಕಾಏಕಿ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಹತ್ಯೆಯ ಬಳಿಕ …
Read More »ಇನ್ಮುಂದೆ ನಾವೆಲ್ಲರು ಜೆಡಿಎಸ್ ಪರ ಕೆಲಸ ಮಾಡ್ಬೇಕು: ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ ಎ. ಮಂಜು
ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು ದಿಢೀರ್ ಕಾರ್ಯಕರ್ತರ ಸಭೆ ಕರೆದಿದ್ದು, ಇನ್ನು ಮುಂದೆ ಎಲ್ಲರು ಜೆಡಿಎಸ್ ಪರ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಸಭೆ ಕರೆದು ಪ್ರತಿಜ್ಞೆ ಮಾಡಿಸಿದ್ದಾರೆ. ಇನ್ನು ಮುಂದೆ ನಾವೆಲ್ಲರು ಜೆಡಿಎಸ್ನವರು, ಜೆಡಿಎಸ್ ಪಕ್ಷದಿಂದ ಎ.ಮಂಜು ಅವರನ್ನು ಗೆಲ್ಲಿಸಬೇಕು ಎಂದು ಪ್ರತಿಜ್ಞೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು …
Read More »ಮಹಿಳಾ ದಿನಾಚರಣೆ; ನಾಳೆ BMTCಯಲ್ಲಿ ಉಚಿತ ಪ್ರಯಾಣ
ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಟಿಸಿ ಬಸ್ಗಳಲ್ಲಿ ನಾಳೆ (ಮಾ.8)ರಂದು ಒಂದು ದಿನ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ದಿನಾಚರಣೆ ಅಂಗವಾಗಿ ಒಂದು ದಿನ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ (ಎಂ.ಡಿ) ಸತ್ಯವತಿ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಸೆಕ್ರೆಟರಿ ಎನ್. ವಿ ಪ್ರಸಾದ್ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚಣೆಯ ಅಂಗವಾಗಿ …
Read More »ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ನಿಯಮಿತದ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ವಿರೂಪಾಕ್ಷಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರು ಮಂಗಳವಾರ ವಿಚಾರಣೆ ನಡೆಸಿದರು. ವಿಚಾರಣೆ …
Read More »ಗೋಕಾಕ: ಕರದಂಟು ನಾಡಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಎದುರಾಳಿ ಯಾರು?
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಗೋಕಾಕ ಎಲ್ಲರ ಗಮನ ಸೆಳೆಯುವ ಕ್ಷೇತ್ರ. ಕಾರಣ ಇಲ್ಲಿರುವ ಜಾರಕಿಹೊಳಿ ಕುಟುಂಬದ ಪ್ರಭಾವ ಮತ್ತು ಪ್ರಾಬಲ್ಯ. 1999ರಿಂದ ಈ ಕ್ಷೇತ್ರದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿರುವ ರಮೇಶ ಜಾರಕಿ ಹೊಳಿ ಅಂದಿನಿಂದ ಇದುವರೆಗೆ ಒಮ್ಮೆಯೂ ಹಿಂತಿರುಗಿ ನೋಡಿಲ್ಲ. ಕಳೆದ ಚುನಾವಣೆ ಅನಂತರ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ರಮೇಶ ಜಾರಕಿಹೊಳಿ ಒಮ್ಮೆಲೇ ರಾಷ್ಟ್ರ ರಾಜ ಕಾರಣಿಗಳು ತಮ್ಮ ಕಡೆ ತಿರುಗಿ ನೋಡುವಂತೆ ಮಾಡಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ …
Read More »ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಇಂದು, ನಾಳೆ ಕಾಂಗ್ರೆಸ್ ಸಭೆ
ಬೆಂಗಳೂರು: ಸುಮಾರು 70ರಿಂದ 80 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ 2ನೇ ಹಂತದ ಕಸರತ್ತು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ನಡೆಯಲಿದೆ. ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಪ್ರಮುಖರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಈ ಸಭೆ ನಡೆಯಲಿದೆ. ಪ್ರಥಮ ಹಂತದಲ್ಲಿ ಈಗಾಗಲೇ 130ರಿಂದ 150 ಕ್ಷೇತ್ರಗಳಿಗೆ ಒಂದೊಂದೇ ಅಭ್ಯರ್ಥಿ ಆಯ್ಕೆ ಮಾಡಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲೂ ಸಮ್ಮತಿ ಪಡೆಯಲಿದೆ. ಉಳಿದಂತೆ ಒಂದಕ್ಕಿಂತ ಹೆಚ್ಚು ಟಿಕೆಟ್ …
Read More »