Breaking News

Monthly Archives: ಜನವರಿ 2023

ಜನವರಿ 12ರಂದು ಹುಬ್ಬಳ್ಳಿಗೆ ಆಗಮಿಸಲಿರುವ ಮೋದಿ: ನಗರದಲ್ಲಿ ಭರದಿಂದ ಸಾಗಿದ ಸಿದ್ಧತೆ ಕಾರ್ಯ

ಹುಬ್ಬಳ್ಳಿ, : ವಾಣಿಜ್ಯನಗರಿ ಹುಬ್ಬಳ್ಳಿಗೆ ಜನವರಿ 12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಚ್ಛತೆ ಹಾಗೂ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿದೆ. ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರಮನ್ ಗುಪ್ತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ರೈಲ್ವೆ ಮೈದಾನದಲ್ಲಿ …

Read More »

ಬಾಲಕಿಯ ಮೇಲೆ ಅಣ್ಣ – ತಮ್ಮಂದಿರಿಂದ ಅತ್ಯಾಚಾರ: ಆರೋಪಿಗಳ ಮನೆ ಮೇಲೆ ದಾಳಿ, ವಾಹನಗಳು ಧ್ವಂಸ

ವರಂಗಲ್ (ತೆಲಂಗಾಣ): ತೆಲಂಗಾಣದ ವರಂಗಲ್​ ಜಿಲ್ಲೆಯಲ್ಲಿ ಮಾನಗೇಡಿ ಕೃತ್ಯಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಇಬ್ಬರು ಸಹೋದರರು ಸೇರಿಕೊಂಡು ಅತ್ಯಾಚಾರ ಎಸಗಿದ್ದು, ಈಗಾಗಲೇ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಈ ದುಷ್ಕೃತ್ಯ ಎಸಗಿದ ಕಾಮುಕರ ಮನೆಗಳ ಮೇಲೆ ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ದಾಳಿ ಮಾಡಿ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ವರಂಗಲ್​ ಪಟ್ಟಣದ ಆರೋಪಿಗಳಾದ ಅಜ್ಮದ್ ಅಲಿ (26) ಮತ್ತು ಅಬ್ಬು (22) …

Read More »

ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳುವದರಿಂದ ಸದೃಢ ಆರೋಗ್ಯವಂತರಾಗಿ ಸನತ ಜಾರಕಿಹೊಳಿ

ಗೋಕಾಕ : ಪಠ್ಯದಷ್ಟೆ ಪತ್ಯೇತರ ಚುಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳೆಯವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಇಲ್ಲಿನ ಸರಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಖಿಲಾರಿ ಹೇಳಿದರು. ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪಾಲಿಟೆಕ್ನಿಕ್ ನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳುವದರಿಂದ ಸದೃಢ ಆರೋಗ್ಯವಂತರಾಗಿ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆಗಳ ಮೂಲಕ ಪ್ರದರ್ಶಸಿಸುವ ಮುಖೇನ ಪ್ರೋತ್ಸಾಹಿಸಿಕೊಳ್ಳಿ. …

Read More »

ಕೆ.ಆರ್‌.ಪೇಟೆಯಲ್ಲಿ ಬಸ್‌ ಉರುಳಿ 32 ಮಂದಿಗೆ ಗಾಯ, ಹುಕ್ಕೇರಿ ಸಮೀಪ ಹೊತ್ತಿ ಉರಿದ ಬಸ್

ಮಂಡ್ಯ/ಚಿಕ್ಕೋಡಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್ ಉರುಳಿ ಬಿದ್ದು 32 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಬಳಿಯ ಚನ್ನರಾಯಪಟ್ಟಣ- ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಗದಗದಿಂದ ಮೈಸೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಸ್ ವೇಗದಲ್ಲಿದ್ದರಿಂದ ತಡೆಗೋಡೆ ಮುರಿದಿದೆ. ಬಸ್ ಪಲ್ಟಿಯಾಗಿ ರಸ್ತೆ ಬದಿಯ ಜಮೀನಿಗೆ ಉರುಳಿ ಬಿದ್ದಿದೆ. ಗಾಯಾಳುಗಳನ್ನು ಕೆ ಆರ್ …

Read More »

ಬೆಳಗಾವಿ: ಲಿಂಗಾಯತ ಪಂಚಮಸಾಲಿಗಳಿಗೆ 24 ಗಂಟೆಯೊಳಗೆ 2ಎ ಸ್ಥಾನಮಾನ ನೀಡಿ- ಶಾಸಕ ಬಸನಗೌಡ ಪಾಟೀಲ್

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 24 ಗಂಟೆಯೊಳಗೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಡುವು ನೀಡಿದ್ದಾರೆ. ನಗರದ ಗಾಂಧಿ ಭವನದಲ್ಲಿ ಗುರುವಾರ 2ಡಿ ಪಡೆದಿರುವ ಪಂಚಮಸಾಲಿ ಸಮಾಜಕ್ಕೆ ನ್ಯಾಯವೋ ಅನ್ಯಾಯವೋ ಎಂಬ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, 24 ಗಂಟೆಯೊಳಗೆ ಮೀಸಲಾತಿ ನೀಡದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಸ್ಪರ್ಧಿಸಲಿರುವ ಹಾವೇರಿ …

Read More »

ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಪೂರ್ಣ ಲಿಖಿತ ಭಾಷಣ ಇಲ್ಲಿದೆ

ಶರಣೆಂಬೆ ಅರಿವಿಗೆ ಶರಣೆಂಬೆ ಗುರುವಿಗೆ ಶರಣೆಂಬೆ ಸಾಹಿತ್ಯ ಸರಸ್ವತಿಗೆ ಶರಣೆಂಬೆ ಸಾಹಿತ್ಯ ಸಂಗೀತ ಸರಸ್ವತಿಗೆ ಶರಣು ಶರಣೆಂಬೆ ನಿಮ್ಮೆಲ್ಲರಿಗೆ. ಅಕ್ಕರೆಯ ಸುಮಾರು ಏಳು ಕೋಟಿ ಕನ್ನಡಿಗರಿಗೆ ವಂದನೆ… ಶುಭ… ವಂದನೆ ನಿಮ್ಮೆಲ್ಲರಿಗೆ. ಕನ್ನಡ ತಾಯಿ ಭುವನೇಶ್ವರಿ ಹೃದಯ ತುಂಬಿ ನನಗೆ ಆಶೀರ್ವದಿಸಿದ್ದಾಳೆ. ಇದು ನನ್ನ ಬಾಳಿನ ಭಾಗ್ಯ. ನನ್ನ ನಲ್ಮೆಯ ಅಪ್ಪ ಅಮ್ಮ ಮೇಲಿಂದಲೇ ಹರಸಿದ್ದಾರೆ. ಇದು ನನ್ನ ಬದುಕಿನ ಸುಕೃತ. ವೇದಿಕೆಯ ಮೇಲೆ ಆಸೀನರಾಗಿರುವ ಕರ್ನಾಟಕ ರಾಜ್ಯದ ಜನಪ್ರಿಯ …

Read More »

ಬಾಗಲಕೋಟೆಯಲ್ಲಿ ಓವರ್‌ ಟೇಕ್‌ ಮಾಡಲು ಹೋಗಿ ಎರಡು ಟ್ರ್ಯಾಕ್ಟರ್‌ ಪಲ್ಟಿ; ಸ್ಥಳದಲ್ಲೇ ಮೂವರ ದುರ್ಮರಣ

ಬಾಗಲಕೋಟೆ ಜಿಲ್ಲೆಯ ಮೂದೋಳ ತಾಲೂಕಿನ ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ಘಟನೆ ನಡೆದಿದೆ.,.20 ವರ್ಷದ ಗೋವಿಂದ್‌ ಪಾಟೀಲ್‌, 20 ವರ್ಷದ ಹನಮಂತ್‌ ಬೊಮ್ಮಕ್ಕನವರ್‌, 18 ವರ್ಷದ ಸದಾಶಿವ ಬೆಳಗಲಿ ಬಾಗಲಕೋಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಎರಡೂ ಟ್ರ್ಯಾಕ್ಟರ್‌ ಓವರ್‌ ಟೇಕ್‌ ಮಾಡಲು ಹೋದಾಗ ದುರ್ಘಟನೆ ಸಂಭವಿಸಿದೆ. ಮುಂದೆ ವೇಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್‌ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್‌ ಗುದ್ದಿದ್ದರಿಂದ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್‌ ನಲ್ಲಿದ್ದ ಇಬ್ಬರು …

Read More »

ಲಾರಿಗೆ ಬಸ್‌ ಡಿಕ್ಕಿ; 12 ಜನರಿಗೆ ಗಾಯ

ಕುಷ್ಟಗಿ: ರಸ್ತೆ ಬದಿ ನಿಂತ ಲಾರಿಗೆ ಸಾರಿಗೆ ಸಂಸ್ಥೆಯ ಬಸ್‌ ಡಿಕ್ಕಿ ಹೊಡೆದು 12 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಸಂಜೆ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಕಲಕೇರಿ ಬಳಿ ನಡೆದಿದೆ. ಸಣ್ಣ ಪ್ರಮಾಣದ ಮತ್ತು ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಸ್‌ ಚಾಲಕನ ವಿರುದ್ಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಪನಹಳ್ಳಿ ಘಟಕದ ಈ ಬಸ್‌ ಹರಿಹರದಿಂದ ಕುಷ್ಟಗಿ …

Read More »

ಅಂತ್ಯಕ್ರಿಯೆಗೆ ಸಾಗುವಾಗಲೇ ಕಣ್ತೆರೆದ ವೃದ್ಧೆ; ಬದುಕಿ ಮತ್ತೆ ಪ್ರಾಣ ಬಿಟ್ಟು ಅಚ್ಚರಿ!

ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಷ್ಟರಲ್ಲಿ ಮೃತಳಾಗಿದ್ದಾಳೆ ಎಂದುಕೊಂಡ ವೃದ್ಧೆ ಕಣ್ತೆರೆದು ನೋಡಿ, ಚಹಾ ಕುಡಿದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆಯಿತು. ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಇತ್ತೀಚೆಗೆ ವಿಲಕ್ಷಣ ಘಟನೆಯೊಂದು ನಡೆದಿದೆ. ಮೃತಪಟ್ಟಿದ್ದಾಳೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟ ನಂತರ, ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ವೃದ್ಧೆಯೊಬ್ಬರು ಕಣ್ಣು ತೆರೆದಿದ್ದು ಅಚ್ಚರಿ ಮೂಡಿಸಿದೆ. ಜಿಲ್ಲೆಯ ಬಿಲಾಸ್‌ಪುರ ಗ್ರಾಮದ ನಿವಾಸಿ ಹರಿಭೇಜಿ (81) ಎಂದು ಗುರುತಿಸಲಾದ ಮಹಿಳೆಯನ್ನು ಡಿಸೆಂಬರ್ 23 ರಂದು ಮೆದುಳಿನ ರಕ್ತಸ್ರಾವದ …

Read More »

ಶಿವಮೊಗ್ಗ: ಆಂಬ್ಯುಲೆನ್ಸ್ ಆಗಮನ ವಿಳಂಬ, ಲೈನ್ ಮ್ಯಾನ್ ಸಾವು

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಲೈನ್ ಮ್ಯಾನ್ ಒಬ್ಬರು ಕಂಬದಿಂದ ಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತರನ್ನು ರವಿ ನಾಯಕ (37) ಎಂದು ಗುರುತಿಸಲಾಗಿದೆ. ಅವರು ಹೆದ್ದೂರು ಬಳಿ ಕೆಲಸ ಮಾಡುತ್ತಿದ್ದಾಗ ಕಂಬದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕಟ್ಟಕಲ್ಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಆಂಬ್ಯುಲೆನ್ಸ್ ಆಗಮನ ವಿಳಂಬವಾದಾಗ ತೀರ್ಥಹಳ್ಳಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೇಳಲಾಯಿತು ಮತ್ತು ಸ್ಥಳೀಯರು …

Read More »