ಮೂಡಲಗಿ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಈಗಿನಿಂದಲೇ ಬೂಥ್ ಮಟ್ಟದಿಂದ ದುಡಿಯುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಅರಭಾವಿ ಮಂಡಲ ಬೂಥ್ ವಿಜಯ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಒಗ್ಗಟ್ಟಿನ ನಾಮಬಲದೊಂದಿಗೆ ಪಕ್ಷದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುವಂತೆ ಹೇಳಿದರು. ಬಿಜೆಪಿಯು ರಾಜ್ಯದಲ್ಲಿ ಮತ್ತೊಮ್ಮೆ …
Read More »Monthly Archives: ಜನವರಿ 2023
ಕಿಸೆ’ಯಿಲ್ಲದ ವೈರಾಗ್ಯಮೂರ್ತಿ ಸಿದ್ಧೇಶ್ವರ ಸ್ವಾಮೀಜಿ
ವಿಜಯಪುರ: ಬಿಜ್ಜರಗಿ ಎಂಬ ಪುಟ್ಟ ಗ್ರಾಮದ ‘ಸಿದ್ಧು’ ಎಂಬ ಶಾಂತ ಸ್ವಭಾವದ ಬಾಲಕ ‘ಸಿದ್ಧೇಶ್ವರ ಶ್ರೀ’ ಎಂಬ ಮಹಾನ್ ‘ಜ್ಞಾನಯೋಗಿ’ ಯಾಗಿ, ತತ್ವಜ್ಞಾನಿಯಾಗಿ, ಸದಾ ಶ್ವೇತವಸ್ತ್ರಧಾರಿಯಾಗಿ ‘ಕಿಸೆ’ಯಿಲ್ಲದ ವೈರಾಗ್ಯ ಮೂರ್ತಿಯಾಗಿ ಬೆಳೆದು ಬಂದ ದಾರಿ ಅಕ್ಷರಶಃ ವಿಸ್ಮಯ. ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಬಿಜ್ಜರಗಿಯಲ್ಲಿ 1940ರ ಸೆಪ್ಟೆಂಬರ್ 5 ರಂದು ಕೃಷಿಕರಾದ ಓಗೆಪ್ಪ ಗೌಡ ಬಿರಾದಾರ, ಸಂಗವ್ವ ದಂಪತಿಯ ಆರು ಜನ ಮಕ್ಕಳಲ್ಲಿ ಹಿರಿಯ ಪುತ್ರರಾಗಿ ಜನಿಸಿದ ಸಿದಗೊಂಡ …
Read More »ಡಬಲ್ ಎಂಜಿನ್ ಸರ್ಕಾರ ತೆಗೆಯದಿದ್ದರೆ ಸಂಕಷ್ಟ: ಬಡಗಲಪುರ ನಾಗೇಂದ್ರ
ಬಾಗಲಕೋಟೆ: ‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರ ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಹೆಚ್ಚಾಗಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವಾಗಿ, ಉಸಿರಾಡಿಸಲೂ ಕಷ್ಟವಾಗಬಹುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು. ಜನಾಂದೋಲನಗಳ ಮಹಾಮೈತ್ರಿ ಕರ್ನಾಟಕ, ಸಿಟಿಜನ್ ಫಾರ್ ಡೆಮೊಕ್ರಸಿ, ಜನತಂತ್ರ ಪಯೋಗ ಶಾಲೆ ಹಾಗೂ ಸಂಯುಕ್ತ ಹೋರಾಟ ಮುಖಂಡರು ಸೇರಿಕೊಂಡು ಜಿಲ್ಲೆಯ ಕೂಡಲಸಂಗಮದಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಸಮಾಜ ಪರಿವರ್ತನ ಸತ್ಯಾಗ್ರಹ …
Read More »ಮಹದಾಯಿ ಡಿಪಿಆರ್‌ಗೆ ತರಾತುರಿಯಲ್ಲಿ ಅನುಮೋದನೆ: ಸಿದ್ದರಾಮಯ್ಯ
ಹುಬ್ಬಳ್ಳಿ: ‘ಮಹದಾಯಿ ಕುರಿತು ಗೆಜೆಟ್ ಹೊರಡಿಸಿ 2 ವರ್ಷ 10 ತಿಂಗಳು ಕಳೆದಿದ್ದರೂ ಸುಮ್ಮನೆ ಕುಳಿತಿದ್ದ ಬಿಜೆಪಿ, ನಾವು ಇವತ್ತು ಇಲ್ಲಿ ಹೋರಾಟ ಆರಂಭಿಸಲಿದ್ದೇವೆ ಎನ್ನುವುದು ಗೊತ್ತಾಗುತ್ತಿದ್ದಂತೆ ತರಾತುರಿಯಿಂದ ಡಿಪಿಆರ್‌ಗೆ (ವಿಸ್ತೃತ ಯೋಜನಾ ವರದಿ) ಅನುಮೋದನೆ ನೀಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ನೆಹರೂ ಮೈದಾನದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಮಹದಾಯಿ: ಜಲ- ಜನ ಆಂದೋಲನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ‘ಅಧಿಕಾರಕ್ಕೆ ಬಂದರೆ …
Read More »ಒಪಿಎಸ್: ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟ
ಬೆಂಗಳೂರು: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎನ್‌ಪಿಎಸ್ ನೌಕರರು ನಡೆಸುತ್ತಿದ್ದ ಧರಣಿಯನ್ನು ಸೋಮವಾರ ಅಂತ್ಯಗೊಳಿಸಿದ್ದಾರೆ. ‘ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ’ದ ಆಶ್ರಯದಲ್ಲಿ ಡಿ.19ರಿಂದ ಧರಣಿ ನಡೆಸುತ್ತಿದ್ದರು. ‘ಎನ್‌ಪಿಎಸ್ ನೌಕರರ ಸಭೆ ಕರೆಯುವುದಾಗಿ ಸಿ.ಎಂ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ‘ವೋಟ್ ಫಾರ್ ಒಪಿಎಸ್’ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಅವರು …
Read More »*ಶತಮಾನದ ಮಹಾನ್ ಸಂತ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ*
ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ ನಿಧನರಾದ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ನಮ್ಮ ಶ್ರೀ ಗಳ ನಿಧನದಿಂದ ಇಡೀ ನಾಡೇ ಶೋಕ ಸಾಗರದಲ್ಲಿ ಮುಳುಗಿದೆ. ಅತ್ಯಂತ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ದೇಶವಲ್ಲದೇ ಜಾಗತೀಕವಾಗಿಯೂ ಹಲವಾರು ರಾಷ್ಟಗಳಲ್ಲಿ ಪ್ರವಚನಗಳನ್ನು ನೀಡಿದ್ದರು. ಕನ್ನಡವಲ್ಲದೇ ಇಂಗ್ಲಿಷ್ ಭಾಷೆಯಲ್ಲಿಯೂ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಇವರೊಬ್ಬ ಈ ಶತಮಾನದ ಮಹಾನ್ ಸಂತ. ಕನ್ನಡ ನಾಡು ಕಂಡ ಅತೀ ಶ್ರೇಷ್ಠ ವಾಗ್ಮೀ. ತುಮಕೂರು ಸಿದ್ಧಗಂಗಾಮಠದ ಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. …
Read More »ಶ್ರೀಗಳ ಆರೋಗ್ಯ ಕ್ಷೇಮ ವಿಚಾರ ತಿಳಿಯಲು ಸಿಎಂ ಸಿದ್ದರಾಮಯ್ಯ ಭೇಟಿ
ವಿಜಯಪುರ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಭೇಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಶ್ರೀಗಳಿರುವ ಕೊಠಡಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ ಇವರು ಶ್ರೀಗಳ ಆರೋಗ್ಯ ಕ್ಷೇಮ ವಿಚಾರ ತಿಳಿಯಲು ವೈದ್ಯರ ಭೇಟಿ ಮಾಡಿದರು. ಬಳಿಕ ಮಾತನಾಡಿ ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ನಾನು ವೈದ್ಯರ ಜೊತೆಗೆ ಮಾತನಾಡಿದ್ದೇನೆ, ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ, ಅವರು ಮಹಾಸಂತರು ಧಾರ್ಮಿಕವಾಗಿ ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ ಎಂದರು. ಪ್ರವಚನದ ಮೂಲಕ ಧಾರ್ಮಿಕ ಭಾವನೆ ಮೂಡಿಸಿದ್ದಾರೆ, …
Read More »ಸಾಧನೆಗೈದ ಕಾನಸ್ಟೆಬಲ್ ಪುತ್ರಿ MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ಏಮ್ಸ್ (AIIMS New Delhi) ಗೆ
ಸಾಧನೆಗೈದ ಕಾನಸ್ಟೆಬಲ್ ಪುತ್ರಿ ಹಾಗೂ ಆಕೆಯ ತಂದೆ – ತಾಯಿಯನ್ನು ಕಚೇರಿಗೆ ಕರೆಸಿ ಸೋಮವಾರ ಸನ್ಮಾನಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಆದರ್ಶ ಕೆಲಸ ಮಾಡಿದ್ದಾರೆ. ಚಿಕ್ಕೋಡಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಲಗಮಣ್ಣಾ ನಾಯಕ್ ಮತ್ತು ಶೀಲಾ ಲಗಮಣ್ಣ ನಾಯಕ ರವರ ಮಗಳು ಸ್ನೇಹಾ ನಾಯಕ್ MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ಏಮ್ಸ್ (AIIMS New Delhi) ಗೆ ಆಯ್ಕೆಯಾಗಿದ್ದಾರೆ. ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ …
Read More »ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ನಡೆದುಕೊಂಡು ಹೋಗುವಾಗ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಗೆ ವ್ಯಾಪಕ ಟೀಕೆ
ಕಿತ್ತೂರು ತಾಲೂಕಿನ ಶಿವನೂರು ಗ್ರಾಮದಲ್ಲಿ ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ನಡೆದುಕೊಂಡು ಹೋಗುವಾಗ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮೃತ ವಿದ್ಯಾರ್ಥಿನಿ ಅಕ್ಷತಾ ಹೂಲಿಕಟ್ಟಿ ಮೃತದೇಹ ಶಿವನೂರು ತಲುಪುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಾರಕ್ಕೆ ಹಿಡಿಶಾಪ ಹಾಕಿ ನೂರಾರು ಮಹಿಳೆಯರು ಕಣ್ಣೀರುಡುತ್ತಿರುವ ದೃಶ್ಯ ಎಲ್ಲರು ಕರುಳು ಚುರ್ ಎನ್ನುವಂತಿತ್ತು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಹಾಗೂ ಶಿವನೂರು ಗ್ರಾಮಕ್ಕೆ …
Read More »ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ:ಸತೀಶ್ ಜಾರಕಿಹೊಳಿ
ಯಮಕನಮರಡಿ: ಬಸವಣ್ಣನವರು ಹೇಳಿದಂತೆ ಕಾಯಕದಲ್ಲೇ ಕೈಲಾಸ ಕಾಣುವ ಮೂಲಕ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಸದುದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಹಳ್ಳಿಗಳ …
Read More »