Breaking News

Monthly Archives: ಜನವರಿ 2023

ಸಿಡಿ ಲೇಡಿ ಹಾಗೂ ಅವರಿಗೆ ಸಹಕರಿಸಿದ ಎಲ್ಲರನ್ನು ಅರೆಸ್ಟ್ ಮಾಡಬೇಕು ಎಂದು ರಮೇಶ ಜಾರಕಿಹೊಳಿ ಒತ್ತಾಯ

ಬೆಳಗಾವಿ: ಸಿಡಿ ವಿಚಾರದಲ್ಲಿ ಷಡ್ಯಂತ್ರ ರೂಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಶ್ರಯದಲ್ಲಿಯೇ ಆ ಯುವತಿ ಬೆಂಗಳೂರಿನಲ್ಲಿ ನೆಲೆಸಿದ್ದು, ಡಿಕೆಶಿ, ಯುವತಿ ಸೇರಿದಂತೆ ಸಿಡಿ ಗ್ಯಾಂಗ್ ಬಂಧಿಸುವಂತೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.   ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೂರಾರು ಜನರ ಸಿಡಿ ಇಟ್ಟುಕೊಂಡು ಷಡ್ಯಂತ್ರ ರೂಪಿಸಿರುವ ಮಹಾನಾಯಕ ಡಿ.ಕೆ.‌ಶಿವಕುಮಾರ ಅವರನ್ನು ಕೂಡಲೇ ಬಂಧಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರು. ಸುಮಾರು ಒಂದು ವರ್ಷದಿಂದ …

Read More »

ಮೇ 3 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ 6.40 ಕ್ಕೆ ಗೋಧೂಳಿ ಲಗ್ನದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ವರನಿಗೆ ಧೋತಿ, ಶಾಲು ನೀಡಲಾಗುವುದು. ಎರಡನೇ ಮದುವೆಗೆ ಅವಕಾಶ ಇರುವುದಿಲ್ಲ. ಮದುವೆಯ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳ ಟ್ರಸ್ಟ್ ಭರಿಸಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಇಚ್ಛಿಸುವವರು ಏಪ್ರಿಲ್ 20 ರೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. …

Read More »

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ನಾಳೆ `ರೈತ ಶಕ್ತಿ’ ಸೇರಿ ಹಲವು ರೈತ ಕಲ್ಯಾಣ ಯೋಜನೆಗಳಿಗೆ ಸಿಎಂ ಚಾಲನೆ

ಧಾರವಾಡ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಾಳೆ ರೈತ ಶಕ್ತಿ ಸೇರಿದಂತೆ ಕೃಷಿ ಇಲಾಖೆಯ ನೂತನ ಯೋಜನಾ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷಿ ಇಲಾಖೆಯ ಕ್ರೀಡಾಂಗಣ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ.   ರೈತ ಶಕ್ತಿ ರಾಜ್ಯದ ಎಲ್ಲಾ ವರ್ಗದ ರೈತರಿಗೆ ಪ್ರತಿ ಎಕರೆಗೆ ರೂ. 250/- ಗಳಂತೆ ಗರಿಷ್ಠ 95 ಎಕರೆಗೆ ರೂ.1250/- ಗಳನ್ನು ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹಕ್ಕೆ ಹಾಗೂ ಇಂಧನ …

Read More »

ಡಿ.ಕೆ. ಶಿವಕುಮಾರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ.ಸಾಹುಕಾರ್ ಇಂದು ಬೆಳಗ್ಗೆ 10.30 ಕ್ಕೆ ಪತ್ರಿಕಾಗೋಷ್ಠಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಿಡಿದೆದ್ದ ರಮೇಶ ಜಾರಕಿಹೊಳಿ ಮಹಾನಾಯಕನ ಷಡ್ಯಂತ್ರ ಬಯಲುಗೊಳಿಸುವುದೇ ನನ್ನ ಟಾರ್ಗೆಟ್ ಎಂದು ಸ್ವಕ್ಷೇತ್ರ ಗೋಕಾಕ್ ನಲ್ಲಿ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ವಿರುದ್ಧ ರೊಚ್ಚಿಗೆದ್ದಿರುವ ರಮೇಶ ಜಾರಕಿಹೊಳಿ ಇಂದು ಬೆಳಗ್ಗೆ 10.30 ಕ್ಕೆ ಪತ್ರಿಕಾಗೋಷ್ಠಿ ನಡೆಸಿ, ಮಹಾನಾಯಕನಿಗೆ ಸಂಬಂಧಿಸಿದ ಆಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಡಿಕೆಶಿ ವೈಯಕ್ತಿಕ ವಿಚಾರ ಇದೆ ಮಾತನಾಡುತ್ತೇನೆ ಎಂದು ಹೇಳಿದ ರಮೇಶ್ ಜಾರಕಿಹೊಳಿ ಎಂದು ಸುದ್ದಿಗೋಷ್ಠಿ …

Read More »

ಪ್ರಜಾಧ್ವನಿ: ಡಿಕೆಶಿ- ಸಿದ್ದರಾಮಯ್ಯ ಪ್ರತ್ಯೇಕ ಯಾತ್ರೆ ವೇಳಾ‌ಪಟ್ಟಿ ಸಿದ್ಧ

ಬೆಂಗಳೂರು: ಮತಬೇಟೆಗೆ ಕೈಗೊಂಡ ಜಂಟಿ ‘ಪ್ರಜಾಧ್ವನಿ’ ಯಾತ್ರೆ ಮುಗಿಯುತ್ತಿದ್ದಂತೆ, ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ‌ಅವರ ಪ್ರತ್ಯೇಕ ಯಾತ್ರೆಯ ವೇಳಾಪಟ್ಟಿ ಸಿದ್ಧವಾಗಿದೆ ಪಕ್ಷದ ಪ್ರಮುಖ ನಾಯಕರನ್ನು ಜೊತೆಗೆ ಕರೆದುಕೊಂಡು ಉತ್ತರ- ದಕ್ಷಿಣ ಭಾಗದಿಂದ ಇಬ್ಬರೂ ಫೆಬ್ರುವರಿ 3ರಿಂದ ಕ್ಷೇತ್ರವಾರು ‘ದಂಡಯಾತ್ರೆ’ ಹೊರಡಲಿದ್ದಾರೆ.   ಪಕ್ಷದ 35 ನಾಯಕರು ಮತ್ತು ಆಪ್ತ ಬಳಗದ ಜೊತೆ ಬೀದರ್‌ನ ಬಸವಕಲ್ಯಾಣದಿಂದ ಸಿದ್ದರಾಮಯ್ಯ ಯಾತ್ರೆ ಆರಂಭಿಸಲಿದ್ದಾರೆ. …

Read More »

ಸರ್ಕಾರಿ ಗೌರವದೊಂದಿಗೆ ಸಾರಥಿ ಅಂತ್ಯಕ್ರಿಯೆ

ಬೆಳಗಾವಿ: ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಯುದ್ಧ ವಿಮಾನಗಳ ಮಧ್ಯೆ ಶನಿವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪೈಲಟ್, ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಬೆನಕನ ಹಳ್ಳಿಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನೆರವೇರಿತು.   ಕುರುಬ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಹಿರಿಯ ಸಹೋದರ ಪ್ರವೀಣ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಗಣೇಶಪುರದ ಮುಖ್ಯ ರಸ್ತೆಯಲ್ಲಿ ಪಾರ್ಥಿವ ಶರೀರದ …

Read More »

ಹಾಸನ ರಾಜಕೀಯ ಅಖಾಡಕ್ಕಿಳಿದ ದೇವೇಗೌಡ್ರು

ಹಾಸನ: ಕಳೆದ ಎರಡು ಮೂರು ದಿನಗಳಿಂದ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಚಾರ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಸನ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಆದರೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಸನದಲ್ಲಿ ಸೂಕ್ತ ಅಭ್ಯರ್ಥಿ ಇದ್ದಾರೆ, ಅಲ್ಲಿಗೆ ಭವಾನಿ ರೇವಣ್ಣರನ್ನು ಅಭ್ಯರ್ಥಿಯನ್ನಾಗಿ ಮಾಡುವ ಅನಿವಾರ್ಯತೆ ಇಲ್ಲ ಎಂದು ಹೇಳಿದ್ದರು. ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆ ಹಾಸನ ಸಂಸದ …

Read More »

ಯಾವುದೇ ಕ್ಷೇತ್ರದಲ್ಲಿ ಯಾವ ಪಕ್ಷದೊಂದಿಗೂ ರಾಜಿ ಇಲ್ಲ: ಸಿ.ಟಿ. ರವಿ

ಬೆಳಗಾವಿ: ಬಿಜೆಪಿ ಯಾವುದೇ ಕ್ಷೇತ್ರದಲ್ಲಿ ಯಾವ ಪಕ್ಷದೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ರಾಜಕಾರಣ ವನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿ. ಟಿ. ರವಿ ಹೇಳಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯ 18 ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಗುರಿ ಹೊಂದಲಾಗಿದೆ. ಎಲ್ಲ ಕಡೆಗೂ ಬಿಜೆಪಿ ತನ್ನದೇ ವರ್ಚಸ್ಸು ಹೊಂದಿ ರುವುದರಿಂದ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿ ಕೊಂಡಿದ್ದೇವೆ. ಉತ್ತರ …

Read More »

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ : ಮಾಜಿ ಸಿಎಂ BSY

ಬೆಳಗಾವಿ : ಮುಖ್ಯಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಈಗಾಗಲೇ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ನನಗೆ 80 ವರ್ಷ ವಯಸ್ಸಾಗಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

Read More »

ಆರೋಗ್ಯ ಸಚಿವರ ಮೇಲೆ ಗುಂಡಿನ ದಾಳಿ; ಎದೆಗೆ ಗುರಿಯಿಟ್ಟ ದುಷ್ಕರ್ಮಿಗಳು

ಭುವನೇಶ್ವರ: ಆಘಾತಕಾರಿ ಘಟನೆಯಲ್ಲಿ ಒಡಿಶಾ ಆರೋಗ್ಯ ಸಚಿವ ಮತ್ತು ಬಿಜೆಡಿ ನಾಯಕ ನಬಾ ದಾಸ್ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದು, ಎದೆಗೆ ಗುರಿಯಿಸಿ ಶೂಟ್ ಮಾಡಲಾಗಿದೆ. ನಬಾ ದಾಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.   ಭಾನುವಾರ ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರ ಬಳಿಯ ಗಾಂಧಿ ಚಕ್ ಬಳಿ ಈ ಘಟನೆ ನಡೆದಿದ್ದು, ನಬಾ ದಾಸ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಗುಂಡಿನ ದಾಳಿ ಮಾಡಲಾಗಿದೆ. ನಬಾ ದಾಸ್ ವಾಹನದಿಂದ ಇಳಿದ …

Read More »